ಜಪಾನ್: ಕಂಚಿನ ಪದಕ ಪಡೆದ ಅಭಿನಯಾ ಶೆಟ್ಟಿ ಪೆಲತ್ತೂರು
Team Udayavani, Jun 12, 2018, 12:39 PM IST
ಪುಣೆ: ಜಪಾನ್‌ನಲ್ಲಿ ಜೂ. 7 ರಿಂದ 10 ರ ತನಕ ನಡೆದ ಯುತ್ತಿರುವ ಜಪಾನ್ ಏಷಿಯನ್ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಮೂಡಬಿದಿರೆಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ಪ್ರಥಮ ಬಿಕಾಂ ನಲ್ಲಿ ವ್ಯಾಸಂಗ ಮಾಡುತ್ತಿರುವ ಕು| ಅಭಿನಯಾ ಎಸ್. ಶೆಟ್ಟಿ ಪೆಲತ್ತೂರು ಅವರು ಎತ್ತರ ಜಿಗಿತ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಅವರು 1.75 ಮೀಟರ್ ಎತ್ತರಕ್ಕೆ ಜಿಗಿದು ಈ ಸಾಧನೆ ಮಾಡಿದ್ದು, ಈಗಾಗಲೇ ಹಲವಾರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕಗಳನ್ನು ಗಳಿಸಿ ಗಮನಸೆಳೆದಿರುವ ಈಕೆ ಪ್ರತಿಭಾವಂತ ಕ್ರೀಡಾಪಟುವಾಗಿ ಗುರುತಿಸಿಕೊಂಡಿರುತ್ತಾಳೆ. ಕಳೆದ ಮೇ 4 ಹಾಗೂ 5 ರಂದು ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ದಕ್ಷಿಣ ಏಷಿಯಾ ಫೆಡರೇಷನ್ ನಡೆಸಿದ ಅಂತಾರಾಷ್ಟ್ರೀಯ ದ. ಏಷಿಯಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 1.65 ಮೀ. ಜಿಗಿದು ಕಂಚಿನ ಪದಕವನ್ನು ಪಡೆದಿದ್ದಾಳೆ.
2012-2013 ರಲ್ಲಿ ಉಡುಪಿಯಲ್ಲಿ ಜರಗಿದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ, 2013-2014 ನೇ ಸಾಲಿನಲ್ಲಿ ಮಂಗಳೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ಚಿನ್ನದ ಪದಕ, 2014-2015 ರಲ್ಲಿ ಉಡುಪಿಯಲ್ಲಿ ಚಿನ್ನದ ಪದಕ, 2016-2017 ರಲ್ಲಿ ಗುಲ್ಬರ್ಗದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ, 2017-2018 ರಲ್ಲಿ ಚಿತ್ರದುರ್ಗದಲ್ಲಿ, ಬೆಂಗಳೂರಿನಲ್ಲಿ ಹಾಗೂ ಮೂಡಬಿದಿರೆಯಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕಗಳನ್ನು ಗಳಿಸಿರುತ್ತಾಳೆ.
