ಹೇಮಾ ಸದಾನಂದ ಅಮೀನ್ ಅವರ ಎರಡು ಕೃತಿಗಳ ಬಿಡುಗಡೆ, ನೃತ್ಯ ವೈವಿಧ್ಯ
Team Udayavani, Oct 12, 2018, 11:41 AM IST
ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯ ಎಲ್ಲರಿಗೂ ತೆರೆದ ಮನೆ ಇದ್ದಂತೆ. ಮುಂಬಯಿಯಲ್ಲಿ ಸಾಹಿತ್ಯ ಕೃಷಿಗೆ ಇನ್ನೂ ತುಂಬಾ ಅವಕಾಶಗಳಿವೆ. ಆದ್ದರಿಂದಲೇ ಹೇಮಾ ಅಮೀನ್ ಅವಳಿ-ಜವಳಿ ಕೃತಿಗಳನ್ನು ಅನಾವರಣಗೊಳಿಸುವಲ್ಲಿ ಯಶಕಂಡಿದ್ದಾರೆ. ಅವರೋರ್ವ ಮಹಿಳಾ ಸಾಂಘಿಕತ್ವಕ್ಕೆ ಸಂಚಲನ ನೀಡಿದ ಧೀಮಂತ ಲೇಖಕಿ. ಕಷ್ಟ-ನಷ್ಟಗಳಿಂದ ಬೆಳೆದ ಓರ್ವ ಸೃಜಶೀಲ ಪ್ರತಿಭೆ ಹೇಮಾ ಅವರು ಕಥೆ ಮತ್ತು ಕವನಗಳ ಉಭಯ ಮಾಧ್ಯಮಗಳಿಂದ ಬೆಳೆಯುತ್ತಿದ್ದಾರೆ. ಇದು ನಿಜವಾದ ಸಾಹಿತ್ಯ ಪ್ರೀತಿಯಾಗಿದೆ. ಒಳನಾಡ ಮತ್ತು ಹೊರನಾಡ ಕನ್ನಡಿಗರ ಸಂಬಂಧ ಬೆಳೆಸುವ ಕಾರ್ಯಕ್ರಮ ಇದಾಗಿಸಿದ್ದಾರೆ. ಆದ್ದರಿಂದ ಇದೊಂದು ನಾಡಹಬ್ಬ ಕಾರ್ಯಕ್ರಮವೆ ಸರಿ. ಇಂತವರಿಂದಲೆ ಮುಂಬಯಿಯಲ್ಲಿ ಒಳ್ಳೆಯ ಸಾಹಿತ್ಯ ಕೃಷಿ ನಡೆಯುತ್ತಿದೆ. ಇವು ಅಭಿಜಿತ್ ಪ್ರಕಾಶನದ 98 ಮತ್ತು 99 ಕೃತಿಗಳಾಗಿ ಪ್ರಕಾಶಮಾನವಾಗುತ್ತಿವೆ ಎಂದು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ತಿಳಿಸಿದರು.
ಅ.6 ರಂದು ಘಾಟ್ಕೊàಪರ್ ಪಶ್ಚಿಮದ ಅಸಲ್ಪಾದ ಶ್ರೀ ಕ್ಷೇತ್ರದ ಶ್ರೀ ಗೀತಾಂಬಿಕಾ ಸಭಾಗೃಹದಲ್ಲಿ ನಡೆದ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ನೃತ್ಯ ಅಭಿನಯ ಕಲಾಕ್ಷೇತ್ರ ಇವುಗಳ ಜಂಟಿ ಆಶ್ರಯದಲ್ಲಿ ಜರಗಿದ ಕೃತಿಗಳ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶ್ರೀ ಗೀತಾಂಬಿಕಾ ಸೇವಾ ಸಮಿತಿ ಅಧ್ಯಕ್ಷ ಕಡಂದಲೆ ಸುರೇಶ್ ಎಸ್. ಭಂಡಾರಿ ಮುಖ್ಯ ಅತಿಥಿಯಾಗಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರು ಆಶೀರ್ವದಿಸಿದರು.
