ಪ್ರಕಾಶ್ ಶೆಟ್ಟಿಗೆ ವಿಜನರಿ ಹೊಟೇಲ್ ಓನರ್ ಆಫ್‌ದ ಈಯರ್ ಪ್ರಶಸ್ತಿ
Team Udayavani, May 31, 2018, 4:39 PM IST
ಮುಂಬಯಿ: ರಾಷ್ಟ್ರದ ಪ್ರತಿಷ್ಠಿತ ಐಡಿಇ ಗ್ಲೋಬಲ್ ಪ್ರಸ್ತುತಿಯ ಹಾಸ್ಪಿಟ್ಯಾಲಿಟಿ ಲೀಡರ್’ ಇಂಡಸ್ಟ್ರೀ ಚಾಯ್ಸ ಅವಾರ್ಡ್ಸ್ ಇದರ ನಾಲ್ಕನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಮೇ 29ರಂದು ರಾತ್ರಿ ಸಾಂತಾಕ್ರೂಜ್ ಪೂರ್ವದ ಗ್ರಾÂಂಡ್ ಹೈಯ್ಯತ್ ಸಭಾಗೃಹದಲ್ಲಿ ನೇರವೇರಿತು.
ಬಂಜಾರ-ಗೋಲ್ಡ್‌ಫಿಂಚ್ ಪ್ರಕಾಶಣ್ಣ ಪ್ರಸಿದ್ಧಿಯ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ (ಉಡುಪಿ) ಜಿಲ್ಲೆಯ ಪಡುಬಿದ್ರಿ ಮೂಲದ ಉದ್ಯಮಿ, ಎಂಆರ್‌ಜಿ ಸಮೂಹದ ಆಡಳಿತ ನಿರ್ದೇಶಕರಾಗಿರುವ ಪ್ರಕಾಶ್ ಶೆಟ್ಟಿ ಕೊರಂಗ್ರಪಾಡಿ ಅವರಿಗೆ “ವಿಜನರಿ ಹೊಟೇಲ್ ಓನರ್ ಆಫ್ ದ ಈಯರ್'(Visionary Hotel Owner of the Year-2018) ವಾರ್ಷಿಕ ಪ್ರಶಸ್ತಿಯನ್ನು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಐಡಿಇ ಗ್ಲೋಬಲ್ ನಿರ್ದೇಶಕರುಗಳಾದ ಕೆ. ಸುರೇಶ್ ಮತ್ತು ಎಸ್.ಗಣೇಶ್ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗೌರವ ಅತಿಥಿಗಳಾಗಿ ಸ್ಪ್ರಿಂಗ್‌ಏರ್ ಸಂದೀಪ್ ಮೆನನ್, ನಿತೀನ್ ನಾಗ್ರಾಲೆ, ಡೋನ್ ಕಬಿರಾಜ್, ರಾಜೇಶ್ ನಾಯರ್, ಪ್ರೇಮ್ ರುವೇರಿ ಮತ್ತು ಐಡಿಇ ಗ್ಲೋಬಲ್ ಮುಖ್ಯಸ್ಥರು ಉಪಸ್ಥಿತರಿದ್ದು, ವಿವಿಧ ಕ್ಷೇತ್ರಗಳ ಗಣ್ಯರ ಉಪಸ್ಥಿತಿಯಲ್ಲಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ರತ್ನಾಕರ ಆರ್. ಶೆಟ್ಟಿ ಮುಂಡ್ಕೂರು ಹಾಜರಿದ್ದು ಪ್ರಶಸ್ತಿ ಪುರಸ್ಕೃತ ಪ್ರಕಾಶ್ ಶೆಟ್ಟಿ ಅವರ ಮಹತ್ತರ ಸಾಧನೆಯನ್ನು ಪ್ರಶಂಸಿಸಿ ಶುಭಹಾರೈಸಿದರು.
