ಸಂಕಷದಲ್ಟಿ ರುವ ಗಡಿನಾಡ ಕವಿ ಗೈಬಿಶಾ ಮಕಾನದಾರ್‌ಗೆ ಸಹಾಯಹಸ್ತ
ಉದಯವಾಣಿ ವರದಿಗೆ ತತ್‌ಕ್ಷಣದ ಸ್ಪಂದನೆ...
Team Udayavani, Dec 22, 2020, 7:14 PM IST
ಸೊಲ್ಲಾಪುರ, ಡಿ. 21: ಅಕ್ಕಲ್‌ಕೋಟೆ ತಾಲೂಕಿನ ಅಂದೇವಾಡಿ ಗ್ರಾಮದ ಬಹುಭಾಷಾ ಕವಿ ಗೈಬಿಶಾ ಮಕಾನದಾರ್ ಕುಟುಂಬದ ಆರ್ಥಿಕ ಸಂಕಷ್ಟದ ಬಗ್ಗೆ “ಗಡಿನಾಡಿನಲ್ಲಿ ಕನ್ನಡ ಕವಿಯ ರೋದನ ಕೇಳುವವರಿಲ್ಲ..! ಎರಡು ಲಕ್ಷಕ್ಕೂ ಹೆಚ್ಚು ಕವಿತೆಗಳ ಕತೃìವಿನ ಬದುಕು ಕತ್ತಲೆಯಲ್ಲಿ’ ಎಂಬ ಶೀರ್ಷಿಕೆಯಲ್ಲಿ ಭಾನುವಾರ ಉದಯವಾಣಿಯಲ್ಲಿ ಪ್ರಕಟಗೊಂಡ ಲೇಖನಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ.
ಕರ್ನಾಟಕ-ಮಹಾರಾಷ್ಟ್ರದ ಗಡಿ ಭಾಗದ ಪ್ರಸಿದ್ಧ ಕವಿ ಗೈಬಿಶಾ ಮಕಾನದಾರ್ ಅವರು ಲಕ್ಷಕ್ಕಿಂತ ಹೆಚ್ಚು ಜಾನಪದ ಸೇರಿದಂತೆ ವಿವಿಧ ರೀತಿಯ ಕವನಗಳನ್ನು ರಚಿಸಿ ಹಾಡಿದ್ದಾರೆ. ಗಡಿನಾಡು ಕನ್ನಡಿಗರಾಗಿದ್ದರಿಂದ ಅವರ ಪ್ರತಿಭೆಯನ್ನು ಮಹಾರಾಷ್ಟ್ರ ಮತ್ತು ಕರ್ನಾಟಕ ಸರಕಾರಗಳೆರಡೂ ಗುರುತಿಸದೆ ನಿರ್ಲಕ್ಷಿಸಿವೆ. ಇಂತಹ ಸಾಹಿತಿಯ ಆರ್ಥಿಕ ಸ್ಥಿತಿ ಬಹಳಷ್ಟು ಹದಗೆಟ್ಟಿದ್ದು, ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದಂತಾಗಿದೆ. ಇದೀಗ ತೀವ್ರ ಸಂಕಷ್ಟದಲ್ಲಿರುವ ಗೈಬಿಶಾ ಕುಟುಂಬಕ್ಕೆ ನೆರವು ನೀಡಲು ಆತ್ಮಾ ಸೋಷಿಯಲ್ ಫೌಂಡೇಶನ್ ಸೇರಿದಂತೆ ಹಲವಾರು ಮಂದಿ ಮುಂದೆ ಬಂದು ಮಾನವೀಯತೆ ಮೆರೆದಿದ್ದಾರೆ.
