ಜಾಗತಿಕ ವಿಶ್ವ ಬಂಟರ ಸಮ್ಮೇಳನ :ಸಾಂಸ್ಕೃತಿಕ ವೈಭವ ಅನಾವರಣ 


Team Udayavani, Feb 25, 2018, 1:59 PM IST

2402mum10.jpg

ಮುಂಬಯಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಐಕಳ ಹರೀಶ್‌ ಅವರಿಗೆ ಅಭಿನಂದನೆಗಳು. ನಿಜಕ್ಕೂ ಇವರು ಇಂತಹ ಪ್ರತಿಷ್ಠಿತ ಮತ್ತು ಸರ್ವೋತ್ಕೃಷ್ಟ ಹುದ್ದೆಗೆ ಅರ್ಹರಾಗಿದ್ದಾರೆ. 20 ವಷ‌ìಗಳ ಹಿಂದೆ ನನ್ನ ಅಧ್ಯûಾವಧಿಯಲ್ಲೂ ಪೊವಾಯಿಯಲ್ಲಿ ಎಸ್‌ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆಯನ್ನು ಹುಟ್ಟು  ಹಾಕಿದ್ದು ಅದು ಇಂದು ಹೆಮ್ಮರವಾಗಿ ಬೆಳೆದಿದೆ. ಅಂದು ಶಾಲೆಯನ್ನು ಪ್ರಾರಂಭ ಮಾಡಲು ಅಷ್ಟು ಸುಲಭವಾಗಿರಲಿಲ್ಲ. ಕಾರಣ ಆ ಕಾಲದಲ್ಲಿ ಹಣ ಕೊರತೆಯಿತ್ತು. ಇಂದು ಹಾಗಲ್ಲ ಕೋಟ್ಯಾಂತರ ರೂ. ಗಳನ್ನು ಒಟ್ಟು ಮಾಡಬಹುದು. ಯಾವಾಗ ನಮ್ಮ ದೂರದೃಷ್ಟಿ ಸೂಕ್ಷವಾಗಿರುತ್ತದೆಯೋ ಆಗ  ಸಮುದಾಯದ ಪ್ರೋತ್ಸಾಹ ಸಿಗುತ್ತದೆ. ಆ ಮೂಲಕ ಎಲ್ಲವೂ ಸುಲಭವಾಗುತ್ತದೆ. ಇಂದಿನ ಸಮಾವೇಶವು ಸಮಾಜೋದ್ಧಾರಕ್ಕೆ ಪೂರಕವಾಗಿದೆ.  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಬ್‌ಕ ಸಾಥ್‌, ಸಬ್‌ಕ ವಿಕಾಸ್‌ ಎಂಬ ಘೋಷಣೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳುವ ಅಗತ್ಯವಿದೆ. ಜೊತೆಗೆ ಪ್ರಧಾನ ಮಂತ್ರಿಯವರ  ಯೋಜನೆಯ ಫಲಾನುಭವವನ್ನು ನಮ್ಮ ಸಂಸ್ಥೆಗಳು ಪಡೆಯಬೇಕು. ನಮ್ಮೆಲ್ಲರ ಮನಸ್ಸು ಸಮಾನರಾದರೆ ಬಡ ಮಕ್ಕಳ ವಿಕಾಸವಾಗುತ್ತಾರೆ. ಬಡವರಿಗೆ ಸಹಾಯಹಸ್ತ ನೀಡಿದಾಗಲೇ ನಾವೂ ಪುಣ್ಯಾಧಿ ಆಶೀರ್ವಾದ ಗಳಿಸಲು ಸಾಧ್ಯ. ಆದ್ದರಿಂದ ಸೇವೆಗಳ ಮುಖೇನ ಜಾಗತಿಕ ಬಂಟರ ಒಕ್ಕೂಟ ಸಮಾಜದ ಬಡ ಜನತೆಯ ಮನ-ಮನೆಗಳನ್ನು ತಲುಪುವಂತಾಗಲಿ. ಅದಕ್ಕಾಗಿ ಒಕ್ಕೂಟಕ್ಕೂ ದೇಣಿಗೆ ನೀಡುವ ಉದಾರತೆ ನಮ್ಮಲ್ಲಿ ಮೂಡಲಿ. ಇಂತಹ ಹಲವಾರು  ಬಂಟ ಸಮ್ಮೇಳನಗಳನ್ನು ಆಯೋಜಿಸಿ ಬಂಟತನದ ನಂಟನ್ನು ಇನ್ನಷ್ಟು ಬಲಪಡಿಸೋಣ ಎಂದು ಆ್ಯಡ್‌ಲ್ಯಾಬ್ಸ್ ಲಿಮಿಟೆಡ್‌ನ‌ ಕಾರ್ಯಾಧ್ಯಕ್ಷ ಮನ್‌ಮೋಹನ್‌ ಆರ್‌. ಶೆಟ್ಟಿ ಅವರು ಅಭಿಪ್ರಾಯಿಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಫೆ. 24 ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ  ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಿರ್ಮಿಸಲಾಗಿರುವ ಮುನಿಯಾಲ್‌ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ ನ ಘನ ಸಿರಿ ವೇದಿಕೆಯಲ್ಲಿ ಆಯೋಜಿಸಿದ್ದ ವಿಶ್ವ ಬಂಟರ ಸಮ್ಮೇಳನ-2018ನ್ನು ಮನ್‌ಮೋಹರ್‌ ಶೆಟ್ಟಿ ಮತ್ತು ಶಶಿ ಮನ್‌ಮೋಹನ್‌ ಶೆಟ್ಟಿ ದಂಪತಿ ಹಿಂಗಾರ ಅರಳಿಸಿ ಸಮ್ಮೇಳನಕ್ಕೆ ಚಾಲನೆಯನ್ನಿತ್ತ‌ು ಮನ್‌ಮೋಹನ್‌ ಶೆಟ್ಟಿ ಸಮ್ಮೇಳನಕ್ಕೆ ಶುಭಹಾರೈಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿದ ಸಮ್ಮೇನದಲ್ಲಿ ಮುಖ್ಯ ಅತಿಥಿಯಾಗಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ ಮತ್ತು  ಬಂಟ್ಸ್‌ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಇವರು ಉಪಸ್ಥಿತಿತರಿದ್ದು ದೀಪ ಪ್ರಜ್ವಲಿಸಿ ಸಮ್ಮೇಳನಕ್ಕೆ ಚಾಲನೆ ನೀಡಿದರು.

