ಮುಂಬಯಿ ಕನ್ನಡಿಗರ ಇತಿಹಾಸ ರೋಚಕ: ಅಶೋಕ್‌ ಸುವರ್ಣ

ಕನ್ನಡ ವಿಭಾಗ ಮುಂಬಯಿ ವಿವಿಯಿಂದ ಸಾಹಿತ್ಯ ಸಂವಾದ

Team Udayavani, Aug 21, 2021, 1:47 PM IST

ಮುಂಬಯಿ ಕನ್ನಡಿಗರ ಇತಿಹಾಸ ರೋಚಕ: ಅಶೋಕ್‌ ಸುವರ್ಣ

ಕಲಿನಾ: ಮುಂಬಯಿಯ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ನಮಗೆ ರೋಮಾಂಚನವಾಗುತ್ತದೆ. ಈ ಮಹಾನಗರದಲ್ಲಿ ಕನ್ನಡಿಗರ ಸಾಧನೆಯೂ ಉಲ್ಲೇಖನೀಯವಾಗಿದೆ. ಮುಂಬಯಿಯ ಅದ್ಭುತ -ನಿಗೂಢ ಅಂಶಗಳೇ ನನ್ನ ಬರವ ಣಿಗೆಗೆ ಪ್ರೇರಣೆ ಎಂಬುದಾಗಿ ಪತ್ರಕರ್ತ, ಸಾಹಿತಿ, ಮೊಗವೀರ ಮಾಸಿಕದ ಸಂಪಾದಕ ಅಶೋಕ್‌ ಸುವರ್ಣ ಅಭಿಪ್ರಾಯಪಟ್ಟರು.

ಇತ್ತೀಚೆಗೆ ಸಾಂತಾಕ್ರೂಜ್‌ ಪೂರ್ವದ ಕಲಿನಾ ಕ್ಯಾಂಪಸ್‌ ರಾನಡೆ ಭವನದಲ್ಲಿರುವ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾ ನಿಲಯ ಆಯೋಜಿಸಿದ್ದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಮುಂಬಯಿಯಲ್ಲಿ ಕನ್ನಡ-ಮರಾಠಿ, ಗುಜರಾತಿ ಭಾಷೆಗಳ ಪ್ರಭಾವ ದಟ್ಟವಾಗಿತ್ತು. ಬ್ರಿಟಿಷ್‌ ಕಾಲದಲ್ಲಿ ಮುಂಬಯಿಯನ್ನು ಕಟ್ಟಿ ಬೆಳೆಸುವಲ್ಲಿ ಕನ್ನಡಿಗರು ಅಪಾರ ಕೊಡುಗೆ ನೀಡಿದ್ದಾರೆ. ಬಿ.ಜಿ. ಖೇರ್‌, ರಾವ್‌ ಬಹದ್ದೂರ, ರಾಮಪಂಜಿ, ಜಿ.ಎನ್‌. ವೈದ್ಯನಾಥ, ಇಮಾರತಿ ಮೊದಲಾದವರ ಸಾಧನೆಗಳನ್ನು ನಾವು ಮರೆತು ಬಿಟ್ಟಿದ್ದೇವೆ.ಸ್ವಾತಂತ್ರ್ಯ ಪೂರ್ವದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಮುಂಬಯಿಯಲ್ಲಿ ಗಣ್ಯಸ್ಥಾ ನದಲ್ಲಿ ಸಾಧನೆಗೈದರು. ಮುಂಬಯಿಗೆ ಕರ್ನಾಟಕದಿಂದ ಬಂದ ಕನ್ನಡಿಗರಲ್ಲಿ ಮೊಗವೀರರೇ ಪ್ರಥಮಿಗರು. ಆ ಬಳಿಕ ಬಂದವರು ಈ ನೆಲದಲ್ಲಿ ಮಾಡಿದ ಅಪಾರ ಸಾಧನೆ ಸ್ಮರಣೀಯ. ಕನ್ನಡ ವಿಭಾಗ ಮುಂಬಯಿ ಕನ್ನಡಿಗರ ಸಾಧನೆಗಳನ್ನು ದಾಖಲು ಮಾಡುತ್ತಿರುವುದು ಸಂತೋಷದ ಸಂಗತಿ ಎಂದು ತಿಳಿಸಿ ಅಭಿಮಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:ಅಫ್ಘಾನ್ ನಲ್ಲಿ ತಾಲಿಬಾನ್ ಅಟ್ಟಹಾಸ: ಮತ್ತೆ ಸಾವಿನ ಭೀತಿಯಲ್ಲಿ ಹಜಾರಸ್‌!

ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಪ್ರಾಸ್ತಾವಿಸಿ, ಮುಂಬಯಿ ಕನ್ನಡ ಪತ್ರಿಕೋದ್ಯಮಕ್ಕೆ ಅಶೋಕ್‌ ಸುವರ್ಣ ಅವರ ಕೊಡುಗೆ ಮಹತ್ತರವಾದುದು. ಅಧ್ಯಯನಶೀಲ, ರೂಢಗುಣ, ಅಧಿಕೃತೆ ಯಿಂದ ಅವರ ಕೃತಿಗಳು ನಮ್ಮ ಗಮನ ಸೆಳೆಯುತ್ತವೆ. ಮೊಗವೀರ ಪತ್ರಿಕೆಯ ಸಂಪಾ ದಕರಾಗಿ ಕೆಲವು ನೂತನ ಉಪಕ್ರಮಗಳನ್ನು ಚಾಲ್ತಿಗೆ ತಂದ ಶ್ರೇಯಸ್ಸು ಅವರದು. ಬರೆಯುವ ಜನಕ್ಕೆ ದೊಡ್ಡ ಪ್ರಮಾಣದಲ್ಲಿ ವೇದಿಕೆ ಒದಗಿಸುತ್ತಾ ಬಂದ ಸ್ನೇಹಜೀವಿ. ಸುವರ್ಣ ಅವರ ಸಾಧನೆಗಳು ಹೊಸ ತಲೆಮಾರಿಗೆ ಮಾದರಿ ಎಂದು ತಿಳಿಸಿದರು.

ಇದೇ ಸಂದರ್ಭ ಡಾ| ಉಪಾಧ್ಯ ಅವರು ಅಶೋಕ ಸುವರ್ಣ ವಿರಚಿತ ಇತ್ತೀಚಿನ ಕೃತಿ ಮುಂಬಯಿ ಪರಿಕ್ರಮಣವನ್ನು ವಿವಿಯಲ್ಲಿ ಬಿಡುಗಡೆ ಮಾಡಿದರು. ಗೋಪಾಲ್‌ ತ್ರಾಸಿ ಅವರು ಸಂಪಾದಿಸಿದ ಸಮರ್ಥ ಪತ್ರಕರ್ತ ಸಂಪಾದಕ ಅಶೋಕ ಸುವರ್ಣ ಕೃತಿಯನ್ನು ವಿಭಾಗದ ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಬಿಡುಗಡೆಗೊಳಿಸಿದರು. ಅನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ದಿನಕರ್‌ ನಂದಿ ಚಂದನ್‌, ಸದಾನಂದ ತಾವರೆಕೆರೆ, ಪ್ರತಿಭಾ ರಾವ್‌, ಲಕ್ಷ್ಮೀ ರಾಥೋಡ್‌, ಹರೀಶ್‌ ಪೂಜಾರಿ ಪಾಲ್ಗೊಂಡರು. ಕುಮಾರಿ ಶ್ರಾವ್ಯಾ ರಾವ್‌ ಅವರು ಸ್ವಾಗತಗೀತೆ ಹಾಡಿದರು. ಸುರೇಖಾ ದೇವಾಡಿಗ ವಂದಿಸಿದರು.

ಟಾಪ್ ನ್ಯೂಸ್

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

death

Kinnigoli: ಔಷಧ ಸಿಂಪಡಿಸುವಾಗ ಕುಸಿದು ಬಿದ್ದು ಕೃಷಿಕ ಸಾವು

4

Uppinangady: ತೆಂಗಿನಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

11

Mangaluru: ಗಾಂಜಾ ಮಾರಾಟ; ಇಬ್ಬರ ಬಂಧನ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.