ಡಾ| ವಿಜಯ ಎಂ. ಶೆಟ್ಟಿಯವರ ವೈದ್ಯಕೀಯ ಸೇವೆ ಮಾದರಿ: ಚವಾಣ್
ಸಿಟಿ ಹಾಸ್ಪಿಟಲ್ ಮತ್ತು ಪಾಲಿ ಕ್ಲಿನಿಕ್‌ನಿಂದ ಕೃತಕ ಮಂಡಿ ಜೋಡಣೆಯ ಬಗ್ಗೆ ಮಾಹಿತಿ ಶಿಬಿರ
Team Udayavani, Apr 4, 2019, 12:28 PM IST
ಡೊಂಬಿವಲಿ: ವೈದ್ಯೋ ನಾರಾಯಣ ಹರಿ ಎಂಬಂತೆ ರೋಗಿಗಳು ವೈದ್ಯರನ್ನು ದೇವರಂತೆ ಕಾಣುತ್ತಾರೆ. ಇಂತಹ ಓರ್ವ ದೇವರು ಡೊಂಬಿವಲಿಕರ್ ಎನ್ನಲು ನನಗೆ ಹೆಮ್ಮೆ ಯಾಗುತ್ತಿದೆ. ನಾನು ರಾಜ್ಯದ ಮಂತ್ರಿಯಾಗಿ ಮಹಾರಾಷ್ಟ್ರ ಸರಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದು, ನನ್ನ ವಿಭಾಗದಲ್ಲಿ ಸುಮಾರು 14 ಮೆಡಿಕಲ್ ಕಾಲೇಜುಗಳಿದ್ದು, ಅಲ್ಲಿ 4500 ವೈದ್ಯರಿದ್ದಾರೆ. ಒಂದು ಕಾಲದಲ್ಲಿ ವೈದ್ಯಕೀಯ ಪದವಿ ಮಾಡಲು ಸುಮಾರು ಒಂದು ಕೋ. ರೂ. ವೆಚ್ಚ ತಗಲುತ್ತಿತ್ತು. ಸರಕಾರದ ಹೊಸ ನೀತಿ ಯಿಂದಾಗಿ ನೀಟ್ ಪರೀಕ್ಷೆಯಲ್ಲಿ ಪಾಸಾದವರು ವೈದ್ಯರಾಗಬಹುದು. ಇದರಿಂದಾಗಿ ಸಾಮಾನ್ಯ ವಿದ್ಯಾರ್ಥಿಯ ಕನಸು ನನಸಾಗುತ್ತಿದೆ. ಹೃದಯ
ರೋಗಿಗಳಿಗೆ ಉಪಯೋಗಿಸುವ ಉಪಕರಣ ಒಂದು ಲಕ್ಷದವರೆಗೆ ಇತ್ತು. ಆದರೆ ಈಗ 18 ಸಾವಿರ ರೂ. ಗಳಿಗೆ ಲಭ್ಯವಿದೆ. ಮಂಡಿ ಚಿಕಿತ್ಸೆಗೆ ಸುಮಾರು 4 ಲಕ್ಷ ರೂ. ವೆಚ್ಚ ತಗುಲಲಿದ್ದು, ಇಂದು ಡಾ| ವಿ. ಎಂ. ಶೆಟ್ಟಿ ಅವರ ಸಮಾಜ ಸೇವೆಯಿಂದಾಗಿ 99,000 ರೂ. ಗಳಿಗೆ ಲಭ್ಯ ವಾಗಿದ್ದು. ಗ್ರಾಮೀಣ ಭಾಗದ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಸಿಗಬೇಕೆಂಬ ಉದ್ದೇಶವನ್ನು ಸರಕಾರ ಹೊಂದಿದೆ ಎಂದು ರಾಜ್ಯ ಆರೋಗ್ಯ ಸಚಿವ ರವೀಂದ್ರ ಚವಾಣ್ ನುಡಿದರು.