ಈ ಹಿಂದೆ ಉತ್ತರ ಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ, 2013-2014 ರಲ್ಲಿ ಝಾರ್ಖಂಡ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಈಕೆ 2014-2015 ರಲ್ಲಿ ಹೈದರಾಬಾದ್ ನಲ್ಲಿ ಬೆಳ್ಳಿಯ ಪದಕ, 2015-2016 ರಲ್ಲಿ ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಪದಕ, 2016-2017 ರಲ್ಲಿ ಪುಣೆಯ ಬಾಲೇವಾಡಿಯಲ್ಲಿ ಜರಗಿದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಲ್ಲದೆ, 2017-2018 ರಲ್ಲಿ ವಿಜಯವಾದದಲ್ಲಿ ಕಂಚಿನ ಪದಕ, ಗುಂಟೂರಲ್ಲಿ ಬೆಳ್ಳಿಯ ಪದಕ, ಕೊಯಮುತ್ತೂರಲ್ಲಿ ಚಿನ್ನದ ಪದಕಗಳಲ್ಲಿ ಗಳಿಸಿಕೊಂಡು ವಿಶಿಷ್ಟ ಸಾಧನೆಯನ್ನು ದಾಖಲಿಸಿ ಇದೀಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡಿರುವುದು ಕರ್ನಾಟಕಕ್ಕೆ ಹೆಮ್ಮೆಯಾಗಿದೆ. ಇವರ ಸಾಮಾನ್ಯ ಕ್ರೀಡಾಪ್ರತಿಭೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಗೌರವಿಸಿವೆ. ಮಂಗಳೂರು ವಿಶ್ವವಿದ್ಯಾಲಯ, ಪಂಚಮಿ ಚಾರಿಟೇಬಲ್ ಟ್ರಸ್ಟ್, ದೊಂಡೇರಂಗಡಿ, ಅಜೆಕಾರು ಚರ್ಚ್ ಶಾಲೆ, ಆಳ್ವಾಸ್ ವಿದ್ಯಾಸಂಸ್ಥೆ ಮೂಡಬಿದಿರೆ, ಬಂಟರ ಸಂಘ ಮುನಿಯಾಲು, ಮೂಡುಬೆಟ್ಟು ಹಿರಿಯ ಪ್ರಾಥಮಿಕ ಶಾಲೆ, ಉಡುಪಿ ಜಿÇÉಾ ಕ್ರೀಡೋತ್ಸವ ಸಮಿತಿ, ಭಾÅಮರಿ ಕಲಾಸಂಘ ದೊಂಡೇರಂಗಡಿ ಹಾಗೂ ಹವ್ಯಾಸಿ ಕಲಾವೃಂದ ಪುಣೆ ಮುಂದಾದ ಸಂಘ ಸಂಸ್ಥೆಗಳು ಗೌರವಿಸಿವೆ.
ಈಕೆ ಉತ್ತಮ ಕ್ರೀಡಾಪ್ರತಿಭೆಯಾಗಿ ಗುರುತಿಸಿಕೊಳ್ಳುವಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ರೂವಾರಿ ಡಾ| ಮೋಹನ್ ಆಳ್ವ, ಕ್ರೀಡಾಪೋಷಕರಾದ ಅಭಿಷೇಕ್ ಶೆಟ್ಟಿ, ಶಂಕರ್ ನಾಯ್ಕ ಸರ್, ರಾಜೇಶ್ ಸರ್, ಅಂತಾರಾಷ್ಟ್ರೀಯ ತರಬೇತುದಾರರಾದ ವಸಂತ್ ಜೋಗಿ, ಗಾವಂದಕರ್ ಸರ್ ಇವರುಗಳು ಉತ್ತಮ ತರಭೇತಿಯನ್ನು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಕಲಿಕೆಯಲ್ಲೂ ಪ್ರತಿಭಾವಂತೆಯಾಗಿರುವ ಈಕೆ ದೊಂಡೇರಂಗಡಿ ಕುಕ್ಕುಜೆ ಸುಧಾಕರ ಶೆಟ್ಟಿ ಹಾಗೂ ಪೆಲತ್ತೂರು ಶಾರದ ಮನೆ ಸಂಜೀವಿನಿ ಶೆಟ್ಟಿ ದಂಪತಿಯ ಪುತ್ರಿ. ಮುಂಬಯಿ ಉದ್ಯಮಿ ಉದಯ ಶೆಟ್ಟಿ ಪೆಲತ್ತೂರು ಹಾಗೂ ಪುಣೆ ಉದ್ಯಮಿ ಸುಧಾಕರ ಶೆಟ್ಟಿ ಪೆಲತ್ತೂರು ಇವರ ಸೋದರ ಸೊಸೆ.
ಚಿತ್ರ-ವರದಿ : ಕಿರಣ್ ಬಿ. ರೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.