ಬಂಟ್ಸ್‌ ಫೋರಂ ಮೀರಾಭಾಯಂದರ್‌ ನೂತನ ಕಚೇರಿ ಉದ್ಘಾಟನೆ


Team Udayavani, Mar 14, 2017, 4:54 PM IST

13mum04a.jpg

ಮುಂಬಯಿ: ನಾವು ಮೊದಲು ಸ್ವಾವಲಂಬಿಗಳಾಗಬೇಕು. ಅನಂತರ, ಸ್ವಜಾತಿ ಬಾಂಧವರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಆವಾಗ ಮಾತ್ರ ಸಮುದಾಯ ಸಂಘಟನೆಗಳು ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ. ಹಲವಾರು ಕಾರ್ಯಯೋಜನೆಗಳ ಮೂಲಕ ಪ್ರಸಿದ್ಧಿ ಹೊಂದಿರುವ ಬಂಟ್ಸ್‌ ಫೋರಂ ಮೀರಾ ಭಾಯಂದರ್‌ ಸಮಾಜದ ಅತ್ಯಂತ ಕೆಳಸ್ತರದ ಸದಸ್ಯರನ್ನು ಮುಖ್ಯವಾಹಿನಿಗೆ ಜೋಡಿಸಬೇಕು. ಇಂದು ಶುಭಾರಂಭಗೊಂಡ ಸ್ವಂತ ಕಚೇರಿ ಭದ್ರತೆಯ ಕೇಂದ್ರವಾಗಲಿ, ಜನಸಾಮಾನ್ಯರ ಅಭಯದ ತಾಣವಾಗಲಿ ಎಂದು ಮಹಾರಾಷ್ಟ್ರದ ಮಾಜಿ ಎಂಎಲ್‌ಸಿ ಮುಜಾಫರ್‌ ಹುಸೇನ್‌ ಅವರು ಅಭಿಪ್ರಾಯಪಟ್ಟರು.

ಮಾ. 12ರಂದು ಮೀರಾರೋಡ್‌ ಪೂರ್ವದ ಪಲಿಮಾರು ಮಠದ ಎದುರಿನ ನ್ಯೂಪ್ರಿಯಾಂಕ ಅಪಾರ್ಟ್‌ಮೆಂಟ್‌ನ ತಳಮಹಡಿಯಲ್ಲಿರುವ ಬಂಟ್ಸ್‌ ಫೋರಂ ಮೀರಾಭಾಯಂದರ್‌ ಇದರ  ಸ್ವಂತ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು,  ನಿಸ್ವಾರ್ಥ ಸೇವಾಕರ್ತರ ಅವಿರತ ಶ್ರಮ ಇಂದು ಫಲ ನೀಡಿತು. ನೂತನ ಕಚೇರಿ ದಿನ ನಿತ್ಯದ ಸಾಮಾಜಿಕ ಚಿಂತನ ಮಂಥನಗಳ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷ ಜಯಪ್ರಕಾಶ್‌ ಭಂಡಾರಿ ಅವರು ಮಾತನಾಡಿ, ಬಹುದಿನಗಳ ಕನಸು ಇಂದು ಸಾಕಾರಗೊಂಡಿತು. ನೂತನ ಕಚೇರಿಯಲ್ಲಿ  ಪ್ರತಿಯೊಬ್ಬ ಕಾರ್ಯಕರ್ತರ ಉಪಸ್ಥಿತಿ ಅನಿವಾರ್ಯವಾಗಿದೆ. ಬಂಟರ ಮೂಲ ಸಂಸ್ಕೃತಿಗಳು, ಕಲಾರಾಧನೆಯ ವಿಷಯಗಳ ಬಗ್ಗೆ ಅರಿವನ್ನು ಒದಗಿಸುವ ಕಾರ್ಯಕ್ಕೆ ನಮ್ಮ ಕಚೇರಿ ಹೆಚ್ಚಿನ ಪ್ರಾಧಾನ್ಯ ನೀಡುತ್ತಿದೆ. ನಿರಂತರ ಕಾರ್ಯಕ್ರಮಗಳ ಜೊತೆಗೆ ಪ್ರತಿ ತಿಂಗಳ ಸಂಕ್ರಾಂತಿ
ಯಂದು ಭಜನೆಯನ್ನು ಆಯೋಜಿಸಲಾಗಿದೆ ಎಂದರು.

