ಶಿವಾಸ್‌ ಸಾಧನೆ ಎಲ್ಲರಿಗೂ ಮಾದರಿ: ಶಶಿಧರ್‌ ಶೆಟ್ಟಿ 


Team Udayavani, Apr 24, 2022, 11:53 AM IST

Untitled-1

ಮುಂಬಯಿ: ಹುಟ್ಟು ಹಬ್ಬವನ್ನು ನಾವು ಹೇಗೂ ಆಚರಿಸಬಹುದು. ಆದರೆ ಮಾನವೀಯ ಸೇವೆಯೊಂದಿಗೆ ಆಚರಿಸಿ ಜನಮೆಚ್ಚುಗೆ ಪಾತ್ರವಾಗುವುದು ಅನುಕರಣೀಯವಾಗಿದೆ. ಇಂತಹ ಮನಸ್ಸುಗಳು, ಮನೋಭಾವಗಳು ಇನ್ನಷ್ಟು ಬೆಳೆಯಬೇಕು. ಕಸುಬು ಎಲ್ಲರೂ ಮಾಡುತ್ತಾರೆ. ಆದರೆ ಅದನ್ನು ಪ್ರತಿಷ್ಠೆಯನ್ನಾಗಿಸಿ ವಿಶ್ವಕ್ಕೆ ಪರಿಚಯಿಸುವಲ್ಲಿ ಯಶಕಂಡ ಶಿವಾಸ್‌ ಸಾಧನೆ ಎಲ್ಲರಿಗೂ ಮಾದರಿಯಾಗಿದೆ ಎಂದು ತುಳು ಸಂಘ ಬರೋಡದ ಅಧ್ಯಕ್ಷ ಶಶಿಧರ್‌ ಬಿ. ಶೆಟ್ಟಿ ಗುರುವಾಯನಕೆರೆ ತಿಳಿಸಿದರು.

ಎ. 23 ರಂದು ಗುಲಾಬಿ ಕೃಷ್ಣ ಭಂಡಾರಿ ಚಾರಿಟೆಬಲ್‌ ಟ್ರಸ್ಟ್‌ ಸಂಸ್ಥೆಯು ಎ.ಜೆ ಹಾಸ್ಪಿಟಲ್‌-ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಮಂಗಳೂರು, ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಘ ಸಹಯೋಗದೊಂದಿಗೆ, ಬಾಲಿವುಡ್‌ ರಂಗದಲ್ಲಿ ಹೇರ್‌ ಸ್ಟೈಲೋ ಮೂಲಕ ಸೆಲೆಬ್ರಟಿ ನಾಮಾಂಕಿತ ಶಿವಾಸ್‌ ಹೇರ್‌ ಡಿಝೈನರ್ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೃಷ್ಣ ಭಂಡಾರಿ ಇವರ ಷಷ್ಟ್ಯಬ್ಧಿ ಸಂಭ್ರಮ ನಿಮಿತ್ತ ಕಾರ್ಕಳ ಮಿಯ್ನಾರು ಸೈಂಟ್‌ ಡೋಮಿನಿಕ್‌ ಚರ್ಚ್‌ನ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಉಚಿತ ವೈದ್ಯಕೀಯ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ಗುಲಾಬಿ ಕೃಷ್ಣ ಭಂಡಾರಿ ಚಾರಿಟೆಬಲ್‌ ಟ್ರಸ್ಟ್‌ನ ಲಾಂಛನ ಅನಾವರಣಗೊಳಿಸಿ ಟ್ರಸ್ಟನ್ನು ಸೇವಾರ್ಪಣೆಗೈದು ಮಾತನಾಡಿದ ಅವರು ತನ್ನ ಉದ್ಯಮದೊಂದಿಗೆ ಸಮಾಜ ಸೇವೆಯ ಮುಖಾಂತರ ಶಿವರಾಮ ಭಂಡಾರಿ ಅವರು ಮಾಡುತ್ತಿರುವ ಸೇವೆ ಅಪಾರವಾಗಿದೆ. ಅವರಿಂದ ಈ ಟ್ರಸ್ಟ್‌ ಅಡಿಯಲ್ಲಿ ಬಡವರ ಕಣ್ಣೀರೊರೆಸುವ ಕಾರ್ಯ ಇನ್ನಷ್ಟು ನಡೆಯಲಿ ಎಂದು ಹಾರೈಸಿದರು.

