ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ಪತ್ರಿಕಾ ವರದಿ ಕಲಿಕಾ ಶಿಬಿರ
Team Udayavani, Nov 25, 2017, 3:07 PM IST
ಮುಂಬಯಿ: ಪತ್ರಿಕಾ ವರದಿಗಾರರಲ್ಲಿ ಶಿಸ್ತು, ಪ್ರಾಮಾಣಿಕತೆ ಹಾಗೂ ಪರಿಸರದ ಮಾಹಿತಿ ಇರಬೇಕು. ವರದಿಗಾರರು ಎಲ್ಲಿ, ಏನು, ಯಾವಾಗ, ಯಾರು, ಯಾಕೆ, ಹೇಗೆ ಘಟನೆ ನಡೆಯಿತು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ವರದಿ ಮಾಡಬೇಕಾಗುತ್ತದೆ. ಮುಖ್ಯವಾಗಿ ಪತ್ರಿಕೋದ್ಯಮದಲ್ಲಿ ಆಸಕ್ತಿ ಇದ್ದವನು ಮಾತ್ರ ಉತ್ತಮ ವರದಿಗಾರನಾಗಲು ಸಾಧ್ಯವಿದೆ ಎಂದು ಮೊಗವೀರ ಮಾಸಿಕದ ಸಂಪಾದಕ ಅಶೋಕ್ ಸುವರ್ಣ ಅವರು ನುಡಿದರು.
ನ. 11ರಂದು ಗೋರೆಗಾಂವ್ ಕರ್ನಾಟಕ ಸಂಘದ ವತಿಯಿಂದ ಸಂಘ ಬಾಕೂìರು ರುಕ್ಮಿಣಿ ಶೆಟ್ಟಿ ಮಿನಿ ಸಭಾಗೃಹದಲ್ಲಿ ಜರಗಿದ ಪತ್ರಿಕಾ ವರದಿ ಕಲಿಕಾ ಶಿಬಿರದಲ್ಲಿ ಸಂಪನ್ಮೂಲ್ಯ ವ್ಯಕ್ತಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ದೇಶದ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗದಲ್ಲಿ ರಾಜಕೀಯ, ಸಾಂಸ್ಕೃತಿಕ, ವಾಣಿಜ್ಯ, ವಿಜ್ಞಾನ, ಕ್ರೀಡೆ, ಅಪರಾಧ ಹೀಗೆ ಹತ್ತು ಹಲವಾರು ವಿಷಯಗಳಿಗೆ ಸಂಬಂಧಿಸಿದ ವರದಿಗಾರರು ಇರುತ್ತಾರೆ. ಪ್ರತಿಯೊಂದು ವಿಷಯಕ್ಕೂ ತನ್ನದೇ ಆದ ಮಹತ್ವವಿದ್ದು, ಆ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ವರದಿಗಾರರಲ್ಲಿ ಇರಬೇಕು. ಸಮಾಜದಲ್ಲಿ ನಡೆಯುವ ಘಟನೆಗಳ ಸತ್ಯಾಸತ್ಯತೆಗಳನ್ನು ಬಿಂಬಿಸುವಲ್ಲಿ ವರದಿಗಾರರ ಪಾತ್ರ ಬಹುಮುಖ್ಯವಾಗಿದೆ. ಇಂದಿನ ಶಿಬಿರ ನಿಜಕ್ಕೂ ನನಗೆ ಸಂತೋಷವನ್ನು ತಂದುಕೊಟ್ಟಿದೆ. ಎಲ್ಲರೂ ಇದರಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದೀರಿ. ನೀವೆಲ್ಲರೂ ಸಂಘದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ ವರದಿಯನ್ನು ಪತ್ರಿಕೆಗಳಿಗೆ ಕೊಡಲು ಸಶಕ್ತರಾಗಿದ್ದೀರಿ ಎನ್ನಲು ಸಂತೋಷವಾಗುತ್ತಿದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಮೇಶ್ ಶೆಟ್ಟಿ ಪಯ್ನಾರು ಅವರು ಮಾತನಾಡಿ, ಇಂತಹ ಶಿಬಿರಗಳು ಸಂಘದಲ್ಲಿ ಆಗಾಗ ನಡೆಯುತ್ತಿರಬೇಕು. ಇದರಿಂದ ಸದಸ್ಯರು ಸಂಘದಲ್ಲಿ ಜರಗುವ ಕಾರ್ಯಕ್ರಮಗಳ ವರದಿಯನ್ನು ಪರಿಪಕ್ವತೆಯಿಂದ ವೃತ್ತಪತ್ರಿಕೆಗಳಿಗೆ ಕಳುಹಿಸಲು ಸಹಾಯವಾಗುತ್ತದೆ ಎಂದರು.
