ಜಯಲಕ್ಷ್ಮೀ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ:18ನೇ ವಾರ್ಷಿಕ ಮಹಾಸಭೆ


Team Udayavani, Jul 24, 2018, 4:37 PM IST

2207mum08.jpg

ಮುಂಬಯಿ: ಮಹಾ ಶಿವರಾತ್ರಿಯ ಶುಭಾವಸರದಿ ಶ್ರೀ ಮಹಾಲಕ್ಷ್ಮೀ ಆಶೀರ್ವಾದದಿಂದ ಚಾಲನೆ ನೀಡಲ್ಪಟ್ಟ ಈ ಸೊಸೈಟಿಯು ಪ್ರಸ್ತುತ ಎಲ್ಲರ ಪಾಲಿನ ಆಶಾದಾಯಕವಾಗಿದೆ. ಇದು ನಿಮ್ಮೆಲ್ಲರ ಸಹಯೋಗದಿಂದ ಶ್ರೇಯಸ್ಸು ಪಡೆಯಲು ಸಾಧ್ಯವಾಗಿದೆ. ಉದರ ಪೋಷಣೆಗಾಗಿ ಕರ್ಮಭೂಮಿಗೆ ಬಂದ ನಮ್ಮವರಿಗೆ ಮುಂಬಾದೇವಿ, ವಿಜಯಲಕ್ಷ್ಮೀ ಕರುಣಿಸಿದ್ದಾಳೆ ಇದು ನಾವು ಗರ್ವಪಡುಂತಾಗಬೇಕು. ಮುಂದಿನ ಕಾಲಾವಧಿಯೊಳಗೆ ಈ ಸೊಸೈಟಿಯಲ್ಲಿ 100 ಕೋ. ರೂ. ಠೇವಣೆಯನ್ನಾಗಿಸುವ ಕನಸನ್ನು  ನನಸಾಗಿಸುವಲ್ಲಿ ಪ್ರಯತ್ನಿಸಲಾಗುವುದು. ಜನಸಾಮಾನ್ಯರ ಉನ್ನತೀಕರಣದಿಂದ ಪಥಸಂಸ್ಥೆಗಳ ಸಾರ್ಥಕತೆ ಸಾಧ್ಯ. ವೈಚಾರಿಕ ಪ್ರಗತಿಯ ಜೊತೆಗೆ ಸಮಾಜೋನ್ನತಿಯ ಕೆಲಸವನ್ನು ತಮ್ಮ ಕಾಯಕ ಎನ್ನುವಂತೆ ಸಂಸ್ಥೆಗಳು ರೂಢಿಸಿಕೊಂಡರೆ ಒಟ್ಟು ರಾಷ್ಟ್ರದ ಬಡತನ ನಿವಾರಣೆಯೂ ಸಾಧ್ಯವಾಗಬಲ್ಲದು.  ನಾನೂ ಅಷ್ಟೇ ಎಂದಿಗೂ ಗಳಿಸುವ ಉದ್ದೇಶ ಇರಿಸದೆ ಕೊಡುವುದನ್ನು ಧರ್ಮವಾಗಿಸಿದ ಕಾರಣ ಎರಡನೇ ಬಾರಿ ಶಾಸಕನಾಗಲು ಸಾಧ್ಯವಾಗಿದೆ ಎಂದು ಕರ್ನಾಟಕ ಮಂಡ್ಯ ಕೆ. ಆರ್‌. ಪೇಟೆ ಶಾಸಕ, ಒಕ್ಕಲಿಗ ಸಂಘ ಮಹಾರಾಷ್ಟ್ರ ಇದರ ಸಂಸ್ಥಾಪಕಾಧ್ಯಕ್ಷ, ಜಯಲಕ್ಷ್ಮೀ ಕ್ರೆಡಿಟ್‌ ಸೊಸೈಟಿಯ ಸ್ಥಾಪಕ ನಿರ್ದೇಶಕ ನಾರಾಯಣ ಆರ್‌. ಗೌಡ ಅವರು ಅಭಿಪ್ರಾಯಿಸಿದರು.

ಜು. 22 ರಂದು ಪೂರ್ವಾಹ್ನ ಅಂಧೇರಿ ಪೂರ್ವದ ಜೆ.ಬಿ ನಗರದಲ್ಲಿನ ಸತ್ಯನಾರಾಯಣ ಗೋಯೆಂಕಾ ಭವನ‌ದ‌ಲ್ಲಿ ಜರುಗಿದ ಜಯಲಕ್ಷ್ಮೀ ಪಥಸಂಸ್ಥೆಯ 18 ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ಸಂಸ್ಥೆಯು ಇನ್ನಷ್ಟು ಅಭಿವೃದ್ಧಿಯ ಪಥದತ್ತ ಸಾಗಲು ತುಳು-ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದರು.