ಆತ್ಮಾ ಸೋಷಿಯಶಲ್ ಫೌಂಡೆಶನ್ ಸಂಸ್ಥೆಯ ಪದಾಧಿಕಾರಿಗಳು ಭಾನುವಾರ ಬೆಳಗ್ಗೆ ಅಂದೇವಾಡಿ ಗ್ರಾಮದ ಕವಿ ಗೈಬಿಶಾ ಮಕಾನಾªರ್ ಅವರ ಮನೆಗೆ ತೆರಳಿ ಅವರನ್ನು ಗೌರವಿಸಿ ದನ ಸಹಾಯ ನೀಡಿತು. ಆತ್ಮಾ ಸೋಷಿಯಲ್ ಫೌಂಡೇಶನ್ ಇದರ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ, ಉಪಾಧ್ಯಕ್ಷ ಶ್ರೀಶೈಲ ರಬ್ಟಾ, ಕಾರ್ಯದರ್ಶಿ ಶರಣಪ್ಪ ಫುಲಾರಿ, ಜನಸಂಪರ್ಕಾಧಿಕಾರಿ ಅಮೋಲ ಫುಲಾರಿ, ವಿಠuಲ್ ವಿಜಾಪುರೆ ಮತ್ತು ಶಾವಳ ಗ್ರಾಮದ ರಮೇಶ ಯಳಮೇಲಿ, ಗಂಗಾಧರ ನಾಗಶೆಟ್ಟಿ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸೊಲ್ಲಾಪುರದ ಶಿಕ್ಷಕಿ ಅನುರಾಧಾ ಕಾಜಳೆ ಎರಡು ಸಾವಿರಕ್ಕೂ ಅಧಿಕ ಮೊತ್ತದ ದಿನೋಪಯೋಗಿ ಆಹಾರ ಸಾಮಗ್ರಿಗಳನ್ನು ಒದಗಿಸಿದ್ದಾರೆ. ಅಲ್ಲದೆ ಅಕ್ಕಲ್‌ಕೋಟೆ ನಗರದ ಮಕ್ಕಳ ತಜ್ಞ ಡಾ| ದೀಪಕ್ ಮಲ್ಲಿಕಾರ್ಜುನ ಪಾಟೀಲ್ ಅವರು ಆರ್ಥಿಕವಾಗಿ ನೆರವು ನೀಡಿದ್ದಾರೆ. ಆತ್ಮಾ ಸೋಷಿಯಲ್ ಫೌಂಡೇಶನ್ ಸೇರಿದಂತೆ ಪೊಲೀಸ್ ಅಧಿಕಾರಿ ಶೋಯಬ್ ಪಠಾಣ್, ಶಾವಳ ಗ್ರಾಮದ ಲಾಯಪ್ಪ ಪೂಜಾರಿ, ಮಲ್ಲಿಕಾರ್ಜುನ ತಾಮದಂಡ್ಡಿ, ಋಕೇಶ್ ಕಿರ್, ಸತೀಶ್ ನಾಗಲಗಾಂವ್ ಮೊದಲಾದವರು ದೇಣಿಗೆ ನೀಡಿ ಕುಟುಂಬಕ್ಕೆ ಸಹಕರಿಸಿದ್ದಾರೆ.
ಕನ್ನಡ ಸೇರಿದಂತೆ ಮರಾಠಿ, ಉರ್ದು ಇನ್ನಿತರ ಭಾಷೆಗಳಲ್ಲಿ ಲಕ್ಷಾಂತರ ಜಾನಪದ ಕವನಗಳನ್ನು ರಚಿಸಿ ಗ್ರಾಮೀಣ ಭಾಗದಲ್ಲಿ ನಡೆಯುವ ಜಾತ್ರೆ, ಸಮಾರಂಭಗಳಲ್ಲಿ ಪಾಲ್ಗೊಂಡು ಹಾಡುವ ಮೂಲಕ ಜಾನಪದ ಕಲೆಯನ್ನು ಉಳಿಸಿ ಬೆಳೆಸಲು ಪ್ರಯತ್ನಿಸುತ್ತಿರುವ ಗೈಬಿಶ ಅವರು ಮಹಾಮಾರಿ ಕೋವಿಡ್ ಲಾಕ್‌ಡೌನ್‌ನಿಂದಾಗಿ ತೀರಾ ಸಂಕಷ್ಟದಲ್ಲಿದ್ದಾರೆ. ಪ್ರಸ್ತುತ ಜಾತ್ರೆ, ಸಮಾರಂಭಗಳು ನಡೆಯದ ಕಾರಣ ಅವರಿಗೆ ಕಾರ್ಯಕ್ರಮಗಳು ಸಿಗುತ್ತಿಲ್ಲ.