ಗುಲಾಬಿ ಕೃಷ್ಣ ಚಾರಿಟೆಬಲ್‌ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ‌ ಡಾ| ಶಿವರಾಮ ಕೆ. ಭಂಡಾರಿ ಇವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭ‌ವ‌ನ್ನು ಭಂಡಾರಿ ಮಹಾ ಮಂಡಲದ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್‌ ಎಸ್‌. ಭಂಡಾರಿ ಉದ್ಘಾಟಿಸಿದರು. ಎ. ಜೆ. ಹಾಸ್ಪಿಟಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಇದರ ಸಹ ಪ್ರಾಧ್ಯಾಪಕಿ ಡಾ| ಪ್ರಣಮ್ಯಾ ಜೈನ್‌ ಇವರು ಶಿಬಿರಕ್ಕೆ ಚಾಲನೆ ನೀಡಿದರು.

ಸೈಂಟ್‌ ಡೊಮಿನಿಕ್‌ ಚರ್ಚ್‌ ಮಿಯ್ನಾರು ಇದರ ಪ್ರಧಾನ ಗುರು ರೆ| ಫಾ| ಪಾವ್‌É ರೆಗೋ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಮುನಿಯಾಲ್‌, ಮಿಯ್ನಾರು ಗ್ರಾಮ ಪಂಚಾಯತ್‌ ಅಧ್ಯಕ್ಷ ಗಿರೀಶ್‌ ಅಮೀನ್‌, ಬ್ರಹ್ಮಶ್ರೀ ಮೊಗೇರ ದೈವಸ್ಥಾನ ಸಮಿತಿಯ ಅಧ್ಯಕ್ಷ ದಿನೇಶ್‌ ಮೊಗೇರ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.

ಜಾತಿ ಮತ ಭೇದವಿಲ್ಲದೆ ಇಂದು ನಡೆದ ಉಚಿತ ಆರೋಗ್ಯ ಶಿಬಿರ ಸರ್ವೋತ್ಕೃಷ್ಟ ಸೇವೆ ಯಾಗಿದೆ. ಇದೇ ಪುಣ್ಯದ ಪ್ರಾಪ್ತಿಗೆ ಪೂರಕವಾದ ಸಮಾಜ ಸೇವೆಯಾಗಿದೆ. ದಯೆಯೇ ಧರ್ಮದ ಮೂಲವಾಗಿದ್ದು, ಇಂತಹ ಮಾನವೀಯ ಬದುಕು ನಡೆಸುವ ನಿಮ್ಮ ಬಾಳು ಹಸನಾಗಲಿ ಎಂದು ಸೈಂಟ್‌ ಡೊಮಿನಿಕ್‌ ಚರ್ಚ್‌ ಮಿಯ್ನಾರು ಇದರ ಪ್ರಧಾನ ಗುರು ವಂದನೀಯ ಪೌಲ್‌ ರೆಗೋ ಆಶೀರ್ವàದಿಸಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಉಡುಪಿಯ ಚರ್ಮ ರೋಗ ತಜ್ಞ ಡಾ| ಲೋಕೇಶ್‌ ರಾವ್‌ ಬಿ. ಕೆ ಉಡುಪಿ, ಕಾರ್ಕಳದ ನಿವೃತ್ತ ಶಿಕ್ಷಕಿ, ಸಮಾಜ ಸೇವಕಿ ಲೋನಾ ಪೀಟರ್‌ ನೊರೊನ್ಹಾ, ಮೋಡೆಲ್‌ ಬ್ಯಾಂಕ್‌ ಲಿ. ಮುಂಬಯಿ ಇದರ ನಿರ್ದೇಶಕಿ ಬೆನೆಡಿಕ್ಟಾ ಬಿ.ರೆಬೆಲ್ಲೊ, ಹಿರಿಯ ಪತ್ರಕರ್ತ ಡಾ| ಶೇಖರ್‌ ಅಜೆಕಾರ್‌ ಇವರನ್ನು ಸಮ್ಮಾನಿಸಲಾಯಿತು. ಸಮಾಜ ಸೇವಕರಾದ ದೀಪಕ್‌ ಡಿ’ಮೆಲ್ಲೋ ಮಾಸ್ಟರ್‌ ಕ್ಯಾಟರರ್ಸ್‌, ಸದಾನಂದ ಮೊಗೇರ ಮಿಯ್ನಾರು, ಡಾ| ಪ್ರಣಮ್ಯಾ ಜೈನ್‌, ವೈದ್ಯಕೀಯ ತಂಡದ ಸಂಯೋಜಕ ಜಯರಾಜ್‌ ಸುವರ್ಣ, ನಿವೃತ್ತ ಯೋಧ ಸದಾನಂದ ಟಿ. ಭಂಡಾರಿ, ಚೇತನ್‌ ಶೆಟ್ಟಿ, ನವೀನ್‌ ಜೆ. ಸಾಂಕ್ತೀಸ್‌ ಐ-ನೆಟ್‌, ಪತ್ರಕರ್ತ ಆರೀಫ್‌ ಕಲಕಟ್ಟಾ ಇವರನ್ನು ಅತಿಥಿಗಳು ಗೌರವಿಸಿ ಅಭಿನಂದಿಸಿದರು.