ಮಲ್ಲಿಕಾರ್ಜುನ ಸ್ವಾಮೀಜಿ ಕಾಂಜೂರ್‌ಮಾರ್ಗ್‌ ಅವರು ಒಕ್ಕಲಿಗರ ಧೀಶಕ್ತಿ ದೈವೈಕ್ಯ ಮಹಾಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಧನಲಕ್ಷ್ಮೀ ಮಾತೆಗೆ ಪೂಜೆ ನೆರವೇರಿಸಿದರು. ಮಹಿಳಾ ನಿರ್ದೇಶಕಿಯರು ಮಾತೆ ಜಯಲಕ್ಷ್ಮೀಗೆ ಆರತಿ ಬೆಳಗಿಸಿ ಸಭೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು. ರಂಗಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ  ಸಂಸ್ಥೆಯ  ಶೇರುದಾರರಿಗೆ ಶೇ. 9 ರಷ್ಟು ಡಿವಿಡೆಂಡ್‌ ಘೋಷಿಸಲಾಯಿತು.

ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ. ರಾಜೇ ಗೌಡ ಅವರು ಮಾತನಾಡಿ, ಷೇರುದಾರರು ಮೂರು ವರ್ಷದೊಳಗೆ ತಮ್ಮ ಡಿವಿಡೆಂಡ್‌ ಮೊತ್ತವನ್ನು ತಮ್ಮ ಖಾತೆಗೆ ಜಮಾಯಿಸತಕ್ಕದ್ದು. ಇಲ್ಲವಾದಲ್ಲಿ ಸರ‌ಕಾರದ ಪಾಲಾಗುತ್ತದೆ. ಒವರ್‌ ಡ್ರಾಫ್ಟ್‌ ಮೊತ್ತವೂ (ಓಡಿ) ಸಮಯೋಚಿತವಾಗಿ ಭರಿಸತಕ್ಕದ್ದು. ಇಲ್ಲವಾದಲ್ಲಿ ಎನ್‌ಪಿಎ ಹೆಚ್ಚಾಗುತ್ತದೆ. ಸೊಸೈಟಿ ರಿಜಿಸ್ತ್ರಾರ್‌ ಇದೀಗಲೇ ನಮ್ಮ ಸೊಸೈಟಿಗೆ ರಾಯಗಾಢ ಮತ್ತು ಪಾಲ^ರ್‌ ಜಿಲ್ಲೆಗಳಲ್ಲೂ ಶಾಖೆ ತೆರೆಯಲು ಪರವಾನಿಗೆ ಪ್ರಾಪ್ತಿಸಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಸರಕಾರಿ ಅಧಿಕಾರಿ ರಂಗನಾಥ್‌ ಥಾವೆÛ, ಅಭ್ಯಾಗತರುಗಳಾಗಿ ಕಾಂಗ್ರೇಸ್‌ ನೇತಾರ ಚಂದ್ರ ಶೆಟ್ಟಿ, ರವೀಂದ್ರ ಎನ್‌. ಗೌಡ, ಸಿಎ ಮಂಜುನಾಥ ಕೆ. ಗೌಡ ಸಂದಭೋìಚಿತವಾಗಿ ಮಾತನಾಡಿ,  ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸೊಸೈಟಿಯ ಯಶಸ್ಸಿಗೆ ಶುಭಕೋರಿದರು. ಕೆ. ಆರ್‌. ಪೇಟೆ ಶಾಸಕರಾಗಿ ದ್ವಿತೀಯ ಬಾರಿಗೆ ಆಯ್ಕೆಯಾದ ಸೊಸೈಟಿಯ ಸ್ಥಾಪಕ ನಿರ್ದೇಶಕ ಡಾ| ನಾರಾಯಣ ಆರ್‌. ಗೌಡ ಅವರಿಗೆ ಸಮ್ಮಾನಿಸಿ ಗೌರವಿಸಲಾಯಿತು.