ಗೌರವ ಅತಿಥಿಗಳಾಗಿ ಬೊರಿವಿಲಿ ಲೋಕಸಭಾ ಸಂಸದ ಗೋಪಾಲ್‌ ಸಿ. ಶೆಟ್ಟಿ, ಬಂಟ್ಸ್‌ ಸಂಘ ಬೆಂಗಳೂರು ಅಧ್ಯಕ್ಷ ಚಂದ್ರಹಾಸ ರೈ, ಬಂಟ್ಸ್‌ ಸಂಘ ಪುಣೆ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನಕುರ್ಕಿಲ್‌ಬೆಟ್ಟು, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ನ್ಯಾಯವಾದಿ ಸುಭಾಷ್‌ ಬಿ. ಶೆಟ್ಟಿ, ಬಂಟ್ವಾಳ ಬಂಟರ ಸಂಘ ಅಧ್ಯಕ್ಷ ನಗ್ರಿಗುತ್ತು ವಿವೇಕ್‌ ಶೆಟ್ಟಿ, ಬಂಟ್ಸ್‌ ಸಂಘ ಮೈಸೂರು ಅಧ್ಯಕ್ಷ ಪ್ರಭಾಕರ ಶೆಟ್ಟಿ, ಯುಎಇ ಬಂಟ್ಸ್‌ ಸಂಘದ ಅಧ್ಯಕ್ಷ ಸರ್ವೋತ್ತಮ ಎಸ್‌. ಶೆಟ್ಟಿ, ಬಂಟ್ಸ್‌ ಸಂಘ ಬಹರೇನ್‌ ಅಧ್ಯಕ್ಷ ಕೆ. ನಾಗೇಶ್‌ ಶೆಟ್ಟಿ, ಬಂಟ್ಸ್‌ ಸಂಘ ಓಮನ್‌ ಅಧ್ಯಕ್ಷ ಶಶಿಧರ ಶೆಟ್ಟಿ, ಜವಾಬ್‌ ಅಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಬಂಟ್ಸ್‌ ಸಂಘ ನಾಸಿಕ್‌ ಅಧ್ಯಕ್ಷ ಕರುಣಾಕರ ಶೆಟ್ಟಿ, ಬಂಟ್ಸ್‌ ಸಂಘ ಪಿಂಪ್ರಿ-ಚಿಂಚಾÌಡ್‌ ಅಧ್ಯಕ್ಷ  ಮಹೇಶ್‌ ಹೆಗ್ಡೆ ಕಟ್ಟಿಂಗೇರಿ, ಬಂಟ್ಸ್‌ ಪೋರಂ ಮೀರಾ-ಭಯಂಧರ್‌ ಅಧ್ಯಕ ಜಯಪ್ರಕಾಶ್‌ ಭಂಡಾರಿ, ಬಂಟ್ಸ್‌ ಅಸೋಸಿಯೇಶನ್‌ ಪುಣೆ ಅಧ್ಯಕ್ಷ ನಾರಾಯಣ ಶೆಟ್ಟಿ, ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಕುಶಲ್‌ ಸಿ. ಭಂಡಾರಿ, ಮುಲುಂಡ್‌ ಬಂಟ್ಸ್‌ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಮೀರಾ-ಡಾಹಾಣು ಬಂಟ್ಸ್‌ ಅಧ್ಯಕ್ಷ ಅರವಿಂದ್‌ ಶೆಟ್ಟಿ, ಬಂಟ್ಸ್‌ ಸಂಘ ಮೂಲ್ಕಿ ಅಧ್ಯಕ್ಷ ಎಳತ್ತೂರುಗುತ್ತು ಸಂತೋಷ್‌ ಶೆಟ್ಟಿ, ಬಂಟ್ಸ್‌ ಸಂಘ ಮುಂಬಯಿ ಮಹಿಳಾ ವಿಭಾಗಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಬಂಟ್ಸ್‌ ಸಂಘ ಅಹ್ಮದಾಬಾದ್‌ ಅಧ್ಯಕ್ಷ ಅಪ್ಪು ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಮಹಿಳಾಧ್ಯಕ್ಷೆ ಆಶಾ ಜ್ಯೋತಿ ರೈ ಮಾಲಾಡಿ, ಉದಯ ಕೃಷ್ಣಯ್ಯ ಚಾರಿಟೇಬಲ್‌ ಟ್ರಸ್ಟ್‌ ಕಾರ್ಯಾಧ್ಯಕ್ಷ ಉದಯ ಕೆ. ಶೆಟ್ಟಿ, ಉದ್ಯಮಿಗಳಾದ ಶಂಕರ ಬಿ. ಶೆಟ್ಟಿ ವಿರಾರ್‌, ಶಶಿಧರ ಕೆ. ಶೆಟ್ಟಿ ಇನ್ನಂಜೆ ನಲಾಸೊಪರ,  ಸಂಜೀವ ಎನ್‌. ಶೆಟ್ಟಿ ನೆರೂಲ್‌,  ಹರೀಶ್‌ ಶೆಟ್ಟಿ ಗುರ್ಮೆ ನಲಾಸೊಪರ, ಹರೀಶ್‌ ಪಾಂಡು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಇಂದಿನ ಈ ಜಾಗತಿಕ ಬಂಟರ ಒಕ್ಕೂಟ ಸಮಾರಂಭದಲ್ಲಿ ದೊಡ್ಡ ಸಂಖ್ಯೆಯ ಉಪಸ್ಥಿತಿ ಕಂಡು ಸಂತೋಷವಾಗುತ್ತಿದೆೆ. ಅದಕ್ಕೆ ಐಕಳ ಹರೀಶ್‌ ಶೆಟ್ಟಿಯವರ‌ ಪರಿಶ್ರಮ ಮತ್ತು ಚಾಣಕ್ಷತನವೇ ಕಾರಣ. ನಾವು ಬಂಟರು ಸಮಾಜಮುಖೀ ಚಿಂತನೆವುಳ್ಳವರಾಗಿದ್ದು,  ಸಮಾಜ ಉದ್ಧಾರ ನಮ್ಮ ಮೂಲತ್ವವಾಗಿದೆ. ವೀರ, ಶೂರತನ ಬಂಟರ ವೈಶಿಷ್ಟÂವಾಗಿದ್ದು ಸದ್ಯ ಆರ್ಥಿಕವಾಗಿಯೂ ಬಲವುಳ್ಳವರಾಗಿ ಮುನ್ನಡೆಯುತ್ತಿದ್ದೇವೆ. ಬ್ರಿಟಿಷರಲ್ಲೂ ಬಂಟರಿಗೆ ವಿಶ್ವಾಸ ಸ್ಥಾನವಿತ್ತು. ಕಾರಣ ಬಂಟರಲ್ಲಿ ಸಾಮಾಜಿಕ ಕಳಕಳಿಯಿತ್ತು.  ಅದೇ ಬಂಟರ ಅಭಿಮಾನ‌ ಇಂದಿಗೂ ದೃಢವಾಗಿದೆ. ನಾವು ಸಮಾಜವನ್ನು ಮುಂದೆ ತರುವಂತಹ ಸದ್ಗುಣವುಳ್ಳವರು. ನಮ್ಮಲ್ಲಿ ನಾಯಕತ್ವ ಮತ್ತು ಮುಂದಾಳುತ್ವತನವಿದೆ. ಅದಕ್ಕೆ ಈ ವೇದಿಕೆ ಸಾಕ್ಷಿಯಾಗಿದೆ. ಐಕಳ ಹರೀಶ್‌ ಶೆಟ್ಟಿ ಕಳೆದ ಎರಡುವರೆ ದಶಕಗಳಿಂದ ಬಂಟರ ಸಂಘದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಕಾಯಕ ಸಿದ್ಧಿಸಿದ್ದಾರೆ. ಅವರೋರ್ವ ಬಂಟರಲ್ಲಿನ ಅಭಿವೃದ್ಧಿಯ ಕ್ರಾಂತಿಕಾರ. ಈ ಫೆಡೇರೇಶ‌ನ್‌ನನ್ನು ಪುನರುತ್ಥಾನಗೊಳಿಸಿದ ಕೀರ್ತಿ ಇವರದ್ದಾಗಿದೆ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ  ಪದ್ಮನಾಭ ಎಸ್‌. ಪಯ್ಯಡೆ ನುಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ ಮಾತನಾಡಿ, ಮಹಾರಾಷ್ಟ್ರ ಅಥವಾ ಮುಂಬಯಿಯಲ್ಲಿನ ಜನತೆ ದೊಡ್ಡ ಮನಸ್ಸುವುಳ್ಳವರು. ಅದರಲ್ಲೂ ಬಂಟರಂತೂ ಪ್ರೀತಿಸುವ ಹೃದಯವುಳ್ಳವರು. ನಮ್ಮಲ್ಲಿನ ಯಾವುದೇ ಕಾರ್ಯಕ್ರಮಗಳಲ್ಲಿ ಯುವಕರು ಮತ್ತು ಮಕ್ಕಳ ಕೊರತೆ ಎದ್ದು ಕಾಣುತ್ತಿದ್ದು, ಇದಕ್ಕೂ ನಾವೂ ಪರಿಹಾರ ಕಂಡುಕೊಳ್ಳುವ ಅವಶ್ಯಕತೆಯಿದೆ. ಯುವಶಕ್ತಿ ನಮ್ಮ ಪರಂಪರೆ, ಸಂಸ್ಕೃತಿ, ಆಚಾರ ವಿಚಾರ ತಿಳಿದಾಗ ಮಾತ್ರ ನಮ್ಮ ಅಸ್ತಿತ್ವ ಬೆಳೆದು ಉಳಿಯುವುದು. ಬರೇ ಭವನ, ಕಟ್ಟಡ ನಿರ್ಮಿಸುವುದರಿಂದ ಸಮುದಾಯದ ಬಲಿಷ್ಠ ಅಸಾಧ್ಯ. ಆದ್ದರಿಂದ ಯುವಶಕ್ತಿಯನ್ನು ನಮ್ಮೊಡನೆ ಒಗ್ಗೂಡಿಸುವ ಕೆಲಸ ತ್ವರಿತವಾಗಿ ನಡೆಯಬೇಕು. ಪರಿವರ್ತನೆಗೆ ತಕ್ಕ ಬದಲಾವಣೆ ಆಗುವ ಅಗತ್ಯ ಬಂಟರಲ್ಲೂ ಇದ್ದು ಬಾಂಧವ್ಯದ ಮೂಲಕ ಬಂಟರ ಒಗ್ಗಟ್ಟು ಭದ್ರ ಪಡಿಸೋಣ. ಅತ್ಮೀಯ ಭಾವನೆಗಳನ್ನು ಮೈಗೂಡಿಸಿ ಜಗತ್ತಿನ ಪ್ರತಿಯೊಂದು ಬಂಟರನ್ನು ಗುರುತಿಸಲು ಈ ವೇದಿಕೆ ಪೂರಕವಾಗಲಿ ಎಂದು ಹಾರೈಸಿದರು.

