ಹಿಂದೂ ಜ್ಯೂನಿಯರ್‌ ಕಾಲೇಜು ಶಿರ್ವ : ಮುಂಬಯಿ ಸ್ನೇಹ ಸಂಗಮ ಸಂಭ್ರಮ


Team Udayavani, Jul 18, 2018, 4:59 PM IST

1707mum01.jpg

ಮುಂಬಯಿ: ಉಡುಪಿ ಜಿಲ್ಲೆಯ ಶಿರ್ವದ ಮಣ್ಣಿನಲ್ಲಿ ವಿದ್ಯಾಜ್ಯೋತಿಯಾಗಿ ಬೆಳಗುತ್ತಿರುವ ಹಿಂದೂ ಜ್ಯೂನಿಯರ್‌ ಕಾಲೇಜು ಶಿರ್ವ ಮತ್ತು ಮೂಲ್ಕಿ ಸುಂದರ್‌ರಾಮ್‌ ಶೆಟ್ಟಿ ಕಾಲೇಜು ಈ ಎರಡೂ ಕಾಲೇಜುಗಳು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು, ಈ ವಿದ್ಯಾ ದೇಗುಲಗಳಲ್ಲಿ ಕಲಿತ ಅಸಂಖ್ಯಾತ ವಿದ್ಯಾರ್ಥಿಗಳಿಂದು ಬದುಕಿನಲ್ಲಿ ಯಶಸ್ವಿಯಾಗಿ  ಉನ್ನತ ಮಟ್ಟಕ್ಕೇರಿರುವುದು ಸಂತಸದಾಯಕ ವಿಚಾರವಾಗಿದೆ ಎಂದು ಹಿಂದೂ ಜ್ಯೂನಿಯರ್‌ ಕಾಲೇಜು ಶಿರ್ವ ಹಳೆವಿದ್ಯಾರ್ಥಿ ಸಂಘ ಮುಂಬಯಿಯ ಗೌರವಾಧ್ಯಕ್ಷ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ನುಡಿದರು.