ಒಕ್ಕಲಿಗರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಜಿತೇಂದ್ರ ಜೆ. ಗೌಡ, ಉದ್ಯಮಿಗಳಾದ ಸದಾನಂದ ಗಾಯಕ್ವಾಡ್‌, ಪುರುಷೋತ್ತಮ ಗೌಡ, ನಾಗರಾಜ ಗೌಡ, ರಮೇಶ್‌ ಗೌಡ, ಕರಿಯಪ್ಪ ಗೌಡ, ಪುಟ್ಟಪ್ಪ ಗೌಡ ಹಾಗೂ ಸೊಸೈಟಿಯ ಉಪಾಧ್ಯಕ್ಷ ಎ. ಕೆಂಪೇಗೌಡ, ಕಾರ್ಯದರ್ಶಿ ಕೆ. ರಾಜೇ ಗೌಡ, ನಿರ್ದೇಶಕರಾದ ಮುತ್ತೇ ಎಸ್‌. ಗೌಡ, ಅನುಸೂಯಾ ಆರ್‌. ಗೌಡ, ದೇವಕಿ ನಾರಾಯಣ ಗೌಡ, ಸುನಂದಾ ಆರ್‌. ಗೌಡ, ರಾಹುಲ್‌ ಯು. ಲಗಡೆ, ಭಾರತಿ ಎಸ್‌. ಗಾಯಕ್ವಾಡ್‌ ವೇದಿಕೆಯಲ್ಲಿ ಆಸೀನರಾಗಿದ್ದರು.

ಸೊಸೈಟಿಯ ಪ್ರಬಂಧಕ ಪಶುìರಾಮ್‌ ಕೆ. ದೌಂಡ್‌ ಸ್ವಾಗತಿಸಿ ಸಭಾ ಕಲಾಪ ನಡೆಸಿ ಮಾತನಾಡಿ, ಸೊಸೈಟಿಯ ಗತ ಕ್ಯಾಲೆಂಡರ್‌ ವರ್ಷದಲ್ಲಿ 4,726 ಸದಸ್ಯರನ್ನೊಳಗೊಂಡಿದೆ. 2.77 ಕೋ. ರೂ. ಶೇರ್‌ ಕ್ಯಾಪಿಟಲ್‌, 2.82 ಕೋ. ರೂ. ರಿಝರ್ವ್‌ ಫಂಡ್‌, 33.56 ಕೋ. ರೂ. ಠೇವಣಾತಿ ಹೊಂದಿದ್ದು  41.64 ಕೋ. ರೂ. ಕಾರ್ಯಮಾನ ಬಂಡವಾಳ ವ್ಯವಹರಿಸಿದೆ ಎಂದರು.

ಹಾಗೂ ಗತ ಸಾಲಿನ ವಾರ್ಷಿಕ ಮಹಾಸಭೆಯ ವರದಿ ವಾಚಿಸಿ ಸೊಸೈಟಿಯ  ಈ ಬಾರಿಯೂ ಲೆಕ್ಕ ಶೋಧನಾ ಶ್ರೇಣೀಕರಣ ಪ್ರಕಾರ “ಎ’ ದರ್ಜೆ ಸ್ಥಾನದೊಂದಿಗೆ ದೃಢೀಕೃತ‌ಗೊಂಡಿದೆ ಎಂದರು. ಕಾರ್ಯಾಧ್ಯಕ್ಷರು ಸದಸ್ಯರ ಮಕ್ಕಳಿಗೆ ಪಠ್ಯಪುಸ್ತಕ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿ ವಿತರಿಸಿದರು.  ಸೊಸೈಟಿಯ ಉನ್ನತಿಗಾಗಿ ಶ್ರಮಿಸಿದ ಸರ್ವರ ಅನನ್ಯ ಸೇವೆ ಶ್ಲಾಘಿಸಿ ಅಭಿವಂದಿಸಿದರು. ಸೊಸೈಟಿಯ ಗ್ರಾಹಕರು, ಶೇರುದಾರರು, ಹಿತೈಷಿಗಳು, ಸೊಸೈಟಿಯ ಕರ್ಮಚಾರಿಗಳು, ಪಿಗ್ಮಿà ಸಂಗ್ರಹದಾರರು, ಸಭೆಯಲ್ಲಿ ಹಾಜರಿದ್ದರು. ಮಾ| ನಿಖೀಲ್‌ ರವಿ ಕುಮಾರ್‌ ಗೌಡ,  ಕು| ಭೂಮಿಕಾ ಜೆ. ಗೌಡ, ಮಾ| ಪ್ರಜ್ವಲ್‌ ಜಿ. ಗೌಡ ಹಾಗೂ ಕು| ಸುರûಾ  ಆರ್‌. ಗೌಡ ಅವರ ಗಣೇಶ ವಂದನೆಯೊಂದಿಗೆ ಸಭೆ ಪ್ರಾರಂಭಗೊಂಡಿತು.

