ಬಿಲ್ಲವರ ಅಸೋಸಿಯೇಶನ್:”ಕೋಟಿ-ಚೆನ್ನಯ’ ಕ್ರೀಡೋತ್ಸವ ಸಮಾರೋಪ
Team Udayavani, Jan 11, 2019, 11:57 AM IST
ಮುಂಬಯಿ: ಸಮಾಜ ಬಾಂಧವರಲ್ಲಿ ಒಗ್ಗಟ್ಟನ್ನು ಸೃಷ್ಟಿಸುವ ಉದ್ದೇಶದಿಂದ ಕ್ರೀಡೋತ್ಸವಗಳನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಹಾನಗರದಲ್ಲಿ ಮಾಡುತ್ತಿರುವ ಸಾಧನೆ ಅಪಾರವಾಗಿದೆ. ಆದರೆ ಮುಂಬಯಿಯ ಎಲ್ಲಾ ತುಳು-ಕನ್ನಡಿಗರು ಒಂದೆಡೆ ಸೇರಿ ಕ್ರೀಡಾಕೂಟವನ್ನು ಆಯೋಜಿಸುವಲ್ಲಿ ನಾವು ಮುಂದಾಗಬೇಕು. ಎಲ್ಲಾ ಜಾತೀಯ ಹಾಗೂ ಕನ್ನಡಪರ ಸಂಘಟನೆಗಳು ಒಂದಾಗಿ ಇಂತಹ ಒಂದು ಕ್ರೀಡೋತ್ಸವವನ್ನು ಆಯೋಜಿಸಿದಾಗ ತುಳು-ಕನ್ನಡಿಗರ ಸಾಧನೆ ಇತರರಿಗೆ ಅರಿವಾಗುತ್ತದೆ ಎಂದು ಬಂಟರ ಸಂಘ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ಸಂಚಾಲಕ ಶಶಿಧರ ಶೆಟ್ಟಿ ಅವರು ಅಭಿಪ್ರಾಯಿಸಿದರು.
ಜ. 6 ರಂದು ಮರೀನ್‌ಲೈನ್ಸ್‌ನ ಯುನಿವರ್ಸಿಟಿ ಗ್ರೌಂಡ್‌ನಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಯುವಾಭ್ಯುದಯ ಸಮಿತಿಯ ಆಶ್ರಯದಲ್ಲಿ ಜರಗಿದ ಕೋಟಿ-ಚೆನ್ನಯ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಯಾವುದೇ ಸ್ಪರ್ಧೆ ಎಂದಾಗ ಅಲ್ಲಿ ಸೋಲು-ಗೆಲುವು ಸಾಮಾನ್ಯ. ಸೋತವರು ನಿರಾಶರಾಗದೆ ಮತ್ತೆ ಪ್ರಯತ್ನಿಸಬೇಕು. ಇಂದಿನ ಕ್ರೀಡೋತ್ಸವದಲ್ಲಿ ವಿಜೇತರಾದ ಕ್ರೀಡಾಳುಗಳಿಗೆ ಉತ್ತಮ ಭವಿಷ್ಯವಿದೆ. ಅವರೆಲ್ಲರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತಾಗಲಿ ಎಂದು ಹಾರೈಸಿದರು.
ಅಸೋಸಿಯೇಶನ್ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ ಅಧ್ಯಕ್ಷತೆಯಲ್ಲಿ ಜರಗಿದ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಶ್ರೀಮತಿ ಶಾರದಾ ಭಾಸ್ಕರ್ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ಕಲ್ಯಾಣ್ ಇದರ ಅಧ್ಯಕ್ಷ ಎಕ್ಕಾರು ನಡೊÂàಡಿಗುತ್ತು ಭಾಸ್ಕರ್ ಎಸ್. ಶೆಟ್ಟಿ ಉಪಸ್ಥಿತರಿದ್ದು ಮಾತನಾಡಿ, ಸಮಾಜ ಬಾಂಧವರೆಲ್ಲ ಒಂದೆಡೆ ಸೇರಿ ಅನ್ಯೋನ್ಯತೆಯಿಂದ, ಪ್ರೀತಿಯಿಂದ ಒಗ್ಗಟ್ಟಿನ ಮುಖಾಂತರ ಕಾಲಕಳೆಯುವುದು ಕ್ರೀಡೋತ್ಸವದ ಮುಖ್ಯ ಉದ್ಧೇಶವಾಗಿದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆಯಿಂದ ಮಾತ್ರ ಸಾಧ್ಯವಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ ಜಯಲಕ್ಷಿ¾ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ರಂಗಪ್ಪ ಸಿ. ಗೌಡ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಭಾರತ್ ಬ್ಯಾಂಕಿನ ನಿರ್ದೇಶಕ ಗಂಗಾಧರ್ ಜೆ. ಪೂಜಾರಿ, ವಾಸ್ತುತಜ್ಞ-ಪುರೋಹಿತ ಡಾ| ಎಂ. ಜೆ. ಪ್ರವೀಣ್ ಭಟ್ ಸಯಾನ್ ಅವರು ಮಾತನಾಡಿ ಶುಭಹಾರೈಸಿದರು.
