ಹೆರಿಟೇಜ್ ಗ್ಯಾಲರಿ ಸಾರ್ವಜನಿಕ ವೀಕ್ಷಣೆಗೆ ತೆರೆದ ಪ. ರೈಲ್ವೇ
Team Udayavani, Jul 26, 2019, 10:16 AM IST
ಮುಂಬಯಿ, ಜು. 25: ಪಶ್ಚಿಮ ರೈಲ್ವೇಯು ಇಲ್ಲಿನ ಮಹಾಲಕ್ಷ್ಮಿಯಲ್ಲಿರುವ ಭಾರತೀಯ ರೈಲ್ವೇಯ ಮೊದಲ ಪ್ರಿಂಟಿಂಗ್ ಪ್ರಸ್ (ಮುದ್ರಣಾಲಯ) ಹೆರಿಟೇಜ್ ಗ್ಯಾಲರಿಯನ್ನು ಸಾರ್ವ ಜನಿಕರಿಗೆ ತೆರೆದಿದೆ.
ಈ ವಿಶಿಷ್ಟ ಪಾರಂಪರಿಕ ಗ್ಯಾಲರಿಯನ್ನು ರೈಲ್ವೇ ಮಂಡಳಿಯ ಸದಸ್ಯ (ಮಟೀರಿಯಲ್ಸ್ ಮ್ಯಾನೇಜ್ಮೆಂಟ್) ವಿ.ಪಿ. ಪಾಠಕ್ ಅವರು ಇತ್ತೀಚೆಗೆ ಮುಂಬಯಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಉದ್ಘಾಟಿಸಿದರು ಎಂದು ಪಶ್ಚಿಮ ರೈಲ್ವೇಯು ಮುಖ್ಯ ಜನಸಂಪರ್ಕಾಧಿಕಾರಿ ರವೀಂದರ್ ಭಾಕರ್ ಹೇಳಿದ್ದಾರೆ.
ಇದರೊಂದಿಗೆ ಪಶ್ಚಿಮ ರೈಲ್ವೇಯ ಮಹಾಲಕ್ಷ್ಮಿ ಜನರಲ್ ಸ್ಟೋರ್ಸ್ ಡಿಪೋ (ಜಿಎಸ್‌ಡಿ) 1948ರಿಂದ ಪಶ್ಚಿಮ ರೈಲ್ವೇ ಪ್ರಿಂಟಿಂಗ್ ಪ್ರಸ್‌ನಲ್ಲಿ ಬಳಸಿದ ಮುದ್ರಣ ಮತ್ತು ಅದಕ್ಕೆ ಸಂಬಂಧಿತ ಯಂತ್ರಗಳ ಹೆರಿಟೇಜ್ ಗ್ಯಾಲರಿಯನ್ನು ಪ್ರದರ್ಶಿಸಿದ ಭಾರತೀಯ ರೈಲ್ವೇಯ ಮೊದಲನೇ ವಿಭಾಗವಾಗಿ ಹೊರಹೊಮ್ಮಿದೆ ಎಂದು ಭಾಕರ್ ಹೇಳಿದ್ದಾರೆ. ಈ ಮುದ್ರಣ ಯಂತ್ರಗಳು ಈಗಲೂ ಕೆಲಸ ಮಾಡುವ ಸ್ಥಿತಿಯಲ್ಲಿವೆ ಎಂದವರು ತಿಳಿಸಿದ್ದಾರೆ.