ಗೌರವ ಅತಿಥಿಯಾಗಿ ಆಗಮಿಸಿದ ಸಂಸದ ಗೋಪಾಲ್‌ ಸಿ. ಶೆಟ್ಟಿ ಇವರು ಮಾತನಾಡಿ, ಐಕಳ ಹರೀಶ್‌ ಶೆಟ್ಟಿ ಅವರ ಸಾಧನೆ ನಂಬಲ ಸಾಧ್ಯವಾಗದು. ಅವರೋರ್ವ ಯಶಸ್ವಿ ಮತ್ತು ವಚನಬದ್ಧ ಸಂಘಟಕ.  ಸಾಮರಸ್ಯದಿಂದ ಒಗ್ಗೂಡಿಸುವ ಉದಾತ್ತ ಧ್ಯೇಯವುಳ್ಳ ಇಂತವರಿಂದ ಮಾತ್ರ ಇಂತಹ ಐಕ್ಯತಾ ಸಮ್ಮೇಳನಗಳ ಆಯೋಜನೆ ಸಾಧ್ಯ. ಸ್ವಸಮುದಾಯದ ಮೂಲಸ್ವರೂಪ ಮರೆಯದ ಅಸಮಾನ್ಯ ಸ್ವಭಾವದ  ಐಕಳ ಹರೀಶ್‌ ಶೆಟ್ಟಿಯವರ  ಸಾಂಘಿಕತೆಯನ್ನು ವಿಶ್ವದ ನಾಯಕರೇ ಗುರುತಿಸಿಕೊಂಡಿದ್ದಾರೆ. ಮುಂಬಯಿ ಬಂಟರ ಸಂಸ್ಥೆಯ ಸಾಧನೆಗಳಂತೂ ಲಿಮ್ಕಾ ಬುಕ್‌ ಆಪ್‌ ರೆಕಾರ್ಡ್‌ ಗೆ ಸೇರಿಸುವಷ್ಟಿವೆ. ತವರೂರ ಸ‌ಂಬಂಧವನ್ನು ನಿಕಟವಾಗಿರಿಸಿ ಎಲ್ಲಾ ಕಾರ್ಯಕ್ರಮಗಳನ್ನು ಸಾಮರಸ್ಯಯುತವಾಗಿ ನಡೆಸುವ ಪರಿ ವಿಶ್ವಕ್ಕೇ ಮಾದರಿ. ಮಕ್ಕಳಲ್ಲಿ ಸ್ವಸಮುದಾಯ, ಕುಟುಂಬ ಸಂಬಂಧಗಳು ಮಾಯವಾಗುತ್ತಿವೆ. ಅವರಲ್ಲೂ ಸ್ವಸಮಾಜದ ಬಗ್ಗೆ ಒಲವು ತೋರಿಸಿ ಬಂಟತ್ವವನ್ನು  ಬಲಪಡಿಸಿ ಸಮಾಜವನ್ನು ಶಕ್ತಿಯುತಗೊಳಿಸೋಣ ಎಂದು ನುಡಿದರು.
ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಗೌರವ ಕಾರ್ಯದರ್ಶಿ ವಿಜಯಪ್ರಸಾದ್‌ ಆಳ್ವ, ಗೌರವ ಕೋಶಾಧಿಕಾರಿ ಕೊಲಾಡಿ ಬಾಲಕೃಷ್ಣ  ರೈ, ಬಂಟ್ಸ್‌ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಗೌರವ ಪ್ರಧಾನ  ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ  ಕೋಶಾಧಿಕಾರಿ ಪ್ರವೀಣ್‌ ಬಿ. ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್‌ ಶೆಟ್ಟಿ ಐಕಳ, ಯುವ ವಿಭಾಗದ ಅಧ್ಯಕ್ಷ ಶರತ್‌ ವಿ. ಶೆಟ್ಟಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಶಾಂತರಾಮ ಬಿ. ಶೆಟ್ಟಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಕರ್ನಿರೆ ವಿಶ್ವನಾಥ್‌ ಶೆಟ್ಟಿ, ಸಲಹಾ ಸಮಿತಿ ಕಾರ್ಯನಿರತ ಕಾರ್ಯಾಧ್ಯಕ್ಷ ಎರ್ಮಾಳ್‌ ಹರೀಶ್‌ ಶೆಟ್ಟಿ,  ಕಾರ್ಯಕ್ರಮ ಸಮಿತಿ ಯುವ ಸಂಯೋಜಕ ಗಿರೀಶ್‌ ಶೆಟ್ಟಿ ತೆಲ್ಲಾರ್‌ ಸೇರಿದಂತೆ ವಿವಿಧ ಉಪ ಸಮಿತಿಗಳ ಮುಖ್ಯಸ್ಥರು, ಸಂಘದ ಹಾಲಿ-ಮಾಜಿ ಪದಾಧಿಕಾರಿಗಳು, ಸಮಾಜದ ಗಣಣ್ಯರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಮನ್‌ಮೋಹನ್‌ ಆರ್‌. ಶೆಟ್ಟಿ ಮತ್ತು ಶಶಿ ಮನ್‌ಮೋಹನ್‌ ಶೆಟ್ಟಿ ಹಾಗೂ ಐಕಳ ಹರೀಶ್‌ ಶೆಟ್ಟಿ ಮತ್ತು ಚಂದ್ರಿಕಾ ಹರೀಶ್‌ ಶೆಟ್ಟಿ ದಂಪತಿಗಳನ್ನು ಅಭಿನಂದಿಸಲಾಯಿತು. ಅಜಿತ್‌ ಕುಮಾರ್‌ ರೈ ಮಾಲಾಡಿ ಮತ್ತು ಆಶಾ ಜ್ಯೋತಿ ರೈ  ಹಾಗೂ ಪದ್ಮನಾಭ ಎಸ್‌. ಪಯ್ಯಡೆ ಮತ್ತು ಮಾಲಿನಿ ಪದ್ಮನಾಭ್‌ ಎಸ್‌. ಪಯ್ಯಡೆ ಇವರನ್ನು ಗೌರವಿಸಲಾಯಿತು. ಅತಿಥಿಗಳನ್ನು ಚಿನ್ನದ ಅರಿವಾಣದಲ್ಲಿ ಅಡಿಕೆ, ವೀಳ್ಯದೆಲೆ, ರಥದ ಸ್ಮರಣಿಕೆ ನೀಡಿ ಸತ್ಕರಿಸಿ ಗೌರವಿಸಲಾಯಿತು.

