ಸಾಧಕರನ್ನು ಗುರುತಿಸುವುದು ಸಂಸ್ಥೆಯ ಕರ್ತವ್ಯ: ಕೋಟ್ಯಾನ್
Team Udayavani, Sep 24, 2019, 6:26 PM IST
ಮುಂಬಯಿ, ಸೆ. 23: ಸಮಾಜದಲ್ಲಿಉತ್ತಮ ಸಾಧನೆ ಮಾಡಿದವರನ್ನು ಗೌರವಿಸುವುದು ಯಾವುದೇ ಸಂಸ್ಥೆಯ ಕರ್ತವ್ಯವಾಗಿದೆ. ಹಾಗೆ ಮಾಡುವುದರಿಂದ ಅವರು ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಡಾ| ಭರತ್ ಕುಮಾರ್ ಪೊಲಿಪುರವರು ಮುಂಬಯಿಯಲ್ಲಿ ಸಾಮಾಜಿಕವಾಗಿ. ಸಾಂಸ್ಕೃತಿಕವಾಗಿ ಹಾಗು ಶೈಕ್ಷಣಿಕವಾಗಿ ಬಹಳಷ್ಟು ಸಾಧನೆ ಮಾಡಿದ್ದಾರೆ.
ಅವರು ಮೊಗವೀರ ಬ್ಯಾಂಕಿನ ಸಿಬ್ಬಂದಿ ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತದೆ. ಅವರು ಬ್ಯಾಂಕಿಗೆ ಸೇರಿದ ನಂತರವೇ ಕನ್ನಡದಲ್ಲಿ ಎಂಎ ಮತ್ತು ಡಾಕ್ಟರೇಟ್ ಪದವಿಯನ್ನು ಮಾಡಿದ್ದಾರೆ. ಅನೇಕ ಮಾನ ಸಮ್ಮಾನಗಳನ್ನು ಪಡೆದಿದ್ದಾರೆ. ಕರ್ನಾಟಕದಲ್ಲಿಯೂ ಅವರು ಪ್ರಸಿದ್ಧಿಯನ್ನು ಹೊಂದಿದ್ದಾರೆ ಎಂದು ಮೊಗವೀರ ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಸದಾನಂದ ಎ. ಕೊಟ್ಯಾನ್ ಅವರು ನುಡಿದರು.
ಅವರು ಮೊಗವೀರ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಸೇವಾನಿವೃತ್ತಿ ಹೊಂದಿದ ಡಾ| ಭರತ್ ಕುಮಾರ್ ಪೊಲಿಪು ಅವರನ್ನು ಬ್ಯಾಂಕಿನ ನಿರ್ದೇಶಕ ಮಂಡಳಿ ಪರವಾಗಿ ಗೌರವಿಸಿ ಮಾತನಾಡಿ, ಅವರ ಸಿದ್ಧಿ-ಸಾಧನೆಗಳನ್ನು ಶ್ಲಾಘಿಸಿ ಅಭಿನಂದಿಸಿ ಶುಭ ಹಾರೈಸಿದರು. ಗೌರವ ಸ್ವೀಕರಿಸಿ ಮಾತನಾಡಿದ ಪೊಲಿಪು ಅವರು, ಮೊಗವೀರ ಬ್ಯಾಂಕ್ ನನ್ನ ಬದುಕಿನ ಅಂಗ. ಅದನ್ನು ಯಾವತ್ತು ಬೇರ್ಪಡಿಸಲು
ಸಾಧ್ಯವಿಲ್ಲ.
ಬ್ಯಾಂಕ್ ತನಗೆ ಎಲ್ಲವನ್ನುನೀಡಿದೆ. ಈ ತನಕದ ಎಲ್ಲಾ ನಿರ್ದೇಶಕ ಮಂಡಳಿ, ಕಾರ್ಮಿಕ ಸಂಘ ಹಾಗೂ ಸಹುದ್ಯೋಗಿಗಳೂ ಸಹಕಾರ, ಪ್ರೋತ್ಸಾಹ ನೀಡಿದ್ದರಿಂದಲೆ ತನಗೆ ಸಾಂಸ್ಕೃತಿಕ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ಈ ದಿನ ನಿರ್ದೇಶಕ ಮಂಡಳಿ ತುಂಬ ಸಹೃದಯತೆಯಿಂದ ಅಭಿಮಾನ, ಪ್ರೀತಿಯಿಂದ ಗೌರವಿಸಿದ್ದು ಅತ್ಯಂತ ಆನಂದ ತಂದಿದೆ. ಇದು ನನ್ನ ಬದುಕಿನ ಅವಿಸ್ಮರಣೇಯ ಘಟನೆಯಾಗಿದೆ. ಇದಕ್ಕಾಗಿ ಋಣಿಯಾಗಿದ್ದೇನೆ. ಈ ಪರಂಪರೆ ಮುಂದುವಯುತ್ತಿರಲಿ ಎಂದು ಆಶಿಸುತ್ತೇನೆ ಎಂದರು.
ಸಮಾರಂಭದಲ್ಲಿ ಉಪ ಕಾರ್ಯಾ ಧ್ಯಕ್ಷರಾದ ಪಿ. ಧರ್ಮಪಾಲ, ನಿರ್ದೇ ಶಕರಾದ ಗೋಪಾಲ ಪುತ್ರನ್, ಪುರುಷೋತ್ತಮ ಶ್ರೀಯಾನ್, ಮಾಧವ ಕಾಂಚನ್, ಮುಕೇಶ್ ಬಂಗೇರ, ದಾಮೋದರ ಕರ್ಕೇರ. ಶೀಲಾ ಅಮೀನ್, ಜನಾರ್ದನ್ ಮುಲ್ಕಿ, ಜಯಶೀಲ ತಿಂಗಳಾಯ, ವಸಂತ ಕುಂದರ್, ಯಧುವೀರ ಪುತ್ರನ್, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ. ಡಿ. ಶಿರಾಲಿ, ಎಜಿಎಂ ಉದಯ ಕುಮಾರ್ ಕುಂದರ್, ಎಚ್. ಆರ್. ಡಿ ಹಿರಿಯ ಪ್ರಬಂಧಕಿ ಶಿಲ್ಪಾ ಪಡ್ನೇಕರ್ ಮೊದಲಾದವರು ಉಪಸ್ಥಿತರಿದ್ದರು. ಈ ಹಿಂದೆ ನಿವೃತ್ತಿ ದಿನ ಆ. 30ರಂದು ಬ್ಯಾಂಕಿನ ಪರವಾಗಿ ದಾಮೋದರ ಕರ್ಕೇರ ಮತ್ತು ಮುಕೇಶ್ ಬಂಗೇರ,ಶಿಲ್ಪಾ ಪಡ್ನೇಕರ್ ಅವರು ಡಾ| ಪೊಲಿಪು ಅವರನ್ನು ಗೌರವಿಸಿ ಶುಭ ಹಾರೈಸಿದರು. ಯದುವೀರ ಪುತ್ರನ್ ನೇತೃತ್ವದಲ್ಲಿ ಕಾರ್ಮಿಕ ಸಂಘದ ಪರವಾಗಿ ಹಾಗೂ ನಿಶಿ ಶ್ರೀಯಾನ್ ನೇತೃತ್ವದಲ್ಲಿ ಅಂಧೇರಿ ಶಾಖೆಯ ಪರವಾಗಿ ಗೌರವಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.