ಗೋಕುಲ ಆಧ್ಯಾತ್ಮಿಕ ಆಕರ್ಷಣೆಯ ಕೇಂದ್ರ: ಪಂ| ವಿದ್ಯಾಸಿಂಹಾಚಾರ್ಯ


Team Udayavani, May 11, 2022, 11:09 AM IST

ಗೋಕುಲ ಆಧ್ಯಾತ್ಮಿಕ ಆಕರ್ಷಣೆಯ ಕೇಂದ್ರ: ಪಂ| ವಿದ್ಯಾಸಿಂಹಾಚಾರ್ಯ

ಮುಂಬಯಿ: ಉಡುಪಿಯ ಸ್ವಾಮೀಜಿಗಳಿಗೆ ಮುಂಬಯಿಯಲ್ಲಿ ಆಶ್ರಯ ನೀಡಿದ ಮೊತ್ತಮೊದಲ ಸ್ಥಳವೇ ಗೋಕುಲ. ಇದೊಂದು ಆಧ್ಯಾತ್ಮಿಕ ಆಕರ್ಷಣೆಯ ಅತ್ಯಾ ವಶ್ಯಕ ಸಂಸ್ಥೆಯಾಗಿದೆ. ಧರ್ಮ, ಅನುಷ್ಠಾನ, ಸತ್ಕರ್ಮ ಮತ್ತು ಧರ್ಮದ ಪುನರುತ್ಥಾನ ಇಂತಹ ಕೇಂದ್ರಗಳಿಂದಲೇ ಸಾಧ್ಯ. ಪ್ರಚಾರ ಮಾಡದೆ ಜಾಗತಿಕವಾಗಿರುವ ಅದ್ಭುತ ಗ್ರಂಥವೇ ಭಗವದ್ಗಿತೆಯಾಗಿದ್ದು, ಜೀವನಕ್ಕೆ ಉತ್ಸವ ನೀಡುವ ಶಕ್ತಿಯಾಗಿದೆ. ಸ್ವಾರ್ಥಿಗಳಿಂದ ಜಗತ್ತು ಉಳಿಯದು. ಸುರೇಶ ರಾಯರಂತಹ ವಿನಯ, ನಮ್ರತೆ, ಬದ್ಧತೆ, ಸಮರ್ಪಣೆಯಿಂದ ಮಾತ್ರ ಸಾಧ್ಯ ಎಂದು ಶ್ರೀ ಸತ್ಯಧ್ಯಾನ ವಿದ್ಯಾಪೀಠ ಮುಲುಂಡ್‌ ಇದರ ಮುಖ್ಯಸ್ಥ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಡಿತ್‌ ವಿದ್ಯಾಸಿಂಹಾಚಾರ್ಯ ಮಾಹುಲಿ ತಿಳಿಸಿದರು.

ಸಾಯನ್‌ ಪೂರ್ವದ ಗೋಕುಲ ಸಭಾಗೃಹದಲ್ಲಿ  ಮಂಗಳವಾರ ಗೋಕುಲದ ಬ್ರಹ್ಮಕಲಶೋತ್ಸವ ಸಮಾರಂಭದ ಮೂರನೇ ದಿನದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಧಾನ ಅಭ್ಯಾಗತರಾಗಿ ಎನ್‌ಐಐಎಫ್‌ ಇನ್‌ಫ್ರಾಸ್ಟ್ರಕ್ಚರ್‌ ಫೈನಾನ್ಸ್‌ ಲಿ. ನ ಸಿಇಒ ಸದಾಶಿವ ರಾವ್‌, ಸಂಸ್ಕೃತ ವಿದ್ವಾಂಸೆ ಡಾ| ಉಷಾ ಚಡಗ, ಫೆಡರೇಶನ್‌ ಆಫ್‌ ಹೊಟೇಲ್‌ ಆ್ಯಂಡ್‌ ರೆಸ್ಟೋರೆಂಟ್‌ ಅಸೋಸಿಯೇಶನ್ಸ್‌ ಮಹಾರಾಷ್ಟ್ರ ಅಧ್ಯಕ್ಷ ಡಾ| ಶಂಕರ್‌ ಬಿ. ಶೆಟ್ಟಿ ವಿರಾರ್‌ ಉಪಸ್ಥಿತರಿದ್ದರು.