ಆದಿಯಲ್ಲಿ ಬಂಟರ ಸಂಘದ ಜ್ಞಾನ ಮಂದಿರದಲ್ಲಿನ ಶ್ರೀ ಮಹಾವಿಷ್ಣು ಹಾಗೂ ಗಣಪತಿ ದೇವರಿಗೆ ಪೂಜೆ ನೆರವೇರಿಸಿ ಸಮ್ಮೇಳನಕ್ಕೆ ವಿಧಿವತ್ತಾಗಿ ಚಾಲನೆ ನೀಡಲಾಯಿತು.ದೇವಸ್ಥಾನದ ಪ್ರಧಾನ ಆರ್ಚಕ ವಿದ್ವಾನ್‌ ಅರವಿಂದ ಬನ್ನಿಂತ್ತಾಯ ಪೂಜಾಧಿಗಳನ್ನು ನೆರವೇರಿಸಿ ತೀರ್ಥ ಪ್ರಸಾದವನ್ನಿತ್ತು ಅನುಗ್ರಹಿಸಿದರು. ಕಲಾಜಗತ್ತು ತೋನ್ಸೆ ವಿಜಯಕುಮಾರ್‌ ಶೆಟ್ಟಿ ಪ್ರವೇಶ ದ್ವಾರದಲ್ಲಿದ್ದೇ ಸಂಪ್ರದಾಯಿಕ ಸುಖಾಗಮನ ಬಯಸಿದರು. ಸುರೇಶ್‌ ಶೆಟ್ಟಿ ಶಿಬರೂರು ಪ್ರಾರ್ಥನೆಗೈದರು.