ಅಪರ್ಣಾ ರಾವ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಗ್ರಂಥಾಯನ ವಿಭಾಗದ ನಿರ್ದೇಶಕಿ ಪದ್ಮಜಾ ಮಣ್ಣೂರ ಇವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದಲ್ಲಿ ಇಂತಹ ಒಂದು ಶಿಬಿರ ಹಿಂದೊಮ್ಮೆ ನಡೆದಿತ್ತು. ಆ ಸಮಯದಲ್ಲಿ ಖ್ಯಾತ ಮರಾಠಿ ಪತ್ರಕರ್ತ ನಿಖೀಲ್ ವಾಗೆÛ ಅವರು ಆಗಮಿಸಿದ್ದರು. ಇಂತಹ ಶಿಬಿರಗಳಿಂದ ಪತ್ರಿಕೋದ್ಯಮದ ವಿವಿಧ ಮಜಲುಗಳನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ನುಡಿದು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಅತಿಥಿಯಾಗಿ ಪಾಲ್ಗೊಂಡ ಸೂರಪ್ಪ ಕುಂದರ್ ಅವರನ್ನು ಸುಜಾತಾ ಶೆಟ್ಟಿ ಅವರು ಪರಿಚಯಿಸಿದರು. ಸಂಘದ ಅಧ್ಯಕ್ಷ ರಮೇಶ್ ಶೆಟ್ಟಿ ಪಯ್ನಾರ್ ಅವರು ಅತಿಥಿಗಳನ್ನು ಸ್ಮರಣಿಕೆಯನ್ನಿತ್ತು ಗೌರವಿಸಿದರು.
ಅತಿಥಿ ಸೂರಪ್ಪ ಕುಂದರ್ ಅವರು ಮಾತನಾಡಿ, ವರ್ಷಕ್ಕೆ ಇಪ್ಪತ್ತೆ$çದಕ್ಕಿಂತ ಅಧಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಗೋರೆಗಾಂವ್ ಕರ್ನಾಟಕ ಸಂಘವು ಮುಂಬಯಿಯಲ್ಲಿ ತನ್ನದೇ ಆದ ಸ್ಥಾನಮಾನವನ್ನು ಹೊಂದಿದೆ. ಮುಂಬಯಿಯಲ್ಲಿ ಕನ್ನಡವನ್ನು ಉಳಿಸಿ-ಬೆಳೆಸುವ ಈ ಸಂಘದ ಕಾರ್ಯ ನಿಜವಾಗಿಯೂ ಅಭಿನಂದನೀಯವಾಗಿದೆ ಎಂದು ನುಡಿದರು.
ಅರುಷಾ ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿ ಅಶೋಕ್ ಸುವರ್ಣ ಅವರನ್ನು ಪರಿಚಯಿಸಿದರೆ, ಸಂಘದ ಉಪಾಧ್ಯಕ್ಷ ನಾರಾಯಣ ಮೆಂಡನ್ ಅವರು ಸ್ಮರಣಿಕೆಯನ್ನಿತ್ತು ಗೌರವಿಸಿದರು. ಗ್ರಂಥಾಯನ ವಿಭಾಗದ ಸಂಚಾಲಕಿ ಶಾಂತಾ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಗಾಯತ್ರಿ ರಾಮು ವಂದಿಸಿದರು. ಸಂಘದ ವಿವಿಧ ವಿಭಾಗಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ತುಳು-ಕನ್ನಡಿಗರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.