ಜು. 14ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀ ಮುಕ್ತಾನಂದ ಸಭಾಗೃಹದಲ್ಲಿ ಜರಗಿದ ಹಿಂದೂ ಜ್ಯೂನಿಯರ್‌ ಕಾಲೇಜು ಶಿರ್ವ, ಹಳೆವಿದ್ಯಾರ್ಥಿ ಸಂಘ ಮುಂಬಯಿ ಇದರ ಸ್ನೇಹ ಸಂಗಮ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಶಿರ್ವದ ಎರಡೂ ಕಾಲೇಜುಗಳು ಜ್ಞಾನದ ಕಣ್ಣುಗಳಾಗಿದ್ದು, ಇವುಗಳ ಅಭಿವೃದ್ಧಿಗಾಗಿ ಎರಡೂ ಶಿಕ್ಷಣ ಸಂಸ್ಥೆಗಳ ಹಳೆವಿದ್ಯಾರ್ಥಿಗಳು ಜಾತಿ, ಮತ, ಭೇದವಿಲ್ಲದೆ ಒಂದಾಗಿ ಸಹಕರಿಸುತ್ತಿರುವುದು  ವಿದ್ಯಾಸಂಸ್ಥೆಯ ಬಗ್ಗೆ ಇರುವ ಪ್ರೀತಿ-ಅಭಿಮಾನವನ್ನು ಸೂಚಿಸುತ್ತದೆ. ಯಾವುದೇ ಹಳೆವಿದ್ಯಾರ್ಥಿ ಸಂಘಗಳು ನಿರ್ವಹಿ ಸದಂತಹ ಉತ್ತಮ ಮಾದರಿ ಕಾರ್ಯಗಳು ಇಲ್ಲಿ ನಡೆಯುತ್ತಿವೆ. ಹಿಂದೂ ಜ್ಯೂನಿಯರ್‌ ಕಾಲೇಜಿನ ಅಭಿವೃದ್ಧಿಯಲ್ಲಿ ಆರಂಭದ ಪ್ರೇರಣಾ ಶಕ್ತಿಯಾಗಿ ಮಾಜಿ ಪ್ರಾಂಶುಪಾಲ ರಾಜ್‌ಗೊàಪಾಲ್‌, ಕಿಶೋರ್‌ ಕುಮಾರ್‌ ಕುತ್ಯಾರ್‌, ಖಾಂದೇಶ್‌ ಭಾಸ್ಕರ್‌ ಶೆಟ್ಟಿ ಅವರು ದಾರಿತೋರಿದ್ದಾರೆ. ಮೂಲ್ಕಿ ಸುಂದರ್‌ರಾಮ್‌ ಶೆಟ್ಟಿ  ಕಾಲೇಜು ಇಂದು ಸುಂದರ್‌ರಾಮ್‌ ಶೆಟ್ಟಿ ಅವರ ಸಾರಥ್ಯದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದೆ. ಹಳೆವಿದ್ಯಾರ್ಥಿ ಸಂಘ ಆಯೋಜಿಸುತ್ತಿರುವ ಇಂತಹ ಕಾರ್ಯಕ್ರಮಗಳಿಂದ ಹಳೆ ವಿದ್ಯಾರ್ಥಿಗಳ ಸಂಬಂಧ ಹಾಗೂ ಸ್ನೇಹ ವರ್ಧನೆಗೆ ಸಹಕಾರಿಯಾಗುವುದರ ಜೊತೆಗೆ ವಿದ್ಯಾಸಂಸ್ಥೆ ಇನ್ನಷ್ಟು ಬೆಳೆಯಲು ಸಾಧ್ಯವಾಗುತ್ತದೆ ಎಂದು ನುಡಿದು, ಹಳೆವಿದ್ಯಾರ್ಥಿ ಸಾಧಕರ ಸಮ್ಮಾನ ಪ್ರತೀ ವರ್ಷ ನಡೆಯಲಿ. ಇತರರಿಗೂ ಅದು ಪ್ರೇರಣೆಯಾಗಲಿ ಎಂದು ನುಡಿದು ಸಮ್ಮಾನಿತರನ್ನು ಅಭಿನಂದಿಸಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಹಳೆವಿದ್ಯಾರ್ಥಿ ಸಾಧಕರುಗಳಾದ ಕರ್ನಾಟಕ ರಾಜ್ಯ ಸರಕಾರದ ಎಂಎಲ್‌ಸಿ ಐವನ್‌ ಡಿಸೋಜಾ, ಬಂಟ್ಸ್‌ ನ್ಯಾಯಮಂಡಳಿಯ ಅಧ್ಯಕ್ಷ ರವೀಂದ್ರ ಎಂ. ಅರಸ, ಕನ್ಸಲ್ಟೆಂಟ್‌ ಪೆಥೋಲೊಜಿಸ್ಟ್‌ ಡಾ| ಶಂಕರ್‌ ಮಲ್ಯ ಎಂ. ಡಿ.,  ಕೈಗಾರಿಕೋದ್ಯಮಿ ಕರುಣಾಕರ ಶೆಟ್ಟಿ ಸೂಡ, ಉದ್ಯಮಿ ಶ್ರೀಧರ ಆಚಾರ್ಯ ದಂಪತಿಯನ್ನು  ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಗಣ್ಯರು ಸಮ್ಮಾನಿಸಿ ಗೌರವಿಸಿದರು.
ಹಳೆವಿದ್ಯಾರ್ಥಿ ಸಂಘದ ಸಲಹಾ ಸಮಿತಿಯ ಸದಸ್ಯೆಯರುಗಳಾದ ಶಬುನಾ ಎಸ್‌. ಶೆಟ್ಟಿ, ಹರಿಣಿ ಎಂ. ಶೆಟ್ಟಿ, ಅನಿತಾ ಶೆಟ್ಟಿ, ಉಪಾಧ್ಯಕ್ಷೆ ಶಶಿಪ್ರಭಾ ಶೆಟ್ಟಿ ಹಾಗೂ ಶೈಲಾ ಅಮರ್‌ನಾಥ್‌ ಶೆಟ್ಟಿ ಇವರು ಸಮ್ಮಾನ ಪತ್ರ ವಾಚಿಸಿದರು. ಇದೇ ವೇಳೆ ಸಾಧಕ ಖಾಂದೇಶ್‌ ಭಾಸ್ಕರ ಶೆಟ್ಟಿ ಅವರ ಮುಖಚಿತ್ರದೊಂದಿಗೆ ಪ್ರಕಟ ಗೊಂಡ ಯಶಸ್ವಿ ಪತ್ರಿಕೆಯನ್ನು ಮಾಜಿ ಪ್ರಾಂಶು ಪಾಲ ರಾಜ್‌ಗೊàಪಾಲ್‌ ಕೆ. ಅವರು ಬಿಡುಗಡೆ ಗೊಳಿಸಿ, ಪರಿಶ್ರಮದ ವ್ಯಕ್ತಿತ್ವದಿಂದ ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವ ಖಾಂದೇಶ್‌ ಭಾಸ್ಕರ್‌ ಶೆಟ್ಟಿ ಇವರನ್ನು ಅಭಿನಂದಿಸಿ ಶುಭಹಾರೈಸಿದರು.

