ಹೆಗ್ಗಡೆ ಭವನ ಐರೋಲಿ: ಯೋಗ ಸ್ಪರ್ಧೆ ಸಮಾರೋಪ
Team Udayavani, Aug 28, 2018, 4:54 PM IST
ಮುಂಬಯಿ: ಹೆಗ್ಗಡೆ ಭವನ ಐರೋಲಿ ಮತ್ತು ಮೆಡ್ಡಿ ಮೇಕರ್ಸ್ ಯೋಗ ಕ್ಲಾಸೆಸ್ ಇವರ ಸಂಯೋಜನೆಯಲ್ಲಿ ಐರೋಲಿ ಹಾಗೂ ನವಿ ಮುಂಬಯಿಯ ಯೋಗ ಪಟುಗಳಿಗೆ ತಮ್ಮ ಯೋಗಾಭ್ಯಾಸದ ವರ್ಚಸ್ಸನ್ನು ತೋರಿಸುವ ಸಲುವಾಗಿ ಯೋಗ ಸ್ಪರ್ಧೆಯನ್ನು ಆ. 15 ರಂದು ಹೆಗ್ಗಡೆ ಭವನದಲ್ಲಿ ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ 50 ಕ್ಕೂ ಮಿಕ್ಕಿ ಯೋಗಪಟುಗಳು ಯೋಗ ಸ್ಪರ್ಧೆಯಲ್ಲಿ ತಮ್ಮ ವಯೋಮಿತಿಗೆ ಅನುಗುಣವಾಗಿ ಭಾಗವಹಿಸಿದ್ದರು. ನವಿಮುಂಬಯಿಯಲ್ಲಿ ಪ್ರಥಮವಾಗಿ ಹಮ್ಮಿಕೊಂಡಿರುವ ಈ ಯೋಗ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ವಿಜಯ್ ಬಿ. ಹೆಗ್ಡೆ, ಮೆಡ್ಡಿ ಮೇಕರ್ಸ್ ಯೋಗ ಕ್ಲಾಸೆಸ್‌ನ ಡಾ| ಮಿಲಿಂದ್ ತಾಂಬೆ, ಸಂಸ್ಥೆಯ ಸದಸ್ಯರು, ಪರಿಸರದ ತುಳು ಕನ್ನಡಿಗರು ಭಾಗವಹಿಸಿದ್ದರು.
ತೀರ್ಪುಗಾರರಾಗಿ ನ್ಯೂ ಹೋರಿಝೊàನ್ ಸ್ಕೂಲಿನ ಯೋಗ ಶಿಕ್ಷಕರುಗಳಾದ ಸುಧಾಮ್ ಸೋನಾವಣೆ, ಗೌರಿ ಜೋಶಿ ಮತ್ತು ವಿವೇಕ್ ಪಾಟೀಲ್ ಉಪಸ್ಥಿತರಿದ್ದರು. 17 ರಿಂದ 21 ವರ್ಷ ವಯೋಮಿತಿಯ ವಿಭಾಗದಲ್ಲಿ ಕುಮಾರಿ ಶ್ರದ್ಧಾ ಶೆಟ್ಟಿ ಪ್ರಥಮ, 21 ರಿಂದ 25 ವರ್ಷ ವಿಭಾಗದಲ್ಲಿ ಸಿದ್ದೇಶ್ ಬಚ್ಚಲ್ – ಪ್ರಥಮ, ಓಂಕಾರ್ ಮಾತ್ರೆ ದ್ವಿತೀಯ, 25 ರಿಂದ 35 ವರ್ಷ ವಿಭಾಗದಲ್ಲಿ ಸಾರಿಕಾ ಕೆಲಸ್ಕರ್ ಮತ್ತು ಪೂರ್ವಿ ಚೋನ್ಕರ್ ಪ್ರಥಮ, ಸೋನಾಲಿ ದೇಶಮುಖ್ ಮತ್ತು ಸುಗಂಧಿ ದ್ವಿತೀಯ ಬಹುಮಾನ ಪಡೆದರು.
35 ರಿಂದ 45 ವರ್ಷ ವಿಭಾಗದಲ್ಲಿ ಹೇಮಂತ್ ಕೆಲಸ್ಕರ್ ಪ್ರಥಮ, ಅರವಿಂದ್ ಅಗರ್ವಾಲ್ ದ್ವಿತೀಯ, ಮಹಿಳೆಯರ 45 ರಿಂದ 55 ವರ್ಷ ವಿಭಾಗದಲ್ಲಿ ವಿನಯ ಹೆಬ್ಟಾರ್ ಪ್ರಥಮ, ಪುರುಷರ 45 ರಿಂದ 55 ವರ್ಷ ವಿಭಾಗದಲ್ಲಿ ಪದ್ಮನಾಭ್ ಗೌಡ ಪ್ರಥಮ, ಪ್ರವೀಣ್ ರಾವುತ್ ದ್ವಿತೀಯ ಹಾಗೂ 55 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ವಿಠಲ್ ಗೋಲಪ್ ಪ್ರಥಮ ಬಹುಮಾನವನ್ನು ಪಡೆದರು.
ಉತ್ತಮ ಸ್ಪರ್ಧಾಳುಗಳಾಗಿ ಆರತಿ ಸಂಗಾಧಾನಿ ಮತ್ತು ಸಿದ್ದೇಶ್ ಬಚ್ಚಲ್ ಅವರು ಬಹುಮಾನ ಪಡೆದರು. ವಿಜೇತರಿಗೆ ಪದಕ ಮತ್ತು ಪ್ರಮಾಣ ಪತ್ರವನ್ನು ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ವಿಜಯ್ ಬಿ. ಹೆಗ್ಡೆ ಅವರು ವಿತರಿಸಿ ಶುಭಹಾರೈಸಿದರು. ಸಿದ್ದೇಶ್ ಬಚ್ಚಲ್ ಸಹಕರಿಸಿದರು. ವಿನಯ ಹೆಬ್ಟಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.