ಬಂಟಗೀತೆಯೊಂದಿಗೆ ಸಮ್ಮೇಳನ ಪ್ರಾರಂಭಗೊಂಡಿತು.  ಕಾರ್ಯಕ್ರಮ ಸಮಿತಿಯ ಸಂಚಾಲಕ ಉಳೂ¤ರು ಮೋಹನದಾಸ್‌ ಶೆಟ್ಟಿ  ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಅಶೋಕ್‌ ಪಕ್ಕಳ ಮತ್ತು ಕು| ಸನ್ನಿಧಿ ಹರೀಶ್‌ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜೊತೆ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿದರು. ದೇಶ-ವಿದೇಶಗಳಿಂದ ನೂರಾರು ಬಂಟ ಮಹಾನೀಯರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.  ಮಧ್ಯಾಂತರದಲ್ಲಿ   ಬಂಟ ಸಮಾಜದ ಸುಮಾರು 19 ತಂಡಳಿಂದ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು.   

ಬಂಟರ ನಡಿಗೆ ಬಂಟರ ಭವನದೆಡೆಗೆ….!
ಶನಿವಾರ ವಿಶ್ವದ ಬಂಟ ಸಂಘ-ಸಂಸ್ಥೆಗಳು ಮುಂಬಯಿ ಬಂಟರ ಭವನದತ್ತ ಮುಖಮಾಡಿದ್ದು ಸುಳ್ಳಲ್ಲ. ಇದಕ್ಕೆ  ಕಿಕ್ಕಿರಿದು ತುಂಬಿದ ಸಭಾಗೃಹವೇ ಸಾಕ್ಷಿಯಾಗಿದೆ.  ಸಮ್ಮೇಳನದ ಮಧ್ಯಾಂತರದಲ್ಲಿ ಹಿರಿಯ  ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅಧ್ಯಕ್ಷತೆಯಲ್ಲಿ “ಬಂಟರ ನಡಿಗೆ ಪ್ರಗತಿಯೆಡೆಗೆ’ ವಿಚಾರಗೋuಷಿ ನಡೆಯಿತು.  ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ  ಶಿಕ್ಷಕ ಕುದಿ ವಸಂತ ಶೆಟ್ಟಿ, ಎಸ್‌ಡಿಪಿಸಿ ಕಟೀಲು ಪ್ರಾಂಶುಪಾಲ ಪ್ರೊ| ಬಾಲಕೃಷ್ಣ ಶೆಟ್ಟಿ, ಹೊಸದಿಲ್ಲಿಯ ಹೆಸರಾಂತ ಸಮಾಜ ಸೇವಕ ವಸಂತ್‌ ಶೆಟ್ಟಿ ಬೆಳ್ಳಾರೆ, ಎಸ್‌ಎಂ ಶೆಟ್ಟಿ ಕಾಲೇಜು ಪೊವಾಯಿ ಪ್ರಾಂಶುಪಾಲ ಡಾ| ಶ್ರೀಧರ ಎಸ್‌. ಶೆಟ್ಟಿ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಮಂಡಿಸಿದರು. ಒಟ್ಟಿನಲ್ಲಿ ಬಂಟರ ನಡಿಗೆ ಬಂಟರ ಭವನದೆಡೆಯಿಂದ ಬಂಟರ ನಡಿಗೆ ಪ್ರಗತಿಯೆಡೆಗೆ ಸಾಗುವುರದಲ್ಲಿ ಸಮಾವೇಶವು ಯಶಕಂಡಿತು.

