ಹೆಗ್ಗಡೆ ಸೇವಾ ಸಂಘ ಮುಂಬಯಿ: 53ನೇ ವಾರ್ಷಿಕ ಮಹಾಸಭೆ
Team Udayavani, Aug 24, 2017, 12:44 PM IST
ನವಿಮುಂಬಯಿ: ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ವಾರ್ಷಿಕ ಮಹಾ ಸಭೆಯು ಐರೊಲಿಯ ಹೆಗ್ಗಡೆ ಭವನದಲ್ಲಿ ಆ. 20ರಂದು ನಡೆಯಿತು. ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ದತ್ತು ಸ್ವೀಕಾರ, ನೂತನ ಆಡಳಿತ ಮಂಡಳಿಗೆ ಸದಸ್ಯರ ಚುನಾವಣೆ ಇನ್ನಿತರ ಕಾರ್ಯಕ್ರಮಗಳು ನೆರವೇರಿದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ವಿಜಯ್ ಬಿ. ಹೆಗ್ಡೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯಾಧ್ಯಕ್ಷರಾದ ಸಂಜೀವ ಪಿ. ಹೆಗ್ಡೆ, ಕಾರ್ಯದರ್ಶಿ ಶಂಕರ್ ಹೆಗ್ಡೆ, ಕೋಶಾಧಿಕಾರಿ ರಮೇಶ್ ಹೆಗ್ಡೆ ಉಪಸ್ಥಿತರಿದ್ದರು. ಸುಜಾತಾ ಹೆಗ್ಡೆ ಅವರ ಪ್ರಾರ್ಥನೆಯೊಂದಿಗೆ
ಪ್ರಾರಂಭಗೊಂಡ ಮಹಾಸಭೆಯಲ್ಲಿ, 52ನೇ ವಾರ್ಷಿಕ ಮಹಾ ಸಭೆಯ ಮುಖ್ಯಾಂಶಗಳು, ವಾರ್ಷಿಕ ವರದಿ ಮತ್ತು 2016-2017ನೇ ಸಾಲಿನ ಲೆಕ್ಕ ಪತ್ರ, ಮುಂತಾದ ವಿಷಯಗಳನ್ನು ಮಂಡಿಸಿ ಸದಸ್ಯರಿಂದ ಮಂಜೂರು ಪಡೆಯಲಾಯಿತು. 2017-2018ನೇ ಸಾಲಿಗೆ ಆಂತರಿಕ ಲೆಕ್ಕ ಪರಿಶೋಧಕರಾಗಿ ಶ್ರೀಕಾಂತ್ ಜಯರಾಮ್ ಹೆಗ್ಡೆ ವಿಕ್ರೋಲಿ ಇವರನ್ನು ನೇಮಿಸಲಾಯಿತು.
ಬಾಹ್ಯ ಲೆಕ್ಕ ಪರಿಶೋಧಕರಾಗಿ ಮೆಸರ್ಸ್ ಎಂ. ಎ. ಚೌಹಾಣ್ ಆ್ಯಂಡ್ ಕಂಪೆನಿ ಥಾಣೆ ಅವರನ್ನು ನೇಮಿಸಲಾಯಿತು. ಅನಂತರ ನಡೆದ ಆಡಳಿತ ಮಂಡಳಿಯ ಸದಸ್ಯರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಿಜಯ್ ಬಿ. ಹೆಗ್ಡೆ ಚೆಂಬೂರ್ ಇವರು ಅವಿರೋಧವಾಗಿ ಆಯ್ಕೆಯಾದರೆ, ಗೌರವ
ಕಾರ್ಯದರ್ಶಿಯಾಗಿ ಶಂಕರ್ ಆರ್. ಹೆಗ್ಡೆ ಡೊಂಬಿವಿಲಿ ಮತ್ತು ಕೋಶಾಧಿಕಾರಿಯಾಗಿ ರಮೇಶ್ ಎಂ. ಹೆಗ್ಡೆ ಡೊಂಬಿವಿಲಿ
ಅವಿರೋಧವಾಗಿ ಆಯ್ಕೆಯಾದರು. ಸಂಜೀವ ಪಿ. ಹೆಗ್ಡೆ ಅವರನ್ನು ಗೌರವ ಕಾರ್ಯಾಧ್ಯಕ್ಷರಾಗಿ ಸರ್ವಾನುಮತದಿಂದ ಆರಿಸಲಾಯಿತು. ಸಂಘದ ಆಡಳಿತ ಮಂಡಳಿಗೆ ಬೇಕಾದ 19 ಸದಸ್ಯರಿಗಾಗಿ 26 ಸದಸ್ಯರು ಉಮೇದ್ವಾರಿಕೆಯನ್ನು ಸಲ್ಲಿಸಿದ್ದು ಚುನಾವಣಾ ಅಧಿಕಾರಿ ನೀತಾ ಸತೀಶ್ ಹೆಗ್ಡೆ
ಚುನಾವಣಾ ಪ್ರಕ್ರಿಯೆಯನ್ನು ನಡೆಸಿ 19 ಚುನಾಯಿತ ಸದಸ್ಯರ ಯಾದಿಯನ್ನು ಮಹಾ ಸಭೆಗೆ ತಿಳಿಸಿದರು.
