ಐರೋಲಿಯ ಹೆಗ್ಗಡೆ ಭವನದಲ್ಲಿ ಯಕ್ಷಕಲೋತ್ಸವ, ಸಾಧಕರಿಗೆ ಸಮ್ಮಾನ
Team Udayavani, Jul 30, 2017, 4:01 PM IST
ನವಿಮುಂಬಯಿ: ಯಕ್ಷಗಾನ ನಮ್ಮ ಕರಾವಳಿಯ ಒಂದು ಶ್ರೇಷ್ಠ ಕಲೆ, ಅದೆಷ್ಟೋ ವರ್ಷಗಳಿಂದ ನಾವೆಲ್ಲಾ ಸೇರಿ ಕಲೆಗೆ ಹೆಚ್ಚಿನ ಮೆರುಗನ್ನು ನೀಡುವಲ್ಲಿ ಸಫಲಾರಿಗಿದ್ದೇವೆ. ಅದಕ್ಕೆ ಪೂರಕವಾಗಿ ನಮ್ಮ ಮಹಿಳೆಯರು ಮನೆಯಲ್ಲಿ ಅಡುಗೆ ಮಾಡುವುದು ಮಾತ್ರ ತಮ್ಮ ಕೆಲಸವಲ್ಲ, ಎಲ್ಲದರಲ್ಲೂ ಪುರುಷರಿಗೆ ಸರಿ ಸಮಾನವಾಗಿದ್ದೇವೆ ಎಂದು ಯಕ್ಷಗಾನವನ್ನು ಉಳಿಸುವ ಪ್ರಯತ್ನವನ್ನು ಮಾಡಲು ಪುರುಷರೊಂದಿಗೆ ಕೈ ಜೋಡಿಸಿರುವುದು ಶ್ಲಾಘನೀಯ ಎಂದು ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ವಿಜಯ್ ಬಿ. ಹೆಗ್ಡೆ ಅವರು ಹೇಳಿದರು.
ಜು. 25ರಂದು ಹೆಗ್ಗಡೆ ಭವನದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಬಾಲಕೃಷ್ಣ ಶೆಟ್ಟಿ ಅಜೆಕಾರು ಇವರ ಸಂಚಾಲಕತ್ವದಲ್ಲಿ ಪೂರ್ಣಿಮಾ ಯತೀಶ್ ರೈ ಇವರ ಸಂಯೋಜನೆಯಲ್ಲಿ ಶ್ರೀ ವಿನಾಯಕ ಮಕ್ಕಳ ಹಾಗೂ ಮಹಿಳಾ ಯಕ್ಷಕಲಾ ತಂಡ, ಕಾಟಿಪಳ್ಳ, ಸುರತ್ಕಲ್ ಇವರ ಪ್ರಬುದ್ಧ ಮಹಿಳಾ ಕಲಾವಿದರಿಂದ ಹೆಗ್ಗಡೆ ಸೇವಾ ಸಂಘ ಇವರ ಆಶ್ರಯದಲ್ಲಿ ಹೆಗ್ಗಡೆ ಭವನ ಐರೋಲಿ ಜರಗಿದ ಸುದರ್ಶನ ಗರ್ವ ಭಂಗ – ಭಾರ್ಗವ ವಿಜಯ ಯಕ್ಷಗಾನ ಪ್ರದರ್ಶನದ ಸಭಾ ಕಾರ್ಯ ಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದು ಅವರು ಮಾತನಾಡಿದರು.