ಕೆ. ಸನೀಲ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಪ್ರಶಸ್ತಿಗೆ ಭಾಜನರಾದ ಸರ್ವರನ್ನು ಅಭಿನಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಪ್ರಕಾಶ್ ಶೆಟ್ಟಿ ಕೊರಂಗ್ರಪಾಡಿ
ಉಡುಪಿ ಜಿಲ್ಲೆಯ ಪಡುಬಿದ್ರಿ ಮೂಲದ ಕೊರಂಗ್ರಪಾಡಿ ಮನೆತನದ ಪ್ರಕಾಶ್ ಎಂ. ಶೆಟ್ಟಿ ಅವರು ಕೆ. ಮಾಧವ ಶೆಟ್ಟಿ ಮತ್ತು ರತ್ನಾ ಎಂ. ಶೆಟ್ಟಿ ಅವರ ಪುತ್ರ. ತನ್ನ ಕಾಲೇಜು ಶಿಕ್ಷಣ ಪೂರೈಸಿ ಹೊಟೇಲು ಉದ್ಯಮಕ್ಕೆ ನಾಂದಿ ಹಾಡಿದವರು. ಅನಂತರ ಎಂಆರ್‌ಜಿ ಸಮೂಹ ರೂಪಿಸಿ ದೇಶ ವಿದೇಶಗಳಲ್ಲಿ ಹೊಟೇಲ್ ಉದ್ಯಮವನ್ನು ಪಸರಿಸಿ ದರು. ಸರಳ ಸಜ್ಜನಿಕೆಯ, ಶಿಕ್ಷಣ ಪ್ರೇಮಿಯಾಗಿರುವ ಇವರು ಕೊಡುಗೈ ದಾನಿಯಾಗಿಯೂ ಪರಿಚಿತರು. 1997ರಲ್ಲಿ ಕರ್ನಾಟಕದಲ್ಲಿ ನಡೆದ 4ನೇ ನ್ಯಾಷನಲ್ ಗೇಮ್ಸ್ ಮತ್ತು 1999ರಲ್ಲಿ ಮಣಿಪುರಾದಲ್ಲಿ ನಡೆಸಲ್ಪಟ್ಟ 5ನೇ ನ್ಯಾಷನಲ್ ಗೇಮ್ಸ್‌ಗಳ ಆಹಾರವನ್ನು ಪೂರೈಸಿ ಹೊಟೇಲ್ ಉದ್ಯಮದಲ್ಲಿ ತನ್ನದೇ ಆದ ಸ್ವಂತಿಕೆಯ ಛಾಪು ಮೂಡಿಸಿಕೊಂಡಿದ್ದಾರೆ.
ಸದ್ಯ ಹಲವಾರು ಪ್ರತಿಷ್ಠಿತ ಸಂಸ್ಥೆಗಳ ಕಾರ್ಯಾಧ್ಯಕ್ಷರಾಗಿ, ಆಡಳಿತ ನಿರ್ದೇಶಕರಾಗಿ, ಟ್ರಸ್ಟಿ, ಪದಾಧಿಕಾರಿಯಾಗಿ ಸೇವಾ ನಿರತರಾಗಿದ್ದಾರೆ. ಬೆಂಗಳೂರು, ಮಂಗಳೂರು, ದಿಲ್ಲಿ, ಮುಂಬಯಿ, ಗೋವಾ ನಗರಗಳಲ್ಲಿ ಗೋಲ್ಡ್‌ಫಿಂಚ್ ಹೊಟೇಲ್‌ಗಳನ್ನು ಹೊಂದಿರುವ ಇವರು ಪಂಚತಾರಾ ಹೊಟೇಲ್, ವಸತಿಗೃಹ, ವ್ಯಾಪಾರ ಸಂಕೀರ್ಣ, ಕಟ್ಟಡ ನಿರ್ಮಾಣ ಸಂಸ್ಥೆಗಳನ್ನು ಮುನ್ನಡೆಸಿ ಸಾವಿರಾರು ಜನರಿಗೆ ಉದ್ಯೋಗ, ಉದ್ಯಮ ಒದಗಿಸಿದ್ದಾರೆ.
