ವಡಾಲ ಶ್ರೀ ರಾಮ ಮಂದಿರ ಶ್ರೀ ಜಿಎಸ್‌ಬಿ ಗಣೇಶೋತ್ಸವ
Team Udayavani, Sep 28, 2018, 4:16 PM IST
ಮುಂಬಯಿ: ವಡಾಲ ಶ್ರೀ ರಾಮ ಮಂದಿರದ ದ್ವಾರಕನಾಥ ಭವನದ 64ನೇ ವಾರ್ಷಿಕ ಶ್ರೀ ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸ ವವು ಸೆ. 13ರಿಂದ ಸೆ. 23 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಸೇವಾ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಸೆ. 20ರಂದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎಚ್‌ಡಿಎಫ್‌ಸಿ ಬ್ಯಾಂಕಿನ ಡೆಪ್ಯುಟಿ ಆಡಳಿತ ನಿರ್ದೇಶಕ ಪರೇಶ್ ಸುಖ್ತಂಕರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಗೌರವ ಅತಿಥಿಯಾಗಿ ಉದ್ಯಮಿ ಶಶಿಕಾಂತ್ ಶ್ಯಾನ್‌ಭಾಗ್ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸಮಾಜದ ಪ್ರತಿ ಭಾವಂತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾ ಯಿತು. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಮಕ್ಕಳನ್ನು ಅಭಿನಂದಿಸಲಾಯಿತು.
ಸಂಸ್ಥೆಯ ಟ್ರಸ್ಟಿ, ಕಾರ್ಯಾಧ್ಯಕ್ಷ ರಾಜನ್ ಸಿ. ಭಟ್, ಟ್ರಸ್ಟಿ ಕಾರ್ಯದರ್ಶಿ ಮುಕುಂದ್ ವೈ. ಕಾಮತ್, ಟ್ರಸ್ಟಿ ಕೋಶಾಧಿಕಾರಿ ರಾಜೀವ್ ಡಿ. ಶೇಣಿÌ, ಗಿರೀಶ್ ಎಸ್. ಪಿಕಾಲೆ, ಉಮೇಶ್ ಎ. ಪೈ, ಶಾಂತಾರಾಮ್ ಎ. ಭಟ್, ಪ್ರಮೋದ್ ಎಚ್. ಪೈ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಲ್ಲಾಸ್ ಕಾಮತ್, ಎನ್. ಎನ್. ಪಾಲ್, ಕಮಲಾಕ್ಷ ಸರಾಫ್, ಸಂಜಯ್ ಕಾಮತ್, ಅನಿಲ್ ಆಚಾರ್ಯ, ಅನಂದ ಪೈ, ಮನೋಹರ ವಾಗ್ಲೆ, ನಾಗರಾಜ್ ಕಿಣಿ, ಸಂತೋಷ್ ಭಟ್, ನಾಗೇಶ್ ಕಾಮತ್ ಕುಮಟಾ, ವಸುಧಾ ಭಟ್ ಮೊದಲಾದವರು ಸಹಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಹಿಷಾಸುರ ಮರ್ದಿನಿ ಯಕ್ಷಗಾನ ಪ್ರದರ್ಶನಗೊಂಡಿತು. ವಡಾಲ ಶ್ರೀ ರಾಮ ಮಂದಿರದ ಪ್ರಧಾನ ಅರ್ಚಕ ಗೋವಿಂದಾಚಾರ್ಯ ಹಾಗೂ ತಂಡದವರಿಂದ ಉತ್ಸವದುದ್ದಕ್ಕೂ ಮಹಾ ಅನ್ನದಾನ ಸೇವೆ, ಮೂಡ ಗಣಪತಿ ಪೂಜೆ, ಗಣಹೋಮ, ಸರ್ವಲಂಕಾರ ಸೇವೆ, ಸಾಮೂಹಿಕ ಮೂಡಗಣಪತಿ ಪೂಜೆ, ಮಹಾಪೂಜೆ, ಮೋಧಕ ನೈವೇದ್ಯ, ಗಣಹೋಮ, ರಂಗಪೂಜೆ, ಪುಷ್ಪ ಪೂಜೆ, ರಾತ್ರಿಪೂಜೆ, ದೀಪಾರಾಧನೆ, ಪಂಚಖಾದ್ಯ ನೈವೇದ್ಯ, ತುಲಾಭಾರ ಸೇವೆ, ಧೂರ್ವರ್ಪಣೆ ಸೇವೆ, ಕರ್ಪೂರ ಆರತಿ, ಪ್ರಸಾದ ಸೇವೆ ಇನ್ನಿತರ ಸೇವೆಗಳು ನಡೆಯಿತು.
ದಿನಂಪ್ರತಿ ನಗರ, ಉಪನಗರಗಳಿಂದ ಸಾವಿರಾರು ಭಕ್ತಾದಿಗಳು ಜಾತಿ, ಮತ, ಧರ್ಮವನ್ನು ಮರೆತು ಆಗಮಿಸಿ ಪ್ರಸಾದ ಸ್ವೀಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಉತ್ಸವದುದ್ದಕ್ಕೂ ದಿನಂಪ್ರತಿ ಸಂಜೆ ಭಜನೆ, ಸಂಗೀತ, ನಾಟಕ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಹಿಳಾ ವಿಭಾಗದ, ಯುವ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಅರ್ಚಕ ವೃಂದದವರ ಸಹಕಾರದೊಂದಿಗೆ ಗಣೇಶೋತ್ಸವವು ಸಮಾಪ್ತಿ ಗೊಂಡಿತು.
ಚಿತ್ರ: ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.