ಸಯಾನ್ ಜಿಎಸ್‌ಬಿ ಮಂಡಲ: ಹರಿಸೇವೆ,ಗಣೇಶೋತ್ಸವದ ಪೂರ್ವಭಾವಿ ಸಭೆ
Team Udayavani, Jul 13, 2018, 4:46 PM IST
ಮುಂಬಯಿ: ಜಿಎಸ್‌ಬಿ ಸೇವಾ ಮಂಡಲ ಸಯಾನ್ ವತಿಯಿಂದ ಇತ್ತೀಚೆಗೆ ನಡೆದ ಭದ್ರಿನಾಥ್ ಯಾತ್ರೆಯ ಹರಿಸೇವೆ ಮತ್ತು ಮಂಡಲದ 64 ನೇ ವಾರ್ಷಿಕ ಗಣೇಶೋತ್ಸವದ ಪ್ರಥಮ ಪೂರ್ವತಯಾರಿ ಸಭೆಯು ಜು. 8 ರಂದು ಸಯಾನ್ ಪೂರ್ವದ ಸೇವಾ ಮಂಡಲದ ಗುರುಗಣೇಶ ಪ್ರಸಾದ ಸಭಾಗೃಹದಲ್ಲಿ ಜರಗಿತು.
ಬೆಳಗ್ಗೆ 9.30ರಿಂದ ಹರಿಸೇವೆಯ ಪೂಜೆಯನ್ನು ವೇದಮೂರ್ತಿ ಬಂಟ್ವಾಳ ಕೃಷ್ಣ ಭಟ್ ಇವರ ನೇತೃತ್ವದಲ್ಲಿ ನಡೆಸಲಾಯಿತು. ಭದ್ರಿನಾಥ್ ಕ್ಷೇತ್ರದ ಯಾತ್ರಿಗಳು ಮತ್ತು ಇತರರು ತೀರ್ಥ ಪ್ರಸಾದ ಸ್ವೀಕರಿಸಿದರು. ಸೇವಾ ಮಂಡಳದ 64ನೇ ಗಣೇಶೋತ್ಸವವು ಸೆ. 13 ರಿಂದ ಸೆ. 17 ರವರೆಗೆ ಶ್ರೀ ಸುಕೃತೀಂದ್ರ ನಗರ, ಎ. ರಾಮ ನಾಯಕ್ ಹಾಲ್ ಮೈದಾನ ಮತ್ತು ಜಿಎಸ್‌ಬಿ ನ್ಪೋರ್ಟ್ಸ್ ಕ್ಲಬ್ ಮೈದಾನ ಕಿಂಗ್ ಸರ್ಕಲ್‌ನಲ್ಲಿ ಜರಗಲಿದ್ದು, ಇದರ ಪೂರ್ಯತಯಾರಿಗಾಗಿ ಕಾರ್ಯಕರ್ತರು, ಸ್ವಯಂ ಸೇವಕರ ಸಭೆಯನ್ನು ಇದೇ ಸಂದರ್ಭದಲ್ಲಿ ಆಯೋಜಿಸಲಾಗಿತ್ತು.
ಶ್ರೀ ಗಣೇಶೋತ್ಸವ ಆಯೋಜನ ಸಮಿತಿಯ ಪ್ರಧಾನ ಸಂಚಾಲಕ ಡಾ| ಭುಜಂಗ ಪೈ ಅವರು ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಪ್ರದಾನ ಅರ್ಚಕ ವೇದಮೂರ್ತಿ ಬಂಟ್ವಾಳ ಕೃಷ್ಣ ಭಟ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಬಳಿಕ ಭುಜಂಗ ಪೈ ಅವರು ತನ್ನನ್ನು ಸಂಚಾಲಕನನ್ನಾಗಿ ನೇಮಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿ, ಕಳೆದ ಗಣೇಶೋತ್ಸವದಲ್ಲಿ ವಿವಿಧ ರೂಪದಲ್ಲಿ ಬಂದ ಧನ ಸಂಗ್ರಹದ ಬಗ್ಗೆ ವಿವರ ನೀಡಿದರು.