ವಿದ್ಯಾಧರ ಕನ್ನಡ ಪ್ರತಿಷ್ಠಾನ ಧಾರವಾಡ ಮುಂಬಯಿ ಅಧ್ಯಕ್ಷ ವಿದ್ಯಾಧರ ಮುತಾಲಿಕ ದೇಸಾಯಿ, ಕನ್ನಡಿಗ ಪತ್ರಕರ್ತರ ಸಂಘ ಮಹಾ ರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಅನನ್ಯ ಹಾರ್ಟ್ ಸಂಸ್ಥೆ ಮಂಡ್ಯ ಇದರ ನಿರ್ದೇಶಕಿ ಅನುಪಮಾ ಎನ್. ಎಸ್. ಗೌಡ, ಸಮಾಜ ಸೇವಕ ಕೃಷ್ಣ ಎಲ್. ಪೂಜಾರಿ, ಉದ್ಯಮಿ ಗಿರಿ ಸೂರ್ಯರಾಮ ಉಡುಪಿ, ಅವರು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಲೇಖಕಿ ಹೇಮಾ ಸದಾನಂದ ಅಮೀನ್ ಅವರ “ಅವರೆಲ್ಲಾ ದೇವರಾಗಿದ್ದಾರೆ’ ಕಥಾ ಸಂಕಲನವನ್ನು ಹುಬ್ಬಳ್ಳಿಯ ಸಾಹಿತಿ, ಕಾದಂಬರಿಗಾರ್ತಿ ಸುನಂದ ಪ್ರಕಾಶ ಕಡಮೆ ಮತ್ತು “ಕಲ್ಯಾಣಿಯಲ್ಲಿ ಮಳೆ’ ಕವನ ಸಂಕಲನವನ್ನು ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರು ಬಿಡುಗಡೆಗೊಳಿಸಿದರು. ಡಾ| ಉಮಾ ರಾವ್ ಅವರು ಕಥಾ ಸಂಕಲನ ಮತ್ತು ಕಾಳನಾಯಕ ವಿ. ಮೈಸೂರು ಅವರು ಕವನ ಸಂಕಲನವನ್ನು ಪರಿಚಯಿಸಿದರು.
ಸುನಂದ ಪ್ರಕಾಶ್ ಮಾತನಾಡಿ, ಒಂದು ಕಾಲಕ್ಕೆ ದುರ್ಬಲ ಪ್ರಕಾರವಾಗಿದ್ದ ಕಥಾ ಪ್ರಕಾರವು ಇಂದು ಯಶಸ್ವಿ ಪ್ರಕಾರವಾಗಿ ಬೆಳೆದು ನಿಂತಿದೆ. ಬ್ಲೇಡ್ ಮಾಡುವ ಕೆಲಸವನ್ನು ಇಂದಿನ ಕಥೆಗಳು ಮಾಡಬೇಕು ಎಂದರು. ಸಮನಸ್ಸನ್ನು ಕಾಡುವ ಕವಿತೆಗಳು ಕಲ್ಯಾಣಿಯಲ್ಲಿ ಮಳೆ ಸಂಕಲನದಲ್ಲಿ ಇವೆ. ಲೇಖಕರಿಗೆ ವ್ಯಾಕರಣದ ಜತೆ ಅಂತ:ಕರಣ ಇರಲಿ ಎಂದು ಜೋಕಟ್ಟೆ ತಿಳಿಸಿದರು.
ಗಿರಿಜಾ ಅಮೀನ್, ಸದಾನಂದ ಅಮೀನ್ ಮತ್ತಿತರರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕು| ನಿಖೀತಾ ಸದಾನಂದ ಅಮೀನ್ ನಿರ್ದೇಶನದಲ್ಲಿ ನೃತ್ಯ ಅಭಿನಯ ಕಲಾಕ್ಷೇತ್ರದವರಿಂದ ನೃತ್ಯ ವೈಭವ ನಡೆಯಿತು. ಕು| ವಿದ್ಯಾ ರೋಹಿತ್ ಪೂಜಾರಿ ಅವರಿಂದ ವೀಣಾವಾದನ ನಡೆಯಿತು. ಕಲಾವಿದೆಯರು ಪ್ರಾರ್ಥನೆಗೈದರು. ಕಲಾವಿದ ಕಿರಣ ದೇಸಾಯಿ ಸಾಲಹಳ್ಳಿ ಅತಿಥಿಗಳನ್ನು ಪರಿಚಯಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್. ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರೇಮಾ ಪೂಜಾರಿ ವಂದಿಸಿದರು.
