ವಿಶ್ವ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿ
Team Udayavani, Jan 17, 2018, 2:54 PM IST
ಮುಂಬಯಿ: ಬಂಟ್ಸ್ ಸಂಘ ಮುಂಬಯಿ ಮಾಜಿ ಅಧ್ಯಕ್ಷರಾಗಿ ಹತ್ತಾರು ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿ ಸಾಧಕ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿ, 2011ನೇ ಸಾಲಿನ “ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತರಾಗಿರುವ ಐಕಳ ಹರೀಶ್ ಶೆಟ್ಟಿ ಅವರು ವಿಶ್ವ ಬಂಟರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ಮಂಗಳೂರು ಬಂಟರ ಮಾತೃ ಸಂಘದ ಸಮಾಲೋಚನಾ ಸಭಾಗೃಹದಲ್ಲಿ ಜ. 16ರಂದು ನಡೆದ ಸಭೆಯಲ್ಲಿ ಈ ತನಕ ಸುಮಾರು ಹತ್ತು ವರ್ಷಗಳಲ್ಲಿ ಒಕ್ಕೂಟದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಐಕಳ ಹರೀಶ್ ಶೆಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆಗೊಳಿಸಲಾಯಿತು.
ಜಗತ್ತಿನಾದ್ಯಂತ ಪಸರಿಸಿಕೊಂಡ ಬಂಟ ಸಮುದಾಯದ ಸರ್ವೋನ್ನತಿಗಾಗಿ ಸೇವಾ ನಿರತ ನೂರಕ್ಕೂ ಮಿಕ್ಕಿದ ಬಂಟರ ಸಂಸ್ಥೆಗಳ ಸದಸ್ಯತ್ವ ಹೊಂದಿರುವ ಒಕ್ಕೂಟವು ಸುಮಾರು ಮೂವತ್ತು ವರ್ಷಗಳ ಸುದೀ ರ್ಘಾವಧಿಯ ಸೇವೆಯಲ್ಲಿ ಮುನ್ನಡೆ ಯುತ್ತಿದ್ದು, ಕಳೆದ ಸುಮಾರು ಹದಿಮೂರು ವರ್ಷಗಳಿಂದ ಅಜಿತ್‌ಕುಮಾರ್ ರೈ ಮಾಲಾಡಿ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಅಭಿನಂದನೆ: ಯಶಸ್ವಿ ಹೊಟೇಲು ಉದ್ಯಮಿಯಾಗಿ, ಸಂಘಟನಾ ಚತುರರಾ ಗಿರುವ ಐಕಳ ಹರೀಶ್ ಶೆಟ್ಟಿ ಅವರನ್ನು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಹಿರಿಯ ಕನ್ನಡಿಗ ಎಂ. ಡಿ. ಶೆಟ್ಟಿ ಬಾಂದ್ರ, ಎರ್ಮಾಳ್ ಹರೀಶ್ ಶೆಟ್ಟಿ, ಸಂಸದ ಗೋಪಾಲ ಸಿ. ಶೆಟ್ಟಿ, ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ಮಾಜಿ ಕಾರ್ಯಾಧ್ಯಕ್ಷ ವಿ. ಆರ್. ಕೋಟ್ಯಾನ್, ಕಚ್ಚಾರು ಶ್ರಿ ನಾಗೇಶ್ವರ ದೇವಸ್ಥಾನ ಬಾಕೂìರು ಇದರ ಆಡಳಿತ ಮೊಖೆ¤àಸರ ಕಡಂದಲೆ ಸುರೇಶ್ ಎಸ್. ಭಂಡಾರಿ, ದಡªಂಗಡಿ ಚೆಲ್ಲಡ್ಕ ಕುಸುಮೋಧರ ದೇರಣ್ಣ ಶೆಟ್ಟಿ (ಕೆ. ಡಿ. ಶೆಟ್ಟಿ), ಕರ್ನಿರೆ ವಿಶ್ವನಾಥ್ ಶೆಟ್ಟಿ, ಡಾ| ಪದ್ಮನಾಭ ವಿ. ಶೆಟ್ಟಿ, ನಗ್ರಿಗುತ್ತು ವಿವೇಕ್ ಶೆಟ್ಟಿ, ಕೆ. ಎಂ. ಶೆಟ್ಟಿ, ಪಾಂಡು ಎಸ್. ಶೆಟ್ಟಿ, ಸೇರಿದಂತೆ ನೂರಾರು ಗಣ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
ಸೇವೆಯಿಂದ ಜನಮೆಚ್ಚುಗೆ ಗಳಿಸಿದ ಧೀಮಂತ ಐಕಳ ಹರೀಶ್ ಶೆಟ್ಟಿ
