ಐರೋಲಿ ಶ್ರೀ ಅಯ್ಯಪ್ಪ ಸೇವಾ ಸಮಿತಿ: ರಜತ ಮಹೋತ್ಸವ 


Team Udayavani, Dec 31, 2017, 3:33 PM IST

23-Mum02a.jpg

ನವಿಮುಂಬಯಿ: ಯಾವುದೇ ಪುಣ್ಯ ಕ್ಷೇತ್ರದ ಯಾತ್ರೆ ಮಾಡುವುದೆಂದರೆ ಅಷ್ಟು ಕಷ್ಟವಾಗದು. ಆದರೆ ಸ್ವಾಮಿ ಅಯ್ಯಪ್ಪ ಶಬರಿಮಲೆ ಯಾತ್ರೆ ಮಾಡುವುದೆಂದರೆ ಸುಲಭದ ಕೆಲಸ ಖಂಡಿತಾ ಅಲ್ಲ. ಈ ಯಾತ್ರೆ ಮಾಡುವ ಮೊದಲ  ನಲ್ವತ್ತೆಂಟು ದಿನದ ಕಠಿನ ಉಪವಾಸ, ವ್ರತಾಚರಣೆಗೈದು ಬಳಿಕ ಅನೇಕ ವಿಧದ ಉಪಾಸನೆಯಿಂದ ಧರ್ಮ ಸ್ಫೂರ್ತಿಯನ್ನು ಪಡೆಯುವ ನಿಟ್ಟಿನಲ್ಲಿ ಭಕ್ತಿ, ವೈರಾಗ್ಯದೊಂದಿಗೆ ಸ್ವಾಮಿಯ ಸನ್ನಿಧಾನಕ್ಕೆ ಬರಬೇಕಾಗುತ್ತದೆ. ಈ ರೀತಿ ಕಠಿನ  ಶ್ರಮದೊಂದಿಗೆ ಬಂದವರಿಗೆ ಸ್ವಾಮಿಯ ದರ್ಶನ ಭಾಗ್ಯ ಸಾಧ್ಯ. ಶ್ರದ್ಧಾಭಕ್ತಿಯಿಂದ ಶಬರಿಮಲೆ ಯಾತ್ರೆಗೈದು ಸ್ವಾಮಿಯ ದರ್ಶನ ಪಡೆದವರು ಭಾಗ್ಯವಂತರು ಎಂದು ನವಿ ಮುಂಬಯಿ ವಿದ್ವಾಂಸ, ವಿದ್ವಾನ್‌ ರಾಮಚಂದ್ರ ಬಾಯಾರು ಅವರು ನುಡಿದರು.

ಡಿ. 17ರಂದು ನವಿಮುಂಬಯಿ ಸೆಕ್ಟರ್‌ 1ರ ಶಿವಕಾಲನಿಯ ಛತ್ರಪತಿ ಶಿವಾಜಿ ಮೈದಾನದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಐರೋಲಿ ಇದರ ರಜತ ಮಹೋತ್ಸವ ಸಮಾರಂಭದ ದ್ವಿತೀಯ ದಿನದಂದು ಜರಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು. ಶಬರಿಮಲೆ ಯಾತ್ರೆಯ ವ್ರತಾಚರಣೆ, ಶಿಷ್ಟಾಚಾರ, ಪವಿತ್ರ 18 ಮೆಟ್ಟಿಲುಗಳ ಇತಿಹಾಸ, ಉದ್ದೇಶ ಇತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ನೀಡಿ, ವ್ರತದಾರಿ ಶಬರಿಮಲೆ ಯಾತ್ರೆಯಲ್ಲಿರುವ ಸ್ವಾಮಿಗಳ ಪ್ರಯಾಣ ಸುಖಮಯವಾಗಿರಲಿ ಎಂದು ನುಡಿದು ಶುಭ ಹಾರೈಸಿದರು.