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಪೂರ್ಣ ನವಗ್ರಹ ಶಾಂತಿ ಚಂಡಿಕ ಯಾಗ, ವಿಶೇಷ ಪ್ರಾಯಶಿತ್ತ ಹೋಮ, ಮಹಾಪೂಜೆ, ಸಂಜೆ ದುರ್ಗಾ ನಮಸ್ಕಾರ ಪೂಜೆ ನಡೆಯಿತು. ವಿವಿಧ ಭಜನ ಮಂಡಳಿಗಳಿಂದ ಭಜನ ಕಾರ್ಯಕ್ರಮ ಜರಗಿತು. ಬಿ. ರಮಾನಂದ ರಾವ್‌ ಮತ್ತು ಲಕ್ಷ್ಮೀ ರಮಾನಂದ ರಾವ್‌, ನಾಗೇಶ್‌ ರಾವ್‌ ಮತ್ತು ಭಾಗ್ಯಲಕ್ಷಿ$¾à ಎನ್‌. ರಾವ್‌, ದೀಪಕ್‌ ಶಿವತ್ತಾಯ ಮತ್ತು ಪ್ರತಿಭಾ ಡಿ. ಶಿವತ್ತಾಯ, ಕೃಷ್ಣರಾಜ ಉಪಾಧ್ಯ ಮತ್ತು ಶಾಂತಾ ಕೆ. ಉಪಾಧ್ಯ ದಂಪತಿಗಳು ಪೂಜಾವಿಧಿಗಳ ಯಜಮಾನತ್ವ ವಹಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಧ್ಯಾಹ್ನ ವಿದುಷಿ ಮಂಜುಳಾ ಭಟ್‌ ಮತ್ತು ವಿದುಷಿ ಚಂದ್ರಿಕಾ ಭಟ್‌ ಅವರಿಂದ ಭಕ್ತಿ ರಸಮಂಜರಿ, ಸಂಜೆ ಕರ್ನಾಟಕ ಸಂಘ ಮುಂಬಯಿ ಇದರ ಕಲಾಭಾರತಿ ಕಲಾವಿದ ಬಳಗದ ವತಿಯಿಂದ ಹಿರಿಯ ಕಲಾವಿದ ವಾಸುದೇವ ಮಾರ್ನಾಡ್‌ ಪ್ರಧಾನ ಭೂಮಿಕೆಯಲ್ಲಿ, ಪ್ರಶಸ್ತಿ ಪುರಸ್ಕೃತ ರಂಗತಜ್ಞ ಡಾ| ಭರತ್‌ಕುಮಾರ್‌ ಪೊಲಿಪು ಪರಿಕಲ್ಪನೆ ಮತ್ತು ನಿರ್ದೇಶನದ “ಸಂಭವಾಮಿ ಯುಗೇ ಯುಗೇ’ ಸಂಗೀತ ನೃತ್ಯ ಪ್ರಧಾನ ಕಥಾನಕ ಪ್ರದರ್ಶನಗೊಂಡಿತು.

ಬಳಿಕ ಡಾ| ಶ್ರೀಪಾದ್‌ ಭಟ್‌ ಪರಿಕಲ್ಪನೆ, ನಿರ್ದೇಶನದ ಅವಳ ಕಗಡ ರಬೀಂದ್ರನಾಥ ಠಾಗೋರ್‌ ಕಥೆಯ ನಾಟಕೀಯ ತುಣುಕನ್ನು ಅಹಲ್ಯಾ ಬಲ್ಲಾಳ್‌ ಪ್ರಸ್ತುತಪಡಿಸಿದರು ಗೋಕುಲದ ಕಲಾವಿದರು ನ್ಯಾಯವಾದಿ ಗೀತಾ ಆರ್‌.ಎಲ್‌. ಭಟ್‌ ನಿರ್ದೇಶನದಲ್ಲಿ ಕೃಷ್ಣ ಲೀಲೆ – ಕಂಸ ವಧೆ ಯಕ್ಷಗಾನ ಪ್ರದರ್ಶಿಸಿದರು.

ಬಿಎಸ್‌ಕೆಬಿ ಅಸೋಸಿಯೇಶನ್‌ ಮತ್ತು ಗೋಪಾಲ ಕೃಷ್ಣ ಪಬ್ಲಿಕ್‌ ಟ್ರಸ್ಟ್‌ನ ಅಧ್ಯಕ್ಷ ಡಾ| ಸುರೇಶ್‌ ಎಸ್‌. ರಾವ್‌ ಕಟೀಲು, ಬಿಎಸ್‌ಕೆಬಿ ಉಪಾಧ್ಯಕ್ಷ ವಾಮನ ಹೊÙ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರಭಾಕರ ಎಲ್‌. ಶೆಟ್ಟಿ, ಡಾ| ಸುರೇಂದ್ರಕುಮಾರ್‌ ಹೆಗ್ಡೆ, ಪದ್ಮನಾಭ ಸಸಿಹಿತ್ಲು, ಯು.ಬಿ. ಆನಂದ ಶೆಟ್ಟಿ, ಬಿ. ವಿವೇಕ್‌ ಶೆಟ್ಟಿ, ಶ್ಯಾಮ ಎನ್‌. ಶೆಟ್ಟಿ, ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ನ ಕಾರ್ಯದರ್ಶಿ ಎ.ಪಿ.ಕೆ. ಪೋತಿ, ಜತೆ ಕಾರ್ಯದರ್ಶಿಗಳಾದ ಪಿ.ಸಿ.ಎನ್‌. ರಾವ್‌ ಮತ್ತು ಚಿತ್ರಾ ಮೇಲ್ಮನೆ, ಜತೆ ಕೋಶಾಧಿಕಾರಿ ಪಿ.ಬಿ. ಕುಸುಮಾ ಶ್ರೀನಿವಾಸ್‌, ಮಹಿಳಾ ವಿಭಾಗಧ್ಯಕ್ಷೆ ಐ.ಕೆ. ಪ್ರೇಮಾ ಎಸ್‌. ರಾವ್‌, ವಿಜಯಲಕ್ಷಿ ¾à ಸುರೇಶ್‌ ರಾವ್‌, ಡಾ| ಶ್ರುತಿ ಕೃಷ್ಣಮೂರ್ತಿ ಹೆಬ್ಟಾರ್‌ ಮತ್ತಿತರ ಪದಾಧಿಕಾರಿಗಳು, ಸದಸ್ಯರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾದರು.

