ಕಿಂಗ್‌ಸರ್ಕಲ್ ವಾರ್ಷಿಕ ಗಣೇಶೋತ್ಸವದ ಸ್ನೇಹ ಸಮ್ಮಿಲನ
Team Udayavani, Sep 14, 2017, 4:42 PM IST
ಮುಂಬಯಿ: ಜಿಎಸ್‌ಬಿ ಸೇವಾ ಮಂಡಲ ಕಿಂಗ್‌ಸರ್ಕಲ್‌ನ 63ನೇ ವಾರ್ಷಿಕ ಗಣೇಶೋತ್ಸವದ ಸ್ನೇಹ ಸಮ್ಮಿಲನವು ಸೆ. 3ರಂದು ಸಂಜೆ 7ರಿಂದ ಸುಕೃತೀಂದ್ರ ನಗರದ ಉತ್ಸವ ಮಂಟಪದಲ್ಲಿ ನಡೆಯಿತು. ವೇದಮೂರ್ತಿ ಬಂಟ್ವಾಳ ಕೃಷ್ಣ ಭಟ್ ಅವರು ಪ್ರಾರ್ಥನೆಗೈದರು.
ಗಣೇಶೋತ್ಸವ ಆಚರಣ ಸಮಿತಿಯ ಸಹ ಸಂಚಾಲಕ ಜಿ. ಡಿ. ರಾವ್ ಅವರು ಸಭೆಯ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿ ಮಾತನಾಡಿ, ಈ ವರ್ಷದ ಗಣೇಶೋತ್ಸವವು ಅತೀ ವಿಜೃಂಭಣೆಯಿಂದ ಜರಗಿದೆ. ನಮ್ಮ ಸಮಾಜದ ಗುರುವರ್ಯರಾದ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಮತ್ತು ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಮಾರ್ಗದರ್ಶನ ಹಾಗೂ ಆಶೀರ್ವಾದವೇ ಇದಕ್ಕೆ ಕಾರಣವಾಗಿದೆ. ಸೇವಾ ಮಂಡಲದ ಪ್ರಧಾನ ಅರ್ಚಕ ವೇದಮೂರ್ತಿ ಕೃಷ್ಣ ಭಟ್ ಅವರ ನೇತೃತ್ವದಲ್ಲಿ ವೈದಿಕ ತಂಡದವರ ಸಮಯ ಪಾಲನೆಯಿಂದ ಸರ್ವ ಪೂಜೆಗಳನ್ನು ನೆರವೇರಿಸಿ ಸಹಕರಿಸಿದ್ದು, ಹೆಮ್ಮೆಯ ವಿಷಯವಾಗಿದೆ. ಅಲ್ಲದೆ ಸಂಚಾಲಕರಾದ ಡಾ| ಭುಜಂಗ ಯು. ಪೈ, ರಘುನಂದನ್ ಎಸ್. ಕಾಮತ್, ಎಂ. ವಿ. ಕಿಣಿ, ಗಣೇಶ್ ಯು. ಪ್ರಭು ಅವರ ಸಹಕಾರವನ್ನು ಮರೆಯುವಂತಿಲ್ಲ. ಸೇವಾ ಮಂಡಲದ ಸರ್ವ ಸ್ವಯಂ ಸೇವಕರು, ಅತೀವ ಶಿಸ್ತಿನಿಂದ ಗಣೇಶೋತ್ಸವದ ಸರ್ವ ಕೆಲಸ ಕಾರ್ಯಗಳನ್ನು ಕ್ಲಪ್ತ ಸಮಯದಲ್ಲಿ ನಿರ್ವಹಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಮಹಿಳಾ ವಿಭಾಗದವರು ತಮ್ಮ ಕೆಲಸಗಳನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ. ಗಣೇಶೋತ್ಸವದ ಸರ್ವ ಉಪ ಸಮಿತಿಗಳ ಮುಖ್ಯಸ್ಥರು ಹಾಗೂ ಸದಸ್ಯರ ಸಹಕಾರಕ್ಕೆ ಅಭಿನಂದನೆ ಸಲ್ಲಿಸು ತ್ತಿದ್ದೇನೆ. ಸಮಯಕ್ಕೆ ಸರಿಯಾಗಿ ಭಕ್ತಾದಿಗಳಿಗೆ ಫಲಾಹಾರ, ಸಮಾರಾಧನೆಗೆ ವ್ಯವಸ್ಥೆಯನ್ನು ಮಾಡಿದ ಗುರುದತ್ತ್ ಪ್ರಭು ಮತ್ತು ಅವರ ತಂಡಕ್ಕೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೈದ ಜಿ. ಯು. ಪ್ರಭು, ಹಗಲು ರಾತ್ರಿ ಮಂಟಪದ ಸ್ವತ್ಛತೆಗೈದ ಎಸ್‌ಎಂಎಸ್ ಕಂಪೆನಿಗೆ, ಭದ್ರತೆ ನೀಡಿದ ಪ್ರಕಾಶ್ ದೇವರ್ ಮತ್ತು ಅವರ ತಂಡ, ಮಾಟುಂಗ ಪೊಲೀಸ್ ಇಲಾಖೆ, ಬಿಎಂಸಿ,
ಸರಕಾರಿ ಪರವಾನಿಗೆ ನೀಡಿದ ವಿವಿಧ ಇಲಾಖೆ ಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
ಸೇವಾ ಮಂಡಲದ ಅಧ್ಯಕ್ಷ ಯಶವಂತ್ ಕಾಮತ್ ಅವರು ಮಾತನಾಡಿ, ಈ ವರ್ಷ ಗಣೇಶೋತ್ಸವ ಜರಗಲು ಸ್ಥಳವನ್ನು ನೀಡಿದ ಎ. ರಾಮ ನಾಯಕ್ ಹಾಗೂ ಮೈದಾನದವರಿಗೆ, ಜಿಎಸ್‌ಬಿ ನ್ಪೋರ್ಟ್ಸ್ ಕ್ಲಬ್ ಮೈದಾನದ ಆಡಳಿತ ಸಮಿತಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮಾಜಿ ಸಂಚಾಲಕ ಅರವಿಂದ ರಾವ್ ಅವರು ಮಾತನಾಡಿ, ಗಣಪತಿ ವಿರಾಟ ದರ್ಶದ ದಿನದಂದು ಪ್ರಾರ್ಥಿಸಿದಂತೆ ಗಣೇಶೋತ್ಸವವು ವೈಭವದಿಂದ ನಡೆದಿದೆ. ಐದನೇ ದಿನದಂದು ಅತಿವೃಷ್ಟಿಯಿಂದಾಗಿ ಧಾರಾಕಾರ ಮಳೆ ಸುರಿದು ನಗರ ಪೂರ್ತಿ ಜನಜೀವನ ಅಸ್ತವ್ಯಸ್ತಗೊಂಡಿತು. ಅಂದು ಗಣಪತಿಯ ವಿಸರ್ಜನೆ ಅಸಾಧ್ಯ ವಾದರೂ ಮರುದಿನ ಬೆಳಗ್ಗೆಯಿಂದಲೇ ಮಳೆ ನಿಂತಿದ್ದ ಕಾರಣ ನಡುರಾತ್ರಿ ಗಣಪತಿಯ ವಿಸರ್ಜನೆ ಮಾಡಲಾಯಿತು. ಮೆರವಣಿಗೆ ಹಾದು ಹೋಗುವ ವರ್ಲಿನಾಕಾ ಮತ್ತು ತಾರೆªàವ್ ಪರಿಸರದಲ್ಲಿ ಎರಡು ಲಕ್ಷಕ್ಕೂ ಮೀರಿ ಜನ ಸಾಗರ ಸೇರಿ ಮಹಾಗಣಪತಿಯ ದರ್ಶನ ಪಡೆದಿದ್ದಾರೆ ಎಂದರು. ಐಸ್‌ಕ್ರೀಂ ಉದ್ಯಮಿ ರಘುನಂದನ್ ಕಾಮತ್ ಅವರು ಪ್ರತಿ ವರ್ಷದಂತೆ ಈ ವರ್ಷವೂ ನೂತನ ಐಸ್‌ಕ್ರೀಂ ಬಿಡುಗಡೆಗೊಳಿಸಿ ಸಭಿಕರಿಗೆ ಹಂಚಿದರು. ಸೇವಾ ಮಂಡಲದ ಕಾರ್ಯದರ್ಶಿ ರಾಮನಾಥ ಕಿಣಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.