ರಜತ ಮಹೋತ್ಸವ ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು, ಮನುಷ್ಯ ಜನ್ಮ ಎಂದರೆ ಅದು ಶ್ರೇಷ್ಠ ಜನ್ಮ ಎಂದು ಹೇಳುತ್ತಾರೆ. ನಮ್ಮ ಈ ಜೀವನ, ಸಾರ್ಥಕವಾಗಬೇಕಾದರೆ ನಮ್ಮ ಬದುಕಿನಲ್ಲಿ ಈ ರೀತಿಯ ಪುಣ್ಯದ ಕೆಲಸದ ಅಗತ್ಯವಿದೆ. ಪೂರ್ವಜನ್ಮದಲ್ಲಿ ಮಾಡಿದ ಹಾಗೂ ಈ ಜನ್ಮದಲ್ಲಿ ಮಾಡಿದ ಕರ್ಮದ ಫಲ ನಿವಾರಣೆಯಾಗಬೇಕಾದರೆ ದೇವರ ಆರಾಧನೆ, ಸ್ಮರಣೆ ಮುಖ್ಯವಾಗಿದೆ ಎಂದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ಬಿಲ್ಲವರ ಅಸೋಸಿಯೇಶನ್‌ ನವಿಮುಂಬಯಿ ಸ್ಥಳೀಯ ಸಮಿತಿಯ ಉಪಕಾರ್ಯಾಧ್ಯಕ್ಷ ವಿ. ಕೆ. ಪೂಜಾರಿ ಅವರು ಮಾತನಾಡಿ, ಅಯ್ಯಪ್ಪ ಪೂಜೆಯಲ್ಲಿ ತನ್ನದೇಆದ ಒಂದು ಮಹತ್ವವಿದೆ. ವ್ರತಧಾರಿಗಳು ಅರಿಷಡ್ವೆ$çರಿಗಳನ್ನು ತೊರೆದು ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಭಗವಂತನ ಸೇವೆ ಮಾಡಬೇಕು. ಆಗ ಮಾತ್ರ ಜೀವನ ಪಾವನವಾಗಲು ಸಾಧ್ಯವಿದೆ ಎಂದರು.

ನವಿಮುಂಬಯಿ ಹೊಟೇಲ್‌ ಓನರ್ ಅಸೋಸಿಯೇಶನ್‌ ಉಪಾಧ್ಯಕ್ಷ ಜಯಪ್ರಕಾಶ್‌ ಆರ್‌. ಶೆಟ್ಟಿ ಅವರು ಮಾತನಾಡಿ, ಬಹಳಷ್ಟು ಶ್ರದ್ಧಾಭಕ್ತಿಯೊಂದಿಗೆ ಶ್ರೀ ಸ್ವಾಮಿ ಅಯ್ಯಪ್ಪನನ್ನ ಆರಾಧಿಸಿಕೊಂಡು 25 ವರ್ಷಗಳನ್ನು ಪೂರೈಸಿದ ಈ ಸಮಿತಿಯ ಭವಿಷ್ಯದಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸುವಂತಾಗಲಿ ಎಂದು ಹಾರೈಸಿದರು.

ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ರಜತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ, ತುಳುಕೂಟ ಐರೋಲಿ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ ಅವರು ಮಾತನಾಡಿ, 25 ವರ್ಷಗಳ ಹಿಂದೆ 7 ಮಂದಿ ಸ್ವಾಮಿಗಳಿಂದ ಶುಭಾರಂಭಗೊಂಡ ಈ ಸಮಿತಿ ಇಂದು ರಜತ ಮಹೋತ್ಸವ ಸಂಭ್ರಮದಲ್ಲಿರುವುದು ನಮಗೆಲ್ಲರಿಗೂ ಅಭಿಮಾನದ ವಿಷಯ. ಈ ನಿಟ್ಟಿನಲ್ಲಿ ಅನೇಕರು ಶ್ರಮಿಸಿದ್ದಾರೆ. ಅಯ್ಯಪ್ಪ ಸ್ವಾಮಿಯ ಸೇವೆಯನ್ನು ಭಕ್ತಿಪೂರ್ವಕವಾಗಿ ಮಾಡಿ ಸಮಿತಿಯ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ. ಮಧು ಕೋಟ್ಯಾನ್‌ ಅವರ ಸಾಧನೆ ಮಹತ್ತರವಾಗಿದೆ. ಸಂಸ್ಥೆಯು ಪ್ರಸ್ತುತ ಕೃಷ್ಣ ವಿ. ಶೆಟ್ಟಿ ಅವರ ಮುಂದಾಳತ್ವದಲ್ಲಿ ಇನ್ನಷ್ಟು ಬೆಳಗುವಂತಾಗಲಿ ಎಂದು ಹಾರೈಸಿದರು.

ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಕೃಷ್ಣ ವಿ. ಶೆಟ್ಟಿ ಎಕ್ಕಾರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ  ಅತಿಥಿಗಳಾಗಿ ಉದ್ಯಮಿಗಳಾದ ಅಶೋಕ್‌ ಶೆಟ್ಟಿ, ರಾಜೀವ ಶೆಟ್ಟಿ, ಸತೀಶ್‌ ಶೆಟ್ಟಿ ಮೂಡುಕೊಟ್ರಪಾಡಿ, ಅಯ್ಯಪ್ಪ ಸೇವಾ ಸಮಿತಿಯ ಗೌರವಾಧ್ಯಕ್ಷ ರಘು ಪಡಾವ್‌, ಉಪಾಧ್ಯಕ್ಷ ಅಮರನಾಥ ಶೆಟ್ಟಿ ಕಳತ್ತೂರು, ಕಾರ್ಯದರ್ಶಿ ವೀರೇಂದ್ರ ವಿ. ಶೆಟ್ಟಿ, ಕೋಶಾಧಿಕಾರಿ ಶ್ಯಾಮ್‌ ವಿ. ಶೆಟ್ಟಿ ಸುರ್ಗೋಳಿ, ಮಾಜಿ ಅಧ್ಯಕ್ಷ ಮಧು ಎನ್‌. ಕೋಟ್ಯಾನ್‌, ಮಂಡಲ ಗುರುಸ್ವಾಮಿ ಶೇಖರ್‌ ಎನ್‌. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಅತಿಥಿಗಳನ್ನು ಕೃಷ್ಣ ವಿ. ಶೆಟ್ಟಿ, ಹರೀಶ್‌ ಶೆಟ್ಟಿ ಪಡುಬಿದ್ರೆ, ಕಳತ್ತೂರು ಅಮರ್‌ನಾಥ್‌ ಶೆಟ್ಟಿ, ವೀರೇಂದ್ರ ಶೆಟ್ಟಿ, ಶ್ಯಾಮ್‌ ವಿ. ಶೆಟ್ಟಿ, ರಘು ಪಡಾವ್‌ ಅವರು ಗೌರವಿಸಿದರು. ಉದಯ ಅವರು ಪ್ರಾರ್ಥನೆಗೈದರು. ಸಮಿತಿಯ ಉಪಾಧ್ಯಕ್ಷ ಕಳತ್ತೂರು ಅಮರ್‌ನಾಥ್‌ ಶೆಟ್ಟಿ ಸ್ವಾಗತಿಸಿದರು. ಸಮಾರಂಭದಲ್ಲಿ ಸಮಿತಿಯ ಅಧ್ಯಕ್ಷ ಕಷ್ಣ ವಿ. ಶೆಟ್ಟಿ ಎಕ್ಕಾರು, ಮಾಜಿ ಅಧ್ಯಕ್ಷರಾದ ಮಧು ಎನ್‌. ಕೋಟ್ಯಾನ್‌, ಜಗನ್ನಾಥ್‌ ಶೆಟ್ಟಿ, ಗೌರವಾಧ್ಯಕ್ಷ ರಘು ಪಡಾವ್‌, ಮಂಡಲ ಗುರುಸ್ವಾಮಿಗಳಾದ ಶೇಖರ್‌ ಎನ್‌. ಶೆಟ್ಟಿ, ಶಿಬಿರದ ಗುರುಸ್ವಾಮಿಗಳಾದ ಅಣ್ಣಿ ಎಚ್‌. ಶೆಟ್ಟಿ, 18ನೇ ವರ್ಷದ ಮಾಲಾಧಾರಣೆಗೈದ ಸ್ವಾಮಿಗಳಾದ ಗಿರೀಶ್‌ ಸ್ವಾಮಿ, ಅರುಣಾಚಲಂ ಸ್ವಾಮಿ, ಶಿಬಿರದ ಸ್ವಾಮಿಯ ಮೂರ್ತಿಗೆ ಬೆಳ್ಳಿ ಕವಚ ನಿರ್ಮಿಸಿದ ಶ್ರೀಪತಿ ಆಚಾರ್ಯ, ಸ್ಥಾಪನೀಯ ನಗರ ಸೇವಕ ಅನಂತ್‌ ಲಕ್ಷ್ಮಣ್‌ ಸುತಾರ್‌ ದಂಪತಿಗಳನ್ನು ಸತ್ಕರಿಸಲಾಯಿತು.