ಮಾ. 31ರಂದು ಡೊಂಬಿವಲಿ ಪೂರ್ವದ ಠಾಕೂರ್ ಸಭಾಗೃಹದಲ್ಲಿ ಸಿಟಿ ಆಸ್ಪತ್ರೆಯ ಡಾ| ವಿಜಯ ಎಂ. ಶೆಟ್ಟಿ ಅವರ ವೈದ್ಯಕೀಯ ಸೇವೆಯ 20ನೇ ವರ್ಷಾಚರಣೆಯ ಅಂಗವಾಗಿ ನಡೆದ ಕೃತಕ ಮಂಡಿ ಜೋಡಣೆ ಮಾಹಿತಿ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಪ್ರಧಾನಮಂತ್ರಿ ಆಯುಷ್ಮಾನ್ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದವರಿಗೆ ಶಸ್ತ್ರ ಚಿಕಿತ್ಸೆಗಳು ಉಚಿತವಾಗಿ ಜರಗಲಿದೆ. ಡಾ| ವಿ. ಎಂ. ಶೆಟ್ಟಿ ಅವರಂತೆ ವೈದ್ಯಕೀಯ ರಂಗದ ಸಮಾಜ ಸೇವೆ ಇತರ ವೈದ್ಯರಿಗೆ ಮಾದರಿಯಾಗಲಿ ಎಂದು ಅಭಿಪ್ರಾಯಿಸಿದರು.
ಅತಿಥಿಯಾಗಿ ಆಗಮಿಸಿದ ಡಾ| ರಾಮ್ ಪ್ರಭು ಮಾತನಾಡಿ, ಡಾ| ವಿ. ಎಂ. ಶೆಟ್ಟಿ ಅವರು ತನ್ನ ನಗುವಿನಲ್ಲೇ ರೋಗಿಗಳ ಸಮಸ್ಯೆಯನ್ನು ದೂರ ಮಾಡುತ್ತಾರೆ. ಹಿರಿಯ ನಾಗರಿಕರ ಸಮಸ್ಯೆಯನ್ನು ಮನಗಂಡು 99 ಸಾವಿರ ರೂ. ಗಳಲ್ಲಿ ಒಂದು ಕಾಲಿನ ಮಂಡಿ ಶಸ್ತ್ರ ಚಿಕಿತ್ಸೆಯನ್ನು ಮಾಡುವ ಮೂಲಕ ವೈದ್ಯಕೀಯ ರಂಗದಲ್ಲಿ ಕ್ರಾಂತಿಯನ್ನು ತಂದಿದ್ದಾರೆ.
ಡೊಂಬಿವಲಿ ಸಿಟಿ ಆಸ್ಪತ್ರೆಯಲ್ಲಿ ಉತ್ತಮ ಗುಣ ಮಟ್ಟದ ಸಲಕರಣೆಯೊಂದಿಗೆ ಸೇವೆ ಸಿಗುವಾಗ ಮುಂಬಯಿ ಮಹಾನಗರಕ್ಕೆ ಯಾರು ಹೋಗು ತ್ತಾರೆ. ನಿಮ್ಮ ಯೋಜನೆ ಒಂದು ಸಾವಿರ ಗಡಿಯನ್ನು ದಾಟಲಿ ಎಂದು ಹಾರೈಸಿದರು.
ಇನ್ನೋರ್ವ ಅತಿಥಿ ಡಾ| ಸುರೇಶ್ ಶೆಟ್ಟಿ ಅವರು ಮಾತನಾಡಿ, ಡಾ| ವಿಜಯ ಶೆಟ್ಟಿ ಅವರು ಕಠಿನ ಪರಿಶ್ರಮದ ಮೂಲಕ ಉತ್ತಮ ಗುಣಮಟ್ಟದ ಸೇವೆಯಿಂದಾಗಿ ಉನ್ನತ ಮಟ್ಟಕ್ಕೆ ಬೆಳೆದಿದ್ದಾರೆ. ಕಳೆದ 20 ವರ್ಷಗಳಿಂದ ಡೊಂಬಿವಲಿ ಪರಿಸರದಲ್ಲಿ ಒಬ್ಬ ಉತ್ತಮ ಅಥೋìಪೆಡಿಕ್ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಅವರಿಂದ ನಿಜವಾದ ಸಮಾಜ ಸೇವೆ ನಡೆಯುತ್ತಿದೆ ಎಂದು ನುಡಿದರು.