ಲತಾ ರವಿ ಮಿಯ್ನಾರ್‌ ಪ್ರಾರ್ಥನೆಗೈದರು. ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್‌ ಶರೀಫ್‌ ಸ್ವಾಗತಿಸಿದರು. ಪತ್ರಕರ್ತ ರೋನ್ಸ್‌ ಬಂಟ್ವಾಳ್‌ ಪ್ರಸ್ತಾವನೆಗೈದರು. ಗುಲಾಬಿ ಕೃಷ್ಣ ಟ್ರಸ್ಟ್‌ನ ವಿಶ್ವಸ್ಥ ಸದಸ್ಯೆಯರಾದ ಅನುಶ್ರೀ ಎಸ್‌. ಭಂಡಾರಿ, ಶ್ವೇತಾ ರಘು ಭಂಡಾರಿ ಅವರು ಅತಿಥಿಗಳನ್ನು ಗೌರವಿಸಿದರು. ಚೇತನ್‌ ಶೆಟ್ಟಿ ದಾಯ್ಜಿವರ್ಲ್ಡ್ ಅವರು ಅತಿಥಿಗಳನ್ನು, ಸಮ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಶೇಖರ್‌ ಅಜೆಕಾರ್‌ ವಂದಿಸಿದರು.

ಸಮಾಜ ಸೇವೆಯ ಸಂಕಲ್ಪ ಪಾವಿತ್ರ್ಯವಾದುದು. ಶಿವರಾಮ ಭಂಡಾರಿ ಅವರು ಇಂದು ಬಡವರ ಪಾಲಿನ ಕಣ್ಮಣಿಯಾಗಿದ್ದಾರೆ. ದೇಶಕ್ಕೊಂದು ಸಂವಿಧಾನ ಇದ್ದಂತೆ ಬದುಕಿಗೊಂದು ಸಂವಿಧಾನವನ್ನಿರಿಸಿ ಬದುಕು ಬಂಗಾರವಾಗಿಸಿ ಮಾದರಿಯಾಗಿದ್ದಾರೆ. ಭಂಡಾರಿ ಸಮುದಾಯಕ್ಕೆ ಮಾತ್ರವಲ್ಲ ಇಡೀ ಹಿಂದುಳಿದ ವರ್ಗದ ಜನತೆಗೆ ಕುಲವೃತ್ತಿ ಕಲಿಸಿಕೊಟ್ಟ ಕೀರ್ತಿ ಇವರದ್ದು. ಭಂಡಾರಿ ಜಾತಿಯಲ್ಲಿ ಕುಲವೃತ್ತಿಗೆ ಡಾಕ್ಟರೇಟ್‌ ಪಡೆದ ಮೊದಲ ವ್ಯಕ್ತಿ ಇವರಾಗಿರುವುದು ನಮ್ಮ ಹಿರಿಮೆಯಾಗಿದೆ. ಮನುಷ್ಯನ ಜೀವನ ಪರೋಪಕಾರದಿಂದ ಸಾರ್ಥಕವಾಗುವುದು. ದಾನ, ಧರ್ಮ, ಕರ್ಮ, ಪುಣ್ಯ, ಸಮಾಜ ಸೇವೆಗಳು ಆತ್ಮಕ್ಕೆ ಪೂರಕವಾದ ಸೇವೆಗಳಾಗಿದ್ದು, ದೇಹಕ್ಕಿಂತ ಆತ್ಮಕ್ಕೆ ಸಂಬಂಧ ಪಟ್ಟ ಕೆಲಸಗಳಿಂದ ಶಿವರಾಮರು ತೃಪ್ತರಾಗಿರುವುದು ಪ್ರಶಂಸನೀಯ.ಕಡಂದಲೆ ಸುರೇಶ್‌ ಭಂಡಾರಿ ಸ್ಥಾಪಕಾಧ್ಯಕ್ಷರು, ಭಂಡಾರಿ ಮಹಾ ಮಂಡಲ

