ಹಿರಿಯಡಕ ವೈಭವದ ಬ್ರಹ್ಮಕಲಶೋತ್ಸವ: ಸಾಕ್ಷಿಯಾದ ಮುಂಬಯಿ ಪುಣೆ ಭಕ್ತರು


Team Udayavani, Apr 28, 2018, 9:43 AM IST

2504mum01.jpg

ಪುಣೆ: ಸುಮಾರು 800 ವರ್ಷಗಳ ಇತಿಹಾಸವಿರುವ ಪುರಾಣ ಪ್ರಸಿದ್ಧ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಸುಮಾರು 26 ಕೋ. ರೂ. ಗಳ ವೆಚ್ಚದಲ್ಲಿ ನಿರ್ಮಾಣಗೊಂಡು ಬಳಿಕ ನಡೆದ ಬ್ರಹ್ಮಕಲಶೋತ್ಸವ ವೈಭವದಿಂದ ಸಮಾಪನಗೊಂಡಿತು. 

ಶ್ರೀ ಕ್ಷೇತ್ರದಲ್ಲಿ ಎ. 16 ರಿಂದ ಎ. 25 ರವರೆಗೆ ನವೀಕೃತ ದೇವಾ, ದೇಗುಲ ಸಮರ್ಪಣೆ, ಪುನಃ ಪ್ರತಿಷ್ಠಾದಿ ಕಾರ್ಯಕ್ರಮಗಳು ಹಾಗೂ ಬ್ರಹ್ಮಕಲಶೋತ್ಸವವು ಲಕ್ಷಾಂತರ ಭಕ್ತಾದಿಗಳ ಉಪಸ್ಥಿತಿಯೊಂದಿಗೆ ಅರ್ಥಪೂರ್ಣವಾಗಿ ನಡೆಯಿತು.

ಮುಂಬಯಿ, ಪುಣೆಯ ಭಕ್ತರು  ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದರು. 

ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರೂ ಯಾವುದೇ ಅವ್ಯವಸ್ಥೆ ಆಗದಂತೆ ದೇವರ ದರ್ಶನಕ್ಕೆ, ಪಾರ್ಕಿಂಗ್‌ ವ್ಯವಸ್ಥೆ ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು.

ಹಿರಿಯಡಕದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಿನನಿತ್ಯ ರಾಷ್ಟ್ರ ಹಾಗೂ ಅಂತಾ ರಾಷ್ಟ್ರೀಯ ಮಟ್ಟದ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೂರೆ ಗೊಂಡಿತು. ಪ್ರವೀಣ್‌ ಗೋಡಿRಂಡಿ ಮತ್ತು ಸನಾತನ ನಾಟ್ಯಾಲಯ ಮಂಗಳೂರು, ನೃತ್ಯನಿಕೇತನ ಕೊಡೆವೂರು, ವಸಂತ ನಾಟ್ಯಾಲಯ ಕುಂದಾಪುರ ಇವರುಗಳಿಂದ ವಿವಿಧ ಕಾರ್ಯಕ್ರಮಗಳು ಪ್ರದರ್ಶನ ಗೊಂಡಿತು.

ಉತ್ಸವ ಸಂದರ್ಭ ಸುಮಾರು  ಲಕ್ಷಕ್ಕೂ ಅಧಿಕ  ಮಂದಿಗೆ ಅನ್ನದಾನ ಮತ್ತು ಉಪಾಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು. ನಿತ್ಯ ಮಧ್ಯಾಹ್ನ 20 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ಕೊನೆಯ ದಿನ 60 ಸಾವಿರಕ್ಕೂ ಹೆಚ್ಚು ಮಂದಿ ಅನ್ನದಾನ ಸ್ವೀಕರಿಸಿದ್ದರು. ಸುಮಾರು ಹತ್ತು ಸಾವಿರ ಜನರು ಏಕಕಾಲದಲ್ಲಿ ಊಟಕ್ಕೆ ವ್ಯವಸ್ಥೆಯನ್ನು ಮಾಡಲಾಗಿತ್ತು. 100 ಕ್ಕೂ ಹೆಚ್ಚು ಬಾಣಸಿಗರು ಶ್ರಮಿಸಿದ್ದರು.

