ಎ. 10, 11ರಂದು ನಮ್ಮೇರಿಕ ಅಂತಾರಾಷ್ಟ್ರೀಯ ನಾಟಕೋತ್ಸವ
Team Udayavani, Apr 5, 2021, 7:16 PM IST
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ನಮ್ಮೇರಿಕ ಅಂತಾರಾಷ್ಟ್ರೀಯ ಕನ್ನಡ ನಾಟಕೋತ್ಸವದ ಅಂಗವಾಗಿ ಎ. 10ರಂದು ವರ್ಚುವಲ್ ಮೂಲಕ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಯುಆ್ಯಂಡ್‌ಮೀ ರಂಗಭೂಮಿ ಕಲಾವಿದರಿಂದ ಪರ್ವತವಾಣಿ ಅವರ”ವಾರ್ಷಿಕೋತ್ಸವ’ ನಾಟಕ ಪ್ರದರ್ಶನಗೊಳಲಿದ್ದು, 12ಗಂಟೆಗೆ ತ್ರಿವೇಣಿ ನ್ಯೂಜರ್ಸಿ ಕನ್ನಡ ಸಂಘದಿಂದ ಎಚ್. ಡುಂಡಿರಾಜ್ ಅವರ “ಕೊರಿಯಪ್ಪನ ಕೊರಿಯೋಗ್ರಫಿ’ ನಾಟಕ ಪ್ರದರ್ಶನಗೊಳ್ಳಲಿದೆ.
ಎ. 11ರಂದು ಬೆಳಗ್ಗೆ 11 ಗಂಟೆಗೆ ಬೆಳಕು ಚಿತ್ರ ನಾಟಕ ಅರ್ಪಿಸುವ ಚಂದ್ರಶೇಖರ ಪಾಟೀಲ ರಚನೆಯ “ಕುಂಟಾಕುಂಟಾ ಕುರವತ್ತಿ’, ಟಿ.ಪಿ. ಕೈಲಾಸಂ ರಚನೆಯ “ಗಂಡಸ್ಕತ್ರಿ’ ನಾಟಕ ಹಾಗೂ 12 ಗಂಟೆಗೆ ಅಟ್ಲಾಂಟದ ನೃಪತುಂಗಕನ್ನಡ ಕೂಟದ ವತಿಯಿಂದ ಎಚ್. ಡುಂಡಿರಾಜ್ ಅವರಪುಕ್ಕಟೆ ಸಲಹೆ ನಾಟಕ ಪ್ರದರ್ಶನಗೊಳ್ಳಲಿದೆ. ಎ. 17ರಂದು ಬೆಳಗ್ಗೆ 11 ಗಂಟೆಗೆ ಅನಂತ ನಮನನಾಟಕ ತಂಡದಿಂದ ಪರ್ವತವಾಣಿ ಅವರ “ನಾನು ನೀನೇ’, ಬೃಂದಾವನ ಕನ್ನಡ ಕೂಟದಿಂದ 12 ಗಂಟೆಗೆಎಸ್. ಗುಂಡುರಾವ್ ಅವರ “ಭಾವ ಮೈದುನ’ ಪ್ರದರ್ಶನವಾಗಲಿದೆ. ಎ. 18ರಂದು 11 ಗಂಟೆಗೆ ಹಾಲೆಂಡ್‌ನಾಟಕ ಮಂಡಳಿಯಿಂದ ಶರತcಂದ್ರ ಅವರ ದೇವದಾಸ,12 ಗಂಟೆಗೆ ಆಂಟನ್ ಚೆಕೋವ್ ಅವರ “ಕರಡಿ ಮತ್ತು ವಿಧವೆ’ ನಾಟಕ ಪ್ರದರ್ಶನಗೊಳ್ಳಲಿದೆ.
ಎ. 26: ಡಾ| ರಾಜ್‌ಕುಮಾರ್ ಕ್ರಿಕೆಟ್ ಟೂರ್ನಮೆಂಟ್ :
ವೆಸ್ಟರ್ನ್ ಆಸ್ಟೇಲಿಯಾ: ಪರ್ಥ್ ಡಾ| ರಾಜ್‌ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ 7ನೇ ವರ್ಷದ ಡಾ|ರಾಜ್‌ಕುಮಾರ್ ಕ್ರಿಕೆಟ್ ಟೂರ್ನಮೆಂಟ್ 2021 ಎ. 26ರಂದು ಡಿ ಲೇಸಿ ರಿಸರ್ವ್, ಮೈಲ್ಯಾಂಡ್‌ನಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವತಂಡಗಳು ಎ. 9ರಂದು ನೋಂದಣಿ ಮಾಡಬಹುದು.
