ದೂರದೃಷ್ಟಿ, ತ್ಯಾಗ, ಸಮರ್ಪಣೆ ಇದ್ದಲ್ಲಿ ಪರಿವಾರದ ಬೇರು ಸದೃಢ: ಅಶೋಕ್‌ ಸುವರ್ಣ

ನಮ್ಮ ಸತ್ಸಂಪ್ರದಾಯಗಳತ್ತ ಗಮನ ಹರಿಸುವುದು ಒಳಿತು

Team Udayavani, Jul 8, 2023, 5:58 PM IST

ದೂರದೃಷ್ಟಿ, ತ್ಯಾಗ, ಸಮರ್ಪಣೆ ಇದ್ದಲ್ಲಿ ಪರಿವಾರದ ಬೇರು ಸದೃಢ: ಅಶೋಕ್‌ ಸುವರ್ಣ

ಮುಂಬಯಿ: ಯಾವಾಗ ಗಂಡ- ಹೆಂಡತಿ, ಮಕ್ಕಳೇ ಪರಿವಾರ ಎಂಬ ಸಂಸ್ಕೃತಿ ಹುಟ್ಟಿತೋ ಅಲ್ಲಿಂದ ಮದುವೆಯಲ್ಲಿ ಸ್ವಾರ್ಥ ಪ್ರಾರಂಭವಾಗಿ ಪರಿವಾರದ ಘನತೆ ಹಾಗೂ ಸಂಸ್ಕಾರ ಮಾಯವಾಯಿತು. ತಂದೆ- ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮ, ಸೋದರ ಮಾವ -ಅತ್ತೆ ಹೀಗೆ ಇವರೊಡನಿದ್ದ ಅನ್ಯೋನ್ಯತೆ ಮಾಯವಾಗಿ ಪರಿವಾರ ಎಂಬ ಮೂಲ ಸಂಸ್ಕಾರಯುತ ಪದ್ಧತಿ ಸವ
ಕಳಿಯಾಯಿತು. ಇಂದಿನ ಶಿಕ್ಷಣ ಪದ್ಧತಿ ಯಲ್ಲಿ ಸಂಪಾದನೆಗಾಗಿ ಬೋಧನೆ ವಿನಾ ವಿಶಾಲ ತಿಳುವಳಿಕೆಗೆ ಆಸ್ಪದವಿಲ್ಲ. ಎಲ್ಲಿ
ದೂರದೃಷ್ಟಿ, ತ್ಯಾಗ, ಸಮರ್ಪಣ ಮನೋ ಭಾವನೆ ಇರುತ್ತದೆಯೋ ಅಲ್ಲಿ ಪರಿವಾರದ ಬೇರುಗಳು ಬಲವಾಗಿರುತ್ತವೆ ಎಂದು
ಮೊಗವೀರ ಮಾಸಿಕದ ಸಂಪಾದಕ ಅಶೋಕ್‌ ಸುವರ್ಣ ತಿಳಿಸಿದರು.

ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ ವತಿಯಿಂದ ಘಾಟ್‌ಕೋಪರ್‌ ಕನ್ನಡ ವೆಲ್ಫೆàರ್‌ ಸೊಸೈಟಿಯ ಸಭಾಗೃಹ
ದಲ್ಲಿ ಜು. 2ರಂದು ನಡೆದ “ಮದುವೆ, ಪರಿವಾರ ಹಾಗೂ ಸಂಸ್ಕಾರ’ ಎಂಬ ವಿಚಾರ ಸಂಕಿರಣದಲ್ಲಿ ಅವರು ಅಧ್ಯಕ್ಷತೆ ವಹಿಸಿ
ಮಾತನಾಡಿ, ಸಂಸಾರದ ದೀರ್ಘ‌ ಬಾಳಿಕೆಗೆ ಬುನಾದಿ ಈ ಅನುಭವ ಸಂಪನ್ನ ಪರಿವಾರದಿಂದ ಸಾಧ್ಯ ಹಾಗೂ ಅದರ
ಆವಶ್ಯಕತೆಯಿದೆ. ಇಂದು ಅಂತಹ ವಾತಾವರಣವೇ ಇಲ್ಲವಾಗಿವೆ. ಸೊಬಗು, ಪ್ರಲೋಭನೆ, ಸಂಭ್ರಮ, ಆಕರ್ಷಣೆಗಳಿಗೆ
ಒಳಗಾಗಿ ತಮ್ಮ ಬದುಕನ್ನು ಪರಿವಾರ ದಿಂದ ದೂರ ಮಾಡಿಕೊಳ್ಳುತ್ತಾ ಸಮಸ್ಯೆಗೆ ಒಳ ಗಾಗುತ್ತಿದ್ದು, ಇದಕ್ಕೆ ಸಮೃದ್ಧ ಪರಿವಾರದ
ಮಾರ್ಗದರ್ಶನದ ಕೊರತೆ ಕಾರಣವಾಗಿದೆ ಎಂದು ತಿಳಿಸಿದರು.