ಅನಂತರ ಸಮಾಜದ 139 ಬಡ ವಿದ್ಯಾರ್ಥಿಗಳಿಗೆ 2017-2018ನೇ ವರ್ಷದ ವಿದ್ಯಾರ್ಥಿ ವೇತನವನ್ನು ನೀಡಿ ಗೌರವಿಸಲಾಯಿತು. ಸಮಾಜದ 11 ಬಡ ಮಕ್ಕಳನ್ನು ಸಮಾಜದ ದಾನಿಗಳಾದ ಕೊಡ್ಯಡ್ಕ ಜಯರಾಮ ಹೆಗ್ಡೆ, ದಿ| ಸಿ. ಬಾಬು ಹೆಗ್ಡೆ ಡೊಂಬಿವಿಲಿ, ಮನೋಜ್ ಹೆಗ್ಡೆ ಥಾಣೆ, ಸುರೇಂದ್ರ ಕುಮಾರ್ ಹೆಗ್ಡೆ ಅಂಧೇರಿ, ದೇವೇಂದ್ರ ಹೆಗ್ಡೆ ಬೆಂಗಳೂರು, ಲೀಲಾವತಿ ರವೀಂದ್ರ ಹೆಗ್ಡೆ ಮುಲುಂಡ್ ಮತ್ತು ಸುಧಾಕರ್ ಶೆಟ್ಟಿ ಇವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಕ ವಿದ್ಯಾರ್ಥಿ ವೇತನ ನಿಧಿಯಡಿಯಲ್ಲಿ ದತ್ತು ಸ್ವೀಕರಿಸಲಾಯಿತು.
ಅನಂತರ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ 2016-17ನೇ ವರ್ಷದ ಪರೀಕ್ಷೆಗಳಲ್ಲಿ ಉತ್ತಮ ಅಂಕವನ್ನು ಪಡೆದ 22 ವಿದ್ಯಾರ್ಥಿಗಳನ್ನು ಸ್ಮರಣಿಕೆ ಮತ್ತು ಗೌರವ ಧನವನ್ನು ನೀಡಿ ಸಮಾಜದ ಗಣ್ಯರಿಂದ ಸತ್ಕರಿಸಲಾಯಿತು. ಮಹಾ ಸಭೆಯಲ್ಲಿ ಮಾಜಿ ಅಧ್ಯಕ್ಷರಾದ ಎಚ್. ಡಿ. ಹೆಗ್ಡೆ, ಕೆ. ಸದಾನಂದ್ ಹೆಗ್ಡೆ ತುಳಸಿ, ವಿ. ಎಸ್. ಹೆಗ್ಡೆ, ಎಲ…. ಜಿ. ಹೆಗ್ಡೆ, ರತ್ನಾಕರ್ ಹೆಗ್ಡೆ ಹಾಗೂ ಹಿರಿಯ ಸದಸ್ಯರು, ಆಡಳಿತ ಮಂಡಳಿಯ ಸದಸ್ಯರು, ಯುವ ವಿಭಾಗದ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.