ಗೋವಾದಲ್ಲಿ ಹೊರನಾಡು ಉತ್ಸವ ;2 ಮತ್ತು 3ರಂದು ಪಣಜಿಯಲ್ಲಿ ಆಯೋಜನೆ
Team Udayavani, May 29, 2018, 11:48 AM IST
ಪಣಜಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ದಕ್ಷಿಣ ಕೇಂದ್ರ ವಲಯ ಸಾಂಸ್ಕೃತಿಕ ಕೇಂದ್ರ ನಾಗಪುರ, ಮಹಾರಾಷ್ಟ್ರ ಇವರ ಸಂಯುಕ್ತ ಆಶ್ರಯದಲ್ಲಿ ಗೋವಾ ಕನ್ನಡ ಸಮಾಜ ಪಣಜಿ ಇವರ ಸಹಯೋಗದಲ್ಲಿ ಜೂ. 2 ಮತ್ತು 3ರಂದು ಪಣಜಿಯ ಮೆನೆಜಿಸ್ ಬ್ರಾಗಾಂಜಾ ಸಭಾಗೃಹದಲ್ಲಿ “ಹೊರನಾಡು ಉತ್ಸವ’ ಆಯೋಜಿಸಲಾಗಿದೆ.
ನಗರದಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಗೋವಾ ಕನ್ನಡ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬಾದಾಮಿ ಅವರು, ಭಾರತೀಯ ರಿಸರ್ವ್ ಬ್ಯಾಂಕ್ ಗೋವಾ ಶಾಖೆಯ ಡೆಪ್ಯುಟಿ ಮ್ಯಾನೇಜರ್ ಮೀನಾಕ್ಷಿ ಗಡ ಜೂ. 2ರಂದು ಸಂಜೆ 5.30ಕ್ಕೆ ಹೊರನಾಡು ಉತ್ಸವದ ಉದ್ಘಾಟನೆ ನೆರವೇರಿಸುವರು. ಗೋವಾ ಸರ್ಕಾರದ ವಿಮಾನಯಾನ ಇಲಾಖೆ ನಿರ್ದೇಶಕ ಸುರೇಶ್ ಶಾನಭಾಗ ಸಮಾರಂಭದ ಅಧ್ಯಕ್ಷೆ ವಹಿಸಲಿದ್ದಾರೆ. ನಂತರ ಸಂಜೆ 6ಕ್ಕೆ ವಚನ ಗಾಯನ, 6.30ಕ್ಕೆ ಜಾನಪದ ಗೀತೆಗಳು, 7ಕ್ಕೆ ಚೌಡಿಕೆ ಪದಗಳ ಗಾಯನ ಕಾರ್ಯಕ್ರಮ ನಡೆಯಲಿದೆ. ನಂತರ ಜಾನಪದ ಸಂಭ್ರಮ
ಕಾರ್ಯಕ್ರಮದಲ್ಲಿ ಕೋಲಾರ ತಂಡದಿಂದ ತಮಟೆ ವಾದನ, ರಾಮನಗರ ತಂಡದಿಂದ ಪೂಜಾ ಕುಣಿತ, ಬೆಂಗಳೂರು ತಂಡದಿಂದ ಪಟಾಕುಣಿತ, ದಾವಣಗೆರೆ ತಂಡದಿಂದ ಕೋಲಾಟ, ಮಂಗಳೂರು ತಂಡದಿಂದ ಕಂಗೀಲು ನೃತ್ಯ, ಮೈಸೂರು ತಂಡದಿಂದ ನಗಾರಿ ವಾದನ, ಕಲಬುರ್ಗಿ ತಂಡದಿಂದ
ಕರಡಿ ಮಜಲು, ಕಾರವಾರ ತಂಡದಿಂದ ಸಿದ್ಧಿ ಢಮಾಮಿ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಲ್ಲಿಕಾರ್ಜುನ ಬದಾಮಿ ಮಾಹಿತಿ ನೀಡಿದರು.
ಜೂ. 3ರಂದು ಸಂಜೆ 5ಕ್ಕೆ ರಂಗ ಗೀತೆ, 5.30ಕ್ಕೆ ಸುಗಮ ಸಂಗೀತ, 6ಕ್ಕೆ ಜಾನಪದ ಗೀತೆ, 6.30ಕ್ಕೆ ಗೀಗೀಪದ, 7ಕ್ಕೆ ತೊಗಲುಗೊಂಬೆಯಾಟ ಕಾರ್ಯಕ್ರಮಗಳು ನಡೆಯಲಿವೆ. ನಂತರ ಜಾನಪದ
ಸಂಭ್ರಮದಲ್ಲಿ ಚಿತ್ರದುರ್ಗ ತಂಡದಿಂದ ಕೊಂಬು ಕಹಳೆ, ತುಮಕೂರು ತಂಡದಿಂದ ಸಂಬಾಳವಾದನ, ಶಿವಮೊಗ್ಗ ತಂಡದಿಂದ ಡೊಳ್ಳುಕುಣಿತ, ಚಿಕ್ಕಮಗಳೂರು ತಂಡದಿಂದ ಮಹಿಳಾ ವೀರಗಾಸೆ,
ಕೊಡಗು ತಂಡದಿಂದ ಚೀನಿದುಡಿ ಕುಣಿತ, ಮಂಗಳೂರು ತಂಡದಿಂದ ಗುಮಟೆ ಪಾಂಗ್, ಉಡುಪಿ ತಂಡದಿಂದ ಕಂಗೀಲು ನೃತ್ಯ, ಹಾಸನ ತಂಡದಿಂದ ಚಿಟ್ ಮೇಳ, ಬಾಗಲಕೋಟೆ ತಂಡದಿಂದ ಕರಡಿ ಮಜಲು, ಚಾಮರಾಜನಗರ ತಂಡದಿಂದ ಕಂಸಾಳೆ ನೃತ್ಯ, ಬಳ್ಳಾರಿ ತಂಡದಿಂದ ಹಕ್ಕಿಪಿಕ್ಕಿ ಕುಣಿತ
ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಎರಡೂ ದಿನಗಳ ಹೊರನಾಡು ಉತ್ಸವದ ಅದ್ಧೂರಿ ಕಾರ್ಯಕ್ರಮಗಳಿಗೆ ಕನ್ನಡಿಗರು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕು ಎಂದು ಗೋವಾ ಕನ್ನಡ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ ಮನವಿ ಮಾಡಿದರು. ಸಂಘದ ಕಾರ್ಯದರ್ಶಿ ಅರುಣಕುಮಾರ
ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.