12,171 ಚದರ ಮೀಟರ್ ಪ್ರದೇಶದಲ್ಲಿ ಹರಡಿರುವ ಮಹಾಲಕ್ಷ್ಮಿ ಜಿಎಸ್‌ಡಿ ಬ್ರಿಟಿಷರ ಕಾಲದ ಏಕ-ಅಂತಸ್ತಿನ ಕಟ್ಟಡವಾಗಿದೆ. ಮರದಿಂದ ಮಾಡಿದ ಒಳಾಂಗಣವನ್ನು ಹೊಂದಿರುವ ಈ ಕಪ್ಪು ಕಲ್ಲಿನ ಕಟ್ಟಡವು ತನ್ನದೇ ಆದ ಸೌಂದರ್ಯ ಮತ್ತು ಅನನ್ಯತೆಯನ್ನು ಹೊಂದಿದೆ ಎಂದು ಪಶ್ಚಿಮ ರೈಲ್ವೇ ಹೇಳಿಕೆ ನೀಡಿದೆ. ಹೇಳಿಕೆಯ ಪ್ರಕಾರ, 1912ರಲ್ಲಿ ಬಾಂಬೆಯ ಗ್ರೇಟರ್ ಇಂಡಿಯನ್ ಪೆನಿನ್ಸುಲಾ ರೈಲ್ವೇ (ಜಿಐಪಿ) ಅಡಿಯಲ್ಲಿ ಈ ಮುದ್ರಣಾಲಯವು ಅಸ್ತಿತ್ವಕ್ಕೆ ಬಂದಿತ್ತು. ರೈಲ್ವೇಯು ತನ್ನ ಕಾರ್ಯಾಚರಣೆಗೆ ಲೇಖನ ಸಾಮಗ್ರಿಗಳು ಮತ್ತು ಟಿಕೆಟ್‌ಗಳಿಗಾಗಿ ಇದನ್ನು ರಚಿಸಿತ್ತು. 1953ರಲ್ಲಿ ಈ ಮುದ್ರಣಾಲಯವನ್ನು ಪಶ್ಚಿಮ ರೈಲ್ವೇಯ ಜಿಎಸ್‌ಡಿ ಮಹಾಲಕ್ಷ್ಮಿಗೆ ವರ್ಗಾಯಿಸಲಾಯಿತು. 1969ರಲ್ಲಿ ಮಹಾಲಕ್ಷ್ಮಿಯ ಶಕ್ತಿ ಮಿಲ್ಸ್ ಲೇನ್‌ನಲ್ಲಿ ಮುದ್ರಣಾಲಯವನ್ನು ಸ್ಥಾಪಿಸಲು 90,000 ಚದರ ಅಡಿಯ ಬಹುಮಹಡಿ ಕಟ್ಟಡವನ್ನು ವಿಶೇಷವಾಗಿ ನಿರ್ಮಿಸಲಾಯಿತು. ಅನಂತರ ಹೈಸ್ಪೀಡ್ ಲೆಟರ್‌ಪ್ರಸ್ ರೋಟರಿ ಯಂತ್ರಗಳನ್ನು ಆಮದು ಮಾಡಿಕೊಳ್ಳಲಾಯಿತು. ಈ ಯಂತ್ರಗಳನ್ನು ಪಶ್ಚಿಮ ರೈಲ್ವೇಯ ಭದ್ರತೆ ಮತ್ತು ಸುರಕ್ಷತೆಯ ವೈಶಿಷ್ಟ್ಯಗಳಿಗೆ ಅನುಗುಣವಾಗಿ ತಯಾರಿಸಲಾಗಿತ್ತು ಎಂದು ಹೇಳಿಕೆ ತಿಳಿಸಿದೆ. ಭಾರತದ ಎಲ್ಲಾ ವಲಯ ರೈಲ್ವೇಗಳ ಪಾರ್ಸೆಲ್ ವೇ ಬಿಲ್ಗಳು ಮತ್ತು ರೈಲ್ವೇ ರಶೀದಿಗಳು, ಪಶ್ಚಿಮ ರೈಲ್ವೇಗೆ ಅಗತ್ಯವಾದ ಲೇಖನ ಸಾಮಗ್ರಿಗಳು ಮತ್ತು ಹಣದ ಮೌಲ್ಯದ ವಸ್ತುಗಳನ್ನು ಈ ಮುದ್ರಣಾಲಯದಲ್ಲಿ ಮುದ್ರಿಸಲಾಗುತ್ತಿತ್ತು. ಹೊಸ ಕಟ್ಟಡದಲ್ಲಿ 48 ವರ್ಷ ಮತ್ತು 10 ತಿಂಗಳ ಸೇವೆ ಮತ್ತು ಬ್ರಿಟಿಷ್ ಯುಗದಿಂದ ಒಟ್ಟು 106 ವರ್ಷಗಳ ಸೇವೆಯ ಅನಂತರ ಈ ಮುದ್ರಣಾಲಯವನ್ನು 2018ರ ಜುಲೈ 31ರಂದು ಮುಚ್ಚಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.