ರಾಗ ಸಂಯೋಜನೆ ಮಾಡುವ ಪಾಂಡಿತ್ಯ :
ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ಸಹಾಯ ಲಭಿಸಬೇಕಾಗಿದೆ. ಗೈಬಿಶಾ ಮುಸ್ಲಿಮರಾಗಿದ್ದರೂ ಅವರಲ್ಲಿ ಸಾಕಷ್ಟು ಆಧ್ಯಾತ್ಮದ ಜ್ಞಾನ ಗಂಗೆ ಹರಿಯುತ್ತಿದೆ. ತಮ್ಮ ಹಾಡುಗಳ ಮೂಲಕ ಸಮಾಜ ಪರಿವರ್ತನೆಯ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ವಿವಿಧ ರೀತಿಯ ಕವನಗಳನ್ನು ರಚಿಸಿರುವ ಕವಿ ಗೈಬಿಶಾ ಅವರಲ್ಲಿ ಸೂಕ್ತ ರಾಗ ಸಂಯೋಜನೆ ಮಾಡುವಂತ ಪಾಂಡಿತ್ಯವೂ ಇದೆ. ಅಲ್ಲದೆ ಪುರಾಣ, ಪ್ರವಚನ, ಶಾಸ್ತ್ರ ಹೇಳುವುದರಲ್ಲೂ ವಿಶೇಷ ಪಾಂಡಿತ್ಯವನ್ನು ಹೊಂದಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್‌ಬುಕ್, ಟ್ವಿಟ್ಟರ್ ಮೂಲಕ ಸುದ್ದಿಯು ಬಿತ್ತರ ಗೊಂಡ ಪರಿ ಣಾಮ ಮುಂಬಯಿ ಸೇರಿ ದಂತೆ, ಗಡಿನಾಡ ಕೊಲ್ಲಾಪುರ, ಸೊಲ್ಲಾಪುರದ ದಾನಿ ಗಳು, ಕನ್ನಡ ಪರ ಸಂಘಟನೆಗಳು, ಮಠ- ಮಂದಿರಗಳು ಗೈಬಿಶಾ ಕುಟುಂಬಕ್ಕೆ ಸಹಕರಿಸಲು ಮುಂದಾಗಿ ದ್ದಾರೆ. ಸಹಕರಿ ಸಲಿಚ್ಛಿಸುವವರು 9822749310, 9921085319 ಈ ನಂಬರ್‌ಗಳನ್ನು ಸಂಪರ್ಕಿಸಬಹುದು.
ಗಡಿನಾಡಿನ ಪ್ರತಿಭೆಗಳ ನೆರವಿಗೆ ಸರಕಾರಗಳು ಮುಂದಾಗಬೇಕು. ಅಲ್ಲದೆ ನನ್ನ ಕೃತಿಗಳು ಪ್ರಕಟವಾಗಬೇಕು. 2 ಲಕ್ಷಕ್ಕೂ ಅಧಿಕ ಹಾಡುಗಳು ರಚನೆಯಾಗಿವೆ. ಜಾತ್ರೆ, ಮಠ, ಮಂದಿರ ಸೇರಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಯಾ ಸ್ಥಳ, ವ್ಯಕ್ತಿ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಹಾಡುಗಳನ್ನು ರಚಿಸಿ ಹಾಡುತ್ತೇನೆ. ಕೊರೊನಾ ಹಿನ್ನೆಲೆ ಯಾವುದೆ ಕಾರ್ಯಕ್ರಮಗಳು ನನಗೆ ಸಿಗುತ್ತಿಲ್ಲ. ತೀವ್ರ ಸಂಕಷ್ಟದಲ್ಲಿರುವ ನನ್ನ ಕುಟುಂಬಕ್ಕೆ ಸರಕಾರದ ಸಹಾಯ ಧನ ಬೇಕಾಗಿದೆ. ಆತ್ಮಾ ಸೋಷಿಯಲ್ ಫೌಂಡೇಶನ್ ಮೂಲಕ ನೆರವು ನೀಡಿರುವುದು ಸ್ವಲ್ಪ ಸಮಾಧಾನ ತಂದಿದೆ. –ಗೈಬಿಶಾ ಮಕಾನ್ದಾರ್, (ಜಾನಪದ ಕವಿಗಳು ಅಂದೇವಾಡಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.