ಬಂಟ ಸಂಸ್ಕೃತಿಯನ್ನು ಸಾರಿದ ಸಮಾವೇಶ
ಶ್ರೀಮತಿ ರಂಜನಿ ಸುಧಾಕರ್‌ ಹೆಗ್ಡೆ (ತುಂಗಾ) ಸೋಶಿಯಲ್‌ ವೆಲ್ಫೆàರ್‌ ಅನೆಕ್ಸ್‌ ಕಟ್ಟಡದ ಆವರಣದಲ್ಲಿ  ತುಳುನಾಡ ಸಂಸ್ಕೃತಿ ಬಿಂಬಿಸುವ ವೈಭವೋಪೇತ ಎಳತ್ತೂರು ಗುತ್ತಿನ ಮನೆಯ ಮುಖ್ಯದ್ವಾರದಿಂದಲೇ ಚಿತ್ತೆ$çಸಿನ ಆಮಂತ್ರಿತರಿಗೆ ಸಾಂಪ್ರದಾಯಿಕವಾಗಿ ಸ್ವಾಗತ ಬಯಸಲು  ಸುಧಾಕರ ಸಾಲ್ಯಾನ್‌ ಸಂಕಲಕರಿಯ ಏಳಿಂಜೆ ಇವರ ಪ್ರತಿಷ್ಠೆಯ ಕಂಬಳದ ಕೋಣಗಳ ಪ್ರತಿರೂಪಗಳು ಎಲ್ಲರನ್ನು ಒಮ್ಮೆ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತು.  ಇನ್ನೊಂದೆಡೆ ಗುತ್ತಿನ ಮನೆಯನ್ನು ಕಾಯುವ ರಾಟ್‌ವಿಲ್ಹಾರ್‌ ನಾಯಿ ಬೌಬೌ ಬೊಗಳುತ್ತಾ ಮನೆ ಯಜಮಾನನಿಗೆ ನೆಂಟರು ಆಗಮನದ ಮುನ್ಸೂಚನೆ ನೀಡುತ್ತಿತ್ತು. ಅಂಗಳದಲ್ಲಿನ ಗಿಡಕ್ಕೆ ಕಟ್ಟಿದ್ದ ಅಂಕದ ಕೋಳಿಗಳೆರಡು ಕೊಕ್ಕೋ…ಕೋ…ಕ್ಕೋ ಎನ್ನುತ್ತಾ ಮನೆಯೊಡತಿಯನ್ನು ಕರೆಯುತ್ತಿದ್ದವು.

ಸಹೋದರರ ಸವಾಲ್‌….
ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ತನ್ನ ಸಹೋದರ ಮುಂಡಪ್ಪ ಪಯ್ಯಡೆಗೆ ಹಾಗೂ ವಿಶ್ವ ಬಂಟ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ತನ್ನ ಸಹೋದರ ಐಕಳ ಗುಣಾಪಾಲ್‌ ಶೆಟ್ಟಿ ಅವರನ್ನು ಸ್ಮರಣಿಕೆಯನ್ನಿತ್ತು ಗೌರವಿಸಿರುವುದು  ಕೂಡು ಕುಟುಂಬಕ್ಕೆ ಸಾಕ್ಷಿ ಎಂಬಂತಿತ್ತು. ಇವರಂತೆ ಇನ್ನೂ ಅನೇಕ ಮಂದಿ ಸಹೋದರ ವರ್ಯರು ಸಮುದಾಯದ ಏಕತೆ, ಸರ್ವೋಭಿವೃದ್ಧಿಗೆ  ಸಮ್ಮೇಳನದಲ್ಲಿ  ಪರಸ್ಪರ ಸೇವಾ ನಿರತರಾಗಿರುವುದು ಎಲ್ಲರಲ್ಲೂ ಹರ್ಷವನ್ನು ಮೂಡಿಸಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದಕ್ಕೊಂದು ನೀತಿ- ಬೋಧಕವಾಗಿದ್ದು ವಿಶೇಷವಾಗಿ ತಮ್ಮ ಮಕ್ಕಳನ್ನು ಕೌಟುಂಬಿಕವಾಗಿ ಬೆಳೆಸಿ ಸಂಸ್ಕಾರವನ್ನು ರೂಪಿಸುವಲ್ಲಿ ಎಚ್ಚರಿಸುವಂತಿದ್ದವು. ಪರದೇಶ ವ್ಯಾಮೋಹಕ್ಕಿಂತ ಸ್ವದೇಶಿ ಬದುಕಿನೊಂದಿಗೆ ಬಾಂಧ್ಯವನ್ನು  ಮೈಗೂಡಿಸಿ ಬಾಳುವ ಸಂದೇಶ ನೀಡುವಂತಿದ್ದವು. ಒಟ್ಟಿನಲ್ಲಿ ಮುಂಬಯಿ ಬಂಟ ಸಮಾಜದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಮಾವೇಶವೊಂದನ್ನು ಸಮಾಜ ಬಾಂಧವರು ಕಣ್ತುಂಬಿಕೊಂಡು ಐಕಳ ಹರೀಶ್‌ ಶೆಟ್ಟಿ ಸಂಘಟನಾ ಚಾತುರ್ಯಕ್ಕೆ ಮತ್ತೂಮ್ಮೆ ಸಾಕ್ಷಿಯಾದರು.

