ಗೋರೆಗಾಂವ್ ಕರ್ನಾಟಕ ಸಂಘ: ಮಹಿಳಾ ಭಾರತಿ ಸಮ್ಮೇಳನ ಸಮಾರೋಪ
Team Udayavani, Jan 3, 2019, 12:07 PM IST
ಮುಂಬಯಿ: ಯತ್ರ ನಾರ್ಯಸ್ತು ಪೂಜ್ಯಂತೆ ಇಂತಹ ಶ್ಲೋಕಗಳೆಲ್ಲ ಒಂದು ರೀತಿಯಲ್ಲಿ ಮಹಿಳೆಯರನ್ನು ಮೂರ್ಖರನ್ನಾ ಗಿಸುವುದಕ್ಕೆ ಇರುವಂಥದ್ದಾಗಿದೆ. ಪುರಾಣಗಳಿಗಿಂತ ನಮ್ಮ ಪಾಡªನಗಳಲ್ಲಿ ಮಹಿಳೆಯರ ಬಗ್ಗೆ ಬಹಳಷ್ಟು ಒಳ್ಳೆಯ ಸಂಗತಿಗಳನ್ನು ಕಾಣಬಹುದು. ಪುರುಷ ಪ್ರಧಾನ ಸಮಾಜದ ವಿರುದ್ಧ ಪಾಡªನಗಳಲ್ಲಿ ಹೆಣ್ಣಿನ ದನಿ ಗಟ್ಟಿಯಾಗಿ ಕಾಣಿಸುತ್ತದೆ. ಅಲ್ಲಿ ಹೆಣ್ಣು ಕಣ್ಣೀರು ಹಾಕುವುದಿಲ್ಲ. ಶೋಷಣೆಯ ವಿರುದ್ಧ ಪ್ರತಿಭಟಿಸುತ್ತಾಳೆ. ಕೃಷಿ ಸಮಾಜದಲ್ಲಿ ಹೆಣ್ಣು ಸಶಕ್ತಳಾಗಿ ಮೂಡಿ ಬಂದಿದ್ದಾಳೆ ಎಂದು ಸಾಹಿತಿ ಡಾ| ಇಂದಿರಾ ಹೆಗಡೆ ಅವರು ನುಡಿದರು.
ವಜ್ರ ಮಹೋತ್ಸವ ಸಂಭ್ರಮ ದಲ್ಲಿರುವ ಗೋರೆಗಾಂವ್ ಕರ್ನಾಟಕ ಸಂಘದ ಮಹಿಳಾ ವಿಭಾಗವು ಗೋರೆಗಾಂವ್ ಪಶ್ಚಿಮದ ಕೇಶವ ಗೋರೆ ಸ್ಮಾರಕ ಸಭಾಗೃಹದಲ್ಲಿ ಹಮ್ಮಿಕೊಂಡ 6 ನೇ ವಾರ್ಷಿಕ ಮಹಿಳಾ ಭಾರತಿ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ದಿನಗಳಲ್ಲಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ರೀತಿಯ ಬದಲಾವಣೆಗಳು ಕಾಣಿಸಿಕೊಳ್ಳುತ್ತಿವೆ. ಉದಾಹರಣೆಗೆ ಭೂತಾರಾಧನೆಯಲ್ಲಿ ಎಲ್ಲವೂ ಪಲ್ಲಟವಾಗುತ್ತಿದೆ. ಊರಲ್ಲಿ ಮನೆಗಳು ಖಾಲಿಯಾಗುತ್ತಿದ್ದು, ಎಲ್ಲ ಪರವೂರುಗಳಲ್ಲಿ ಹೆಚ್ಚಾಗಿದ್ದಾರೆ. ಊರಲ್ಲಿ ಕೇವಲ ಭೂತ ಮಾತ್ರ ಇರುತ್ತದೆ. ಭೂತಾರಾಧನೆಯ ಸಂಸ್ಕೃತಿ ಬದಲಾಗುತ್ತಿದೆ. ಪಂಬದ ಹೇಳಿದ್ದಷ್ಟೇ ಉಳಿದು ಬಿಟ್ಟಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಅಷ್ಟಮಂಗಳದಂಥ ಪ್ರಶ್ನೆಗಳಿಗೆ ಮೊರೆ ಹೋಗುವ ಬದಲು ನಾವು ನಂಬಿದ ಭೂತವನ್ನು ನಂಬಿದರೆ ಸಾಕು ಎಂದು ಬದಲಾಗುತ್ತಿರುವ ಸಂಸ್ಕೃತಿಯತ್ತ ಬೆಳಕು ಚೆಲ್ಲಿ ಮಹಿಳಾ ಭಾರತಿಯಲ್ಲಿ ಊರಿನಿಂದ ಆಗಮಿಸಿದ ಉಪನ್ಯಾಸಕಿಯರಾದ ರೇಖಾ ವಿ. ಬನ್ನಾಡಿ ಮತ್ತು ಅತ್ರಾಡಿ ಅಮೃತಾ ಶೆಟ್ಟಿ ಅವರ ಉಪನ್ಯಾಸಗಳನ್ನು ವಿಶ್ಲೇಷಿಸಿದ ಅವರು, ಬಹುತ್ವ ಭಾರತದಲ್ಲಿನ ವೈಶಿಷ್ಟÂಗಳನ್ನು ನೆನಪಿಸಿಕೊಂಡರು. ಇಂತಹ ಮಹಿಳಾ ಭಾರತಿ ಸಮ್ಮೇಳನವನ್ನು ಹಮ್ಮಿಕೊಂಡು ಸ್ತ್ರೀ ಚಿಂತನೆಗೆ ಬೆಂಬಲಿಸಿದ ಗೋರೆಗಾಂವ್ ಕರ್ನಾಟಕ ಸಂಘವನ್ನು ಅಭಿನಂದಿಸಿ ವಜ್ರಮಹೋತ್ಸವ ಸಂಭ್ರಮಕ್ಕೆ ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ ಅವರು ಮಾತನಾಡಿ, ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ಬಹಳ ಹಿಂದೆಯೇ ಮಹಿಳೆಯರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ದಾಖಲೆಯಿದೆ. ಇಂದು ಸಂತೋಷದ ಸಂಗತಿ. ಇಂದು ಸ್ತ್ರೀ ಜಗತ್ತು ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಯಾವುದೇ ಕೆಲಸಕ್ಕೂ ಅವಳು ಸೈ ಎನಿಸಿದ್ದಾಳೆ. ಯುದ್ಧ ವಿಮಾನಗಳನ್ನು ಮಹಿಳೆಯರು ನಡೆಸುತ್ತಿದ್ದಾರೆ. ವ್ಯಾಪಾರ, ಉದ್ಯಮಗಳನ್ನು ತಾವೇ ನಡೆಸುತ್ತಿದ್ದಾರೆ. ಹಾಗಿದ್ದೂ ಅಲ್ಲಲ್ಲಿ ತಪ್ಪು ಹುಡುಕುವವರು, ಅವಮಾನ ಮಾಡುವವರಿದ್ದಾರೆ. ಇಂದು ಹೆಣ್ಣು ಇಲ್ಲಿ ಧೈರ್ಯಶಾಲಿಯಾಗಿ ಪ್ರತಿಭಟಿಸುತ್ತಿದ್ದಾಳೆ. ಭವಿಷ್ಯದಲ್ಲಿ ಮಹಿಳೆಯರ ಸ್ಥಿತಿಗತಿ ಇನ್ನಷ್ಟು ಉತ್ತಮವಾಗಲಿದೆ. ಸುಂದರ ವಾಗಲಿದೆ. ಮಹಿಳೆಗೆ ಮನೆಯಲ್ಲೂ, ಬೆಂಬಲ ಪ್ರೋತ್ಸಾಹ ಸಿಗುತ್ತಿರಲಿ ಎಂಬ ಹಾರೈಕೆ ನನ್ನದು ಎಂದರು.
ಅತಿಥಿಗಳನ್ನು ಸುಜಾತಾ ಶೆಟ್ಟಿ ಪರಿಚಯಿಸಿದರು. ಅಧ್ಯಕ್ಷ ದೇವಲ್ಕುಂದ ಭಾಸ್ಕರ ಶೆಟ್ಟಿ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರಿತಾ ಸುರೇಶ್ ನಾಯಕ್ ಗೌರವಿಸಿದರು. ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಜ್ರ ಮಹೋತ್ಸವ ಆಚರಿಸುತ್ತಿರುವ ಸಂಘದ ಸಾಧನೆಗಳನ್ನು, ಯೋಜನೆಗಳನ್ನು ವಿವರಿಸಿ,
ಮಹಿಳಾ ವಿಭಾಗದ ಸಾಧನೆಗಳನ್ನು ಶ್ಲಾಘಿಸಿದರು.
ಸುಮಿತ್ರಾ ಆರ್. ಕುಂದರ್ ಕಾರ್ಯಕ್ರಮ ನಿರ್ವಹಿಸಿದರು. ವಜ್ರಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರಿತಾ ಎಸ್. ನಾಯಕ್ ವಂದಿಸಿದರು. ಇದೇ ಸಂದರ್ಭದಲ್ಲಿ ದಾನಿಗಳನ್ನು ಗೌರವಿಸಲಾಯಿತು. ಸಂಘದ ಪದಾಧಿಕಾರಿಗಳು, ಉಪಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯ-ಸದಸ್ಯೆಯರು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.