ಹೆಗ್ಗಡೆ ಸೇವಾ ಸಂಘ ಮುಂಬಯಿ ವಾರ್ಷಿಕ ಕ್ರೀಡೋತ್ಸವದ ಸಮಾರೋಪ
Team Udayavani, Jan 13, 2019, 12:06 PM IST
ನವಿಮುಂಬಯಿ: ಹೆಗ್ಗಡೆ ಸೇವಾ ಸಂಘ ಇದರ ವಾರ್ಷಿಕ ಕ್ರೀಡೋತ್ಸವದ ಸಮಾರೋಪ ಸಮಾರಂಭವು ಜ. 6 ರಂದು ಎನ್‌ಎಂಎಂಸಿ ಮೈದಾನದಲ್ಲಿ ಸಂಸ್ಥೆಯ ಅಧ್ಯಕ್ಷ ವಿಜಯ್ ಬಿ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಜರಗಿತು.
ದಿನವಿಡೀ ನಡೆದ ಕ್ರೀಡೋತ್ಸವದಲ್ಲಿ ಮಕ್ಕಳ ಹಾಗೂ ಸದಸ್ಯರ ವಯೋ ಮಿತಿಗೆ ಅನುಗುಣವಾಗಿ ಹಮ್ಮಿ ಕೊಂಡಿರುವ ವಿವಿಧ ಕ್ರೀಡೆಗಳಲ್ಲಿ ಸಮಾಜ ಬಾಂಧವರು, ಮಕ್ಕಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡೋತ್ಸವಕ್ಕೆ ಮೆರುಗನ್ನು ನೀಡಿದರು. ವಿಜೇತರಿಗೆ ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ಅತಿಥಿ- ಗಣ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಂಘದ ಹಿರಿಯ ಸದಸ್ಯರುಗಳು ವಿತರಿಸಿ ಶುಭಹಾರೈಸಿದರು. ಸಮಾರೋಪ ಸಮಾರಂಭ ಕಾರ್ಯಕ್ರಮದ ವೇದಿಕೆ ಯಲ್ಲಿ ಅತಿಥಿಯಾಗಿ ಸಂಘದ ಮಾಜಿ ಅಧ್ಯಕ್ಷ ವಿ. ಎಸ್. ಹೆಗ್ಡೆ, ಪುಣೆಯ ಹೊಟೇಲ್ ಉದ್ಯಮಿ, ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರ ಹಾಗೂ ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಗಳ ಪ್ರಾಯೋಜಕರಾದ ವಿನಯ್ ಹೆಗ್ಡೆ, ಥಾಣೆಯ ಹೊಟೇಲ್ ಉದ್ಯಮಿ ಹಾಗೂ ದಾನಿ ಸಚೀಂದ್ರ ಹೆಗ್ಡೆ, ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಸಂಜೀವ ಹೆಗ್ಡೆ, ಕಾರ್ಯದರ್ಶಿ ಶಂಕರ ಹೆಗ್ಡೆ, ಕೋಶಾಧಿಕಾರಿ ರಮೇಶ್ ಹೆಗ್ಡೆ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಶಶಿಧರ ಹೆಗ್ಡೆ, ಉಪಾಧ್ಯಕ್ಷ ಸುರೇಶ್ ಹೆಗ್ಡೆ ಉಫಸ್ಥಿತರಿದ್ದು ವಿಜೇತ ತಂಡ ಗಳಿಗೆ ಟ್ರೋಪಿ ಹಾಗೂ ಪದಕಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಅಪರಾಹ್ನ ದಿವಂಗತ ನುರ್ಲಬೈಲು ಶ್ಯಾಮ್ ಹೆಗ್ಡೆ ಸ್ಮಾರಕ ಕ್ರಿಕೆಟ್ ಟೂರ್ನಮೆಂಟ್ ಮತ್ತು ತ್ರೋಬಾಲ್ ಟೂರ್ನಮೆಂಟ್ ಪಂದ್ಯ ಗಳು ಪುಣೆಯ ಉದ್ಯಮಿ ವಿನಯ್ ಹೆಗ್ಡೆ ಇವರ ಪ್ರಾಯೋಜಕತ್ವದಲ್ಲಿ ನಡೆಯಿತು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ನವೀನ್ ಹೆಗ್ಡೆ ಇವರ ರೂವಾರಿಯಲ್ಲಿ ಭಾಗವಹಿಸಿದ ಟೀಮ್ ತುಳುನಾಡು ಆಡಂದಾಲ್ ಇಲೆವೆನ್ ತಂಡವನ್ನು ಬಗ್ಗುಬಡಿದು ಟ್ರೋಫಿ ಮತ್ತು ಗೌರವ ಧನವನ್ನು ತನ್ನದಾಗಿಸಿಕೊಂಡಿತು.