ಕರ್ನಾಟಕ ಮಹಾಮಂಡಲ ಮೀರಾ- ಭಾಯಂದರ್‌ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಮಾತನಾಡಿ, ಮನುಷ್ಯ
ನಾಗರಿಕತೆ ಅರಿಯದ ಆ ಕಾಲದಲ್ಲಿ ಪ್ರಾಣಿಗಳಂತೆ ಜೀವಿಸುತ್ತಿದ್ದ. ಆಗ ಹೆಣ್ಣಿಗೆ ರಕ್ಷಣೆಯೇ ಇರಲಿಲ್ಲ. ಅದನ್ನರಿತ ನಮ್ಮ
ಹಿರಿಯರು, ಋಷಿಮುನಿಗಳು ಅದಕ್ಕೊಂದು ಪರಿಹಾರ ಹುಡುಕಿದರು. ಹೆಣ್ಣಿಗೆ ರಕ್ಷಣೆ ಜತೆಗೆ ಭದ್ರತೆ ಒದಗಿಸುವುದರೊಂದಿಗೆ
ಸಮೃದ್ಧ ಸಮಾಜಕ್ಕಾಗಿ ಒಂದು ಹೆಣ್ಣಿಗೆ ಒಂದೇ ಗಂಡು. ಅದು ಪವಿತ್ರ ಹಾಗೂ ಜೀವನ ಪರ್ಯಂತದ ಸಂಬಂಧವಾಗಿರಲು
ವ್ಯವಸ್ಥಿತ, ಯೋಜನಾಬದ್ಧ ಕಟ್ಟುಪಾಡುಗಳನ್ನು ಜಾರಿಗೆ ತಂದರು. “ಮದುವೆ’ ಎಂಬ ಸಂಸ್ಕಾರ, ಸುಸಂಸ್ಕೃತ ಶಿಸ್ತುಬದ್ಧ
ದೀರ್ಘ‌ ಬಾಳಿಕೆ ಬರುವ ನಿಯಮಗಳನ್ನು ರೂಪಿಸಿದರೂ ಅವೆಲ್ಲ ಇಂದು ಸವಕಳಿಯಾಗುತ್ತ ವಿಭಜನೆಯತ್ತ ಸಾಗುತ್ತಿದೆ. ಎರಡು
ಪವಿತ್ರ ಆತ್ಮಗಳ ಹಾಗೂ ಪರಿವಾರಗಳ ಮಿಲನದೊಂದಿಗೆ ಬಲಿಷ್ಠ ಸಮಾಜ ನಿರ್ಮಾಣಕ್ಕೆ ನಮ್ಮ ಹಿರಿಯರು ನಾಂದಿ
ಹಾಡಿದರು ಎಂದರು.

ವಿಶೇಷ ಅಭ್ಯಾಗತರಾಗಿ ಉಡುಪಿಯಿಂದ ಆಗಮಿಸಿದ್ದ ಸಂಶೋಧನ ಲೇಖಕಿ ಶರೋನಾ ಶೆಟ್ಟಿ ಮಾತನಾಡಿ, “ಮದುವೆ, ಪರಿವಾರ
ಹಾಗೂ ಸಂಸ್ಕಾರ’ ಇದು ಒಂದೇ ದಾರದಲ್ಲಿ ಪೋಣಿಸಿದ ಮಣಿಗಳಂತೆ. ಪರಿವಾರ ಇಲ್ಲದ ಮದುವೆ ದುಷ್ಯಂತ-ಶಕುಂತಲೆಯರ
ಮದುವೆಯಂತೆ ಕಷ್ಟಕ್ಕೆ ಸಿಲುಕಬಹುದು. ಮದುವೆ ವಿಷಯದಲ್ಲಿ ಶ್ರೀರಾಮನ ನಡೆ ನಮಗೆಲ್ಲ ಆದರ್ಶ. ಸ್ವಯಂವರದಲ್ಲಿ ಶಿವ
ಧನಸ್ಸನ್ನು ಮುರಿದು ಸೀತೆಯನ್ನು ಗೆದ್ದ ರಾಮ ಮದುವೆ ಮಾತುಕತೆಗೆ ತನ್ನ ತಂದೆ ದಶರಥ ಮತ್ತು ಪರಿವಾರವನ್ನು ಕೇಳಬೇಕು
ಎನ್ನುತ್ತಾನೆ. ಶ್ರೀರಾಮನ ಆ ನಡೆ ಇಂದಿಗೂ ಪ್ರಸ್ತುತ. ಸಮಾಜದಲ್ಲಿ ಹೆಚ್ಚುತ್ತಿರುವ ವಿಚ್ಛೇದನಗಳಿಗೆ ಸದೃಢ ಪರಿವಾರ ಹಾಗೂ
ಸಂಸ್ಕಾರದ ಕೊರತೆ ಕಾರಣ ಇರಬಹುದು ಎಂಬ ಅಭಿಮತ ವ್ಯಕ್ತಪಡಿಸಿದರು.