ಗೌರವ ಅಧ್ಯಕ್ಷ ಸಂತೋಷ್‌ ರೈ ಬೆಳ್ಳಿಪಾಡಿ, ಸಂಚಾಲಕ ರಂಜನ್‌ ಶೆಟ್ಟಿ, ಉಪಾಧ್ಯಕ್ಷರಾದ ದಿವಾಕರ ಎಂ. ಶೆಟ್ಟಿ ಮತ್ತು ಆನಂದ್‌ ಶೆಟ್ಟಿ ಕುಕ್ಕುಂದೂರು, ಕಾರ್ಯದರ್ಶಿ ಹರ್ಷ ಕುಮಾರ್‌ ಡಿ. ಶೆಟ್ಟಿ,  ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ,  ಜತೆ ಕಾರ್ಯದರ್ಶಿ ವಿಜಯ ಲಕ್ಷ್ಮೀ ಡಿ. ಶೆಟ್ಟಿ, ಜತೆ ಕೋಶಾಧಿಕಾರಿ ಶರ್ಮಿಳಾ ಕೆ. ಶೆಟ್ಟಿ, ಸಲಹೆಗಾರರಾದ ಮಧುಕರ ಕೆ. ಶೆಟ್ಟಿ, ಮನ್ಮಥ ಕಡಂಬ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರತಿಭಾ ರವಿ  ಶೆಟ್ಟಿ,  ಯುವ ವಿಭಾಗದ ಕಾರ್ಯಾಧ್ಯಕ್ಷ ಸೀತಾರಾಮ್‌ ಶೆಟ್ಟಿ ಅಮಾಸೆಬೈಲು ಹಾಗೂ ಸದಸ್ಯರು ಅತಿಥಿಗಳನ್ನು ಗೌರವಿಸಿದರು.

ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ ಸಾಲ್ಯಾನ್‌, ಹನುಮಾನ್‌ ಭಜನಾ ಮಂಡಳಿಯ ಅಧ್ಯಕ್ಷ ಜಯರಾಮ್‌ ಶೆಟ್ಟಿ, ಮೊಗವೀರ ಕೋ  ಆಪರೇಟಿವ್‌ ಬ್ಯಾಂಕಿನ ನಿರ್ದೇಶಕ ಜಯಶೀಲ ತಿಂಗಳಾಯ, ಬಂಟ್ಸ್‌ ಸಂಘದ ಮುಂಡಪ್ಪ ಪಯ್ಯಡೆ, ಪದ್ಮನಾಭ ಪಯ್ಯಡೆ, ಕಾಶೀಮೀರಾ ಭಾಸ್ಕರ ಶೆಟ್ಟಿ, ಎಲುಬು ತಜ್ಞ ಡಾ| ಭಾಸ್ಕರ ಶೆಟ್ಟಿ, ಮೀರಾ ಭಾಯಂದರ್‌ ಹೊಟೇಲ್‌ ಅಸೋಸಿಯೇಶನ್‌ನ ಅಧ್ಯಕ್ಷ ರತ್ನಾಕರ ಶೆಟ್ಟಿ, ಕುಲಾಲ ಸಂಘ, ಮೊಗವೀರ ವ್ಯವಸ್ಥಾಪಕ ಮಂಡಳಿ, ದೇವಾಡಿಗ ಸಂಘ, ತುಳುನಾಡ ಸಮಾಜ,  ತುಳುನಾಡ ವೆಲ್ಫೆàರ್‌ ಅಸೋಸಿಯೇಶನ್‌ ಹಾಗೂ ಇತರ ತುಳು ಕನ್ನಡ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದು, ಶುಭ ಹಾರೈಸಿದರು. 

 ಚಿತ್ರ-ವರದಿ: ರಮೇಶ ಅಮೀನ್‌

ಟಾಪ್ ನ್ಯೂಸ್

City

Modern City: ದುಬಾೖ ಮಾದರಿ ದೇಶದಲ್ಲೂ ಫಿನ್‌ಟೆಕ್‌ ಸಿಟಿ ನಿರ್ಮಾಣ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

City

Modern City: ದುಬಾೖ ಮಾದರಿ ದೇಶದಲ್ಲೂ ಫಿನ್‌ಟೆಕ್‌ ಸಿಟಿ ನಿರ್ಮಾಣ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.