ಎಪ್ರಿಲ್ 9: ಕತಾರ್ ಕರ್ನಾಟಕ ಸಂಘದಿಂದ ರಕ್ತದಾನ ಶಿಬಿರ :
ಕತಾರ್: ಕರ್ನಾಟಕ ಸಂಘ ಕತಾರ್ ವತಿಯಿಂದ ರಕ್ತದಾನ ಶಿಬಿರ ಎ. 9ರಂದು ಎಚ್‌ಎಂಸಿ ರಕ್ತದಾನ ಕೇಂದ್ರದಲ್ಲಿ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ರಕ್ತದಾನ ಆರಂಭವಾಗಲಿದ್ದು, ಹೆಚ್ಚಿನ ಮಾಹಿತಿಗಾಗಿ ಡಿಡಿಡಿ. www.karnatakasanghaqatar.com ಅನ್ನು ನೋಡಬಹುದು.
ಯುಗಾದಿ ಸಂಭ್ರಮ :
ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯಾ : “ಕೆಕೆಎನ್‌ಸಿ ಯುಗಾದಿ’ ಖುಷಿ- ಸಂಭ್ರಮಗಳಿಗೆ ತೋರಲಿ ಹೊಸ ಹಾದಿ ವಿಶೇಷ ಕಾರ್ಯಕ್ರಮ ಎ. 24ರಂದು ಸಂಜೆ 5.30(ಪಿಎಸ್‌ಟಿ) ಕ್ಕೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿ ಸಲು ಸಂಘದ ಸದಸ್ಯರು https://tinyurl.com/kknc2021yugadi ಜಚಛಜಿ ಯಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಯುಗಾದಿ ಸಂಭ್ರಮದ ಕಾರ್ಯಕ್ರಮವನ್ನು www. facebook.com/kknc.org ನಲ್ಲಿ ನೇರ ಪ್ರಸಾರ ಮಾಡಲಾಗುವುದು.
ಪೋರ್ಟಲ್ಯಾಂಡ್ ಕನ್ನಡ ಕೂಟ : ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಪೋರ್ಟ್‌ಲ್ಯಾಂಡ್ ಕನ್ನಡ ಕೂಟವು ಯುಗಾದಿವಿಶೇಷವಾಗಿ “ಪ್ಲವ ವೈಭವ’ ನೂತನವರ್ಷಕ್ಕೆ ಒಂದು ವಿನೂತನ ಕಾರ್ಯಕ್ರಮ ಮೇ 1ರಂದು ಸಂಜೆ 5.30ಕ್ಕೆ ನಡೆಯಲಿದೆ. ಕಾರ್ಯಕ್ರಮವನ್ನು ಯುಟ್ಯೂಬ್, ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ https://www. portlandkannadakoota.org ಅನ್ನು ನೋಡಬಹುದು.
ಮಿಷಿಗನ್ ಪಂಪ ಕನ್ನಡ ಕೂಟ : “ವಸ್ತುತಃ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ’ ಮೇ 8ರಂದು ಸಂಜೆ 4 ಗಂಟೆಗೆ ಮಿಷಿಗನ್ ಪಂಪಕನ್ನಡ ಕೂಟದಿಂದ ನಡೆಯಲಿದೆ. ಕಾರ್ಯಕ್ರಮದಲ್ಲಿ ಏಕ ಪಾತ್ರಾಭಿನಯ, ಸಮೂಹನೃತ್ಯಕಲೆ, ಏಕವ್ಯಕ್ತಿ ನೃತ್ಯ ಕಲೆ, ವಾದ್ಯ ಕಲೆ,ಕಿರು ನಾಟಕ, ಗಾಯನ, ಮೋಹಕ ಉಡುಪುಪ್ರದರ್ಶನ ನಡೆಯಲಿದೆ. ಕಾರ್ಯಕ್ರಮವನ್ನು ಯುಟ್ಯೂಬ್, ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.