ಎಳತ್ತೂರುಗುತ್ತು ರಾಮಣ್ಣ ಶೆಟ್ಟಿ ಮತ್ತು ಐಕಳ ಕುರುಂಬಿಲ್‌ಗುತ್ತು ದೇವಕಿ ಶೆಟ್ಟಿ ದಂಪತಿ ಸುಪುತ್ರರಾಗಿರುವ ಐಕಳ ಹರೀಶ್ ಶೆಟ್ಟಿ ಅವರು, ಶಿಮಂತೂರು ಶಾರದಾ ಹೈಸ್ಕೂಲ್‌ನಲ್ಲಿ ಪ್ರೌಢ ಶಾಲಾಭ್ಯಾಸದ ಬಳಿಕ ಮೂಲ್ಕಿ ವಿಜಯಾ ಕಾಲೇಜ್‌ನಲ್ಲಿ ಬಿಎ ಪದವಿಯನ್ನು ಪಡೆದರು. 1981ರಿಂದ ಸತತ ಮೂರು ವರ್ಷಗಳಿಂದ ದೇಹದಾಡ್ಯì ಸ್ಪರ್ಧೆಯಲ್ಲಿ ಮಿಸ್ಟರ್ ಮಂಗ್ಳೂರು ಯುನಿವರ್ಸಿಟಿ’, 1982 ಸಾಲಿನಲ್ಲಿ “ಮಿಸ್ಟರ್ ದಕ್ಷಿಣ ಕನ್ನಡ’, 1984ರಲ್ಲಿ “ಭಾರತ್ ಕಿಶೋರ್’ ಪುರಸ್ಕೃತರಾದ ಸರ್ವೋತ್ತಮ ಕ್ರೀಡಾಪಟು ಇವರಾಗಿದ್ದಾರೆ. ಮಹಾನಗರ ಮುಂಬಯಿಯಲ್ಲಿನ ಸಮಾಜ ಸೇವಕ, ಚತುರ ಸಂಘಟಕ, ಪ್ರಭಾವಿ ನೇತಾರ ಐಕಳ ಹರೀಶ್ ಶೆಟ್ಟಿ ಅವರು ಪತ್ನಿ ಚಂದ್ರಿಕಾ ಹರೀಶ್, ಪುತ್ರ ಅರ್ಜುನ್ ಶೆಟ್ಟಿ, ಪುತ್ರಿ ಸನ್ನಿಧಿ ಶೆಟ್ಟಿ ಅವರನ್ನೊಳಗೊಂಡು ಬೊರಿವಲಿಯಲ್ಲಿ ನೆಲೆಸಿದ್ದಾರೆ.
ಬಂಟ ಸಮಾಜದ ಮುಂದಾಳುವಾಗಿದ್ದು, ಎಲ್ಲರಿಗೂ ಪ್ರೋತ್ಸಾಹಕರಾಗಿ. ಜನಸಾಮಾನ್ಯ ರಲ್ಲಿ ತೋರಿದ ಪ್ರೀತಿ ವಿಶ್ವಾಸಗಳ ಸೇವೆಯನ್ನೇ ಅಸ್ತ್ರವನ್ನಾಗಿಸಿಕೊಂಡು ಸಾಮಾ ಜಿಕ ವಲಯದ ಜನ ಮೆಚ್ಚು ಗೆಯ ಧೀಮಂತ ಸಮಾಜ ಸೇವಕ ಎಂದೆನಿಸಿದ್ದಾರೆ. ಕೇವಲ ಬಂಟ ಸಮುದಾಯ ಅಲ್ಲದೆ, ಎಲ್ಲ ಸಮಾಜಗಳ ಹಿತಕ್ಕಾಗಿ ಶ್ರಮಿಸಿ ಪ್ರಸಿದ್ಧರಾಗಿರುವ ಐಕಳ ಹರೀಶ್ ಶೆಟ್ಟಿ ಅವರು ಮಹಾನಗರ ಸೇರಿದಂತೆ ರಾಷ್ಟ್ರಾದ್ಯಂತ ಅಪಾರ ಹಿತೈಷಿ, ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ಇವರು, ತಮ್ಮ ಸಾಹಸ, ಶ್ರದ್ಧೆಯಿಂದ ಬದುಕನ್ನು ಸಾಗಿಸಿದರು. ಈ ಕಾರಣದಿಂದಲೇ ಅವರಿಗೆ ನೂರಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.
ಸಾಯಿಸಂಧ್ಯಾ ಆರ್ಟ್ಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ, ಆಹಾರ್‌ನ ಉಪಾಧ್ಯಕ್ಷ ರಾಗಿ, ಬಂಟರ ಸಂಘದ ಅಧ್ಯಕ್ಷರಾಗಿ, ಮಾತೃಭೂಮಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕರಾಗಿ, ಎಸ್. ಎಂ. ಶೆಟ್ಟಿ ಶಾಲಾ ಸಮುಚ್ಚಯ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷರಾಗಿ, ಬಂಟ್ಸ್ ನ್ಯಾಯ ಮಂಡಳಿ ಸದಸ್ಯರಾಗಿ ನೂರಾರು ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿ ಕೊಂಡು ಜವಾಬ್ದಾರಿಯುತ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಓರ್ವ ಸರ್ವೋತ್ಕೃಷ್ಟ ಸಂಘಟಕನೆಂದೇ ಗುರುತಿಸಿಕೊಂಡಿದ್ದಾರೆ.
ವರದಿ:ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.