ಭಾರತಿ ಉಡುಪ ಪ್ರಾರ್ಥನೆಗೈದರು. ಉಪಾಧ್ಯಕ್ಷೆ ಶೈಲಿನಿ ರಾವ್‌ ಸ್ವಾಗತಿಸಿದರು. ಡಾ| ಅಧಿತಿ ಆರ್‌.ಎಲ್‌. ಭಟ್‌ ಸಭಾ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸಿಎ ಹರಿದಾಸ ಭಟ್‌ ವಂದಿಸಿದರು.

ನನಗೆ ಧಾರ್ಮಿಕತೆಯ ಅನುಭವವಿಲ್ಲ. ಆದರೆ ಜೀವನ ಏನೆಂದು ತಿಳಿದಿದ್ದೇನೆ. ನಮ್ಮ ಕುಟುಂಬಸ್ಥರ ಎಲ್ಲ ಧಾರ್ಮಿಕ ವಿಧಿಗಳು ಹಳೇ ಗೋಕುಲದಲ್ಲಿ ನೇರವೇರಿವೆ. ಇಂತಹ ಗೋಕುಲ ಶ್ರೀಕೃಷ್ಣನ ಮಂದಿರವಾಗಿ ಸಿದ್ಧಗೊಂಡಿರುವುದು ಅಭಿಮಾನ ಎನಿಸುತ್ತದೆ.ಸದಾಶಿವ ರಾವ್‌, ಸಿಇಒ, ಎನ್‌ಐಐಎಫ್‌ ಇನ್‌ಫ್ರಾಸ್ಟ್ರಕ್ಚರ್‌ ಫೈನಾನ್ಸ್‌ ಲಿ.

ಮಹಾರಾಷ್ಟ್ರದವರಿಗೆ ಕರ್ನಾಟಕದ ಜನತೆ ಎಷ್ಟು ಆಧ್ಯಾತ್ಮಿಕರು ಎಂದು ತೋರಿಸಿದ್ದೇವೆ. ಈ ಗೋಕುಲವನ್ನು ಇಷ್ಟೊಂದು ದೊಡ್ಡದಾಗಿ ನಿರ್ಮಿಸಿದ ಡಾ| ಸುರೇಶ್‌ ರಾವ್‌ ಬಳಗವು ಶಕ್ತಿಶಾಲಿ ಆಗಿದೆ. ಅಖಂಡ ಬ್ರಾಹ್ಮಣ ಕುಲಕ್ಕೆ ಡಾ| ಸುರೇಶ್‌ ರಾವ್‌ ಕುಲ ತಿಲಕರಾಗಿದ್ದಾರೆ. ಗೋಕುಲ ಸಭಾಗೃಹವನ್ನು ಶ್ರೀ ಗೋಪಾಲಕೃಷ್ಣನ ದೇವಾಲಯವನ್ನಾಗಿ ಪರಿವರ್ತಿಸಿರುವುದು ದೊಡ್ಡ ಸಾಧನೆ.ಡಾ| ಶಂಕರ್‌ ಶೆಟ್ಟಿ ವಿರಾರ್‌ ಅಧ್ಯಕ್ಷರುಫೆಡರೇಶನ್‌ ಆಫ್‌ ಹೊಟೇಲ್‌ ಆ್ಯಂಡ್‌ ರೆಸ್ಟೋರೆಂಟ್‌ ಅಸೋಸಿಯೇಶನ್ಸ್‌ ಮಹಾರಾಷ್ಟ್ರ

ಮುದ್ದು ಕೃಷ್ಣ ಮತ್ತು ನಮ್ಮ ಕುಟುಂಬಿಕರಿಗೆ ಅತ್ಯಂತ ನಂಟು. ಈ ಗೋಕುಲದ ಪುನರ್‌ ಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದೇ ನನ್ನ ಸೌಭಾಗ್ಯ. ನಮಗೆ ಎಲ್ಲ ತರಹ ಮಾಧ್ಯಮವೇ ಗೋಕುಲವಾಗಿದೆ. ಆದುದರಿಂದ ನಮಗೆ ರಾಮಾವತಾರಕ್ಕಿಂತ ಕೃಷ್ಣಾವತಾರವೇ ಪ್ರಧಾನ. –ಉಷಾ ಚಡಗ, ಸಂಸ್ಕೃತ ವಿದ್ವಾಂಸೆ

ಟಾಪ್ ನ್ಯೂಸ್

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.