ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್: ಶಂಕರಾಚಾರ್ಯ ಜಯಂತಿ
Team Udayavani, Apr 25, 2018, 9:51 AM IST
ನವಿ ಮುಂಬಯಿ: ಗೋಪಾಲ ಕೃಷ್ಣ ಪಬ್ಲಿಕ್ ಟ್ರಸ್ಟ್ ಗೋಕುಲ ಸಯಾನ್ ವತಿಯಿಂದ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜಯಂತಿ ಉತ್ಸವವು ಬಿಎಸ್‌ಕೆಬಿ ಅಸೋಸಿಯೇಶನ್ ಮತ್ತು ಶ್ರೀ ಸುಬ್ರಹ್ಮಣ್ಯ ಸೇವಾ ಸಂಘದ ಸಹಭಾಗಿತ್ವ ದೊಂದಿಗೆ ಎ. 22 ರಂದು ನೆರೂಲ್‌ನ ಆಶ್ರಯದ ಸಭಾಗೃಹದಲ್ಲಿ ನಡೆಯಿತು.
ಶ್ರೀ ಕೃಷ್ಣ ಬಾಲಾಲಯದಲ್ಲಿ ಬೆಳಗ್ಗೆ ನಿತ್ಯಪೂಜೆಯ ಅನಂತರ ಶ್ರೀ ಶಂಕರ ಭಗವತ್ಪಾದರ ಭಾವಚಿತ್ರವನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಉಡುಪಿ ಯಿಂದ ಆಗಮಿಸಿದ ವೇದಮೂರ್ತಿಗಳಾದ ಕೃಷ್ಣರಾಜ್ ಮತ್ತು ಪ್ರತಾಪ್ ರಾವ್ ಅವರ ಪೌರೋಹಿತ್ಯದಿಂದ ಪ್ರಾರ್ಥನೆ, ಪುಣ್ಯಾಹ ವಾಚನ, ಪಂಚಗವ್ಯ, ಗಣಹೋಮ, ಮಹಾಲಕ್ಷಿ¾à ಹವನ, ರುದ್ರಾಭಿಷೇಕ, ಶಂಕರಾಚಾರ್ಯ ನಾಮಾರ್ಚನೆ, ಪೂಜೆ ಮುಂತಾದ ಧಾರ್ಮಿಕ ಕೈಂಕರ್ಯಗಳು ನಾಗೇಶ್ ರಾವ್ ಅವರ ಸಹಯೋಗದಿಂದ ನೆರವೇರಿತು.
ಧಾರ್ಮಿಕ ವಿಧಿ-ವಿಧಾನಗಳಲ್ಲಿ ಪಿ.ಸಿ.ಎನ್. ರಾವ್ ಮತ್ತು ವಾಣಿ ರಾವ್ ದಂಪತಿ, ಯು. ಆರ್. ರಾವ್ ಮತ್ತು ಇಂದ್ರಾಣಿ ರಾವ್ ದಂಪತಿ, ರತ್ನಾಕರ್ ರಾವ್ ಮತ್ತು ರಮಾದೇವಿ ದಂಪತಿ ಮತ್ತು ಶಿರಿಶ್ ರಾವ್ ಮತ್ತು ಅನಿತಾ ರಾವ್ ದಂಪತಿ ಪಾಲ್ಗೊಂಡಿದ್ದರು.
ನೃತ್ಯ ಸೇವೆ
ಗೋಕುಲ ಕಲಾವೃಂದ ಭಜನಾ ಮಂಡಳಿ ಯಿಂದ ಆದಿ ಶಂಕರಾಚಾರ್ಯ ರಚಿತ ಸ್ತೋತ್ರಗಳ ಪಠನ ನೆರವೇರಿತು. ಹವನದ ಪೂರ್ಣಾಹುತಿಯಾದ ನಂತರ ನಡೆದ ಅಷ್ಟಾವಧಾನ ಸೇವೆಯಲ್ಲಿ ವೇದ ಘೋಷ, ಸಂಗೀತ, ನೃತ್ಯ ಸರ್ವ ವಾದ್ಯ ಸೇವೆ ಜರಗಿತು. ಕು| ಶ್ರಾವಣಿ ಹೆರ್ಲೆ ಇವರಿಂದ ನೃತ್ಯ ಸೇವೆ ನೆರವೇರಿತು.
ವೇದಮೂರ್ತಿ ಪ್ರತಾಪ್ ರಾವ್ ಅವರು ತಮ್ಮ ಉಪನ್ಯಾಸದಲ್ಲಿ ಹದಿಮೂರು ಶತಮಾನಗಳ ಹಿಂದೆ ಸಾûಾತ್ ಪರಶಿವನ ಅವತಾರ ಪುರುಷನಾಗಿ ಶಂಕರರು ಜನಿಸಿ ಅದ್ವೈತ ಸಿದ್ಧಾಂತದ ಪ್ರತಿಪಾದಕರೆನಿಸಿ, ತನ್ನ ಕೇವಲ 32 ವರ್ಷಗಳ ಜೀವಿತ ಕಾಲದಲ್ಲಿ ಸನಾತನ ಧರ್ಮ ಸಂರಕ್ಷಣೆಗಾಗಿ ಆಸೇತು ವಿಮಾಚಲ ಪರ್ಯಂತ ಪರ್ಯಟನೆ ಮಾಡಿ ನಾಲ್ಕು ದಿಶೆಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದ್ದಾರೆ ಎಂದರು.
ಶಿವ, ವಿಷ್ಣು, ಗಣಪತಿ, ದೇವಿ, ಸುಬ್ರಹ್ಮಣ್ಯ, ಸರಸ್ವತಿ, ಹೀಗೆ ಎಲ್ಲಾ ದೇವರ ಮೇಲೆ ಸರಳ ಸುಂದರ ಸ್ತೋತ್ರಗಳನ್ನು ರಚಿಸಿ ಅವುಗಳನ್ನು ನಿತ್ಯವೂ ಪಠಿಸುವಂತಹ ಭಕ್ತಿ ಮಾರ್ಗವನ್ನು ಆಚಾರ್ಯರು ನಮಗೆ ತೋರಿಸಿಕೊಟ್ಟಿದ್ದಾರೆ. ಅಂತಹ ಆಚಾರ್ಯರ ಮಾರ್ಗದರ್ಶನ ನಮಗೆ ದಾರಿದೀಪವಾಗಲಿ ಎಂದರು.
ತೀರ್ಥ-ಪ್ರಸಾದ ವಿತರಣೆ, ಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾ ಯಿತು. ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಬಿಎಸ್‌ಕೆಬಿ ಅಸೋಸಿಯೇಶನ್, ಸುಬ್ರಹ್ಮಣ್ಯ ಸೇವಾ ಸಂಘದ ಪದಾಧಿಕಾರಿಗಳು ಸೇರಿದಂತೆ ನೂರಾರು ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Army Vehicle Tragedy:ಕೊಡಗಿನ ಗಾಯಾಳು ಯೋಧ ಚಿಕಿತ್ಸೆ ಫಲಕಾರಿಯಾಗದೆ ಸಾ*ವು
Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
ಹೊಸ ವರ್ಷದ ಶುಭಾಶಯ ನೆಪದಲ್ಲಿ ವಂಚನೆ ಸಾಧ್ಯತೆ “ಎಪಿಕೆ ಫೈಲ್’ ತೆರೆಯದಂತೆ ಪೊಲೀಸರ ಸೂಚನೆ
Malpe: ತೆಂಕನಿಡಿಯೂರು; ತೀವ್ರ ಅಸ್ವಸ್ಥಗೊಂಡ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.