ರಾಜ್ಯದಲ್ಲಿ ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚಾದ ಬಾಲ್ಯವಿವಾಹ !
Team Udayavani, Oct 9, 2020, 7:53 PM IST
ಸಾಮದರ್ಭಿಕ ಚಿತ್ರ
ಮುಂಬಯಿ, ಅ. 8: ಕೋವಿಡ್ -19 ಆವರಿಸಿಕೊಂಡಿರುವ ಬೆನ್ನಲ್ಲೇ ಮಹಾರಾಷ್ಟ್ರದಾದ್ಯಂತ ಶೇ. 78 ರಷ್ಟು ಬಾಲ್ಯ ವಿವಾಹ ಪ್ರಕರಣ ಹೆಚ್ಚಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಸೋಂಕು ಪ್ರಸರಿಸದಿರಲು ಉಪಕ್ರಮ ವಾಗಿ ಕೇಂದ್ರ ಸರಕಾರವು ಲಾಕ್‌ಡೌನ್ ಘೋಷಿಸಿತ್ತು. ಇದು ಸೋಂಕು ತಡೆಯುವಲ್ಲಿ ಸಹಕರಿಸಿದರೂ, ಒಂದು ಹಂತದಲ್ಲಿ ಬಡತನ ಹೆಚ್ಚಲು ಕಾರಣವಾಯಿತು. ಜತೆಗೆ ಶಾಲೆಗಳೂ ನಡೆಯುತ್ತಿಲ್ಲ. ಇದು ಹೆಣ್ಣು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ವಿವಾಹಕ್ಕೆ ಒತ್ತಾಯಿಸುತ್ತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಹೆಚ್ಚು ಪ್ರಕರಣಗಳು : 2019 ರ ಇದೇ ಅವ ಧಿಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್‌ವರೆಗೆ ರಾಜ್ಯದಲ್ಲಿ ಬಾಲ್ಯ ವಿವಾಹಗಳು ಶೇ.78.3 ರಷ್ಟು ಹೆಚ್ಚಾಗಿದೆ ಎಂದು ರಾಜ್ಯ ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ (ಡಬ್ಲ್ಯುಸಿಡಿ) ಇಲಾಖೆಯಮಾಹಿತಿಯು ಬಹಿರಂಗಪಡಿಸಿದೆ. ಕಳೆದ ವರ್ಷ ಡಬ್ಲ್ಯುಸಿಡಿ ರಾಜ್ಯದಲ್ಲಿ120 ಬಾಲ್ಯ ವಿವಾಹಗಳನ್ನು ನಿಲ್ಲಿಸುವಲ್ಲಿಯಶಸ್ವಿಯಾಗಿತ್ತು. ಪ್ರಸಕ್ತ ವರ್ಷ 214ಬಾಲಕಿಯರ ವಿವಾಹವನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.
ಜೂನ್ ಬಳಿಕ ಹೆಚ್ಚು : ಜೂನ್‌ನಲ್ಲಿ ರಾಜ್ಯ ಸರಕಾರವು ವಿವಾಹಕ್ಕೆ 50 ಜನರ ಕೂಡುವಿಕೆಯನ್ನು ಸೀಮಿತಗೊಳಿಸಿತು. ಇದು ಬಡ ರೈತರಿಗೆ ವಿವಾಹ ಸಮಾರಂಭಗಳನ್ನು ಹೆಚ್ಚುಕೈಗೆಟುಕುವಂತೆ ಮಾಡಿದ್ದು, ಅಂದಿನಿಂದಬಾಲ್ಯ ವಿವಾಹದ ಘಟನೆಗಳು ಹೆಚ್ಚಾಗಿದೆ. ಜೂನ್ ವರೆಗೆ 76 ಬಾಲ್ಯ ವಿವಾಹಪ್ರಕರಣಗಳು ವರದಿಯಾಗಿದ್ದವು, ಆದರೆ ಅನಂತರ ಮೂರು ತಿಂಗಳಲ್ಲಿ 138 ಹೊಸ ಘಟನೆಗಳು ವರದಿಯಾಗಿವೆ.