ಗಣೇಶೋತ್ಸವ ಆಯೋಜನ ಸಮಿತಿಯ ಸಹ ಸಂಚಾಲಕ ರಘುನಂದನ್ ಕಾಮತ್ ಅವರು ಮಾತನಾಡಿ, ಪ್ರಸಕ್ತ ವರ್ಷದ ಕಾರ್ಯಕ್ರಮಗಳು ಜರಗುವಲ್ಲಿ ಸರಕಾರಿ ನಿಯಮಗಳ ಬಗ್ಗೆ ತಿಳಿಸಿ, ನಿಯಮ ಪಾಲನೆಯೊಂದಿಗೆ ಗಣೇಶೋತ್ಸವ ಸಂದರ್ಭದಲ್ಲಿ ಸಮಾರಾಧನೆಯನ್ನು ಬಫೆ ಸಿಸ್ಟಂ ಮೂಲಕ ನಡೆಸಬೇಕು ಎಂದು ಸಲಹೆ ನೀಡಿದರು.
ವೇದಮೂರ್ತಿ ಬಂಟ್ವಾಳ ಕೃಷ್ಣ ಭಟ್ ಇವರು ಮಾತನಾಡಿ, ಕಳೆದ ವರ್ಷ ಗಣೇಶೋತ್ಸವದ ಐದನೇ ದಿನ ವಿಸರ್ಜನೆಯಂದು ವಿಪರೀತ ಮಳೆಯಿಂದಾಗಿ ಮಂಟಪದಲ್ಲಿ ನೆರೆದಿದ್ದ ಸುಮಾರು ಎರಡು ಸಾವಿರಕ್ಕೂ ಅಧಿಕ ಜನರಿಗೆ ಇಡೀ ರಾತ್ರಿ ನಮ್ಮ ಮಂಡಲದ ಮುಖಾಂತರ ಊಟೋಪಚಾರ ಮತ್ತು ವಸತಿಯ ವ್ಯವಸ್ಥೆಯನ್ನು ಮಾಡಿ ಸರ್ವರ ಮೆಚ್ಚುಗೆಗೆ ಪಾತ್ರವಾಗಿದ್ದೇವೆ. ಮರುದಿನ ಪವಾಡ ಎಂಬಂತೆ ಬೆಳಗ್ಗೆಯಿಂದ ಮಳೆಯಿಲ್ಲದೆ, ಬಿಸಿಲು ಕಾದು ವಿಜೃಂಭಣೆಯಿಂದ ಗಣಪತಿ ವಿಸರ್ಜನೆ ವೈಭವದ ಮೆರವಣಿಗೆ ನಡೆಯಿತು. ವರ್ಲಿಯ ಸಮೀಪದಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ಕಾದು ಕುಳಿತು ದೇವರ ದರ್ಶನ ಮಾಡಿದ್ದಾರೆ ಎಂದರು.
ಇನ್ನೋರ್ವ ಸಹ ಸಂಚಾಲಕ ಜಿ. ದಾಮೋದರ ರಾವ್ ಅವರು ಮಾತನಾಡಿ, ಕಳೆದ ಸಾಲಿನ ಧನ ಸಂಗ್ರಹದ ಬಗ್ಗೆ ವಿವರಿಸಿದರು. ಸಹ ಸಂಚಾಲಕ ಹಿರಿಯ ನ್ಯಾಯವಾದಿ ಎಂ. ವಿ. ಕಿಣಿ ಅವರು ಮಾತನಾಡಿ, ಸೇವಾ ಮಂಡಲದ ಪ್ರಾರಂಭದ ವರ್ಷಗಳಲ್ಲಿ ಬಟ್ಟೆ ಗಿರಣಿಗಳಲ್ಲಿ ಕೆಲಸ ಮಾಡುವ ನಮ್ಮ ಸಮಾಜದವರು ಒಂದಾಣೆ, ಎರಡಾಣೆ ದೇಣಿಗೆ ಸಂಗ್ರಹಿಸಿ ಉತ್ಸವ ಆಚರಿಸುತ್ತಿದ್ದರು. ಅಂದಿನ ನಮ್ಮ ಸಮಾಜ ಬಾಂಧವರ ಶ್ರಮ ಇಂದಿನವರಿಗಿಂತ ಹೆಚ್ಚು ಮಹತ್ವದ್ದಾಗಿದೆ ಎಂದರು.
