ಗುರು ನಾರಾಯಣ ತುಳು ನಾಟಕ ಸ್ಪರ್ಧೆಯಲ್ಲಿ ವೈವಿಧ್ಯಮಯ ನಾಟಕಗಳು
Team Udayavani, Aug 15, 2017, 2:19 PM IST
ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಂಸ್ಕೃತಿಕ ಉಪಸಮಿತಿಯು ಅಸೋಸಿಯೇಶನ್‌ನ ಸ್ಥಳೀಯ ಸಮಿತಿಗಳಿಗೆ ಈ ಬಾರಿ ಆಯೋಜಿಸಿರುವ ತ್ರಿದಿನಗಳ ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ-2017 ದ್ವಿತೀಯ ದಿನವಾದ ಆ. 13ರಂದು ದಿನಪೂರ್ತಿಯಾಗಿ ಆರು ನಾಟಕಗಳು ಪ್ರದರ್ಶನ ಕಂಡವು.
ಬೆಳಗ್ಗೆ ನಾಟಕದ ಪ್ರಥಮ ಪ್ರದರ್ಶನವಾಗಿ ಮಹೇಶ್ ಕರ್ಕೇರ ಮತ್ತು ವಿನೋದ್ ಅಮೀನ್ ಪ್ರಾಯೋಜಕತ್ವದಲ್ಲಿ ಥಾಣೆ ಸ್ಥಳೀಯ ಸಮಿತಿಯ ತಂಡವು ಬಾಬಾ ಪ್ರಸಾದ್ ಅರಸ ಕಥೆ ಸಂಭಾಷಣೆಗೈದು ನಿರ್ದೇಶಿಸಿದ “ಸೋತು ಗೆಂದಿಯೊಲು’ ನಾಟಕವನ್ನು ಪ್ರದರ್ಶಿಸಲ್ಪಟ್ಟಿತು.
ದ್ವಿತೀಯ ಪ್ರದರ್ಶನವಾಗಿ ಹೆರ್ಗೆ ಬಾಬು ಪೂಜಾರಿ ಮತ್ತು ವಾಮನ್ ಡಿ. ಪೂಜಾರಿ ಪ್ರಾಯೋಜಕತ್ವದಲ್ಲಿ ಅಸೋಸಿಯೇಶನ್‌ನ ಮಹಿಳಾ ವಿಭಾಗ ತಂಡವು ಕಿಶೋರ್ ಶೆಟ್ಟಿ ಪಿಲಾರ್ ಕಥೆ ಸಂಭಾಷಣೆಗೈದು ನಿರ್ದೇಶಿಸಿದ “ನಮ ದಾಯೆಗ್ ಇಂಚ?’ ನಾಟಕ ಹಾಗೂ ತೇಜ್‌ಪಾಲ್ ಪಿ. ಅಂಚನ್ ಮತ್ತು ಅಶೋಕ್ ಎ. ಕೋಟ್ಯಾನ್ ಪ್ರಾಯೋಜಕತ್ವದಲ್ಲಿ ನಲಾಸೋಫರ ತಂಡವು ದಿ| ರಮೇಶ್ ಕುಬಲ್ ಕಥೆ ರಚನೆ ಸಂಭಾಷಣೆಯ ಮಧುಕರ್ ಕೃಷ್ಣ ಮಾನೆ ನಿರ್ದೇಶಿಸಿದ “ಕುಡೊಂಜಿ ಕತೆ’ ತೃತೀಯ ನಾಟಕ ಪ್ರದರ್ಶಿಸಿತು.
ಚತುರ್ಥ ಪ್ರದರ್ಶನವಾಗಿ ರವಿ ಜೆ. ಕೋಟ್ಯಾನ್ ಮತ್ತು ಕೃಷ್ಣ ಸುರೇಶ್ ಪೂಜಾರಿ ಅಳದಂಗಡಿ ಪ್ರಾಯೋಜಕತ್ವದಲ್ಲಿ ಕಲ್ಯಾಣ್ ಸ್ಥಳೀಯ ಸಮಿತಿ ತಂಡವು ಕುಮಾರ್ ಭೋಜ ಪೂಜಾರಿ ಕಥೆ, ಸಂಭಾಷಣೆ ನಿರ್ದೇಶಿಸಿದ “ಒರಿ ಮರ್ಲೆ ಅರೆಮರ್ಲೆ’ ನಾಟಕವನ್ನೂ ಐದನೇ ನಾಟಕವಾಗಿ ರೋಹಿದಾಸ್ ಬಂಗೇರ ಮತ್ತು ಚಂದ್ರಶೇಖರ ಆರ್. ಬೆಳ್ಚಡ ಪ್ರಾಯೋಜಕತ್ವದಲ್ಲಿ ಮೀರಾ
ರೋಡ್ ಸ್ಥಳೀಯ ಸಮಿತಿ ತಂಡವು ವಿಜಯ ಕುಮಾರ್ ಶೆಟ್ಟಿ ತೋನ್ಸೆ
ಕಥೆ ಸಂಭಾಷಣೆಯ ಜಿ. ಕೆ. ಕೆಂಚನಕೆರೆ ನಿರ್ದೇಶಿಸಿದ “ಪಗರಿದ ಮಂಚವು’ ನಾಟಕ ಪ್ರದರ್ಶನಗೊಂಡಿತು. ಆರನೇ ಪ್ರದರ್ಶನವಾಗಿ ಕೆ. ಸದಾಶಿವ ಶಾಂತಿ ಮತ್ತು ಕೌಡೂರು ದಯಾನಂದ ಪೂಜಾರಿ ಪ್ರಾಯೋಜಕತ್ವದಲ್ಲಿ ಚೆಂಬೂರ್ ಸ್ಥಳೀಯ ಸಮಿತಿಯು ನಾಗರಾಜ ಗುರುಪುರ ಕಥೆ ಸಂಭಾಷಣೆಯ ಉಮೇಶ್ ಹೆಗ್ಡೆ ಕಡ್ತಲ ನಿರ್ದೇಶಿಸಿದ “ಪಬ್ಲಿಕ್ ಪ್ರಾಸಿಕ್ಯೂಟರ್’ ನಾಟಕ ಪ್ರದರ್ಶಿಸಿತು.
ವಿವಿಧ ತಂಡಗಳು, ಕಲಾವಿದರು, ಕಲಾಭಿಮಾನಿಗಳು ಕ್ಲಪ್ತ ಸಮಯಕ್ಕೆ ಉಪಸ್ಥಿತರಿದ್ದು ಶಿಸ್ತುಬದ್ಧವಾಗಿ ನಾಟಕದಲ್ಲಿ ಪಾಲ್ಗೊಂಡಿದ್ದು, ವಿಶೇಷತೆಯಾಗಿತ್ತು. ಕಾರ್ಯಕ್ರಮದಲ್ಲಿ ಅಸೋಸಿಯೇಶನ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್, ಸಾಂಸ್ಕೃತಿಕ ಉಪಸಮಿತಿ ಕಾರ್ಯಾಧ್ಯಕ್ಷ ದಯಾನಂದ ಆರ್. ಪೂಜಾರಿ, ಗೌರವ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು ಸೇರಿದಂತೆ ಇತರೇ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದು ಎಲ್ಲಾ ತಂಡಗಳಿಗೆ ಕರತಾಡನದ ಮೂಲಕ ಪ್ರೋತ್ಸಾಹಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.