ಶಾಲೆಯಲ್ಲಿ ಉದ್ಯಮಶೀಲತೆ ಕುರಿತು ಮಕ್ಕಳಿಗೆ ಮಾರ್ಗದರ್ಶನ
Team Udayavani, Jun 6, 2021, 1:01 PM IST
ಪುಣೆ: ಶಾಲಾ ಹಂತದಿಂದಲೇ ಇನೋವೇಶನ್ ಮತ್ತು ಉದ್ಯಮಶೀಲತೆ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯು ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಮತ್ತು ಶಿಕ್ಷಣ ಇಲಾಖೆಯ ಇನ್ನೋವೇಶನ್ ಘಟಕದ ಸಹಯೋಗದೊಂ ದಿಗೆ ಇನೋವೇಶನ್ ಅಂಬಾಸಿಡರ್ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದೆ.
ಈ ಯೋಜನೆಯಡಿಯಲ್ಲಿ ಸಿಬಿಎಸ್‌ಇ ಅಂಗಸಂಸ್ಥೆ ಶಾಲೆಗಳ 50,000 ಶಿಕ್ಷಕರಿಗೆ ನಾವೀನ್ಯತೆ ಪಾಠಗಳ ತರಬೇತಿ ನೀಡಲಾ ಗುವುದು. ಇವರ ಮೂಲಕ ಶಾಲಾ ಮಟ್ಟದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಅನು ಕೂಲಕರ ವಾತಾವರಣವನ್ನು ಸೃಷ್ಟಿಸಲು ಒತ್ತು ನೀಡಲಾಗುತ್ತದೆ. ತರಬೇತಿಯು ಚಿಂತನೆ ಮತ್ತು ನಾವೀನ್ಯತೆ, ನಾವೀನ್ಯತೆ ಮತ್ತು ಸಹಯೋಗ, ಬೌದ್ಧಿಕ ಆಸ್ತಿ ಹಕ್ಕುಗಳು, ಉತ್ಪಾದನೆ ಮತ್ತು ಮಾದರಿ ರಚನೆಯನ್ನು ಒಳಗೊಂಡಿದೆ.
ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ
ತರಬೇತಿ ಪಡೆದ ಶಿಕ್ಷಕರು ಶಾಲೆಯಲ್ಲಿ ಹೊಸತನ, ಉದ್ಯಮಶೀಲ ವಾತಾವರಣವನ್ನು ಸೃಷ್ಟಿಸುವುದು, ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು, ಹತ್ತಿರದ ಶಾಲೆಗಳಿಗೆ ಸಹಕರಿಸುವುದು ಮತ್ತು ಮಾರ್ಗದರ್ಶನ ನೀಡುವುದು, ರಾಷ್ಟ್ರಮಟ್ಟದ ನಾವೀನ್ಯತೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಚಟುವಟಿಕೆಗಳನ್ನು ಮಾಡಲಿದ್ದಾರೆ. ಶಾಲಾ ಹಂತದಿಂದ ವಿದ್ಯಾರ್ಥಿಗಳಲ್ಲಿ ಹೊಸತನವನ್ನು ಬೆಳೆಸುವುದು ಅವಶ್ಯಕ. ಇದನ್ನು ಪ್ರೋತ್ಸಾಹಿಸಲು ಈ ಯೋಜನೆಯನ್ನು ತರಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯದ ಮುಖ್ಯ ಆವಿಷ್ಕಾರ ಅಧಿಕಾರಿ ಡಾ| ಅಭಯ್ ಜೆರೆ ಅವರು ಹೇಳಿದ್ದಾರೆ.
ಇನೋವೇಶನ್ ಅಂಬಾಸಿಡರ್ ಯೋಜನೆಗೆ ಶಿಕ್ಷಕರ ಆಯ್ಕೆ
ಇನೋವೇಶನ್ ಅಂಬಾಸಿಡರ್ ಯೋಜನೆಗೆ ಶಿಕ್ಷಕರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಈ ಶಿಕ್ಷಕರಿಗೆ ತರಬೇತಿ ಮುಂದಿನ ತಿಂಗಳುಗಳಲ್ಲಿ ಪ್ರಾರಂಭವಾಗಲಿದೆ. ಇಲ್ಲಿಯವರೆಗೆ ಶಾಲೆಗಳಲ್ಲಿ ಕೆ-ಟರ್ನ್ ಫಲಿತಾಂಶ ಸ್ಪರ್ಧೆ ಇತ್ತು. ಆದರೆ ಈಗ ಶಾಲೆಗಳು ಎಷ್ಟು ಕ್ರೀಯಾಶಿಲವಾಗಿವೆ, ಎಷ್ಟು ಹೊಸ ಆವಿಷ್ಕಾರಗಳನ್ನು ರಚಿಸಿದೆ, ಎಷ್ಟು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ ಎನ್ನವುದರಲ್ಲಿ ಸ್ಪರ್ದಿಸಬೇಕಾಗಿದೆ ಎಂದು ಜೆರೆ ಅವರು ಹೇಳಿದ್ದಾರೆ.
ಉದ್ಯಮಶೀಲತೆಯ ಅಭಿವೃದ್ಧಿ
10, 12 ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಿಂದ ನಮ್ಮ ವಿದ್ಯಾರ್ಥಿಗಳ ಸೃಜನಶೀಲತೆಗೆ ಅಡ್ಡಿಯಾಗಿದೆ. ಪ್ರಸ್ತುತ ಇಂತಹ ಪ್ರಯೋಗಗಳಿಗೆ ಶಾಲಾ ಪಠ್ಯಕ್ರಮದಲ್ಲಿ ಸ್ಥಾನವಿಲ್ಲ. ವಿದ್ಯಾರ್ಥಿಗಳ ಗುಣಮಟ್ಟ, ಬುದ್ಧಿವಂತಿಕೆ, ಕೌಶಲ ಮತ್ತು ಸೃಜನಶೀಲತೆಯ ಮೂಲಕ ನವೀನ ಉತ್ಪನ್ನಗಳು, ಉದ್ಯಮಶೀಲತೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಿದೆ. ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ರಚಿಸಲಾಗಿದ್ದರೂ, ಅವರಿಗೆ ಮಾರ್ಗದರ್ಶನ ನೀಡಲು ಸಮರ್ಥ ಶಿಕ್ಷಕರು ಇರಬೇಕು. ಆ ಅಗತ್ಯವನ್ನು ಪೂರೈಸಲು ಇನ್ನೋವೇಶನ್ ಅಂಬಾಸಿಡರ್ ಯೋಜನೆ ಮುಖ್ಯವಾಗಿರುತ್ತದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.