ಚೆಂಬೂರು ಸ್ಥಳೀಯ ಕಚೇರಿಯಲ್ಲಿ ಗುರು ಜಯಂತಿ
Team Udayavani, Sep 22, 2019, 4:25 PM IST
ಮುಂಬಯಿ, ಸೆ. 21: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಚೆಂಬೂರು ಸ್ಥಳೀಯ ಕಚೇರಿಯಲ್ಲಿ ಸೆ. 15ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜಯಂತಿ ಆಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 7.30ರಿಂದ ಗುರು ಮೂರ್ತಿಗೆ ಪಂಚಾಮೃತ ಅಭಿಷೇಕ, ಬೆಳಗ್ಗೆ
10ರಿಂದ ಭಜನ ಕಾರ್ಯಕ್ರಮ ನಡೆಯಿತು. ಭಜನ ಕಾರ್ಯಕ್ರಮವನ್ನು ಕೇಂದ್ರ ಕಚೇರಿಯ ಮಹಿಳಾ ವಿಭಾಗದ ಗೌರವ ಕಾರ್ಯದರ್ಶಿ ಸುಮಿತ್ರಾ ಎಸ್. ಬಂಗೇರ, ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷರಾದ ಸಂಜೀವ ಪಿ. ಬಂಗೇರ, ಕಾರ್ಯಾಧ್ಯಕ್ಷರಾದ ನಿತ್ಯಾನಂದ ಎ. ಪೂಜಾರಿ, ಗೌರವ ಕಾರ್ಯದರ್ಶಿ ನಾಗೇಶ್ ಎಸ್. ಕೋಟ್ಯಾನ್, ಗೌರವ ಕೋಶಾಧಿಕಾರಿ ಜಯ ಸಿ. ಪೂಜಾರಿ, ಭಾರತ್ ಬ್ಯಾಂಕಿನ ನಿರ್ದೇಶಕರಾದ ಎಂ. ಎನ್. ಕರ್ಕೇರ, ಚೆಂಬೂರು ಶ್ರೀ ಯೋಗೇಶ್ವರ ಮಂದಿರದ ಸದಸ್ಯರಾದ ಯೋಗೇಶ್ ಗುಜರನ್, ಚೆಂಬೂರು ಸ್ಥಳೀಯ ಕಚೇರಿಯ ಪದಾಧಿಕಾರಿಗಳು, ವಿಶೇಷ ಆಮಂತ್ರಿತರು ಮತ್ತು ಯುವ ಪ್ರತಿನಿಧಿಗಳು ಸೇರಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಭಜನ ಕಾರ್ಯಕ್ರಮವು ಮಧಾಹ್ನ 12.30ರಿಂದ ನಡೆಯಿತು. ಆನಂತರ ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಿತು. ಅನಂತರ ಸ್ಥಳೀಯ ಕಚೇರಿಯ ಸುವರ್ಣ ಮಹೋತ್ಸವಕ್ಕೆ ಹೆಚ್ಚಿನ ಮೊತ್ತದಲ್ಲಿ ಧನ ಸಂಗ್ರಹಿಸಿದವನ್ನು ಸತ್ಕರಿಸಲಾಯಿತು. ಮಧ್ಯಾಹ್ನ 1ರಿಂದ ಅನ್ನ ಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಕಚೇರಿಯ ಉಪ ಕಾರ್ಯಾಧ್ಯಕ್ಷರಾದ ಮೋಹನ್ ಕೆ. ಸಾಲ್ಯಾನ್, ಉಪ ಕಾರ್ಯದರ್ಶಿ ಶಿವರಾಜ್ ಎಸ್. ತಲ್ವಾರ್, ರಂಜನ್ ಕುಮಾರ್ ಆರ್. ಅಮೀನ್, ದಿನೇಶ್ ಅಂಚನ್, ರಾವåಚಂದ್ರ ಕೆ. ಸಾಲ್ಯಾನ್, ಚಂದ್ರಶೇಖರ್ ಟಿ. ಪೂಜಾರಿ, ಯೋಗಿನಿ ಎಂ. ಕರ್ಕೇರ, ಜಲಜಾಕ್ಷಿ ಎನ್. ಪೂಜಾರಿ, ಶೀಲಾ ವಿ. ಪೂಜಾರಿ, ರಾಮ ಪೂಜಾರಿ, ಭಾಸ್ಕರ್ ಕರ್ನಿರೆ, ಸತೀಶ್ ಸಾಲ್ಯಾನ್, ಚಂದ್ರಶೇಖರ್ ಡಿ. ಪೂಜಾರಿ, ಸುರೇಂದ್ರ ಪೂಜಾರಿ, ಚರಣ್ ಅಂಚನ್, ಯುವ ಪ್ರತಿನಿಧಿಗಳು ಹಾಗೂ ಸುಮಾರು 100ಕ್ಕೂ ಮಿಕ್ಕಿದ ಭಕ್ತಾದಿಗಳು ಉಪಸ್ಥಿತರಿದ್ದರು. ಪೂಜಾ ವಿಧಿ-ವಿಧಾನಗಳನ್ನು ಉಮೇಶ್ ಕೆ. ಕೋಟ್ಯಾನ್ ಹಾಗೂ ಕಾರ್ತಿಕ್ ಬಿ. ಪೂಜಾರಿ ನೆರವೇರಿಸಿದರು. ಗೌರವ ಕಾರ್ಯದರ್ಶಿ ನಾಗೇಶ್ ಎಸ್. ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.