ಸಹ ಸಂಚಾಲಕ ಗಣೇಶ್ ಪ್ರಭು ಇವರು ಮಾತನಾಡಿ, ಸೇವಾ ಮಂಡಲವು ಇತ್ತೀಚೆಗೆ ಆಯೋಜಿಸಿದ ಭದ್ರಿನಾಥ ಯಾತ್ರೆಯಲ್ಲಿ ಊಟೋಪಹಾರ ಇತರ ವ್ಯವಸ್ಥೆಯನ್ನು ಕೈಗೊಂಡು ಸರ್ವರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ನುಡಿದರು.
ಸೇವಾ ಮಂಡಲದ ಮಾಜಿ ಅಧ್ಯಕ್ಷ ಆರ್. ಜಿ. ಭಟ್ ಇವರು ಮಾತನಾಡಿ, ಸೇವಾ ಮಂಡಳದ ಮುಂದಿರುವ ಯೋಜನೆಗಳು ಕ್ಲಪ್ತ ಸಮಯದಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದರು. ಸೇವಾ ಮಂಡಲದ ಜೊತೆ ಕೋಶಾಧಿಕಾರಿ ವಿಷ್ಣು ಕಾಮತ್ ಅವರು ಮಾತನಾಡಿ, ಗಣೇಶೋತ್ಸವದಲ್ಲಿ ಭಕ್ತರು ಪೂಜಾ ಸೇವೆ, ದೇಣಿಗೆ ಇತ್ಯಾದಿಗಳನ್ನು ಸೇವಾ ಮಂಡಳದ ಮೊಬೈಲ್ ಆ್ಯಪ್ ಮೂಲಕ ನೋಂದಾಯಿಸಿಕೊಳ್ಳಬಹುದು. ಇದರಿಂದ ಕಾರ್ಯಕರ್ತರ, ಸ್ವಯಂ ಸೇವಕರ ಶ್ರಮ ಹಾಗೂ ಸಮಯ ಉಳಿತಾಯವಾಗುತ್ತದೆ ಎಂದು ಹೇಳಿದರು.
ಸೇವಾ ಮಂಡಳದ ಕಾರ್ಯದರ್ಶಿ ಶಿವಾನಂದ ಭಟ್ ಇವರು ವಂದಿಸಿದರು. ಮುಂದಿನ ಪೂರ್ವಭಾವಿ ಸಭೆಯು ಜು. 21 ರಂದು ಸಂಜೆ 7.35 ಕ್ಕೆ ಜಿಎಸ್‌ಬಿ ಸೇವಾ ಮಂಡಲ ಶ್ರೀ ಗುರುಗಣೇಶ್ ಪ್ರಸಾದ್ ಸಭಾಗೃಹ ಸಯಾನ್ ಪೂರ್ವದಲ್ಲಿ ನಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಯಿತು. ಸ್ವಯಂ ಸೇವಕರು, ಕಾರ್ಯಕರ್ತರು, ಭಕ್ತಾದಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್; ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ
Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Udupi: ಜ.15ಕ್ಕೆ ಗಡುವು; ಕಾಮಗಾರಿ ಇನ್ನೂ ಮುಗಿದಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.