ಯುವಕರು ಯಕ್ಷಕ್ಷೇತ್ರದಲ್ಲಿ ಉತ್ಸುಕರಾಗಬೇಕು: ಡಿ.ಕೆ. ಶೆಟ್ಟಿ
Team Udayavani, Nov 2, 2019, 3:29 PM IST
ಮುಂಬಯಿ, ನ. 1: ಕರ್ನಾಟಕದ ಗಂಡುಕಲೆ ಪ್ರಸಿದ್ಧಿಯ ಪರಶುರಾಮನ ಸೃಷ್ಟಿಯ ತುಳುನಾಡ ವಿಶ್ವಪ್ರಸಿದ್ಧ ಕಲೆಯಾದ ಯಕ್ಷಗಾನ ಕಲೆಯನ್ನು ಕಲಿಸಲು ಆರ್ಟ್ಸ್ ಆ್ಯಂಡ್ ಡ್ಯಾನ್ಸ್ ಸೆಂಟರ್‌ನಲ್ಲಿ ಅಭ್ಯಾಸದ ಕಾರ್ಯಗಾರ ನಡೆಸಲು ಅವಕಾಶ ಕಲ್ಪಿಸಿದ್ದು ಅಭಿನಂದನೀಯ. ಇಂತಹ ಅಭ್ಯಾಸದಲ್ಲಿ ನಮ್ಮ ಯುವ ಜನತೆ ಉತ್ಸಾಹದಿಂದ ಭಾಗವಹಿಸಬೇಕು.ಆವಾಗಲೇ ಯಕ್ಷಕ್ಷೇತ್ರದ ಸರ್ವೋನ್ನತಿ ಸಾಧ್ಯ ಎಂದು ಡಿ.ಕೆ ಶೆಟ್ಟಿ ಪೊವಾಯಿ ತಿಳಿಸಿದರು.
ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಸ್ಥಾಪಕಾಧ್ಯಕ್ಷ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಸಹಯೋಗದಲ್ಲಿ ಅಂಧೇರಿ ಪೂರ್ವದ ಜೆ.ಬಿ ನಗರದಲ್ಲಿನ ಬಾಂಬೆ ಇನ್‌ಸ್ಟಿಟ್ಯೂಟ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಮತ್ತು ಡ್ಯಾನ್ಸ್ ಸೆಂಟರ್‌ನಲ್ಲಿ ಅ. 26ರಂದು ಅಸ್ತಿತ್ವಕ್ಕೆ ತರಲಾದ ಯಕ್ಷಗಾನ ತರಬೇತಿ ಕೇಂದ್ರದ ಉದ್ಘಾಟನಾ ಸರಳ ಕಾರ್ಯಕ್ರಮವನ್ನು ಉದ್ದೇಶಿಸಿ ಡಿ.ಕೆ. ಶೆಟ್ಟಿ ಅವರು ಮಾತನಾಡುತ್ತಿದ್ದರು. ಆರ್ಟ್ಸ್ ಆ್ಯಂಡ್ ಡ್ಯಾನ್ಸ್ ಸೆಂಟರ್‌ನ ಮೈಥಿಲಿ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ನ್ಯಾಯವಾದಿ ಮೋರ್ಲ ರತ್ನಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ – ವರದಿ: ರೊನಿಡಾ ಮುಂಬಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.