ಶ್ರೀ ಶನೀಶ್ವರ ದೇವಸ್ಥಾನ ನೆರೂಲ್ ಇದರ ಅಧ್ಯಕ್ಷ ಧರ್ಮದರ್ಶಿ ರಮೇಶ್ ಎಂ. ಪೂಜಾರಿ ಅವರು ಉಪಸ್ಥಿತರಿದ್ದು ಮಾತನಾಡಿ, ಹೆಗ್ಗಡೆ ಸೇವಾ ಸಂಘವು ಕಳೆದ ಹಲವಾರು ವರ್ಷಗಳಿಂದ ಶೈಕ್ಷಣಿಕ ಸಹಾಯವನ್ನು ಮಾಡುವುದರೊಂದಿಗೆ ಯಕ್ಷಗಾನ ಮತ್ತು ನಾಟಕ ಕಲೆಗೆ ಕೂಡಾ ಬಹಳಷ್ಟು ಪ್ರೋತ್ಸಾಹ ನೀಡುತ್ತಿರುವುದು ನೋಡುತ್ತಿದ್ದರೆ, ಬಹಳ ಸಂತೋಷವಾಗುತ್ತಿದೆ. ಇಲ್ಲಿಯ ಕಾರ್ಯ ವೈಖರಿಯನ್ನು ಬಹಳ ಹತ್ತಿರದಿಂದ ಬಹಳ ವರ್ಷಗಳಿಂದ ನಾನು ಬಲ್ಲೆ. ಶ್ರೀ ಶನೀಶ್ವರ ಮಂದಿರ ಮತ್ತು ಹೆಗ್ಗಡೆ ಭವನ ಮೊದಲಿನಿಂದಲೂ ಬಹಳ ಅನೋನ್ಯತೆಯಿಂದ ಇರುವುದು ಖಂಡಿತ ಶನಿ ದೇವರ ಕೃಪೆಯಿಂದ ಎಂದರು.
ಅಥಿತಿಯಾಗಿ ಆಗಮಿಸಿರುವ ಕರ್ನಾಟಕ ಜಾನಪದ ಪರಿಷತ್ತಿನ ಮಹಾರಾಷ್ಟ್ರ
ಘಟಕದ ಅಧ್ಯಕ್ಷರಾದ ಸುರೇಶ ಶೆಟ್ಟಿ ಯೆಯ್ನಾಡಿ ಮಾತನಾಡಿ, ಹೆಗ್ಗಡೆ ಸೇವಾ ಸಂಘವು ನಮ್ಮ ಊರಿನ ಕಲಾವಿದರಿಗೆ ಪ್ರತಿವರ್ಷ ಹೆಗ್ಗಡೆ ಭವನದಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡುತ್ತಿರುವುದು ಕರ್ನಾಟಕದ ಸಂಸ್ಕೃತಿಗೆ ಮಾಡುವಂತಹ ದೊಡ್ಡ ಯೋಗದಾನ. ಸಂಸ್ಥೆಯ ಪರವಾಗಿ ಹೆಗ್ಗಡೆ ಸಮಾಜದವರನ್ನು ಅಭಿನಂದಿಸುತ್ತೇನೆ. ಹಾಗೆ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಪ್ರತಿ ವರ್ಷ ಇಂತಹ ಒಂದು ಕಾರ್ಯಕ್ರಮವನ್ನು ಮಾಡುತ್ತಿರುವುದು ಖಂಡಿತ ಶ್ಲಾಘನೀಯ ಎಂದರು.
ಹಿರಿಯ ಯಕ್ಷಗಾನ ಅರ್ಥದಾರಿ ಯಕ್ಷ ಮಾನಸದ ರೂವಾರಿ ಕೆ. ಕೆ. ಶೆಟ್ಟಿ ಅವರು ಮಾತನಾಡಿ, ಯಕ್ಷಗಾನದ ಬಗ್ಗೆ ಹೇಳಲಿಕ್ಕೆ ಹೋದರೆ ತುಂಬಾ ಇದೆ. ಇದೊಂದು ಬಡ ಕಲಾವಿದರನ್ನು ಹೊಂದಿರುವ ಶ್ರೀಮಂತ ಕಲೆ, ಕರಾವಳಿಯ ಗಂಡು ಕಲೆ ಎಂದರೆ ಕಲೆಗಳಲ್ಲಿ ಉತ್ತಮವಾದ ಕಲೆ ಹಾಗೂ ಎಲ್ಲದಕ್ಕೂ ಹಿರಿದಾದ ಕಲೆ ಈ ಯಕ್ಷಗಾನ. ನಮ್ಮ ಯಕ್ಷಗಾನವನ್ನು ಪ್ರೋತ್ಸಾಹ ನಮ್ಮೆಲ್ಲರ ಕರ್ತವ್ಯ ಎಂದರು. ಅದನ್ನು ಹೆಗ್ಗಡೆ ಸೇವಾ ಸಂಘದವರು ಯಶಸ್ವಿಯಾಗಿ ಪ್ರತಿವರ್ಷ ಮಾಡುತ್ತಾ ಬಂದಿದ್ದಾರೆ ಎಂದರು.
