IPL : ಚಾಂಪಿಯನ್ನರ ದಂತ ಭಗ್ನ ಚೆನ್ನೈ ಶುಭಾರಂಭ
Team Udayavani, Apr 8, 2018, 9:28 AM IST
ಮುಂಬೈ: ಹನ್ನೊಂದನೇ ಆವೃತ್ತಿ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್)ನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಸೋಲಿನ ಆರಂಭ ಪಡೆದಿದೆ. ಮಾಲೀಕರ ಬೆಟ್ಟಿಂಗ್ ಪ್ರಕರಣದಿಂದಾಗಿ 2 ವರ್ಷ ಐಪಿಎಲ್‌ನಿಂದ ನಿಷೇಧಕ್ಕೆ ಒಳಗಾಗಿ ಈಗ ವಾಪಸ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ರೋಚಕ 1 ವಿಕೆಟ್ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.
ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಸ್ಪರ್ಧಾತ್ಮಕ 166 ರನ್ ಗುರಿ ನೀಡಿತು. ಇದನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಲ್ಲಿ ಮುಂಬೈ ದಾಳಿಗೆ ಸಿಲುಕಿ ಕುಸಿಯಿತು. ನಂತರ ಚೇತರಿಸಿಕೊಂಡು ಮುನ್ನುಗ್ಗಿತು. ಈ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಡ್ವೇನ್ ಬ್ರಾವೋ (68 ರನ್) ಅರ್ಧಶತಕ ಹೋರಾಟದಿಂದಾಗಿ 19.5 ಓವರ್‌ಗೆ 9 ವಿಕೆಟ್‌ಗೆ 169 ರನ್‌ಗಳಿಸಿ ರೋಚಕ ಗೆಲುವು ದಾಖಲಿಸಿತು.
ಮಾಯಾಂಕ್, ಹಾರ್ದಿಕ್ ಮಾರಕ ದಾಳಿ
ಇದೇ ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವ ಪಂಜಾಬ್ ಸ್ಪಿನ್ನರ್ ಮಾಯಾಂಕ್ ಮಾರ್ಕಂಡೆ (23ಕ್ಕೆ3) ಹಾಗೂ ಹಾರ್ದಿಕ್ ಪಾಂಡ್ಯ (24ಕ್ಕೆ 3) ವಿಕೆಟ್ ಮಿಂಚಿನ ದಾಳಿ ನಡೆಸಿದರು. ಸಿಎಸ್‌ಕೆ ಅಗ್ರ ಕ್ರಮಾಂಕದ ಬ್ಯಾಟಿಂಗ್ ಪತನಕ್ಕೆ ಪ್ರಮುಖ ಕಾರಣರಾದರು. ರೈನಾ (4 ರನ್)ಹಾಗೂ ಧೋನಿ (5 ರನ್) ಗಳಿಸಿ ಔಟಾಗಿದ್ದು ಚೆನ್ನೈಗೆ ಕಷ್ಟದ ಹಾದಿಯನ್ನು ತಂದೊಡ್ಡಿತು. ಆದರೆ ಮಕ್ಲೆನಗನ್ ಅವರು ಎಸೆದ 18ನೇ ಓವರ್‌ನಲ್ಲಿ 2 ಸಿಕ್ಸರ್, 1 ಬೌಂಡರಿ, ಹಾಗು ಬುಮ್ರಾ ಎಸೆತದ 19ನೇ ಓವರ್‌ನಲ್ಲಿ 3 ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. ಕೊನೆ ಓವರ್
