ವಿಕ್ರೋಲಿ ಬಂಟ್ಸ್ ವತಿಯಿಂದ ಗುರುಪೂರ್ಣಿಮೆ ಆಚರಣೆ
Team Udayavani, Aug 3, 2019, 5:18 PM IST
ಮುಂಬಯಿ, ಆ. 2: ವಿಕ್ರೋಲಿ ಬಂಟ್ಸ್ ವತಿಯಿಂದ ಗುರುಪೂರ್ಣಿಮೆ ಆಚರಣೆಯು ಜು. 27ರಂದು ವಿಕ್ರೋಲಿ ಕನ್ನಡ ಸಂಘ ಸಂಚಾಲಕತ್ವದ ವಿಕ್ರೋಲಿ ಪೂರ್ವ ಠಾಕೂರ್ ನಗರದ ವೀಕೇಸ್ ಇಂಗ್ಲಿಷ್ ಹೈಸ್ಕೂಲ್ ಸಭಾಗೃಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ವಿಕ್ರೋಲಿ ಬಂಟ್ಸ್ ಸಾಂಸ್ಕೃತಿಕ ಸಮಿತಿ, ಚಿಣ್ಣರ ಬಿಂಬ ವಿಕ್ರೋಲಿ ಶಾಖೆ, ವಿಕ್ರೋಲಿ ಬಂಟ್ಸ್ ಮಹಿಳಾ ವಿಭಾಗದಿಂದ ಭಜನಾ ಕಾರ್ಯಕ್ರಮ ನಡೆಯಿತು. ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನೆರವೇರಿತು. ವಿಕ್ರೋಲಿ ಬಂಟ್ಸ್ನ ಅಧ್ಯಕ್ಷ ಗಣೇಶ್ ಎಂ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಉದಯ ಎಲ್. ಶೆಟ್ಟಿ ಪೇಜಾವರ, ಗೌರವ ಕೋಶಾಧಿಕಾರಿ ಯುಗಾನಂದ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ನೇತೃತ್ವದ ಸದಸ್ಯ ಬಾಂಧವರು ಪಾಲ್ಗೊಂಡಿದ್ದರು.
ವಿಕ್ರೋಲಿ ಬಂಟ್ಸ್ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ನವೀನ್ ಕೆ. ಶೆಟ್ಟಿ, ವಿಕ್ರೋಲಿ ಕನ್ನಡ ಸಂಘ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಶೆಟ್ಟಿ, ವಿಕ್ರೋಲಿ ಬಂಟ್ಸ್ನ ಸದಸ್ಯರಾದ ಮುಕೇಶ್ ಆರ್. ಶೆಟ್ಟಿ, ಪ್ರದೀಪ್ ಕೆ. ಶೆಟ್ಟಿ, ನ್ಯಾಯವಾದಿ ಸುರೇನ್ ಶೆಟ್ಟಿ, ದಿಲೀಪ್ ಶೆಟ್ಟಿ, ಉದ್ಯಮಿ ರವೀಂದ್ರ ಶೆಟ್ಟಿ, ದುಬೈ ಗಣೇಶ್ ಶೆಟ್ಟಿ, ಪ್ರವೀಣ್ ಕೆ. ಶೆಟ್ಟಿ ಐಟಿ, ಸಂತೋಷ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಶಕುಂತಳಾ ಎಸ್. ಶೆಟ್ಟಿ, ಸರಿತಾ ಸತೀಶ್ ಶೆಟ್ಟಿ, ಜಯಶ್ರೀ ಶೆಟ್ಟಿ, ಉಷಾ ಶೆಟ್ಟಿ, ರೇವತಿ ಶೆಟ್ಟಿ, ಮಾಧವ ಮೊಗವೀರ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸಿದರು.
ಹರೀಶ್ ಕರಿಯ ಕೋಟ್ಯಾನ್, ಸೀತಾರಾಮ ಶೆಟ್ಟಿ, ಸಂತೋಷ್ ಕದಂ, ಸುರೇಶ್ ಬಂಗೇರ, ಎಸ್. ಬಿ. ಕರ್ಕೇರ, ಮಹೇಂದ್ರ ಕದಂ, ಪ್ರಿತೇಶ್ ಕೋಟ್ಯಾನ್, ಸಂತೋಷ್ ಗಾಯಕ್ವಾಡ್, ಪ್ರವೀಣ್ ಬಂಗೇರ, ಉದ್ಯಮಿಗಳಾದ ಅಮಿತ್ ಶೆಟ್ಟಿ, ಸುಧಾಕರ ಶೆಟ್ಟಿ, ಸುಂದರ ಶೆಟ್ಟಿ, ಧನಂಜಯ ದಾದುಲ್ಕರ್, ಶೇಖರ್ ಸಾಲ್ಯಾನ್ ಮೊದಲಾದವರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
US Polls; ಟ್ರಂಪ್ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.