ಅವರ ಸಾಧನೆಗಳಿಗೆ ಹೊಟೇಲ್ ಉದ್ಯಮಶ್ರೀ ಪುರಸ್ಕಾರ, ಭಾರತ್ ಗೌರವ ರತ್ನ ಪುರಸ್ಕಾರ, ಇಂಟರ್‌ನ್ಯಾಶನಲ್ ಗೋಲ್ಡ್ ಸ್ಟಾರ್ ಮಿಲಿನಮ್ ಪುರಸ್ಕಾರ, ಬೆಸ್ಟ್ ಇಂಟಲೆಕುcವಲ್ ಅವಾರ್ಡ್ ಆಫ್ ಕಾರ್ಪೊರೇಟ್ ಲೀಡರ್‌ಶಿಪ್, ರಾಜೀವ್ ಗಾಂಧಿ ಶೀರೋಮನಿ ಪುರಸ್ಕಾರ, ಟಿಪ್ಪು ಸುಲ್ತಾನ್ ಪುರಸ್ಕಾರ, ನ್ಯಾಶನಲ್ ಅವಾರ್ಡ್ ಫಾರ್ ಓವರ್ ಆಲ್ ಅಚೀವ್‌ಮೆಂಟ್, ಒಕ್ಕಲಿಗ ರತ್ನ ಪ್ರಶಸ್ತಿ, ತೌಳವಶ್ರೀ ಪ್ರಶಸ್ತಿ, ಕರಾವಳಿ ರತ್ನ ಅವಾರ್ಡ್, ನಾಡಪ್ರಭು ಕೆಂಪೇಗೌಡ ಇಂಟರ್‌ನ್ಯಾಶನಲ್ ಅವಾರ್ಡ್, ದುಬೈಯಲ್ಲಿ ಮತ್ತು ಕರ್ನಾಟಕ ಪ್ರದೇಶ ಹೊಟೇಲ್ ಆ್ಯಂಡ್ ರಿಟರ್ನ್ ಅಸೋಸಿಯೇಶನ್‌ನಿಂದ ಉದ್ಯಮರತ್ನ ಪುರಸ್ಕಾಗಳು ಒಲಿದು ಬಂದಿವೆ. ಬಂಟರ ಸಂಘ ಮುಂಬಯಿ ಸಂಸ್ಥೆಯ ನಿಕಟವರ್ತಿಯಾಗಿರುವ ಪ್ರಕಾಶ್ ಶೆಟ್ಟಿ ಅವರು ಬಂಟರ ಸಂಘ ಮುಂಬಯಿ ತನ್ನ ಶಿಕ್ಷಣ ಮತ್ತು ಸಮಾಜ ಕಲ್ಯಾಣಾಭಿವೃದ್ಧಿ ಸಮಿತಿಯು ವಾರ್ಷಿಕವಾಗಿ ನಡೆಸುವ ಸಂಘದ ಬೃಹತ್ ಶೆ„ಕ್ಷಣಿಕ ಮತ್ತು ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮದ ಪ್ರಧಾನ ಪ್ರಾಯೋಜಕರಲ್ಲಿ ಒಬ್ಬರಾಗಿದ್ದಾರೆ.
ಗಣ್ಯರ ಅಭಿನಂದನೆ
“ವಿಜನರಿ ಹೊಟೇಲ್ ಓನರ್ ಆಫ್ ದ ಈಯರ್’ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ಶೆಟ್ಟಿ ಅವರಿಗೆ ಚರಿಷ್ಮಾ ಬಿಲ್ಡರ್ನ ಆಡಳಿತ ನಿರ್ದೇಶಕ ಸುಧೀರ್ ವಿ. ಶೆಟ್ಟಿ, ತುಂಗಾ ಹೊಟೇಲ್ ಸಮೂಹದ ಆಡಳಿತ ನಿರ್ದೇಶಕ ಸುಧಾಕರ್ ಎಸ್. ಹೆಗ್ಡೆ, ಸಂಸದ ಗೋಪಾಲ ಸಿ. ಶೆಟ್ಟಿ, ಆಲ್‌ಕಾರ್ಗೋ ಸಮೂಹದ ಶಶಿಕಿರಣ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಭವಾನಿ ಫೌಂಡೇಶನ್‌ನ ಸಂಸ್ಥಾಪಕಾಧ್ಯಕ್ಷ ಕೆ. ಡಿ. ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ನಗ್ರಿಗುತ್ತು ವಿವೇಕ್ ಶೆಟ್ಟಿ, ಬಿ. ವಿವೇಕ್ ಶೆಟ್ಟಿ, ರಘುರಾಮ ಕೆ. ಶೆಟ್ಟಿ ಬೆಳಗಾವಿ, ಸಿಎ ಶಂಕರ್ ಬಿ. ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಎರ್ಮಾಳ್ ಹರೀಶ್ ಶೆಟ್ಟಿ, ವಿರಾರ್ ಶಂಕರ್ ಶೆಟ್ಟಿ, ಜಯರಾಮ ಎನ್. ಶೆಟ್ಟಿ, ಸಿಎ ಐ. ಆರ್. ಶೆಟ್ಟಿ, ಮಹೇಶ್ ಎಸ್. ಶೆಟ್ಟಿ ಅವರು ಅಭಿನಂದಿಸಿದ್ದಾರೆ.
ಚಿತ್ರ – ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.