ಅತಿಥಿ ಲೇಖಕಿ ಶಾರದಾ ಅಂಚನ್‌ ಅವರು ಕರಾವಳಿ ಹಾಗೂ ಕರ್ನಾಟಕದಲ್ಲಿನ ಮದುವೆ ಸಂಪ್ರದಾಯ, ಸಂಭ್ರಮದ ವಿಶೇಷತೆ
ಹಾಗೂ ಅವುಗಳ ಮಹತ್ವ ತಿಳಿಸಿ, ನಮ್ಮ ಹಿರಿಯರು ಹಾಕಿಕೊಟ್ಟ ಸಂಪ್ರದಾಯದಂತೆ ಮದುವೆ ನಡೆದರೆ ವಿಭಜನೆಗೆ ಯಾವುದೇ
ಅವಕಾಶ ಇರುವುದಿಲ್ಲ. ನಮ್ಮ ಹಿರಿಯರು ರೂಪಿಸಿದ ಮದುವೆ ಕ್ರಮ ದೀರ್ಘ‌ ಬಾಳಿಕೆಯನ್ನು ಪ್ರೋತ್ಸಾಹಿಸುತ್ತಿದ್ದವು. ಹಾಗಾಗಿ
ವಿಚ್ಛೇದನದ ಪ್ರಮೇಯವೇ ಬರುತ್ತಿರಲಿಲ್ಲ. ಹಿರಿಯರು ರೂಪಿಸಿದ್ದ ನಿಯಮಗಳನ್ನು ಮುಂದುವರಿಸೋಣ. ಇಂದಿನ
ಮದುವೆಯಲ್ಲಿನ ಮೆಹಂದಿ, ಫೋಟೋಗ್ರಾ ಫರ್‌, ವೀಡಿಯೋ ಚಿತ್ರೀಕರಣಕ್ಕೆ ಅಧಿಕ ಮಹತ್ವ ನೀಡಲಾಗುತ್ತದೆ. ನಮ್ಮ ಅರ್ಥ
ವತ್ತಾದ ಸಂಪ್ರದಾಯಗಳು ಆಧುನಿಕತೆಯ ಭರಾಟೆಯಲ್ಲಿ ಮಸುಕಾಗುತ್ತಿರುವುದು ಒಳ್ಳೆ ಯ ಬೆಳವಣಿಗೆಯಲ್ಲ. ಮದುವೆ ಜೀವನ
ಪರ್ಯಂತದ ಸಂಬಂಧವಾಗಿರಬೇಕಾದರೆ ನಮ್ಮ ಸತ್ಸಂಪ್ರದಾಯಗಳತ್ತ ಗಮನ ಹರಿಸುವುದು ಒಳಿತು ಎಂದರು.

ಲೇಖಕಿ ಶಾಂತಾ ಶಾಸ್ತ್ರಿ ಮಾತನಾಡಿದರು. ಹಿರಿಯ ಲೇಖಕಿ ಡಾ| ಶೈಲಜಾ ಹೆಗಡೆ ಅವರು ವೇದವ್ಯಾಸರ ಕುರಿತು ಮಾಹಿತಿ
ನೀಡಿದರು. ಕನ್ನಡ ವೆಲ್ಫೇರ್‌ ಸೊಸೈಟಿಯ ವೀಣಾ ಶೆಟ್ಟಿ ಪ್ರಾರ್ಥನೆಗೈದರು. ಅತಿಥಿಗಳು ದೀಪ ಪ್ರಜ್ವಲಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲತಾ ಸಂತೋಷ್‌ ಮುದ್ದುಮನೆ ಅತಿಥಿಗಳನ್ನು ಸ್ವಾಗತಿಸಿದರು.