ಆರಂಭದಲ್ಲಿ ಆಶಾಲತಾ ಎಸ್‌. ಶೆಟ್ಟಿ ಪ್ರಾರ್ಥನೆ ಗೈದರು. ಹಳೆವಿದ್ಯಾರ್ಥಿ ಸಂಘ ಮುಂಬಯಿ ಅಧ್ಯಕ್ಷ ಹೇಮನಾಥ್‌ ಶೆಟ್ಟಿ ಸೂಡ ಹಾಗೂ ಅತಿಥಿ-ಗಣ್ಯರು ಜ್ಯೋತಿ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಅಧ್ಯಕ್ಷ ಹೇಮನಾಥ್‌ ಶೆಟ್ಟಿ ಸೂಡಾ ಅತಿಥಿ-ಗಣ್ಯರುಗಳನ್ನು ಸ್ವಾಗತಿಸಿದರು. ಸಂಚಾಲಕ ಕಿಶೋರ್‌ ಕುಮಾರ್‌ ಕುತ್ಯಾರ್‌ ಸಂಸ್ಥೆಯ ಯೋಜನೆ-ಯೋಚನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಖಾಂದೇಶ್‌ ಭಾಸ್ಕರ್‌ ಶೆಟ್ಟಿ ಅವರು ಹಳೆ ವಿದ್ಯಾರ್ಥಿಗಳ ಸಂಘ ಸ್ಥಾಪನೆಗೊಂಡು ಬೆಳೆದ ವಿದ್ಯಮಾನಗಳ ಬಗ್ಗೆ ವಿವರಿಸಿ, 2021ನೇ ಸಾಲಿನಲ್ಲಿ 75 ವರ್ಷಗಳನ್ನು ಪೂರೈಸಲಿರುವ ವಿದ್ಯಾಸಂಸ್ಥೆಯ ಅಮೃತ ಮಹೋತ್ಸವಕ್ಕೆ ಎಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ ಎಂದರು.

ಅತಿಥಿ-ಗಣ್ಯರನ್ನು ಸತ್ಕರಿಸಲಾಯಿತು. ದೇಶ- ವಿದೇಶಗಳಿಂದ ಆಗಮಿಸಿದ ಹಳೆ ವಿದ್ಯಾರ್ಥಿಗಳನ್ನು  ಗೌರವಿಸಲಾಯಿತು. ಹಳೆ ವಿದ್ಯಾರ್ಥಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿ ಸಲಾಯಿತು. ರಂಗ  ಕಲಾವಿದ ಹಾಗೂ ಕಿರುತೆರೆ ಕಲಾವಿದ ಬಾಬಾ ಪ್ರಸಾದ್‌ ಅರಸ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸ್ವರ ಸಿಂಚನ ಹಾಗೂ ಮುಂಬಯಿಯ ಪ್ರಬುದ್ಧ ಕಲಾವಿದರುಗಳಿಂದ ಕೃಷ್ಣರಾಜ್‌ ಶೆಟ್ಟಿ ಮುಂಡ್ಕೂರು ಮರಾಠಿಯಿಂದ ಅನುವಾದಿಸಿ, ನಿರ್ದೇಶಿಸಿರುವ ಈ ರಾತ್ರೆಗ್‌ ಪಗೆಲ್‌Y ಯಾನ್‌ ತುಳುನಾಟಕ ಪ್ರದರ್ಶನಗೊಂಡಿತು. ಸಂತೋಷ್‌ ಕ್ಯಾಟರರ್ ವತಿಯಿಂದ ಭೋಜನದ ವ್ಯವಸ್ಥೆ ಆಯೋಜಿಸಲಾಗಿತ್ತು. 

ವಿದ್ಯಾರ್ಥಿಗಳ ಕೊರತೆಯಿಂದಾಗಿ ಎಲ್ಲೆಡೆ ಕನ್ನಡ ಶಾಲೆಗಳಿಗೆ ಬೀಗ ಜಡಿಯುವ ಪರಿಸ್ಥಿತಿ ಇರುವ ಇಂದಿನ ದಿನಗಳಲ್ಲಿ ಹಿಂದೂ ಜ್ಯೂನಿಯರ್‌ ಕಾಲೇಜು 3 ವಿಭಾಗಗಳನ್ನು ನಡೆಸುತ್ತಿರುವುದು ಈ ಕಾಲೇಜು ಸ್ಥಳದ ಮಣ್ಣಿನ ಅಂತರ್‌ಶಕ್ತಿ ಗುಣದ ಕಾರಣದಿಂದಾಗಿದೆ. ಮುಂಬಯಿಗರ ಹೂ ಮನಸ್ಸಿನಿಂದಾಗಿ ಊರು ಅಭಿವೃದ್ಧಿ ಹೊಂದುತ್ತಿದೆ. ದೈವಸ್ಥಾನ, ಶಿಕ್ಷಣ ಕೇಂದ್ರ, ಧಾರ್ಮಿಕ ಕೇಂದ್ರಗಳು ಅಭಿವೃದ್ಧಿಯಾಗಲು ಮುಂಬಯಿಗರು ಕಾರಣ 
– ಪ್ರಸಾದ್‌ ಶೆಟ್ಟಿ ಕುತ್ಯಾರ್‌ 
(ಅಧ್ಯಕ್ಷರು : ಹಿಂದೂ ಜ್ಯೂನಿಯರ್‌ ಕಾಲೇಜು ಹಳೆವಿದ್ಯಾರ್ಥಿ ಸಂಘ ಶಿರ್ವ).

ಕಲಿತ ಶಾಲೆ, ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು. ಹಿಂದೂ ಜ್ಯೂನಿಯರ್‌ ಕಾಲೇಜಿನ ಯಾವುದೇ ಯೋಜನೆಗೆ ತಾನು ಸಹಕಾರ ನೀಡಲು ಸಿದ್ಧನಿದ್ದೇನೆ. ಶೈಕ್ಷಣಿಕ ಸೇವೆ ಎಲ್ಲರೂ  ಬದ್ಧರಾಗಿರಬೇಕು 
– ಸಿಎ ಕರುಣಾಕರ ಶೆಟ್ಟಿ  (ಮಾಜಿ ಅಧ್ಯಕ್ಷರು : ಥಾಣೆ ಬಂಟ್ಸ್‌ ಅಸೋಸಿಯೇಶನ್‌).