ನಲ್ಲಿ 7 ರನ್ ಅಗತ್ಯವಿತ್ತು. ಈ ಹಂತದಲ್ಲಿ ಕೇದಾರ್ ಜಾಧವ್ (ಅಜೇಯ 24 ರನ್) ಮುಸ್ತಾಫಿಜುರ್ ಎಸೆತದಲ್ಲಿ ಸಿಕ್ಸರ್‌ವೊಂದನ್ನು ಸಿಡಿಸಿ ತಂಡದ ಗೆಲುವನ್ನು ಖಚಿತಪಡಿಸಿದರು. ಮುಂಬೈ ನಿಧಾನ ಅರಂಭ: ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಬರೀ 20 ರನ್‌ಗಳಾಗುವಾಗ ಎವಿನ್ ಲೆವಿಸ್ ಮತ್ತು ನಾಯಕ ರೋಹಿತ್ ಶರ್ಮ ವಿಕೆಟ್ ಕಳೆದುಕೊಂಡಿತು. ಈ ಪತನದ ನಂತರ ತಂಡದ ಸ್ಥಿತಿ ಸುಧಾರಿಸಿತು. ಕಿರಿಯ ಕ್ರಿಕೆಟಿಗ, ಭಾರತ 19 ವಯೋಮಿತಿಯೊಳಗಿನ ತಂಡದ ಮಾಜಿ ನಾಯಕ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ನಡೆಸಿ 29 ಎಸೆತದಲ್ಲಿ 40 ರನ್ ಗಳಿಸಿದರು. ಇವರೊಂದಿಗೆ ನಂಬಿಕಸ್ಥ ಆಟಗಾರ ಸೂರ್ಯಕುಮಾರ್ ಯಾದವ್ ಕೂಡ ಸಿಡಿದರು. ಅವರು 29 ಎಸೆತದಲ್ಲಿ 43 ರನ್ ಗಳಿಸಿದರು. ಈ ಎರಡು ಜೋಡಿಗೆ ಅಂತಿಮ ಹಂತದಲ್ಲಿ ನೆರವಿಗೆ ಬಂದಿದ್ದು ಕೃಣಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ ಸಹೋದರರು.ಅದರಲ್ಲೂ ಕೃಣಾಲ್ ಪಾಂಡ್ಯ ಬರೀ 22 ಎಸೆತದಲ್ಲಿ 41 ರನ್ ರುಬ್ಬಿದರು. ಅದರಲ್ಲಿ 5 ಬೌಂಡರಿ, 2 ಸಿಕ್ಸರ್ ಸೇರಿದ್ದವು. ಕೊನೆಯ ಹಂತದಲ್ಲಿ ಹಾರ್ದಿಕ್ ತೊಡೆಯ ಸ್ನಾಯು ಸೆಳೆತಕ್ಕೆ ಸಿಲುಕಿ ಹೊರಬಿದ್ದಿದ್ದು ಮುಂಬೈ ಆತಂಕಕ್ಕೆ ಕಾರಣವಾಯಿತು.
ಸಂಕ್ಷಿಪ್ತ ಸ್ಕೋರ್: ಮುಂಬೈ 20 ಓವರ್, 165/4 (ಸೂರ್ಯಕುಮಾರ್ ಯಾದವ್ 43, ಕೃಣಾಲ್ ಪಾಂಡ್ಯ 41, ಇಶಾನ್ ಕಿಶನ್ 40, ಶೇನ್ ವಾಟ್ಸನ್ 29ಕ್ಕೆ 2), ಚೆನ್ನೈ 19.5 ಓವರ್ ಗೆ 169/9 (ಬ್ರಾವೋ 68, ಕೇದಾರ್ ಜಾಧವ್ 24, ಮಾಯಾಂಕ್ 23ಕ್ಕೆ3)
ಪಂದ್ಯದ ತಿರುವು
ಕೊನೆ 2 ಓವರ್‌ಗಳಲ್ಲಿ ಡ್ವೇನ್ ಬ್ರಾವೋ ಒಟ್ಟಾರೆ 5 ಸಿಕ್ಸರ್, 1 ಬೌಂಡರಿ ಸಿಡಿಸಿದರು. ಇದರಿಂದ ಸೋಲುವತ್ತ ವಾಲಿದ್ದ ಚೆನ್ನೈ ಗೆಲುವಿನತ್ತ ಮುಖ ಮಾಡಿತು.
ಇಂದಿನ ಪಂದ್ಯಗಳು
ಪಂಜಾಬ್ -ಡೆಲ್ಲಿ, ಸ್ಥಳ: ಮೊಹಾಲಿ ಆರಂಭ: ಸಂಜೆ 4.00
ಕೆಕೆಆರ್ -ಆರ್‌ಸಿಬಿ, ಸ್ಥಳ: ಕೋಲ್ಕತಾ ಆರಂಭ: ರಾತ್ರಿ 8.00
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Jimmy Carter Life Journey: ಜಿಮ್ಮಿ ಕಾರ್ಟರ್- ಮಾನವೀಯತೆ, ಶಾಂತಿಯ ಶಿಲ್ಪಿ
ವೈಕುಂಠ ಏಕಾದಶಿ: ಅಮೆರಿಕ ದೇವಸ್ಥಾನದಲ್ಲಿ ಆಚರಣೆ
15ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ: ಶ್ರೀ ವಿಶ್ವಕರ್ಮ ಸೇವಾ ಬಳಗ ಬಹ್ರೈನ್
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.