ರಾಜ್ಯದಲ್ಲಿ ಬೀಡ್, ಜಾಲ್ನಾ, ಔರಂಗಾಬಾದ್, ಪರ್ಭಾಣಿ, ಹಿಂಗೋಲಿ, ನಾಂದೇಡ್, ಅಹ್ಮದ್‌ನಗರ, ಲಾತೂರ್, ಬುಲ್ಡಾಣ, ಧುಳೆ, ಜಲ್ಗಾಂವ್, ನಾಸಿಕ್, ಸೊಲ್ಲಾಪುರ, ಉಸ್ಮಾನಾಬಾದ್, ಕೊಲ್ಲಾಪುರ, ಸಾಂಗ್ಲಿ ಮತ್ತು ವಾಶಿಮ್ – ಈ 17 ಜಿಲ್ಲೆಗಳಿಂದ ಬಾಲ್ಯ ವಿವಾಹದ ಗರಿಷ್ಠ ಪ್ರಕರಣಗಳು ವರದಿಯಾಗಿವೆ.
ಬಾಲ್ಯ ವಿವಾಹವನ್ನು ಆರಂಭಿಕ ಗರ್ಭಧಾರಣೆ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆಗೆ ಒಂದು ಕಾರಣವೆಂದು ಪರಿಗಣಿಸಲಾಗಿದೆ. ಇಂತಹ ಘಟನೆಗಳ ಬಗ್ಗೆಹೆಚ್ಚು ಜಾಗರೂಕರಾಗಿರಲು ನಾವು ಮಕ್ಕಳ ರಕ್ಷಣಾ ಸಮಿತಿಗಳಿಗೆ ಸೂಚನೆ ನೀಡಿದ್ದೇವೆ ಎಂದು ರಾಜ್ಯ ಡಬ್ಲ್ಯುಸಿಡಿ ಕಾರ್ಯದರ್ಶಿ ಐ.ಎ. ಕುಂದನ್ ಹೇಳಿದ್ದಾರೆ. ಕಟ್ಟುನಿಟ್ಟಾದ ಲಾಕ್‌ಡೌನ್ ಕ್ರಮಗಳು, ಕೂಟಗಳ ಮೇಲಿನ ಮಿತಿಗಳು ಮತ್ತು ಪೊಲೀಸರಂತಹ ಕಾನೂನು ಜಾರಿ ಸಂಸ್ಥೆಗಳು ಕೋವಿಡ್ -19 ಹಾಗೂಲಾಕ್‌ಡೌನ್-ಸಂಬಂಧಿ ತ ಕರ್ತವ್ಯಗಳಲ್ಲಿಕಾರ್ಯನಿರತರಾಗಿದ್ದಾರೆ. ಹೀಗಾಗಿಹಲವಾರು ವಿವಾಹ ಸಮಾರಂಭಗಳು ವರದಿಯಾಗದೇ ಇರುವುದರಿಂದ ಬಾಲ್ಯ ವಿವಾಹದ ಪ್ರಕರಣಗಳು ಇನ್ನೂ ಹೆಚ್ಚಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ರ ಪ್ರಕಾರ, ಬಾಲ್ಯ ವಿವಾಹ ಕಾನೂನುಬಾಹಿ ರವಾಗಿದೆ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರ ಮತ್ತು 21 ವರ್ಷದೊಳಗಿನ ಹುಡುಗರ ವಿವಾಹವು ಶಿಕ್ಷಾರ್ಹ ಅಪರಾಧವಾಗಿದೆ. ರೈತರು ಬಡವರಾಗಿದ್ದರೂ, ತಮ್ಮ ಉಳಿತಾಯದ ಹೆಚ್ಚಿನ ಭಾಗವನ್ನು ಅವರು ಸಾಮಾಜಿಕ ಬೇಡಿಕೆಗಳ ಪ್ರಕಾರ ತಮ್ಮ ಹೆಣ್ಮಕ್ಕಳ ಮದುವೆ ಮೇಲೆ ಖರ್ಚು ಮಾಡುತ್ತಾರೆ. ವಿವಾಹ ಕೂಟಗಳಲ್ಲಿ ಭಾಗವಹಿಸಬಹುದಾದ ಸದಸ್ಯರ ಮಿತಿಯೊಂದಿಗೆ ಈ ಖರ್ಚು ಕಡಿಮೆಯಾದಂತೆ ಅದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಸತಾರ ಜಿಲ್ಲೆಯ ಸರಕಾರೇತರ ಸಂಸ್ಥೆ (ಎನ್‌ಜಿಒ) ಲೋಕಲ್ಯಾಣ್ ಚಾರಿಟೇಬಲ್ ಟ್ರಸ್ಟ್‌ನ ಸುàರ್ ತುಪೆ ಹೇಳಿದ್ದಾರೆ.
