ಜಿಎಸ್‌ಬಿ ಬಾಲಾಜಿ ಸೇವಾ ಸಮಿತಿ: ವಾರ್ಷಿಕ ಸ್ನೇಹ ಸಮ್ಮಿಲನ
Team Udayavani, Dec 29, 2017, 4:31 PM IST
ಮುಂಬಯಿ: ವಸಾಯಿರೋಡ್ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಬಾಲಾಜಿ ಸೇವಾ ಸಮಿತಿಯ ಶ್ರೀ ವೆಂಕಟರಮಣ ಭಜನ ಮಂಡಳಿ ಇದರ 26 ನೇ ವಾರ್ಷಿಕ ಸ್ನೇಹ ಸಮ್ಮಿಲನ ಮತ್ತು ಶ್ರೀ ಸತ್ಯನಾರಾಯಣ ಮಹಾಪೂಜೆಯು ಡಿ. 10 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಾಲಾಜಿ ಮಂದಿರದಲ್ಲಿ ಜರಗಿತು.
ಪೂರ್ವಾಹ್ನ ವೇದಮೂರ್ತಿ ಗಿರಿಧರ ಭಟ್ ಅವರ ಮಾರ್ಗದರ್ಶನದಲ್ಲಿ ಸುನಂದಾ ಮತ್ತು ಸಮಿತಿಯ ಗೌರವ ಉಪಾಧ್ಯಕ್ಷ ಉದ್ಯಾವರ ಪ್ರವೀಣ್ ಗೋವಿಂದ ನಾಯಕ್ ಅವರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಸಮಿತಿಯವರಿಂದ ಭಜನ ಕಾರ್ಯಕ್ರಮವು ಇದೇ ಸಂದರ್ಭದಲ್ಲಿ ಜರಗಿತು. ಬೆಂಗಳೂರಿನ ಗಾಯಕ ರಮಣೇಶ್ ಪ್ರಭು ಇವರಿಂದ ಭಜನ ಕಾರ್ಯಕ್ರಮ ನಡೆಯಿತು. ಹಾರ್ಮೋನಿಯಂನಲ್ಲಿ ಪ್ರಸಾದ್ ಪ್ರಭು, ಪ್ರಕಾಶ್ ಪ್ರಭು, ತಬಲಾದಲ್ಲಿ ಮನೋಜ್ ಆಚಾರ್ಯ, ರಾಜೇಶ್ ಪ್ರಭು, ಪಖ್ವಾಜ್‌ನಲ್ಲಿ ಗಣೇಶ್ ಪೈ, ಅಶೋಕ್ ಶಿಂಧೆ ಅವರು ಸಹಕರಿಸಿದರು.