ಕೈ ಬೀಸಿ ಕರೆಯುತ್ತಿದ್ದ ಬಾವಿಕಟ್ಟೆ…
ಬಂದ ಅತಿಥಿಗಳು ಕಟ್ಟಿಟ್ಟ ತುಳುವರ ಸಾಂಪತ್ತಿಕ ಬದುಕ‌ು ಬಿಂಬಿಸುವ ತುಪ್ಪೆ (ಕಣಜ)ಯನ್ನು ಕಂಡು ಮನೋಲ್ಲಾಸ ಪಡೆದು,  ಪಕ್ಕದಲ್ಲಿನ ಬಾವಿ ಕಟ್ಟೆಯತ್ತ ತೆರಳಿ ತಿಳಿ ನೀರನ್ನು ನೋಡಿ  ರಾಟೆಯ ಮೂಲಕ ನೀರನ್ನೆಳೆದು ಕೈಕಾಲುಗಳನ್ನು ತೊಳೆದು, ತುಳಸಿ ಕಟ್ಟೆಗೆ ನಮಿಸಿ ನಡೆಯುತ್ತಿದ್ದಂತೆಯೇ ಗುತ್ತಿನ ಮನೆಯಂಗಳದಲ್ಲೇ ಸ್ತ್ರೀಯರು ಹಣೆಗೆ ಕುಂಕುಮ ಹಚ್ಚಿ, ಮಂಗ್ಳೂರು ಮಲ್ಲಿಗೆ ಮುಡಿಸಿ ಬರಮಾಡಿಕೊಳ್ಳುತ್ತಿದ್ದ ದೃಶ್ಯವು ರೋಮಾಂಚನಗೊಳಿಸುತ್ತಿತ್ತು. ಗುತ್ತಿನ ಮನೆಯೊಳಗೆ ಪ್ರವೇಶಿಸಿದ ಅತಿಥಿಗಳು ಅಲ್ಲಿನ ತುಳುವರ ಆರಾಧ್ಯದೈವ-ದೇವರ ಗುಡಿ (ಸಾಣ) ಗೆ ನಮಿಸಿ ಕುಶಲೋಪರಿಯನ್ನು ನಡೆಸುವ ರೀತಿ ಯುವ ಪೀಳಿಗೆ ಮಾದರಿಯಾಗಿತ್ತು. ಪ್ರತಿಷ್ಠೆಯ ಅಂಗಳದ ಘನತೆ, ಗುತ್ತಿನ ಮನೆಯತ್ತ ನೋಡಿದರೆ ಹಲವು ಸ್ಥಿತ್ಯಾಂತರಗಳಿಗೆ ಕಾರಣವಾಗಿರುವ ಚಾವಡಿ ಒಂದೆಡೆಯಾದರೆ, ವಿಠಲ ಎಸ್‌. ಆಳ್ವ ಅವರ ಕ್ರಮಬದ್ಧವಾದ ಆಸನ ವ್ಯವಸ್ಥೆ ಗಣ್ಯರ ಮೆಚ್ಚುಗೆ ಪಾತ್ರವಾಯಿತು. ಚೆಂಡೆ-ವಾದ್ಯಗಳ ನೀನಾದದೊಂದಿಗೆ ಶಿಸ್ತು-ಬದ್ಧವಾದ ಸ್ವಾಗತ, ಊಟೋಪಚಾರ ಇತ್ಯಾದಿಗಳೊಂದಿಗೆ ರಂಗೇರಿದ ಸಮ್ಮೇಳನವಂತೂ ಪ್ರಶಂಸನೀಯ. ಭೀಮ ಬಲ ನೀಡುವ ಅತ್ಯಾಕರ್ಷಕ “ಗಧೆ’ಯನ್ನು ಸಮ್ಮೇಳನ ಸ್ಮರಣಾರ್ಥ ಚಿಹ್ನೆಯಾಗಿ ನೀಡಿ ಗೌರವಿಸಿದ್ದು ಮತ್ತೂಂದು ವಿಶೇಷತೆಯಾಗಿತ್ತು. ಇವೆಲ್ಲವೂ ಐಕಳ ಹರೀಶ್‌ ಅವರ ಸಂಘಟನಾ ಚಾತುರ್ಯತೆಗೆ ಕೈಗನ್ನಡಿಯಾಗಿತ್ತು. ಈ ಮಧ್ಯೆ ಮಕ್ಕಳಿಗಾಗಿ ರಚಿಸಿದ ಇಳಿಜಾರು ಬಂಡಿ ಮನೋಲ್ಲಾಸ ನೀಡಿತು.