ಜೀವನದಲ್ಲಿ ಸಾಧನೆಯ ಶಿಖಕ್ಕೇರಿದಾಗ ತಾನು ಸಾಗಿ ಬಂದ ದಾರಿಯನ್ನು ನೋಡಿ ಬಾಳುವವರಲ್ಲಿ ಶಿವರಾಮ ಭಂಡಾರಿ ಓರ್ವರು. ಅವರ ಮುಗ್ಧತೆ, ಶಾಂತತೆ ಅವರ ವ್ಯಕ್ತಿತ್ವದ ಅಸ್ಮಿತೆಯಾಗಿದೆ. ತನ್ನ ಕುಲಕಸಬುನಿಂದ ವ್ಯಕ್ತಿ ಜಾಗತಿಕವಾಗಿ ಬೆಳೆಯಬಹುದು ಎನ್ನುವುದನ್ನು ಇವರು ಶಿವನಾಗಿ ತೋರಿಸಿಕೊಟ್ಟಿದ್ದಾರೆ. ಕಾಯಕವೇ ಕೈಲಾಸ ಎಂಬುವುದನ್ನು ಕಾರ್ಕಳದ ಹಳ್ಳಿ ಹುಡುಗ ಮಾಡಿ ತೋರಿಸಿರುವುದು ನಮಗೂ ಪ್ರತಿಷ್ಠೆಯಾಗಿದೆ. ಟ್ರಸ್ಟ್‌ ಮುಖಾಂತರ ಇನ್ನಷ್ಟು ಸಮಾಜ ಸೇವೆ ನಡೆಯಲಿದೆ.ಉದಯ ಕುಮಾರ್‌ ಶೆಟ್ಟಿ ಮುನಿಯಾಲ್‌ ಅಧ್ಯಕ್ಷರು, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಬುಧಾಬಿ: ಯು.ಎ.ಇ: ಸಿ.ಬಿ.ಎಸ್.ಸಿ.ಕ್ಲಸ್ಟರ್ ವಿಭಾಗದ ಚೆಸ್ ಟೂರ್ನಮೆಂಟ್ ಉದ್ಘಾಟನೆ

ಅಬುಧಾಬಿ: ಯು.ಎ.ಇ: ಸಿ.ಬಿ.ಎಸ್.ಸಿ.ಕ್ಲಸ್ಟರ್ ವಿಭಾಗದ ಚೆಸ್ ಟೂರ್ನಮೆಂಟ್ ಉದ್ಘಾಟನೆ

Desi Swara: “ಅಕ್ಕ’ ಅರಮನೆಯ ರಚನೆಯ ನೆನ್ನೆ, ಇಂದು, ನಾಳೆಗಳು

Desi Swara: “ಅಕ್ಕ’ ಅರಮನೆಯ ರಚನೆಯ ನೆನ್ನೆ, ಇಂದು, ನಾಳೆಗಳು

Desi Swara: 12ನೆಯ ಅಕ್ಕ ಸಮ್ಮೇಳನ: ವೀರಶೈವ 10 ಸಾವಿರ ವರ್ಷಗಳ ಪ್ರಾಚೀನ ಧರ್ಮ

Desi Swara: 12ನೆಯ ಅಕ್ಕ ಸಮ್ಮೇಳನ: ವೀರಶೈವ 10 ಸಾವಿರ ವರ್ಷಗಳ ಪ್ರಾಚೀನ ಧರ್ಮ

Desi Swara: ಮಸ್ಕತ್‌- 40ನೇ ವರ್ಷದ ಗಣೇಶೋತ್ಸವ-ಮೂರು ದಿನದ ಉತ್ಸವ

Desi Swara: ಮಸ್ಕತ್‌- 40ನೇ ವರ್ಷದ ಗಣೇಶೋತ್ಸವ-ಮೂರು ದಿನದ ಉತ್ಸವ

Desi Swara: ಹೊನ್ನುಡಿ-ಜ್ಞಾನ ಬಳಸಿದರಷ್ಟೇ ಶ್ರೇಷ್ಠ..ಗರ್ವದಿಂದ ಹೊತ್ತು ತಿರುಗಬಾರದು…

Desi Swara: ಹೊನ್ನುಡಿ-ಜ್ಞಾನ ಬಳಸಿದರಷ್ಟೇ ಶ್ರೇಷ್ಠ..ಗರ್ವದಿಂದ ಹೊತ್ತು ತಿರುಗಬಾರದು…

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.