ಮುಂಬಯಿಯಲ್ಲಿ ಸೋಂಕು ನಿಯಂತ್ರಣದಲ್ಲಿದೆ: ಬಿಎಂಸಿ
Team Udayavani, Jul 24, 2020, 5:13 PM IST
ಮುಂಬಯಿ, ಜು. 23: ನಗರದಲ್ಲಿ ಕೋವಿಡ್ -19ರ ಸ್ಥಿತಿ ನಿಯಂತ್ರಣದಲ್ಲಿದ್ದು, ಪ್ರತಿದಿನ 1,500ಕ್ಕಿಂತ ಕಡಿಮೆ ಹೊಸ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ ಎಂದು ಮುಂಬಯಿ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮನಾಪ ಆಯುಕ್ತ ಸುರೇಶ್ ಕಾಕಾನಿ ಈ ಬಗ್ಗೆ ಮಾಹಿತಿ ನೀಡಿ, ಪ್ರತಿದಿನ 6,000 ರಿಂದ 7,000ದಷ್ಟು ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಹೆಚ್ಚಿನ ಜನರು ಸುರಕ್ಷತಾ ನಿಯಮಗಳನ್ನು ಅನುಸರಿಸುತ್ತಿದ್ದಾರೆ. ಕಳೆದ ಹಲವಾರು ದಿನಗಳಿಂದ ನಗರವು ಪ್ರತಿದಿನ 1,500ಕ್ಕಿಂತ ಕಡಿಮೆ ಹೊಸ ಪ್ರಕರಣಗಳನ್ನು ಪಡೆಯುತ್ತಿದೆ. ಆದ್ದರಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕಾಕಾನಿ ಹೇಳಿದ್ದಾರೆ.
ಕೋವಿಡ್ -19 ನಗರದಲ್ಲಿ ಹರಡಿದ ಬಳಿಕ ಬಿಎಂಸಿ ಕೊಳೆಗೇರಿ ಪ್ರದೇಶಗಳ ಮೇಲೆ ಕೇಂದ್ರೀಕರಿಸಿದೆ. ಸೋಂಕಿತ ಜನರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಸೋಂಕು ದೃಢಪಟ್ಟ ಬಳಿಕ ಅವರನ್ನು ಕೋವಿಡ್‌ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಕೊಳೆಗೇರಿ ಪ್ರದೇಶಗಳಲ್ಲಿ ಬಿಎಂಸಿ ಮನೆ-ಮನೆ ಸಮೀಕ್ಷೆ ನಡೆಸಿ ರೋಗಲಕ್ಷಣ ಹೊಂದಿರುವವರನ್ನು ಪತ್ತೆ ಮಾಡಿದೆ ಎಂದು ಹೆಚ್ಚುವರಿ ಮುನ್ಸಿಪಲ್ ಕಾರ್ಪೊರೇಶನ್ ಆಯುಕ್ತರು ಹೇಳಿದರು.
ಸ್ಥಳೀಯ ವೈದ್ಯರ ಸಹಾಯದಿಂದ ಜ್ವರ ಚಿಕಿತ್ಸಾಲಯಗಳು ತೆರೆದಿದ್ದು, ಎಲ್ಲ ವೈದ್ಯಕೀಯ ಉಪಕರಣಗಳನ್ನು ಒದಗಿಸಲಾಗಿದೆ. ಸಾರ್ವಜನಿಕ ಶೌಚಾಲಯಗಳನ್ನು ಸಹ ಸೋಂಕುಮುಕ್ತಗೊಳಿಸಲಾಗುತ್ತಿದೆ. ಮುಂಬಯಿ ಮಹಾನಗರ ಪಾಲಿಕೆಯು ಈಗ ವಸತಿ ಕಟ್ಟಡಗಳು ಮತ್ತು ವಸತಿ ಸಂಘಗಳತ್ತ ಗಮನ ಹರಿಸಲಿದೆ ಎಂದು ಆಯುಕ್ತ ಕಾಕದಿ ತಿಳಿಸಿದ್ದಾರೆ. ಗಣೇಶ ಉತ್ಸವದ ಕುರಿತು ನಾಗರಿಕ ಸಂಸ್ಥೆ ಒಂದು ವಾರ್ಡ್‌ನಲ್ಲಿ ಒಂದು ಗಣಪತಿಗೆ ಅವಕಾಶ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.