ಶಿಲ್ಪ ಕಲೆಯ ಸುಂದರ ದೇಗುಲ 
ಇಡೀ ದೇಗುಲವನ್ನು ಕಲ್ಲು ಮತ್ತು ಮರಗಳಿಂದ ಮರು ರೂಪಿಸಲಾಗಿದ್ದು ಅತ್ಯಾಕರ್ಷಕ ಕೆತ್ತನೆಗಳಿಂದ ಸುಂದರ ಗೊಳಿಸಲಾಗಿದೆ. ಬ್ರಹ್ಮಲಿಂಗೇಶ್ವರ ಗುಡಿ, ವೀರಭದ್ರ ಗರ್ಭಗುಡಿ, ಮುಖ ಮಂಟಪ, ರಾಜಗೋಪುರಗಳು, ಹೊಯ್ಸಳ, ದ್ರಾವಿಡ ಶೈಲಿಗಳಲ್ಲಿ ನಿರ್ಮಿಸಲಾಗಿದೆ. ದೀಪದಳಿಯಲ್ಲಿ ಶಿವನ ನಾಟ್ಯಭಂಗಿಯಿದ್ದು ದೀಪ ದಳಿಯ ಮೇಲಿನ ಹಂತದಲ್ಲಿ ಹಿರಿಯಡಕ ಕ್ಷೇತ್ರದ ಇತಿಹಾಸವನ್ನು, ಕಥೆಯನ್ನು, ಉತ್ಸವ ಮತ್ತು ಸಿರಿಜಾತ್ರೆಯ ದೃಶ್ಯಗಳನ್ನು ಮರದ ಹಲಗೆಗಳಲ್ಲಿ ಉಬ್ಬುಶಿಲ್ಪವಾಗಿ ಕೆತ್ತಿಸಲಾಗಿದೆ.  ಗರ್ಭಗುಡಿಯ ದೀಪ ದಳಿಗೆ 460 ಕೆಜಿ ಬೆಳ್ಳಿ ಹೊದಿಕೆಯನ್ನು ಹಾಕಲಾಗಿದೆ. ಎÇÉಾ   ಕೆಲಸಗಳಿಗೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಶಿಲ್ಪಿಗಳೂ ಕೆಲಸ ಮಾಡಿದ್ದು ಶ್ಲಾಘನೀಯವಾಗಿದೆ.

83 ಅಡಿ ಉದ್ದದ ಧ್ವಜ ಸ್ತಂಭ
ಹಿರಿಯಡಕ  ಶ್ರೀ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಸಂದರ್ಭದಲ್ಲಿ ಕರಾವಳಿಯÇÉೇ ಅತೀ ಎತ್ತರದ 83 ಅಡಿ ಉದ್ದದ  ಧ್ವಜ ಸ್ತಂಭವನ್ನು ಪ್ರತಿಷ್ಠಾಪಿಸಿ ಕಲಶಾಭಿಷೇಕ ನಡೆಸಲಾಯಿತು. ದೇವಳದ ತಂತ್ರಿವರ್ಯರಾದ ಲಕ್ಷ್ಮೀನಾರಾಯಣ ತಂತ್ರಿ, ಗುರುರಾಜ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಹಾಗೂ ಮಹಾರುದ್ರಯಾಗವನ್ನು ನಡೆ ಸಲಾಯಿತು. ಈ ಮಹಾಉತ್ಸವದಲ್ಲಿ ಮುಂಬಯಿ ಪುಣೆಯ ನೂರಾರು ಸಂಖ್ಯೆಯ ದಾನಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.
ಚರಿಶ್ಮಾ ಬಿಲ್ಡರ್ಸ್‌ ಮುಂಬಯಿಯ ಸುಧೀರ್‌ ಶೆಟ್ಟಿ, ಕೃಷ್ಣಾ ಶೆಟ್ಟಿ ಮುಂಬಯಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಅಂಜಾರು ಬೀಡು ಸುಭಾಶ್ಚಂದ್ರ ಹೆಗ್ಡೆ, ಪಡªಮಬೀಡು ಹರ್ಷವರ್ಧನ ಹೆಗ್ಡೆ, ಕಾರ್ಯಾಧ್ಯಕ್ಷ ಗೋವರ್ಧನ ಹೆಗ್ಡೆ, ಕಾರ್ಯದರ್ಶಿ ಅಮರನಾಥ ಶೆಟ್ಟಿ, ಕೋಶಾಧಿಕಾರಿ ಕೃಷ್ಣಮೂರ್ತಿ, ಜೀರ್ಣೋದ್ಧಾರ ಮುಂಬಯಿ ಸಮಿತಿಯ ಅಧ್ಯಕ್ಷರಾದ ಎನ್‌.  ಬಿ. ಶೆಟ್ಟಿ ಹಿರಿಯಡ್ಕ, ಪುಣೆ ಸಮಿತಿಯ ಅಧ್ಯಕ್ಷ ಅಂಜಾರುಬೀಡು ಹರಿಪ್ರಸಾದ್‌ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ, ಮುಂಬಯಿ ಬಂಟರ ಸಂಘದ ವಿಶ್ವಸ್ತರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಅಂಜಾರುಬೀಡು ಶಿವರಾಜ್‌ ಹೆಗ್ಡೆ ಪುಣೆ, ಪ್ರಸಾದ್‌ ಶೆಟ್ಟಿ ಪುಣೆ, ಪುಣೆಯ ಡಾ| ಬಾಲಾಜಿತ್‌ ಶೆಟ್ಟಿ, ಮುಂಬಯಿ ಸಮಿತಿಯ  ಹಿರಿಯಡ್ಕ ಮೋಹನ್‌ ದಾಸ್‌, ಮುಂಬಯಿಯ ಅರುಣಾಚಲ ಶೆಟ್ಟಿ, ಸುಧೀರ್‌ ಹೆಗ್ಡೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. 

ಚಿತ್ರ-ವರದಿ: ಕಿರಣ್‌ ಬಿ. ಕರ್ನೂರು
 

ಟಾಪ್ ನ್ಯೂಸ್

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

8

Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.