ಮಹಿಳೆಯರಿಂದ ಅರಸಿನ ಕುಂಕುಮ ಕಾರ್ಯಕ್ರಮ ನೆರವೇರಿತು. ಸಮಾಜದ ಹಿರಿಯರಾದ ರಾಮಕೃಷ್ಣ ಹೆಗ್ಡೆ, ವಿಜಯೇಂದ್ರ ಪ್ರಭು, ಎಚ್. ವಿನಾಯಕ್ ಪೈ, ಎಚ್. ವಿ. ಪೈ, ಗಣೇಶ್ ಕಾಮತ್, ಜಗದೀಶ್ ಹೆಗ್ಡೆ, ಕೃಷ್ಣ ಕಾಮತ್, ನಾಗೇಶ್ ಪೈ, ಪ್ರಕಾಶ್ ಶೆಣೈ, ಪ್ರಮೋದ್ ಶೆಣೈ, ಪ್ರಶಾಂತ್ ನಾಯಕ್, ವಾಮನ್ ಕಾಮತ್, ಸುರೇಶ್ ಕಾಮತ್, ಶ್ರೀಪತಿ ಭಟ್, ಅರವಿಂದ ಹೊನ್ನಾವರ, ಗೋಪಾಲಕೃಷ್ಣ ನಾಯಕ್, ದೇವೇಂದ್ರ ಹೆಗ್ಡೆ, ಉಮಾನಾಥ್ ಭಟ್, ಬಾಬಾ ಪೈ, ನಾಗೇಶ್ ಪ್ರಭು, ಸತೀಶ್ ಬಾಳಿಗಾ, ಪ್ರಭಾಕರ ಭಟ್, ಸೀತಾರಾಮ್ ರಾವ್, ಪ್ರಭಾಕರ ಜೋಶಿ, ಸದಾಶಿವ ನಾಯಕ್, ವಿವೇಕಾನಂದ ಭಕ್ತ, ಲಕ್ಷ¾ಣ್ ರಾವ್, ಕೆ. ವಿ. ಕಾಮತ್, ದತ್ತಾತ್ರೇಯ ನಾಯಕ್, ಆರ್. ಜಿ. ಕಾಮತ್, ರಾಮಚಂದ್ರ ಹೆಗ್ಡೆ, ಗಣಪತಿ ಭಕ್ತ, ವಿಜಯಾನಂದ ಶೆಣೈ, ಪುರುಷೋತ್ತಮ ಕುಡ್ವ, ಶ್ರೀನಿವಾಸ ಪಡಿಯಾರ್, ದೇವದಾಸ್ ಭಟ್, ಬಾಲಕೃಷ್ಣ ಪೈ, ಶಿರೀಷ್ ಆಚಾರ್ಯ, ಶ್ರೀಧರ ಪ್ರಭು, ವಿ. ಕೆ. ಕಾಮತ್, ವೆಂಕಟೇಶ್ ಪೈ, ಆರ್. ವಿ. ಶೆಣೈ, ಚಂದ್ರಕಾಂತ ಕುಡ್ವ, ಗಣೇಶ್ ಪೈ, ಸತೀಶ್ ಕಾಮತ್, ಮಾಧವ ನಾಯಕ್, ಸುರೇಶ್ ಪೈ, ವಾಸುದೇವ ಶೆಣೈ, ಜಗದೀಶ್ ಕಾಮತ್, ಯೋಗೇಶ್ ಶೆಣೈ, ಚಂದ್ರಕಾಂತ್ ಹೆಗ್ಡೆ, ಸತ್ಯೇಂದ್ರ ನಾಯಕ್, ಕಾರ್ತಿಕ್ ನಾರಾಯಣ ಪೈ, ಶ್ಯಾಮ್‌ಸುಂದರ್ ಆಚಾರ್ಯ, ಉಪೇಂದ್ರ ಆಚಾರ್ಯ ಉಪಸ್ಥಿತರಿದ್ದರು.
