ಜಿಎಸ್‌ಬಿ ಸೇವಾ ಮಂಡಲ ಸಯಾನ್: 64ನೇ ಗಣೇಶೋತ್ಸವ ಪೂರ್ವಭಾವಿ ಸಭೆ
Team Udayavani, Aug 10, 2018, 3:39 PM IST
ಮುಂಬಯಿ: ಜಿಎಸ್‌ಬಿ ಸೇವಾ ಮಂಡಲ ಸಯಾನ್ ಇದರ 64 ನೇ ವಾರ್ಷಿಕ ಗಣೇಶೋತ್ಸವವು ಕಿಂಗ್ ಸರ್ಕಲ್ ಸುಕೃತೀಂದ್ರ ನಗರದಲ್ಲಿ ಸೆ. 13 ರಿಂದ ಸೆ. 17 ರವರೆಗೆ ಜರಗಲಿದ್ದು, ಇದರ ತೃತೀಯ ಪೂರ್ವಭಾವಿ ಸಭೆಯು ಆ. 4 ರಂದು ಸಂಜೆ ಸಯಾನ್‌ನಲ್ಲಿರುವ ಶ್ರೀ ಗುರು ಗಣೇಶ ಪ್ರಸಾದ ಸಭಾಗೃಹದಲ್ಲಿ ನಡೆಯಿತು.
ಆಯೋಜನಾ ಸಮಿತಿಯ ಸಹ ಸಂಚಾಲಕ ಜಿ. ಡಿ. ರಾವ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಲ್ಕೇಶ್ವರ ಶ್ರೀ ಕಾಶೀಮಠದಲ್ಲಿದ ಮಾಧವೇಂದ್ರ ತೀರ್ಥ ಸ್ವಾಮೀಜಿ ಹರಿದ್ವಾರದಲ್ಲಿನ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರನ್ನು ಸ್ಮರಿಸಿ ವಂದಿಸಿದರು. ಬಳಿಕ ಕಳೆದ ವರ್ಷ ಗಣೇಶೋತ್ಸವ ಮೂರನೇ ಪೂರ್ವಭಾವಿ ಸಭೆಯ ದಿನದಿಂದ ಈವರೆಗಿನ ಕಾರ್ಯಕರ್ತರ ಪೂಜೆ, ಸೇವೆ ಇತ್ಯಾದಿ ಮೂಲಕ ಸಂಗ್ರಹಿಸಿದ ಗಳಿಕೆಯ ವಿವರ ಮತ್ತು ಪ್ರಸಕ್ತ ಸಭೆಯ ದಿನದವರೆಗಿನ ವಿವರ ನೀಡಿದರು.
ಗಣೇಶೋತ್ಸವದ ಪ್ರಧಾನ ಅರ್ಚಕ ವೇದಮೂರ್ತಿ ಕೃಷ್ಣ ಭಟ್ ಇವರು ಪ್ರಾರ್ಥನೆಗೈದರು. ಸೇವಾ ಮಂಡಳದ ಹಿರಿಯ ಸದಸ್ಯ ಸತೀಶ್ ರಾಮ ನಾಯಕ್ ಅವರು ಮಾತನಾಡಿ, ಗಣೇಶೋತ್ಸವ ಮಂಟಪದ ಕಾಮಗಾರಿಯ ವಿವರ ನೀಡಿ, ಗಣಪತಿಯ ವಿಸರ್ಜನ ಟ್ರಾಲಿಯನ್ನು ತಜ್ಞ ಎಂಜಿನೀಯರ್‌ಗಳಿಂದ ವಿನ್ಯಾಸಗೊಳಿಸಲಾಗಿದೆ. ಪ್ರಸ್ತುತ ವರ್ಷ ಸಮುದ್ರದಲ್ಲಿ ಟ್ರಾಲಿಯು ದೋಣಿಯಂತೆ ತೇಲಿ ಗಣಪತಿ ವಿಸರ್ಜನೆಯನ್ನು ಮಾಡಲಿದೆ ಎಂದು ನುಡಿದರು. ಸೇವಾ ಮಂಡಳದ ಮಾಜಿ ಅಧ್ಯಕ್ಷ ಆರ್. ಜಿ. ಭಟ್ ಅವರು ತನ್ನ ಅನಿಸಿಕೆಯಲ್ಲಿ ಗಣೇಶೋತ್ಸವ ಮಂಟಪದಲ್ಲಿ ವಿವಿಧ ರೀತಿಯ ಪ್ರಚಾರದ ಮೂಲಕ ಗಳಿಕೆಯನ್ನು ಹೆಚ್ಚು ಮಾಡಬಹುದು ಎಂದರು.