ಅತಿಥಿಯಾಗಿ ಪಾಲ್ಗೊಂಡ ಡಾ| ಅರುಣ್ ಪಾಟೀಲ್ ಅವರು, ಡಾ| ವಿ. ಎಂ. ಶೆಟ್ಟಿ ಅವರ ಯಶಸ್ಸಿನ ಹಿಂದೆ ಅವರ ಪತ್ನಿ ಹಾಗೂ ಆಸ್ಪತ್ರೆಯ ಸಿಬಂದಿಗಳ ಪಾಲು ಬಹಳಷ್ಟಿದೆ. ಇಂದು ಡೊಂಬಿವಲಿಕರ್ ಅವರು ಮಂಡಿ ನೋವಿನ ಬಗ್ಗೆ ಒಳ್ಳೆಯ ಉಪನ್ಯಾಸವನ್ನು ನೀಡಿದ್ದಾರೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆಯಬೇಕು. ಇಂತಹ ಸೇವೆ ರಾಜ್ಯದ ಆದಿವಾಸಿ ಕ್ಷೇತ್ರಗಳಲ್ಲಿ ಬಹಳಷ್ಟು ಅಗತ್ಯವಿದೆ. ಡೊಂಬಿವಲಿಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಡಾ| ವಿ. ಎಂ. ಶೆಟ್ಟಿ ಸಂತರಾಗಿ ಮೂಡಿಬರಲಿ ಎಂದರು.
ಅತಿಥಿಗಳಾಗಿ ಆಗಮಿಸಿದ ವಿಶ್ವ ಬಂಟರಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ವರಿಗೆ ಮಂಡಿ ನೋವಿನ ಸಮಸ್ಯೆಯನ್ನು ಮನಗಂಡ ಡಾ| ವಿ. ಎಂ. ಶೆಟ್ಟಿ ಅವರು ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿ ನೋವು ನಿವಾರಿಸುವ ಕಾರ್ಯಕ್ಕೆ ಮುಂದಾಗಿರುವುದು ಅಭಿನಂದನೀಯವಾಗಿದೆ ಎಂದು ನುಡಿದು ಶುಭ ಹಾರೈಸಿದರು.
ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಇವರು ಮಾತನಾಡಿ, ಉತ್ತಮ ಗುಣಮಟ್ಟದ ಸಲಕರಣೆಯೊಂದಿಗೆ ಗುಣಮಟ್ಟದ ಸೇವೆ ನೀಡುತ್ತಿರುವ ಡಾ| ವಿ. ಎಂ. ಶೆಟ್ಟಿ ಅವರು ಅಭಿನಂದನಾರ್ಹರು. ಬಂಟರ ಸಂಘ ಈ ಸೇವೆಗೆ ಸಹಕರಿಸಲಿದೆ. ಬಂಟರ ಸಂಘ ಪ್ರತಿ ತಿಂಗಳು 3 ಲಕ್ಷ ರೂ.ಗಳನ್ನು ಆರೋಗ್ಯ ಸಂಬಂಧಿ ಚಿಕಿತ್ಸೆೆಗಳಿಗೆ ವಿತರಿಸುತ್ತಿದೆ. ಪ್ರತೀ ವರ್ಷದ ಸುಮಾರು 5 ಕೋ. ರೂ. ಸಮಾಜ ಕಲ್ಯಾಣಕ್ಕಾಗಿ ವಿತರಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.