ಸಮಗ್ರ ಬಂಟ ಸಂಘ-ಸಂಸ್ಥೆಗಳನ್ನು ಒಗ್ಗೂಡಿಸಿ ಬಂಟರ ಐಕ್ಯತೆ ಮತ್ತು ಸಮಾಜೋದ್ಧಾರವನ್ನು ಸಮ್ಮೇಳನದ ಮುಖ್ಯ ಉದ್ದೇಶ ವಾಗಿರಿಸಿಕೊಂಡು  ಇತಿಹಾಸ ಕಾರ್ಯಕ್ರಮ ಮಾಡಬೇಕು ಎನ್ನುವ ಆಶಯ ನನ್ನಲ್ಲಿತ್ತು. ಇಂತಹ ಮಹಾನ್‌ ಕನಸು ನನಸಾಗಿಸಿದ ಅಭಿಮಾನ ಇಂದು ಫಲಿಸಿದಂತಾಗಿದೆ. ಅಧ್ಯಕ್ಷಪದ ಅಲಂಕರಿಸುವುದು ಸುಲಭ ಆದರೆ ಅದರಲ್ಲಿನ ಜವಾಬ್ದಾರಿಗಳು ಅನೇಕ. ನಾನು ಬಂಟ್ಸ್‌ ಸಂಘ ಮುಂಬಯಿ ಅಧ್ಯಕ್ಷನಾಗುವ ಸಮಯದಲ್ಲಿ ಅಂದಿನ ನಿಕಟಪೂರ್ವ ಅಧ್ಯಕ್ಷ ಸುಧಾಕರ ಹೆಗ್ಡೆ ಅವರು ದಾನ ದಾಡುವುದು ಸುಲಭ ಆದರೆ ಅಧ್ಯಕ್ಷ ಹುದ್ದೆ ವಹಿಸುವುದು ಬಹಳ  ಕಷ್ಟ ಎಂದಿದ್ದರು. ಇಂದು ದಾನಿಗಳ ಪ್ರೋತ್ಸಾಹದಿಂದ ದತ್ತಿನಿಧಿಯನ್ನು ಸ್ಥಾಪಿಸಿ ನಾವೂ ಬಡ ಮಕ್ಕಳಿಗೆ ಸಹಾಯ ಮಾಡಲು ಸಾಧ್ಯವಾಗಿದೆ. ನಾವು ಕೆಲವು ಗಣ್ಯವ್ಯಕ್ತಿಗಳಿಗೆ ಆಹ್ವಾನಿಸಲು ಹೋದಾಗ ಅವರು ಪ್ರೋತ್ಸಾಹಿಸಿದ್ದಾರೆ. ಈ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಲೋಪದೋಷ ಬಾರದ ಹಾಗೆ ನಾನು ನಡೆದುಕೊಳ್ಳುತ್ತೇನೆ. ನನ್ನ ಮುಂದಿನ ಮೂರು ವರ್ಷದ ಅವಧಿಯಲ್ಲಿ ಯಾರು ಮಾಡದ ಕೆಲಸಗಳನ್ನು ಮಾಡುವ ಉದ್ದೇಶವನ್ನು ಹೊಂದಿದ್ದೇನೆ. ತಮ್ಮೆಲ್ಲರ ಸಹಕಾರದಿಂದ ನನ್ನ ಯೋಜನೆ-ಯೋಚನೆಗಳನ್ನು ಪೂರೈಸುವೆ. ಒಕ್ಕೂಟದಲ್ಲಿ ಆದಾಯವಿಲ್ಲ. ಅದಕ್ಕಾಗಿ ಸದಸ್ಯತ್ವ ಮತ್ತು ಶಾಶ್ವತ ನಿಧಿ ದಾನಿಗಳಾಗಿ  ಪ್ರೋತ್ಸಾಹ ನೀಡಬೇಕು. ಆ ಮೂಲಕ ಗ್ರಾಮೀಣ ಪ್ರದೇಶದ ಬಂಟರ ಸಂಘಗಳ ಏಳಿಗೆಯನ್ನು ಅರ್ಥಪೂರ್ಣವಾಗಿಸೋಣ. ಸಹಕಾರ ನೀಡಿದ ಎಲ್ಲಾ ಪ್ರಾಯೋಜಕರು, ದಾನಿಗಳು, ಪಾಲ್ಗೊಂಡ ಸರ್ವರಿಗೂ ಕೃತಜ್ಞತೆಗಳು 
ಐಕಳ ಹರೀಶ್‌ ಶೆಟ್ಟಿ 
(ಅಧ್ಯಕ್ಷರು : ಜಾಗತಿಕ ಬಂಟರ ಸಂಘಗಳ ಒಕ್ಕೂಟ).

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತEducation Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Snake

Vitla: ಹಾವು ಕಡಿದು ಪೆರುವಾಯಿ ಯುವಕ ಮೃತ್ಯು

ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!

Kerala: ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!

Lawrence Bishnoi’s brother Anmol Bishnoi arrested in America

Anmol Bishnoi: ಅಮೆರಿಕದಲ್ಲಿ ಲಾರೆನ್ಸ್‌ ಬಿಷ್ಣೋಯ್‌ ಸಹೋದರ ಅನ್ಮೋಲ್‌ ಬಿಷ್ಣೋಯ್‌ ಬಂಧನ

Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ

Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ

ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತEducation Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Snake

Vitla: ಹಾವು ಕಡಿದು ಪೆರುವಾಯಿ ಯುವಕ ಮೃತ್ಯು

Untitled-1

Kasaragod: ಅಪರಾಧ ಸುದ್ದಿಗಳು

Shirva1

Shirva: ಹಿಂದೂ ಜೂನಿಯರ್‌ ಕಾಲೇಜು ದಶಮಾನೋತ್ಸವ: ಕೊಲ್ಲಿ ರಾಷ್ಟ್ರದಲ್ಲಿ ಸಮಾಲೋಚನಾ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.