ತುಳು ಕೂಟ ಐರೋಲಿ ಇದರ ಅಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರಿ ಅವರು ಮಾತನಾಡಿ, ಹೆಗ್ಗಡೆ ಸೇವಾ ಸಂಘವು ಕಲೆಯನ್ನು ಪ್ರೋತ್ಸಾಹ ಮುಂಬಯಿ ಮಹಾನಗರದಲ್ಲಿ ಮುಂಚೂಣಿಯಲ್ಲಿದೆ. ಅದರಿಂದ ಆ ಸಂಸ್ಥೆಯಲ್ಲಿ ಒಂದು ಕಲಾ ತಂಡವೇ ಹುಟ್ಟಿಕೊಂಡಿದೆ. ತುಳು ಕೂಟ ಬೆಳೆಯುವಲ್ಲಿ ಕೂಡ ಹೆಗ್ಗಡೆ ಸಮಾಜದ ಸಹಾಯ ಹಸ್ತ ಬಹಳಷ್ಟು ಇದೆ. ಒಂದೇ ಸಮಾಜಕ್ಕೆ ಸೀಮಿತವಿರದೆ ಎಲ್ಲರನ್ನು ಆದರಿಸುತ್ತಾರೆ ಎಂದು ನುಡಿದರು.
ವೇದಿಕೆಯುಲ್ಲಿ ಸಂಘದ ಕಾರ್ಯಾಧ್ಯಕ್ಷರು ಸಂಜೀವ ಹೆಗ್ಡೆ, ಸಮಾಜ ಸೇವಕ ಉದ್ಯಮಿ ಜಯಪ್ರಕಾಶ್ ಶೆಟ್ಟಿ, ಉದ್ಯಮಿ ಯಶವಂತ್ ಶೆಟ್ಟಿ ಉಪಸ್ಥಿತರಿದ್ದರು. ತಂಡದ ರೂವಾರಿ ಪೂರ್ಣಿಮಾ ಯತೀಶ್ ರೈ ಮತ್ತು ಅಜೆಕಾರು ಬಾಲಕೃಷ್ಣ ಶೆಟ್ಟಿ ಇವರನ್ನು ಹೆಗ್ಗಡೆ ಸೇವಾ ಸಂಘದ ಪರವಾಗಿ ಗೌರವಿಸಲಾಯಿತು.
ಪ್ರಭಾಕರ್ ಹೆಗ್ಡೆ ಸಮ್ಮಾನ ಪತ್ರ ವಾಚಿಸಿದರು. ನವೀನ್ ಹೆಗ್ಡೆ ಸಹಕರಿಸಿದರು. ಕಾರ್ಯಕ್ರಮವನ್ನು ರಂಗ ನಟ ಅನಿಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ನವಿ ಮುಂಬಯಿ ಹಾಗೂ ಮುಂಬಯಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಸಂಘದ ಮಾಜಿ ಅಧ್ಯಕ್ಷ ರತ್ನಾಕರ್ ಹೆಗ್ಡೆ, ಸಂಘದ ಉಪಾಧ್ಯಕ್ಷ ಬಿ. ಗೋಪಾಲ್ ಹೆಗ್ಡೆ, ಕಾರ್ಯದರ್ಶಿ ಶಂಕರ್ ಹೆಗ್ಡೆ, ಕೋಶಾಧಿಕಾರಿ ರಮೇಶ್ ಎಂ. ಹೆಗ್ಡೆ, ಜತೆ ಕಾರ್ಯದರ್ಶಿ ರವಿ ಹೆಗ್ಡೆ ಹೆರ್ಮುಂಡೆ, ಜತೆ ಕೋಶಾಧಿಕಾರಿ ಚಂದ್ರಶೇಖರ್ ಹೆಗ್ಡೆ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ಸದಸ್ಯೆಯರು, ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದು, ಯಕ್ಷಗಾನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್ ಡ್ರಾ
Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್
Contracter Case: ಸಚಿನ್ ಪಾಂಚಾಳ್ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ
Dandeli; ಕುಸಿದು ಬಿದ್ದು ಯುಪಿ ಮೂಲದ ಯುವಕ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.