ಕರ್ನಾಟಕ ಸಂಘ ಡೊಂಬಿವಲಿ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಮಾತನಾಡಿ, ಡಾ| ವಿ. ಎಂ. ಶೆಟ್ಟಿ ಅವರು ಕೇವಲ ವೈದ್ಯರಾಗಿರದೆ ಓರ್ವ ಸಮಾಜ ಸೇವಕರಾಗಿದ್ದಾರೆ. ಕಳೆದ 20 ವರ್ಷಗಳಿಂದ ಕಷ್ಟಪಟ್ಟು ಪ್ರಾಮಾಣಿಕ ಸೇವೆಯಿಂದಾಗಿ ತನ್ನನ್ನು ತಾನು ಗುರುತಿಸಿ ಕೊಂಡು ಡೊಂಬಿವಲಿಯಲ್ಲಿ ಓರ್ವ ಉತ್ತಮ ವೈದ್ಯರಾಗಿ ಪ್ರಸಿದ್ಧರಾಗಿದ್ದಾರೆ ಎಂದರು.
ಬಂಟರ ಸಂಘ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ ಮಾತನಾಡಿ, ವೈದ್ಯರು ದೇವರ ಪ್ರತಿರೂಪ. ಡಾ| ವಿ. ಎಂ. ಶೆಟ್ಟಿ ಆರ್ಥಿಕ ವಾಗಿ ಹಿಂದುಳಿದ ಹಿರಿಯರ ಕಣ್ಣೀರೊರೆಸುವ ದೇವತಾ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.
ಅತಿಥಿಯಾಗಿ ಪಾಲ್ಗೊಂಡ ಉಮೇಶ್ ಶೆಣೈ ಅವರು ಮಾತನಾಡಿ, ಹಿರಿಯರ ಮಂಡಿ ನೋವಿನ ಸಮಸ್ಯೆಗೆ ಡಾ| ವಿ. ಎಂ. ಶೆಟ್ಟಿ ಅವರಿಂದ ನಗೆಯ ಪರಿಹಾರ ಅಭಿನಂದನೀಯವಾಗಿದೆ ಎಂದರು. ನಗರ ಸೇವಕ ದಯಾಶಂಕರ್ ಶೆಟ್ಟಿ ಅವರು ಮಾತನಾಡಿ, ಡಾ| ಶೆಟ್ಟಿ ಅವರು ಡೊಂಬಿವಲಿ ಪರಿಸರದಲ್ಲಿ ವೈದ್ಯಕೀಯ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ ಎಂದು ನುಡಿದು ಶುಭ ಹಾರೈಸಿದರು.
ಡಾ| ಯೋಗಿನಿ ಶೆಟ್ಟಿ, ಸುನಂದಾ ಶೆಟ್ಟಿ ಪ್ರಾರ್ಥನೆಗೈದರು. ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಡಾ| ರಾಮ ಪ್ರಭು, ಡಾ| ಸುರೇಶ್ ಶೆಟ್ಟಿ, ಡಾ| ಅರುಣ್ ಪಾಟೀಲ್, ಸಚಿವ ರವೀಂದ್ರ ಚವಾಣ್, ಐಕಳ ಹರೀಶ್ ಶೆಟ್ಟಿ, ಪದ್ಮನಾಭ ಪಯ್ಯಡೆ, ಭಾಸ್ಕರ ಶೆಟ್ಟಿ ಗುರುದೇವ್, ದಿವಾಕರ ಶೆಟ್ಟಿ ಇಂದ್ರಾಳಿ, ಸುಕುಮಾರ್ ಶೆಟ್ಟಿ, ಕಲ್ಲಡ್ಕ ಕರುಣಾಕರ್ ಶೆಟ್ಟಿ, ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಉಮೇಶ್ ಪೈ, ಪ್ರಜ್ಞಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕಳೆದ ಇಪ್ಪತ್ತು ವರ್ಷಗಳ ಹಿಂದೆ ಹೊಸ ಭಾಷೆ, ವಿಭಿನ್ನ ಜನರ ನಡುವೆ ಹೊಸ ಸಂಸ್ಕೃತಿಯೊಂದಿಗೆ ವೈದ್ಯಕೀಯ ರಂಗವನ್ನು ಪ್ರಾರಂಭಿಸಿ ನಿಮ್ಮೆಲ್ಲರ ಪ್ರೀತಿ, ವಿಶ್ವಾಸದಿಂದ ಯಶಸ್ಸನ್ನು ಕಂಡಿದ್ದೇನೆ. ಹಲವಾರು ಏರುಪೇರು ಈ ವೈದ್ಯಕೀಯ ರಂಗದಲ್ಲಿ ಕಂಡಿದ್ದೇನೆ. ಡಾ| ಸುರೇಶ್ ಶೆಟ್ಟಿ ಅವರ ಸಹಕಾರ ಎಂದೆಂದಿಗೂ ಮರೆಯುವಂತಿಲ್ಲ. ಕಳೆದ 12 ವರ್ಷಗಳಿಂದ ಹಲವಾರು ಶಸ್ತ್ರಚಿಕಿತ್ಸೆಗಳನ್ನು ಮಾಡಿ ರೋಗಿಗಳ ಮುಖದಲ್ಲಿ ನಗುವನ್ನು ಕಂಡಿದ್ದೇನೆ. ಆಸ್ಪತ್ರೆಯ 20 ವರ್ಷದ ಸವಿನೆನಪಿಗಾಗಿ ಈ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದೇನೆ. ಸುಮಾರು 2 ಲಕ್ಷ ದಿಂದ 4 ಲಕ್ಷ ರೂ. ಗಳ ವರೆಗೆ ತಗಲುತ್ತಿದ್ದ ವೆಚ್ಚವನ್ನು ಕಡಿಮೆ ಮಾಡಿ ಉತ್ತಮ ಗುಣಮಟ್ಟದ ಉಪಕರಣದೊಂದಿಗೆ ನನ್ನ ಹಾಗೂ ಇತರರ ವೆಚ್ಚವನ್ನು ಕಡಿಮೆ ಮಾಡಿ ಕೇವಲ 99 ಸಾವಿರ ರೂ. ಗಳಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಲು ನಾವು ಸದಾ ತಯಾರಿದ್ದೇವೆ. 60 ವರ್ಷಗಳ ಅನಂತರ ಕಾಲಿನ ಮೇಲೆ ಹೆಚ್ಚಿನ ಭಾರ ಬಿದ್ದು ಸಂಧಿಗಳು ಸವೆದು ಮಂಡಿನೋವಿನ ಸಮಸ್ಯೆ ಕಾಡುತ್ತದೆ. ಇದರ ನೋವು ಸಹಿಸಲು ಆಗುವುದಿಲ್ಲ. ಹಣದ ಕೊರತೆಯಿಂದಾಗಿ ಹೆಚ್ಚಿನವರು ಈ ಶಸ್ತ್ರ ಚಿಕಿತ್ಸೆಯನ್ನು ಮಾಡುವುದಿಲ್ಲ. ಇದನ್ನು ಮನಗಂಡು ನಾನು ಕರ್ಮಭೂಮಿಯಲ್ಲಿ ಈ ತರಹದ ಸಮಾಜ ಸೇವೆಗೆ ನಾಂದಿ ಹಾಡಿದ್ದೇನೆ. ನನಗೆ ಅಮಿತಾಭ್ ಬಚ್ಚನ್ ರೋಲ್ ಮಾಡೆಲ್ ಆಗಿದ್ದು, ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ಋಣಿಯಾಗಿದ್ದೇನೆ
– ಡಾ| ವಿಜಯ್ ಎಂ. ಶೆಟ್ಟಿ (ಸಿಟಿ ಹಾಸ್ಪಿಟಲ್ ಡೊಂಬಿವಲಿ ಪಶ್ಚಿಮ).
ಚಿತ್ರ-ವರದಿ: ಗುರುರಾಜ ಪೋತನೀಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.