ಜಿಎಸ್‌ಬಿಎಸ್ ಮೆಡಿಕಲ್ ಟ್ರಸ್ಟ್ ವಡಾಲ: ಆರೋಗ್ಯವಂತ ಶಿಶು ಸ್ಪರ್ಧೆ
Team Udayavani, Oct 31, 2018, 3:30 PM IST
ಮುಂಬಯಿ: ಜಿಎಸ್‌ಬಿಎಸ್ ಮೆಡಿಕಲ್ ಟ್ರಸ್ಟ್ ವತಿಯಿಂದ ಗಣೇಶೋತ್ಸವದ ಅಂಗವಾಗಿ ಆರೋಗ್ಯವಂತ ಶಿಶು ಸ್ಪರ್ಧೆ ಕಾರ್ಯಕ್ರಮವು ಇತ್ತೀಚೆಗೆ ವಡಾಲ ಶ್ರೀ ರಾಮ ಮಂದಿರದ ದ್ವಾರಕನಾಥ ಭವನದಲ್ಲಿ ನಡೆಯಿತು.
ಸಮಾಜದ ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಒಂದು ವರ್ಷದೊಳಗಿನ ಮಕ್ಕಳ ವಿಭಾಗ, ಒಂದರಿಂದ ಮೂರು ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಸ್ಪರ್ಧೆಯು ಜರಗಿತು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ತಜ್ಞ ವೈದ್ಯರು ಮಕ್ಕಳನ್ನು ಪರೀಕ್ಷಿಸಿ ವಿಜೇತ ಮಕ್ಕಳನ್ನು ಘೋಷಿಸಿದರು. ತೀರ್ಪುಗಾರರುಗಳಾಗಿ ಡಾ| ಸುಹಾಸ್ ಪ್ರಭು, ಡಾ| ಕೆ. ಸಿ. ಪತ್ರ, ಡಾ| ನಮೃತಾ ಶೇಣಿÌ ಮತ್ತು ಡಾ| ಅವಿನಾಶ್ ದೇಸಾಯಿ ಅವರು ಸಹಕರಿಸಿದರು.
ವಿಜೇತ ಸ್ಪರ್ಧಿಗಳಿಗೆ ಇಂಡೊಕೋ ರೆಮೇಡಿಯಸ್ ಪ್ರಾಯೋಜಕತ್ವದಲ್ಲಿ ವಿಶೇಷ ಸೌಲಭ್ಯಗಳನ್ನು ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಒಂದು ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಮಾ| ದೇವಾಂಶ್ ಸಾದ್‌ಫುಲೆ, 1 ವರ್ಷದಿಂದ ಮೂರು ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ನ್ಯಾಸಾ ಸದ್‌ಫುಲೆ ಅವರು ಪ್ರಶಸ್ತಿಯನ್ನು ಪಡೆದರು.
ಡಾ| ಸುಹಾಸ್ ಪ್ರಭು ಅವರು ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಸುನೀತಾ ರಾವ್ ಅವರು ಪಾಲ್ಗೊಂಡು ಸ್ಪರ್ಧೆಗೆ ಸಹಕರಿಸುವುದರೊಂದಿಗೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಡಾ| ಪ್ರದೀಪ್ ಆಚಾರ್ಯ ಮಾತನಾಡಿ, ಜಿಎಸ್‌ಬಿಎಸ್ ಮೆಡಿಕಲ್ ಟ್ರಸ್ಟ್ ನಾಲ್ಕು ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂದಿನ ಸ್ಪರ್ಧೆಗೆ ಸಹಕರಿಸಿದ ಎಲ್ಲಾ ಕಾರ್ಯಕರ್ತರಿಗೆ, ವಡಾಲದ ಮಠದವರಿಗೆ, ಜಿಎಸ್‌ಬಿಎಸ್ ಮಹಿಳಾ ವಿಭಾಗದವರ ಸೇವೆಗೆ ಕೃತಜ್ಞತೆ ಸಲ್ಲಿಸಿದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.