ಹೆಗ್ಗಡೆ ಸೇವಾ ಸಂಘ :”ಸೀತಾ ಸ್ವಯಂವರ ಹರಿಕಥಾಮೃತ’
Team Udayavani, Apr 23, 2019, 2:55 PM IST
ನವಿಮುಂಬಯಿ: ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ಆಶ್ರಯದಲ್ಲಿ ಎ. 19ರಂದು ಅಪರಾಹ್ನ 3ರಿಂದ ಐರೋಲಿಯ ಸೆಕ್ಟರ್ 15ರ ಗುರುದ್ವಾರದ ಸಮೀಪವಿರುವ ಹೆಗ್ಗಡೆ ಭವನದ ಸಭಾಂಗಣದಲ್ಲಿ ಸಮಾಜದ ಕುಲದೇವರಾದ ಶ್ರೀ ಹನುಮಾನ್ ಜಯಂತಿ ಮಹೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಜೆ 5.30ರಿಂದ ರಾತ್ರಿ 8ರವರೆಗೆ ತವರೂರ ಬಹುಮುಖ ಪ್ರತಿಭಾನ್ವಿತ, ನಾಮಾಂಕಿತ ಕಲಾವಿದ, ಹರಿದಾಸ ಪುಷ್ಕಳ್‌ಕುಮಾರ್ ತೋನ್ಸೆ ಇವರಿಂದ ಮತ್ತು ಬಳಗದ ಸದಸ್ಯರ ಕೂಡುವಿಕೆಯಲ್ಲಿ “ಸೀತಾ-ಸ್ವಯಂವರ ಹರಿಕಥಾಮೃತ’ ಪ್ರಸ್ತುತಗೊಂಡಿತು. ಇದೇ ಸಂದರ್ಭದಲ್ಲಿ ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ವತಿಯಿಂದ ಅಧ್ಯಕ್ಷ ವಿಜಯ್ ಬಿ. ಹೆಗ್ಡೆ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷಸುರೇಂದ್ರ ಕುಮಾರ್ ಹೆಗ್ಡೆ ಮತ್ತು ಸಂಘದ ಪದಾಧಿಕಾರಿಗಳು ಕಲಾವಿದ ಪುಷ್ಕಳ್ ಕುಮಾರ್ ತೋನ್ಸೆ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು.
ಹಿಮ್ಮೇಳ ಕಲಾವಿದರಾಗಿ ಶೇಖರ್ ಸಸಿಹಿತ್ಲು ಮತ್ತು ಚಾರುಕೇಶ್ ಬಂಗೇರ ಅವರ ಸಹಕರಿಸಿದರು. ಸಂಘದ ಜತೆ ಕಾರ್ಯದರ್ಶಿ ರವಿ ಹೆಗ್ಡೆ ಹೆರ್ಮುಂಡೆ ಅವರು ಪುಷ್ಕಳ್ ಕುಮಾರ್ ತೋನ್ಸೆ ಮತ್ತು ಇತರ ಕಲಾವಿದರನ್ನು ಪರಿಚಯಿಸಿದರು. ಪೂಜಾ ಕಾರ್ಯಕ್ರಮದ ಮಧ್ಯೆ ಶ್ರೀ ಶನೀಶ್ವರ ಭಜನಾ ಮಂಡಳಿ ನೆರೂಲ್ ಬಳಗದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ಕಾರ್ಯಕ್ರಮ ನೀಡಿದ ಶ್ರೀ ಶನೀಶ್ವರ ಭಜನಾ ಮಂಡಳಿಯ ಸದಸ್ಯರನ್ನು, ಪೂಜೆಯ ವ್ರತಾಚರಣೆಗೈದ ಸಂತೋಷ್ ಹೆಗ್ಡೆ ದಂಪತಿ, ಸಂಘದ ಅಧ್ಯಕ್ಷ ವಿಜಯ್ ಬಿ. ಹೆಗ್ಡೆ ಇವರನ್ನು ಪುರೋಹಿತ ರಮಾನಾಥ ಕುಂಜಿರಾಯ ಅವರು ಗೌರವಿಸಿದರು.
ಸಂಘದ ಸಕ್ರಿಯ ಕಾರ್ಯಕರ್ತ ಪ್ರಭಾಕರ ಹೆಗ್ಡೆ, ಗೌರವಾಧ್ಯಕ್ಷ ಸಂಜೀವ ಪಿ. ಹೆಗ್ಡೆ, ಉಪಾಧ್ಯಕ್ಷ ಸುರೇಶ್ ಎಸ್. ಹೆಗ್ಡೆ, ಗೌರವ ಪ್ರಧಾನ ಕಾರ್ಯದರ್ಶಿ ಶಂಕರ್ ಆರ್. ಹೆಗ್ಡೆ, ಕೋಶಾಧಿಕಾರಿ ರಮೇಶ್ ಎಂ . ಹೆಗ್ಡೆ, ಜತೆ ಕಾರ್ಯದರ್ಶಿ ರವಿ ಎಸ್. ಹೆಗ್ಡೆ, ಜತೆ ಕೋಶಾಧಿಕಾರಿ ಚಂದ್ರಶೇಖರ್ ಬಿ. ಹೆಗ್ಡೆ, ಮಾಜಿ ಅಧ್ಯಕ್ಷರಾದ ವಿ. ಎಸ್. ಹೆಗ್ಡೆ ಮತ್ತು ರತ್ನಾಕರ ಹೆಗ್ಡೆ, ಐರೋಲಿ ತುಳುಕೂಟದ ಅಧ್ಯಕ್ಷ ಕೆ. ಕೆ. ಹೆಬ್ಟಾರ್ ಅವರು ಉಪಸ್ಥಿತರಿದ್ದರು. ರಂಗಕರ್ಮಿ ಅನಿಲ್ ಕುಮಾರ್ ಹೆಗ್ಡೆ ಅವರು ಉಪಸ್ಥಿತರಿದ್ದರು.
ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಆಡಳಿತ ಮಂಡಳಿ ಸದಸ್ಯರು ಮಹಿಳಾ ವಿಭಾಗದವರು, ಯುವ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಮಾಜ ಬಾಂಧವರಲ್ಲದೆ, ಸ್ಥಳೀಯ ವಿವಿಧ ಜಾತೀಯ, ಕನ್ನಡಪರ ಹಾಗೂ ಧಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು, ಮಹಿಳಾ ವಿಭಾಗದವರು, ಸ್ಥಳೀಯ ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ದಾನಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.