ಗುರುದತ್ತ್ ಪ್ರಭು ಅವರು ಮಾತನಾಡಿ, ಕಟ್ಟಡ ನಿರ್ಮಾಣ ವ್ಯವಹಾರವು ಕುಸಿತದ ಕಾರಣದಿಂದ ಇದರ ಉದ್ಯಮದವರಿಂದ ಗಳಿಕೆ ಸ್ವಲ್ಪ ಕಡಿಮೆಯಾಗಲು ಸಾಧ್ಯವಿದೆ. ಆದರೂ ತಾನು ತನ್ನ ಪರಿಚಯದವರಿಂದ ಆದಷ್ಟು ಹೆಚ್ಚು ಗಳಿಕೆಗೆ ಪ್ರಯತ್ನಿಸುವುದಾಗಿ ತಿಳಿಸಿದರು. ಮಂಡಳದ ಕಾರ್ಯಕಾರಿ ಸಮಿತಿಯ ಸದಸ್ಯೆ ವಿಜಯ ಭಟ್ ಅವರು ಮೊಬೈಲ್ ಆ್ಯಪ್ ಮೂಲಕ ಧನ ಸಂಗ್ರಹ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಆಗಿರುವುದಾಗಿ ಹೇಳಿದರು. ಕಾರ್ಯಕರ್ತರಿಗೆ ಮೊಬೈಲ್ ಆ್ಯಪ್‌ನ ಬಗ್ಗೆ ಸಮಸ್ಯೆಯಿದ್ದರೆ ತಾನು ಸಹಕರಿಸುವುದಾಗಿ ತಿಳಿಸಿದರು.
ಸೇವಾ ಮಂಡಳದ ಉಪಾಧ್ಯಕ್ಷ ಯಶವಂತ್ ಕಾಮತ್ ಅವರು ಮಾತನಾಡಿ, ಈ ವರ್ಷದ ಗಣೇಶೋತ್ಸವದಲ್ಲಿ ನಮಗೆ ಬೇಕಾಗುವ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ ಈ ವರ್ಷ ಗಣೇಶೋತ್ಸವದ ಖರ್ಚು ಹೆಚ್ಚಲು ಸಾಧ್ಯವಿದೆ. ಆದರಿಂದ ಕಾರ್ಯಕರ್ತರು ಗಳಿಕೆಯನ್ನು ಹೆಚ್ಚು ಮಾಡಲು ವಿನಂತಿಸಿದರು. ಕೋಶಾಧಿಕಾರಿ ಕೃಷ್ಣ ಪೈ ಅವರು ತಮ್ಮ ಅನಿಸಿಕೆಯಲ್ಲಿ ಕಾರ್ಯಕರ್ತರು, ಸ್ವಯಂ ಸೇವಕರು ಧನ ಸಂಗ್ರಹ ಮಾಡಿದ ರಶೀದಿ ಪುಸ್ತಕಗಳನ್ನು ಕ್ಲಪ್ತ ಸಮಯದಲ್ಲಿ ಹಿಂದಿರುಗಿಸಿ ಸಹಕರಿಸಬೇಕು ಎಂದು ನುಡಿದರು.
ದಿಲೀಪ್ ಪೈ ಅವರು ಭದ್ರತೆಯ ಬಗ್ಗೆ ಮಾತನಾಡಿದರು. ಪ್ರಶಾಂತ್ ಮಲ್ಯ ಅವರು ಸ್ವಯಂ ಸೇವಕರು ತನ್ನ ವೈಕ್ತಿಕ ವಿವರ ನೀಡಿ ಆದಷ್ಟು ಬೇಗ ಪರಿಚಯ ಪತ್ರ ಪಡೆಯಲು ವಿನಂತಿಸಿದರು. ಮಂಡಳದ ಕೋಶಾಧಿಕಾರಿ ಕೃಷ್ಣ ಪೈ ವಂದಿಸಿದರು. ಮುಂದಿನ ಪೂರ್ವಭಾವಿ ಸಭೆಯು ಆ. 11 ರಂದು ಸಂಜೆ ಜಿಎಸ್‌ಬಿ ಸೇವಾ ಮಂಡಲ, ಶ್ರೀ ಗುರು ಗಣೇಶ ಪ್ರಸಾದ್ ಸಭಾಗೃಹ, ಸಯಾನ್ ಪೂರ್ವ ಇಲ್ಲಿ ನಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.