ಜಿಎಸ್‌ಬಿ ಸಮಾಜ ಬಾಂಧವರ ವಿವಿಧ ಸಂಸ್ಥೆಗಳಾದ ಪರ್‍ನಾಕಾ, ವಸಾಯಿಗಾಂವ್, ವಿರಾರ್, ಮೀರಾ-ಭಾಯಂದರ್, ಬೊರಿವಲಿ, ದಹಿಸರ್, ಗೋರೆಗಾಂವ್, ಅಂಧೇರಿ, ಮುಲುಂಡ್, ಥಾಣೆ, ವಾಶಿ, ಡೊಂಬಿವಲಿ, ವಡಾಲ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಕುರ್ಲಾ ಬಾಲಾಜಿ ಮಂದಿರದ ಕಾರ್ಯದರ್ಶಿ ಜಿ. ಜಿ. ಪೈ, ನಲಸೋಪರದ ವಿಶ್ವನಾಥ ಕುಡ್ವ, ವಾಲ್ಕೇಶ್ವರ ಕಾಶೀಮಠ, ದಹಿಸರ್ ಕಾಶೀಮಠ, ವಸಾಯಿ ಕರ್ನಾಟಕ ಸಂಘದ ಅಧ್ಯಕ್ಷ ಒ. ಪಿ. ಪೂಜಾರಿ, ಉಪಾಧ್ಯಕ್ಷ ಪಾಂಡು ಶೆಟ್ಟಿ, ಶನಿಪೂಜಾ ಸಮಿತಿಯ ಜಯ ಶೆಟ್ಟಿ, ಬಂಟರ ಸಂಘ, ಶ್ರೀ ಗುರುರಾಜ ಮಾನವ ಜಾಗೃತಿ ಕೇಂದದ್ರ, ಗುರುನಾರಾಯಣ ಸೇವಾ ಸಮಿತಿ, ಬಿಲ್ಲವರ ಅಸೋಸಿಯೇಶನ್ ಸ್ಥಳೀಯ ಸಮಿತಿ, ಮೊಗವೀರ ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿವಿಧ ಬ್ಯಾಂಕ್‌ಗಳ ಪದಾಧಿಕಾರಿಗಳು, ದೇನಾ ಬ್ಯಾಂಕ್‌ನ ವಿಭಾಗೀಯ ಪ್ರಬಂಧಕ ಸುನೀಲ್ ಪೈ, ಕಾರ್ಪೋರೇಷನ್ ಬ್ಯಾಂಕಿದ ಮುಖ್ಯ ವ್ಯವಸ್ಥಾಪಕ ವೆಂಕಟೇಶ್ವರಲು ಮೊದಲಾದವರು ಉಪಸ್ಥಿತರಿದ್ದರು. ಪಾಲ^ರ್ ಜಿಲ್ಲಾ ಪೊಲೀಸ್ ಅಧಿಕಾರಿಗಳು, ನಗರ ಸೇವಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಚ್‌ಎಸ್‌ಸಿ, ಎಸ್‌ಎಸ್‌ಸಿ ಮತ್ತು ಪದವಿ ತರಗತಿಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಸಮಾಜದ
ಮಕ್ಕಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಸಮಾಜದ ಹಿರಿಯ ನಾಗರಿಕರನ್ನು ಗೌರವಿಸಲಾಯಿತು. ಮೂಲ್ಕಿ ಕೃಷ್ಣ ಗೋಪಾಲ ಕಾಮತ್ ಅವರ ಧರ್ಮಪತ್ನಿ ದಿ| ಸರೋಜಾ ಕಾಮತ್ ಸ್ಮರಣಾರ್ಥ ಮತ್ತು ವಾಮನ್ ಕಾಮತ್ ಅವರ ತಂದೆ ದಿ| ಅನಂತ ಕಾಮತ್ ಸ್ಮರಣಾರ್ಥ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಉದ್ಯಮಿ ವಿಶ್ವನಾಥ ಶೆಟ್ಟಿ ಅವರ ವತಿಯಿಂದ ಉಡುಗೋರೆಗಳನ್ನು ವಿತರಿಸಲಾಯಿತು. ಸಮಾಜದ ಆರ್ಥಿಕವಾಗಿ ಹಿಂದುಳಿದ ವಿಧವೆಯರಿಗೆ ಧನ ಸಹಾಯ ವಿತರಿಸಲಾಯಿತು. ಮಾಲಾ ನಾಯಕ್ ಅವರ ಪತಿ ದಿ| ಪದ್ಮಜ್ ನಾಯಕ್ ಸ್ಮರಣಾರ್ಥ ಮತ್ತು ಮುಲ್ಕಿ ಗೀತಾ ನರಸಿಂಹ ಪ್ರಭು ಪರಿವಾರದಿಂದ ಧನ ವಿತರಿಸಲಾಯಿತು.
ಮನೋಹರ ಕಾಮತ್, ಜತೆ ಕಾರ್ಯದರ್ಶಿ ಲಕ್ಷ¾ಣ್ ರಾವ್ ಪರಿವಾರ, ವೀಣಾ ಜಿ. ಪೈ ಮತ್ತು ಮಕ್ಕಳು ಕುರ್ಲಾ, ಕಲ್ಪನಾ ದೇಸಾಯಿ ಅವರು ವಿವಿಧ ಸೇವೆಗಳ ಪ್ರಾಯೋಜಕತ್ವ ವಹಿಸಿದ್ದರು. ಸಮಿತಿಯ ಮಕ್ಕಳಿಂದ, ಮಹಿಳಾ ವಿಭಾಗ, ಯುವ ವಿಭಾಗದಿಂದ, ವರಿಷ್ಠ ನಾಗರಿಕರಿಂದ ನೃತ್ಯ, ಸಂಗೀತ, ಛದ್ಮವೇಷ, ನಾಟಕ ಇನ್ನಿತರ ಕಾರ್ಯಕ್ರಮಗಳು ಜರಗಿತು.
ಸಮಿತಿಯ ಸದಸ್ಯರಿಂದ, ವಿಠuಲ್ ಪ್ರಭು ಅವರ ಮಾರ್ಗದರ್ಶನದಲ್ಲಿ ಕೊಂಕಣಿಯಲ್ಲಿ ಶ್ರೀ ಕೃಷ್ಣ ಲೀಲೆ-ಕಂಸವಧೆ ಯಕ್ಷಗಾನ ಪ್ರದರ್ಶನಗೊಂಡಿತು. ಬೆಳಗ್ಗೆ ಫಲಾಹಾರ, ಮಧ್ಯಾಹ್ನ ಭೋಜನ, ಸಂಜೆ ಉಪಾಹಾರ ಹಾಗೂ ರಾತ್ರಿ ಅನ್ನಸಂತರ್ಪಣೆಯು ಭಜನ ಸಮಿತಿಯವರಿಂದ ನಡೆಯಿತು. ಪ್ರವೀಣ್ ನಾಯಕ್ ಮತ್ತು ಸುನಂದಾ ನಾಯಕ್ ಅವರಿಂದ ಸಿಹಿತಿಂಡಿಯ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಸಮಿತಿಯ ಅಧ್ಯಕ್ಷ ತಾರಾನಾಥ ಪೈ, ಗೌರವಾಧ್ಯಕ್ಷ ವಸಂತ್ ನಾಯಕ್, ಕಾರ್ಯದರ್ಶಿ ಪುರುಷೋತ್ತಮ ಶೆಣೈ, ಕೋಶಾಧಿಕಾರಿ ವೆಂಕಟ್ರಾಯ ಪ್ರಭು, ಸಂಚಾಲಕ ದೇವೇಂದ್ರ ಭಕ್ತ, ಮಹಿಳಾ ವಿಭಾಗದ ಪದಾಧಿಕಾರಿಗಳು, ಯುವ ವಿಭಾಗದ ಪದಾಧಿಕಾರಿಗಳು ಮತ್ತು ಸಮಿತಿಯ ಎಲ್ಲಾ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಶ್ರೀ ಸತ್ಯನಾರಾಯಣ ದೇವರ ಮತ್ತು ಬಾಲಾಜಿ ದೇವರ ಅಲಂಕೃತ ಮಂಟಪಕ್ಕೆ ಹೂವನ್ನು ಮಹಿಳಾ ವಿಭಾಗದವರು ಸಂಯೋಜಿಸಿದ್ದು, ಎಚ್. ವಿನಾಯಕ್ ಪೈ, ವಿಜಯೇಂದ್ರ ಪ್ರಭು, ಶ್ರೀಪತಿ ಭಟ್, ದೇವದಾಸ್ ಭಟ್ ಅವರ ನೇತೃತ್ವದಲ್ಲಿ ಮಂಟಪವನ್ನು ಅಲಂಕರಿಸಲಾಗಿತ್ತು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.