ಕಚೇರಿ ಅಧಿಕಾರಿಗಳಾದ ಆಶಾರಾಣಿ ಬಿ. ಗೌಡ ಗತವಾರ್ಷಿಕ ಮಹಾಸಭೆಯ ವರದಿ ಮಂಡಿಸಿದರು. ಪ್ರಕಾಶ್‌ ಎನ್‌. ವಾಡ್ಕರ್‌ ಅಂತರಿಕ ಲೆಕ್ಕಪತ್ರಗಳ ಮಾಹಿತಿ ಮತ್ತು ರವಿ ಸುಭಾಷ್‌ ಗೌಡ ವಾರ್ಷಿಕ ವ್ಯವಹಾರದ ಮಾಹಿತಿ ನೀಡಿದರು. ಪ್ರದೀಪ್‌ಕುಮಾರ್‌ ಆರ್‌. ಗೌಡ ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ಬಿತ್ತರಿಸಿದರು. ಲೆಕ್ಕಾಧಿಕಾರಿ ಶಿಲ್ಪಾ ಸಂತೋಷ್‌ ಮಾಂಡವಾRರ್‌ ಲೆಕ್ಕಪತ್ರಗಳ ಮಾಹಿತಿ ನೀಡಿದರು. ಶಿವಕುಮಾರ್‌ ಎಚ್‌. ಗೌಡ ವಾರ್ಷಿಕ ಬಜೆಟ್‌ ಮಂಡಿಸಿದರು. ಕೆ. ರಾಜೇ ಗೌಡ  ಅತಿಥಿಗಳನ್ನು ಪರಿಚಯಿಸಿ ವಂದಿಸಿದರು. 

ನಮ್ಮ ಪಥಸಂಸ್ಥೆಯು  ಆರ್ಥಿಕವಾಗಿ  ಹಿಂದುಳಿದ ಶ್ರೀಸಾಮಾನ್ಯರ ಬಾಳಿಗೆ  ಆಶಾಕಿರಣವಾಗಿ ಅನೇಕರಿಗೆ ಆರ್ಥಿಕ ಸೇವೆ ಒದಗಿಸಿದ ವಿಶ್ವಾಸ ನಮಗಿದೆೆ. ಗ್ರಾಹಕರ ಮತ್ತು ಶೇರುದಾರದ ವಿಶ್ವಾಸ ಗಳಿಸಿ ಸೊಸೈಟಿಯನ್ನು ಮುನ್ನಡೆಸಿದ್ದು,  ಸೊಸೈಟಿಯ ನಿವ್ವಳ ಲಾಭಕ್ಕಿಂತ ಗ್ರಾಹಕರ, ಜನಪರ ಲಾಭ ಎಷ್ಟು ಎನ್ನುವುದೇ ನಮ್ಮ ಉದ್ದೇಶವಾಗಿದೆ. ಪಥಸಂಸ್ಥೆಯು ವ್ಯವಹಾರ ದಕ್ಷತೆಗೆ ಮಹತ್ವವನ್ನು ನೀಡುತ್ತಿದೆ. ಹಣಕಾಸು ಸಂಸ್ಥೆಗಳು ತಮ್ಮ ಸಹಭಾಗಿತ್ವದಿಂದ ಯುವ ಜನಾಂಗದೊಡನೆ ಉದಾರತೆ ತೋರಬೇಕು. ಇಂತಹ ಉಚ್ಚ ಸೇವಾಧರ್ಮ, ಸಕಾರಾತ್ಮಕ ಸ್ಪಂದನೆ ಅಗತ್ಯ ಎನ್ನುವುದು ನಮ್ಮ ಅಭಿಮತವಾಗಿದೆ. ಪ್ರಸಕ್ತ ವರ್ಷದಲ್ಲಿ ನಿರ್ದೇಶಕ ಮಂಡಳಿಯ ದಕ್ಷ ನೇತೃತ್ವದಲ್ಲಿ ಮತ್ತು ನೌಕರವೃಂದದ  ಸಹಯೋಗದೊಂದಿಗೆ ಸೊಸೈಟಿಯು ಪ್ರಗತಿಯತ್ತ ಸಾಗುತ್ತಿದೆ.
– ರಂಗಪ್ಪ ಸಿ. ಗೌಡ 
ಕಾರ್ಯಾಧ್ಯಕ್ಷರು: ಜಯಲಕ್ಷ್ಮೀ ಕೋ.ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

1-poco

POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

Auto Draft

Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.