ಅಸೋಸಿಯೇಶನ್‌ನ ಉಪಾಧ್ಯಕ್ಷ ರಾದ ಶಂಕರ ಡಿ. ಪೂಜಾರಿ, ಹರೀಶ್ ಜಿ. ಅಮಿನ್, ದಯಾನಂದ್ ಆರ್. ಪೂಜಾರಿ, ಶ್ರೀನಿವಾಸ ಆರ್. ಕರ್ಕೇರ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ, ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜೇತ ಸ್ಪರ್ಧಿಗಳಿಗೆ ಗಣ್ಯರು ಬಹುಮಾನ ವಿತರಿಸಿ ಶುಭಹಾರೈಸಿದರು.
ಕ್ರೀಡೋತ್ಸವದ ಪ್ರೋತ್ಸಾಹಕರು, ಪ್ರಾಯೋಜಕರು, ಕ್ರೀಡಾ ಸಂಘಟಕರು, ತೀರ್ಪುಗಾರರನ್ನು ಅಸೋಸಿಯೇಶನ್‌ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಗೌರವಿಸಿದರು. ಅಂತರಾಷ್ಟ್ರೀಯ ಕ್ರೀಡಾ ಸಂಯೋಜಕ ದಯಾನಂದ್ ಕುಮಾರ್ ಮತ್ತು ತಂಡದವರು ವಿವಿಧ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಕು| ರಿಕಿತಾ ರವಿ ಸನಿಲ್, ಶ್ವೇತಾ ಸುವರ್ಣ, ಅನುಷಾ ಪೂಜಾರಿ ಕ್ರೀಡಾ ನಿರೂಪಣೆಗೈದರು. ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನಾಗೇಶ್ ಎನ್. ಕೋಟ್ಯಾನ್ ಸ್ವಾಗತಿಸಿದರು. ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಶಾಂತಿ ಅವರು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಸಂಚಾಲಕ ರವಿ ಎಸ್. ಸನಿಲ್ ಅವರು ವಿಜೇತರ ಯಾದಿ ಪ್ರಕಟಿಸಿದರು.
ಯುವಾಭ್ಯುದಯದ ಗೌರವ ಕಾರ್ಯದರ್ಶಿ ಉಮೇಶ್ ಎನ್. ಕೋಟ್ಯಾನ್ ವಂದಿಸಿದರು. ವಾರ್ಷಿಕ “ಕೋಟಿ-ಚೆನ್ನಯ’ಕ್ರೀಡಾಕೂಟದ ಚಾಂಪಿಯನ್‌ಶಿಪ್ ಪ್ರಥಮ ಟ್ರೋಫಿಯನ್ನು ವಸಾಯಿ ಸಮಿತಿ ತನ್ನದಾಗಿಸಿಕೊಂಡರೆ, ಬೊರಿವಲಿ ಸಮಿತಿ ದ್ವಿತೀಯ ಸ್ಥಾನಕ್ಕೆ ಪಾತ್ರ ವಾಯಿತು.
ನಮ್ಮಲ್ಲಿನ ಕ್ರೀಡಾಪಟುಗಳು ತಮ್ಮ ಆಸಕ್ತ ಕ್ರೀಡೆಯನ್ನು ಆಯ್ದು ಪರಿಶ್ರಮದಿಂದ ಪರಿಣತರಾಗಿ ಧೈರ್ಯಶಾಲಿಗಳಾಗಿ ಬೆಳೆಯಬೇಕು. ಇದು ಸೋಲು-ಗೆಲುವಿನ ಸ್ಪರ್ಧೆಯಲ್ಲ. ಬದಲಾಗಿ ಸಮುದಾಯದೊಳಗಿನ ಕ್ರೀಡಾಳುಗಳನ್ನು ಪ್ರೋತ್ಸಾಹಿಸಿ ಪ್ರತಿಭೆಗಳನ್ನು ಗುರುತಿಸುವ ಕೂಟವಾಗಿದೆ. ಒಂದು ವೇಳೆ ನಗರದಲ್ಲಿ ಎಲ್ಲಾ ಸಂಘ-ಸಂಸ್ಥೆಗಳು, ತುಳು-ಕನ್ನಡಿಗರು ಸೇರಿ ಅದ್ದೂರಿಯ ಕ್ರೀಡಾಕೂಟವನ್ನು ಆಯೋಜನೆ ಮಾಡಿದರೆ ಅದಕ್ಕೆ ಬಿಲ್ಲವರ ಅಸೋಸಿಯೇಶನ್ ಸಂಪೂರ್ಣವಾಗಿ ಸಹಕಾರ ನೀಡಲಿದೆ. ಮುಂದಿನ ದಿನಗಳಲ್ಲಿ ಗುರುಗಳ ತತ್ವ, ಸಂದೇಶ, ಪ್ರೇರಣೆಯಂತೆ ಜಾತಿ, ಭೇದವಿಲ್ಲದೆ, ನಾವೆಲ್ಲರು ಕ್ರೀಡೋತ್ಸವದ ಮುಖಾಂತರ ಒಂದೆಡೆ ಸೇರಿ ನಮ್ಮ ಸಂಘಟನಾತ್ಮಕ ಶಕ್ತಿಯನ್ನು ಲೋಕಕ್ಕೆ ಸಾರೋಣ.
-ಚಂದ್ರಶೇಖರ ಎಸ್. ಪೂಜಾರಿ ,
ಅಧ್ಯಕ್ಷರು, ಬಿಲ್ಲವರ ಅಸೋಸಿಯೇಶನ್ ಮುಂಬಯಿ
ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.