ಹಳೆ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ಕರೆತರುವ ಪ್ರಯತ್ನದಲ್ಲಿ ಹಿಂದೂ ಜ್ಯೂನಿಯರ್‌ ಕಾಲೇಜು ಹಳೆವಿದ್ಯಾರ್ಥಿ ಸಂಘ ಮುಂಬಯಿ ಯಶಸ್ವಿಯಾಗಿರುವುದು ಅಭಿನಂದನೀಯ. ವಿವಿಧ ಸಾಧಕರಾಗಿ ಹೊರಹೊಮ್ಮಿರುವ ಹಳೆ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಜೊತೆಗೆ ಅವರಿಂದ ಜೀವನಾನುಭವವನ್ನು ಪಡೆಯುವುದು ಅಷ್ಟೇ ಅತ್ಯಾವಶ್ಯಕ. ಜ್ಞಾನ ನೀಡಿದ ಜ್ಞಾನ ಸಂಪನ್ನ ಗುರುಗಳ ಅನುಭವಗಳನ್ನು  ಹಂಚಿಕೊಳ್ಳಬೇಕು. ಕಲಿತ ಶಾಲೆಯನ್ನು ಮರೆಯಬಾರದು. ಕಲಿಯಲು ಆಸಕ್ತರಿರುವ ಮಕ್ಕಳ ಶಿಕ್ಷಣಕ್ಕೆ ಸಹಾಯ ನೀಡುವ ಸಹೃದಯತೆ ನಮ್ಮಲ್ಲಿರಲಿ. ದತ್ತು ಸ್ವೀಕಾರದಂತಹ ಕಾರ್ಯಯೋಜನೆಗಳು ಹೆಚ್ಚಬೇಕು  
-ಉದಯ ಸುಂದರ್‌ ಶೆಟ್ಟಿ (ಅಧ್ಯಕ್ಷರು : ಮುಲ್ಕಿ ಸುಂದರ್‌ರಾಮ್‌ ಶೆಟ್ಟಿ ಕಾಲೇಜು ಹಳೆವಿದ್ಯಾರ್ಥಿ ಸಂಘ ಮುಂಬಯಿ).

ಕಲಿತ ಶಾಲೆ, ಹುಟ್ಟಿದ ಊರನ್ನು ಖಂಡಿತ ಮರೆಯಬಾರದು. ಅದರಲ್ಲೂ ನಮ್ಮ ಬದುಕನ್ನು ಕಟ್ಟಿದ ಗುರುವರ್ಯರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಹಿಂದೂ ಜ್ಯೂನಿಯರ್‌ ಕಾಲೇಜಿನಲ್ಲಿ ಶಿಕ್ಷಣ ಪಡೆದ ಹಳೆ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಿಂದ ಬಂದು ಇಲ್ಲಿ ಸೇರಿರುವುದು ನಮ್ಮ ಹೆಗ್ಗಳಿಕೆಯಾಗಿದೆ 
– ಗುರ್ಮೆ ಸುರೇಶ್‌ ಶೆಟ್ಟಿ 
(ಕಾರ್ಯಾಧ್ಯಕ್ಷರು : ವಿದ್ಯಾವರ್ಧಕ 
ಸೆಂಟ್ರಲ್‌ ಸ್ಕೂಲ್‌ ಶಿರ್ವ).

ಚಿತ್ರ-ವರದಿ: ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು

ಟಾಪ್ ನ್ಯೂಸ್

10-sc-1

Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್‌

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

ಟ್ರಕ್ ಡಿಕ್ಕಿ ಹೊಡೆದು ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ… ಓರ್ವ ಸಾ*ವು

Tragedy: ಬೆಳ್ಳಂಬೆಳಗ್ಗೆ ಭೀಕರ ಅಪಘಾತ… ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ

7-icc

ICC Champions Trophy: ಹೈಬ್ರಿಡ್‌ ಮಾದರಿಯೇ ಅಂತಿಮ

6-mandya

Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ  87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10-sc-1

Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್‌

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ

10-up-yodhas

Pro Kabaddi: ದ್ವಿತೀಯ ಸ್ಥಾನಕ್ಕೆ ಯೋಧಾಸ್‌

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

9-ind-pak

Kho Kho ವಿಶ್ವಕಪ್‌: ಭಾರತ- ಪಾಕಿಸ್ಥಾನ ಉದ್ಘಾಟನ ಪಂದ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.