ಸಮ್ಮಾನಿತರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಸಮ್ಮಾನಿತರ ಯಾದಿಯನ್ನು ಕಾರ್ಯದರ್ಶಿ ವೀರೇಂದ್ರ ಶೆಟ್ಟಿ ಓದಿದರು. ತುಳುಕೂಟ ಮಾಜಿ ಅಧ್ಯಕ್ಷ ನಾಡಾಜೆಗುತ್ತು ಜಗದೀಶ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಅಮರ್‌ನಾಥ್‌ ಶೆಟ್ಟಿ ಕಳತ್ತೂರು ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೃತ್ಯ ವೈವಿಧ್ಯ ಹಾಗೂ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಐರೋಲಿ ಕಲಾವಿದರಿಂದ ಶ್ವೇತ ಕುಮಾರ ಚರಿತ್ರೆ ಯಕ್ಷಗಾನ ಪ್ರದರ್ಶನಗೊಂಡಿತು.

ಸಮಿತಿಯು ರಜತ ಮಹೋತ್ಸವ ಆಚರಣೆಯಲ್ಲಿದ್ದು, ಇದರ ಯಶಸ್ಸಿನ ಹಿಂದೆ ಗಣ್ಯರ ಶ್ರಮವಿದೆ. ಗುರುಸ್ವಾಮಿಗಳ, ಶಿಬಿರ ಸ್ವಾಮಿಗಳ ಹಾಗೂ ಮಾಲಾಧಾರಣೆಗೈದ ಎಲ್ಲಾ ಸ್ವಾಮಿಗಳ ಆಶೀರ್ವಾದದ ಫಲವಿದೆ. ನಾನು ಕೇವಲ ಅಧ್ಯಕ್ಷನಾಗಿದ್ದೇನೆ. ನನ್ನೋರ್ವನಿಂದ ಅಥವಾ ಒಬ್ಬಿಬ್ಬರಿಂದ ಇಂತಹ ಮಹಾನ್‌ ಕಾರ್ಯಸಾಧನೆ ಅಸಾಧ್ಯ. ಇದರ ಹಿಂದೆ ಶ್ರಮಿಸಿದ ಎಲ್ಲರಿಗೂ  ಕೃತಜ್ಞನಾಗಿದ್ದೇನೆ. ಮಹಿಳಾ ವಿಭಾಗ ಸಮಿತಿಯಲ್ಲಿ ಇಲ್ಲದಿದ್ದರೂ ಕೂಡಾ ಐರೋಲಿ, ನವಿಮುಂಬಯಿಯ ಎಲ್ಲ ಮಹಿಳೆಯರು ಒಮ್ಮತದ ಸಹಕಾರವನ್ನು ನೀಡಿದ್ದಾರೆ. ಎಲ್ಲರಿಗೂ ಸ್ವಾಮಿಯ ಅನುಗ್ರಹ, ಸಹಕಾರ ಇರಲಿ 
 – ಕೃಷ್ಣ ವಿ. ಶೆಟ್ಟಿ ಎಕ್ಕಾರು (ಅಧ್ಯಕ್ಷರು: ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಐರೋಲಿ).

ಟಾಪ್ ನ್ಯೂಸ್

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.