ಇಂದು ಬರೆಯುವವರ ಸಂಖ್ಯೆ ಹೆಚ್ಚು ಇದೆ. ಆದರೆ ಓದುವ ಜನ ಕಡಿಮೆ. ಓದುವ ಹವ್ಯಾಸ ಕಡಿಮೆಯಾದಾಗ ಬರಹಗಾರರಿಗೆ ಪ್ರೋತ್ಸಾಹದ ಕೊರತೆಯಾಗುವುದು. ಪುಸ್ತಕ ಗೆಳೆಯ ಅಥವಾ ಪ್ರೇಯಸಿ ಇದ್ದಂತೆ. ಲೇಖಕರು ಎಷ್ಟು ಬರೆದೆವು ಎಂಬುವುದಕ್ಕಿಂತ ಮುಖ್ಯವಾಗಿ ಏನನ್ನು ಬರೆದಿದ್ದೇವೆ ಎಂಬ ಅರಿವಿನ ಎಚ್ಚರಿಕೆಯಿಂದ ಕೃತಿಗಳನ್ನು ರಚಿಸಬೇಕು.
-ಕಡಂದಲೆ ಸುರೇಶ್ ಭಂಡಾರಿ,
ಅಧ್ಯಕ್ಷರು, ಶ್ರೀ ಗೀತಾಂಬಿಕಾ ಸೇವಾ ಸಮಿತಿ ಅಸಲ್ಫಾ
ನಿಖೀತಾ ಅಮೀನ್ ಅವರು ಓರ್ವ ಪ್ರತಿಭಾವಂತೆಯಾಗಿದ್ದಾರೆ. ಕಲಾವಿದರಲ್ಲಿ ಗುಣವಂತಿಕೆ, ಧನವಂತಿಕೆ ಮತ್ತು ವಿದ್ಯಾವಂತಿಕೆ ಇದ್ದರೆ ಚೆಂದ. ಆವಾಗಲೇ ಕಲೆಯು ಪುನಃಶ್ಚೇತನಗೊಂಡು ಅದನ್ನು ಬೆಳೆಸಿ-ಉಳಿಸುವ ಹೃದಯ ಶ್ರೀಮಂತಿಕೆ ಬೆಳೆಯಲು ಸಾಧ್ಯ.
-ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್,
ಸಂಸ್ಥಾಪಕಾಧ್ಯಕ್ಷರು, ಶ್ರೀ ಕೃಷ್ಣ ವಿಠuಲ ಪ್ರತಿಷ್ಠಾನ ಮುಂಬಯಿ
ಕಳೆದ 45 ವರ್ಷಗಳಿಂದ ಮುಂಬಯಿ ಮಣ್ಣು ನನ್ನಂಥವರನ್ನು ಸಾಹಿತಿಯನ್ನಾಗಿಸಿದಂತೆ ಹೇಮಾರನ್ನೂ ಈ ಮಣ್ಣು ಲೇಖಕಿಯನ್ನಾಗಿಸಿ ಬೆಳೆಸಿದೆ. ನಾವೂ ಎಲ್ಲೆಲ್ಲಿ ನೋಡುತ್ತೇವೆಯೋ ಆ ದೃಷ್ಟಿಕೋನದಲ್ಲಿ ಅಲ್ಲಲ್ಲಿ ಕಾವ್ಯ ಹುಟ್ಟುತ್ತದೆ.
-ವಿದ್ಯಾಧರ ಮುತಾಲಿಕ ದೇಸಾಯಿ,
ಅಧ್ಯಕ್ಷರು, ವಿದ್ಯಾಧರ ಕನ್ನಡ ಪ್ರತಿಷ್ಠಾನ
ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.