ಜಿಎಸ್‌ಬಿ ಸೇವಾ ಮಂಡಲ ಸಯಾನ್: ಗಣೇಶೋತ್ಸವ ಪೂರ್ವಭಾವಿ ಸಭೆ
Team Udayavani, Aug 26, 2018, 3:44 PM IST
ಮುಂಬಯಿ: ಜಿಎಸ್‌ಬಿ ಸೇವಾ ಮಂಡಲ ಸಯಾನ್ ಇದರ 64 ನೇ ವಾರ್ಷಿಕ ಗಣೇಶೋತ್ಸವದ ಪೂರ್ವಭಾವಿ ಸಭೆಯು ಸಯಾನ್‌ನಲ್ಲಿರುವ ಸೇವಾ ಮಂಡಳದ ಶ್ರೀ ಗುರುಗಣೇಶ್ ಪ್ರಸಾದ ಸಭಾಗೃಹದಲ್ಲಿ ಆ. 11ರಂದು ಸಂಜೆ ನಡೆಯಿತು.
ಗಣೇಶೋತ್ಸವ ಆಯೋಜನ ಸಮಿತಿಯ ಸಂಚಾಲಕ ಡಾ| ಭುಜಂಗ ಪೈ ಅವರು ಅಧ್ಯಕ್ಷತೆ ವಹಿಸಿ ಪ್ರಾರ್ಥನೆಗೈದು, ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಮತ್ತು ಸಂಯಮೀದ್ರತೀರ್ಥ ಸ್ವಾಮೀಜಿ ಅವರನ್ನು ಸ್ಮರಿಸಿ ವಂದಿಸಿದರು. ಬಳಿಕ ಪ್ರಸಕ್ತ ಗಣೇಶೋತ್ಸವಕ್ಕೆ ಪೂಜೆ, ಸೇವೆ ಇತ್ಯಾದಿಗಳಿಂದ ಜಮೆಯಾಗಿರುವ ಗಳಿಕೆಯ ವಿವರವನ್ನು ನೀಡಿದರು.
ಪ್ರಧಾನ ಅರ್ಚಕ ವೇದಮೂರ್ತಿ ಬಂಟ್ವಾಳ ಕೃಷ್ಣ ಭಟ್ ಅವರು ದೇವತಾ ಪ್ರಾರ್ಥನೆಗೈದರು. ಸಹ ಸಂಚಾಲಕ ಗಣೇಶ್ ಪ್ರಭು ಅವರು ತನ್ನ ಅನಿಸಿಕೆಯಲ್ಲಿ ಖ್ಯಾತ ಉದ್ದಿಮೆದಾರರಿಗೆ ನಮ್ಮ ಗಣೇಶೋತ್ಸವದ ಬಗ್ಗೆ ಅರಿವು ಮೂಡಿಸಿದಾಗ ಹೆಚ್ಚು ಧನ ಸಹಾಯ ಮಾಡಲು ಸಾಧ್ಯವಿದೆ ಎಂದರು.
ಸೇವಾ ಮಂಡಳದ ಉಪಾಧ್ಯಕ್ಷ ಯಶವಂತ್ ಕಾಮತ್ ಅವರು ಗಣೇಶೋತ್ಸವಕ್ಕೆ ಸ್ವಲ್ಪ ದಿನಗಳು ಮಾತ್ರ ಉಳಿದಿದ್ದು, ಆದ್ದರಿಂದ ಸ್ವಯಂ ಸೇವಕರು ಗಳಿಕೆಯ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.
ಸಂಚಾಲಕ ಜಿ. ಡಿ. ರಾವ್ ಅವರು ಮಾತನಾಡಿ, ಪೂಜೆ, ಸೇವೆ ಇತ್ಯಾದಿಗಳ ರಶೀದಿ ಪುಸ್ತಕಗಳು ಕಳೆದ ವರ್ಷಕ್ಕಿಂತ ಈ ವರ್ಷ ಸ್ವಯಂ ಸೇವಕರು ಹೆಚ್ಚು ಪಡೆದುಕೊಂಡಿರುವುದನ್ನು ಗಮನಿಸಿದಾಗ ಈ ವರ್ಷ ಖಂಡಿತವಾಗಿಯೂ ಹೆಚ್ಚು ಗಳಿಕೆಯಾಗಲು ಸಾಧ್ಯವಿದೆ ಎಂಬ ವಿಶ್ವಾಸ ವ್ಯಕ್ತಪಪಡಿಸಿದರು.
ಕೃಷ್ಣ ಭಟ್ ಅವರು ಮಾತನಾಡಿ, ದೇವರಲ್ಲಿ ವಿಶ್ವಾಸ ಹಾಗೂ ಶ್ರದ್ಧೆ ಇಟ್ಟಲ್ಲಿ ಯಾವುದೇ ಘನ ಕಾರ್ಯಗಳು ನಡೆಯಲು ಸಾಧ್ಯವಿದೆ. ನಮ್ಮ ಗಣಪತಿಯಲ್ಲಿ ಪ್ರಾರ್ಥಿಸಿದಂತೆ ಭಕ್ತರಿಗೆ ಲಭಿಸಿದ ಒಳಿತಿನ ಬಗ್ಗೆ ತಿಳಿಸಿದರು.
ಹಿರಿಯ ಸ್ವಯಂ ಸೇವಕ ಸತೀಶ್ ರಾಮ್ ನಾಯಕ್ ಅವರು, ಗಣೇಶೋತ್ಸವ ಮಂಟಪದ ಕಾಮಗಾರಿಯ ವಿವರ ನೀಡಿ, ಪ್ಲಾಸ್ಟಿಕ್ ಚೀಲವನ್ನು ಬಳಸದಿರಲಿ ಎಂದು ವಿನಂತಿಸಿದರು.
ಸೇವಾ ಮಂಡಳದ ಅಧ್ಯಕ್ಷ ರಮೇಶ್ ಭಂಡಾರ್ಕರ್ ಅವರು ಸ್ವಯಂ ಸೇವಕರು, ಗಣೇಶೋತ್ಸವದ ಸಮಯ, ಆಯಾ ವಿಭಾಗಗಳ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಬೇಕು. ಐದು ದಿನಗಳ ಗಣೇಶೋತ್ಸವದಲ್ಲಿ ಸಾವಿರಾರು ಪೂಜೆ, ಸೇವೆಗಳು ನೆರವೇರಬೇಕಾಗುತ್ತದೆ. ಸರ್ವರೂ ಸಹಕರಿಸುವಂತೆ ವಿನಂತಿಸಿದರು. ಮುಂದಿನ ಸಭೆಯು ಆ. 25ರಂದು ಸಂಜೆ 7.35ಕ್ಕೆ ಜಿಎಸ್‌ಬಿ ಸೇವಾ ಮಂಡಲ ಶ್ರೀ ಗುರುಗಣೇಶ್ ಪ್ರಸಾದ್ ಸಭಾಗೃಹದ ಸಯಾನ್ ಪೂರ್ವ ಇಲ್ಲಿ ನಡೆಯಲಿದೆ ಎಂಬುವುದಾಗಿ ಈ ಸಂದರ್ಭದಲ್ಲಿ ತಿಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.