ಹಾಗೆಯೇ ಥ್ರೋ ಬಾಲ್ ಪಂದ್ಯ ದಲ್ಲಿ ಥಾಣೆಯ ವಿಜಯಲಕ್ಷ್ಮೀ ಹೆಗ್ಡೆ ತಂಡ ಜಯಗಳಿಸಿದರೆ, ಭಾರತಿ ಎಂ. ಹೆಗ್ಡೆ ತಂಡ ರನ್ನರ್‌ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು.
ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯದಲ್ಲಿ ಸುಜಾತಾ ಹೆಗ್ಡೆ ತಂಡ ಪ್ರಥಮ ಮತ್ತು ಹರ್ಷಲಾ ಹೆಗ್ಡೆ ತಂಡ ದ್ವಿತೀಯ, ಪುರುಷರ ಹಗ್ಗ ಜಗ್ಗಾಟದಲ್ಲಿ ದೇವದಾಸ್ ಹೆಗ್ಡೆ ನೇತೃತ್ವದ ಶಿರೂರು ಇಲೆವೆನ್ ತಂಡ ಪ್ರಥಮ ಹಾಗೂ ಜಯರಾಮ್ ಹೆಗ್ಡೆ ಕಲ್ಯಾಣ್ ನೇತೃತ್ವದ ಕಲ್ಯಾಣ್ ಇಲೆವೆನ್ ತಂಡ ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು.
ದಿನವಿಡೀ ನಡೆದ ಕ್ರೀಡೋತ್ಸವವನ್ನು ಯುವ ವಿಭಾಗದ ಸದಸ್ಯರು ಹಾಗೂ ಸಮಿತಿಯ ಸದಸ್ಯರು ಮಹಿಳೆಯರು ಅಚ್ಚುಕಟ್ಟಾಗಿ ನೆರವೇರಿಸಿದರು. ಸಂಘದ ಹಿರಿಯ ಸದಸ್ಯರು, ತುಳು ಕೂಟ ಐರೊಲಿ ಇದರ ಸದಸ್ಯರು, ರಶ್ಮಿ ಕ್ಯಾಟರರ್ಸ್ ಇದರ ಸಿಬಂದಿ ವರ್ಗ, ಹೇಮಂತ್ ಸುರ್ತಾ ಮತ್ತು ಬಳಗದವರು ಉಪಸ್ಥಿತರಿದ್ದು ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸ್ಪರ್ಧಾಳುಗಳಿಗೆ ಸಮವಸ್ತ್ರ ಟಿಶರ್ಟ್ ಇದರ ವ್ಯವಸ್ಥೆಯನ್ನು ಸದಾಶಿವ ಹೆಗ್ಡೆ ಐರೋಲಿ ಇವರ ನೆರವಿನಿಂದ ಇಂಡಿಯನ್ ಆಯಿಲ್ ಕಾರ್ಪೋರೇಶನ್‌ನವರು ಉಚಿತವಾಗಿ ನೀಡಿದ್ದರು.
ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ರವಿ ಹೆಗ್ಡೆ ಹೆರ್ಮುಂಡೆ ನಿರೂಪಿಸಿದರು. ಸಂಘದ ಆಡಳಿತ ಮಂಡಳಿ, ಯುವ ವಿಭಾಗ, ಮಹಿಳಾ ವಿಭಾಗದ ಸದಸ್ಯರು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.