ಯುನೈಟೆಡ್ ನೇಷನ್ಸ್ ಇಂಟರ್ ನ್ಯಾಷನಲ್ ಚಿಲ್ಡ›ನ್ಸ್ ಎಮರ್ಜೆನ್ಸಿ ಫಂಡ್ (ಯುನಿಸೆಫ್) ಪ್ರಕಾರ, ವಿಶ್ವಾದ್ಯಂತ ಎಲ್ಲ ಅಪ್ರಾಪ್ತ ವಧುಗಳಲ್ಲಿ ಅರ್ಧದಷ್ಟು ದಕ್ಷಿಣ ಏಷ್ಯಾದವರಾಗಿದ್ದು, ಈ ಪೈಕಿ ಮೂರರಲ್ಲಿ ಒಬ್ಬರು ಭಾರತದಿಂದ ಬಂದವರಾಗಿದ್ದಾರೆ. ಭಾರತದಲ್ಲಿ ಪ್ರಥಮ ವಿವಾಹದ ಸರಾಸರಿವಯಸ್ಸು ಶ್ರೀಮಂತ ಮಹಿಳೆಯರಲ್ಲಿ 19.7 ವರ್ಷಗಳಾಗಿದ್ದರೆ, ಬಡ ಮಹಿಳೆಯರಲ್ಲಿ 15.4 ರಷ್ಟಿದೆ ಎಂದು ಯುನಿಸೆಫ್ ವರದಿಹೇಳುತ್ತದೆ. 2025ರ ವೇಳೆಗೆ ಕೋವಿಡ್ -19 ಜಾಗತಿಕವಾಗಿ 2.5 ದಶಲಕ್ಷಕ್ಕೂಹೆಚ್ಚಿನ ಹುಡುಗಿಯರನ್ನು ಬಾಲ್ಯ ವಿವಾಹದ ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಮತ್ತೂಂದು ಎನ್‌ಜಿಒ ಸೇವ್ ದಿ ಚಿಲ್ಡ್ರನ್ ತನ್ನ ಇತೀಚಿನ ಅಧ್ಯಯನದಲ್ಲಿ ತಿಳಿಸಿದೆ.
ಲಾಕ್‌ಡೌನ್ ಕಾರಣ ಸಾವಿರಾರು ವಲಸೆ ಕಾರ್ಮಿಕರು ತಮ್ಮ ತವರು ಸ್ಥಳಗಳಿಗೆ ಮರಳಿದ್ದಾರೆ. ಇದು ಹುಡುಗಿಯರ ಕುಟುಂಬಗಳಿಗೆ ನಿರೀಕ್ಷಿತ ವರರನ್ನು ಹುಡುಕಲು ಅವಕಾಶವನ್ನು ನೀಡಿದೆ. ಕಾರ್ಖಾನೆ ಮಾಲಕರು ದಂಪತಿಗಳಿಗೆ ಆದ್ಯತೆ ನೀಡುತ್ತಾರೆ. ವಲಸೆ ಕಾರ್ಮಿಕರ ಬಾಲ್ಯ ವಿವಾಹಕ್ಕೆ ಇದೂ ಒಂದು ಕಾರಣವಾಗಿದೆ.. ಸಂಜಯ್ ಶರ್ಮ ಉಪನಿರ್ದೇಶಕರು, ಸೇವ್ ದಿ ಚಿಲ್ಡ್ರನ್
ವಲಸಿಗರು ಹಿಂದಿರುಗಿದಂತೆ ಹುಡುಗಿಯರ ಹೆತ್ತವರು ಸುರಕ್ಷತೆಯ ದೃಷ್ಟಿಯಿಂದ ಅವರ ವಿವಾಹ ಮಾಡಿಸುತ್ತಾರೆ ಮತ್ತು ತಮ್ಮ ಹೆಣ್ಮಕ್ಕಳು ತಮ್ಮ ಇಚ್ಛೆಗೆ ವಿರುದ್ಧವಾಗಿ ಪ್ರೀತಿಯಲ್ಲಿ ಬೀಳುವುದನ್ನು ತಪ್ಪಿಸುತ್ತಾರೆ.-ವರ್ಷಾ ದೇಶಪಾಂಡೆ, ರಾಷ್ಟ್ರೀಯ ಮಹಿಳಾ ಆಯೋಗದ ನ್ಯಾಯವಾದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.