ಪ್ರತಿಷ್ಠಾನದ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಪ್ರಾಸ್ತಾವಿಸಿ, ಇಂತಹ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳುವ ಉದ್ದೇಶ ಹಾಗೂ
ಪ್ರತಿಷ್ಠಾನದ ಕುರಿತು ವಿವರಿಸಿದರು. ಪ್ರತಿಷ್ಠಾನದ ಉಪಾಧ್ಯಕ್ಷ ರಾಜೇಶ ಗೌಡ ಸಿಂಧೂರ, ಕಾರ್ಯಕ್ರಮಕ್ಕೆ ಸಹಕರಿಸಿದ
ಕನ್ನಡ ವೆಲ್ಫೇರ್‌ ಸೊಸೈಟಿಯ ಅಧ್ಯಕ್ಷ ನವೀನ್‌ ಶೆಟ್ಟಿ ಇನ್ನ ಬಾಳಿಕೆ, ನಾರಾಯಣ ರಾವ್‌, ಸವಿತಾ ಎಸ್‌. ಶೆಟ್ಟಿ, ಜಿ. ವಿ. ಹೆಗಡೆ ಹಾಗೂ ಗೀತ ಗಾಯನದಲ್ಲಿ ಪಾಲ್ಗೊಂಡ ವೀಣಾ ಶೆಟ್ಟಿ, ಮಾಲತಿ ಪುತ್ರನ್‌, ಉಮಾ ಭಟ್‌ ಘನ್ಸೋಲಿ ಮೊದಲಾದವರನ್ನು ಗೌರವಿಸಲಾಯಿತು. ಸುರೇಶ್‌ ಶೆಟ್ಟಿ ಕಣಂಜಾರು ಕಾರ್ಯಕ್ರಮ ನಿರೂಪಿಸಿದರು.

“ಮದುವೆ, ಪರಿವಾರ ಹಾಗೂ ಸಂಸ್ಕಾರ’ ಶಬ್ದಗಳು ಪ್ರಪಂಚದ ನಿರಂತರತೆಯ ಅಸ್ತಿತ್ವವನ್ನು ಹೇಳುವ ಸಂಕೇತಗಳು. ಮದುವೆ ಶಬ್ದದಲ್ಲಿ ಎರಡು ಜೀವಾತ್ಮಗಳು ಅಡಕವಾಗಿವೆ. ಮದುವೆ ಎಂಬುದು ಒಂದು ಗಂಡು-ಹೆಣ್ಣಿನ “ಬಂಧನ’ ಮಾತ್ರವಲ್ಲ, ಅದು ಎರಡು ಕುಟುಂಬಗಳನ್ನು ಬೆಸೆಯುತ್ತವೆ. ಶತ್ರುತ್ವ ಅಳಿಸಿ ಮಿತ್ರತ್ವ ಬೆಳೆಸುವ ಶಕ್ತಿ ಮದುವೆಗಿದೆ. ವಿವಾಹ ನಮ್ಮ ಸಾಮಾಜಿಕ ವ್ಯವಸ್ಥೆಯ ಭದ್ರ ಬುನಾದಿಯಲ್ಲೊಂದಾಗಿದೆ.
ಶಾಂತಾ ಶಾಸ್ತ್ರೀ , ಲೇಖಕಿ

ಗುರಿ ತಲುಪಬೇಕಾದರೆ ಗುರು ಬೇಕು. ಗುರಿ ತಲುಪಿದ ಮೇಲೆಯೂ ಗುರುವನ್ನು ಮರೆಯದೆ ಗುರುವನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ವೇದವನ್ನು ವಿಂಗಡಿಸಿ ಅದನ್ನು ಜನಮಾಸಾನ್ಯರಿಗೆ ತಲುಪಿಸುವಲ್ಲಿ ಶ್ರಮಿಸಿದ ವೇದವ್ಯಾಸರ ಜಯಂತಿ ಹಲವು ವಿಶೇಷತೆಯಿಂದ ಕೂಡಿದೆ.
ಡಾ| ಶೈಲಜಾ ಹೆಗಡೆ, ಹಿರಿಯ ಲೇಖಕಿ

ಟಾಪ್ ನ್ಯೂಸ್

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Uddhav Thackeray’s bag inspection by election commission, controversy

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.