ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ ಬಹಿರಂಗ ಸಭೆ


Team Udayavani, Sep 19, 2017, 4:13 PM IST

16-Mum04a.jpg

ಮುಂಬಯಿ: ನಮ್ಮ ಅವಳಿ ಜಿಲ್ಲೆಯಲ್ಲಿ ಪರಿಸರ ರಕ್ಷಣೆಯೊಂದಿಗೆ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಇದನ್ನೇ ನಮ್ಮ ಮೂಲ ಉದ್ದೇಶವಾಗಿಟ್ಟುಕೊಂಡು ಸಂಸ್ಥೆಯು ಮುಂದುವರಿಯುತ್ತಿದೆ. ಪ್ರಸ್ತುತ ಅದಾನಿ ಪವರ್‌ ಪ್ಲಾಂಟ್‌ ಪರಿಸರದ ಕಾಳಜಿಯೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅವಳಿ ಜಿಲ್ಲೆಯಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ವಿಶೇಷವಾಗಿ ಸೇವೆ ಸಲ್ಲಿಸುತ್ತಿರುವ ಅದಾನಿ ಸಂಸ್ಥೆಯ ಕಾರ್ಯ ಅಭಿನಂದನೀಯ. ಪ್ರಾರಂಭದಲ್ಲಿ ಪಡುಬಿದ್ರೆಯಲ್ಲಿ ನಾಗಾರ್ಜುನ ವಿದ್ಯುತ್‌ ಸ್ಥಾವರಕ್ಕೆ ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದರು. ಜಾತೀಯ ಸಂಘಟನೆಗಳು ಹಾಗೂ ರಾಜಕೀಯ ನೇತಾರರು ಕೂಡಾ ಸ್ಥಾವರನ್ನು ವಿರೋಧಿಸಿದ್ದರು. ನಮ್ಮ ಸಮಿತಿ ಮಾತ್ರ ಈ ಯೋಜನೆಯನ್ನು ಪರಿಸರಸ್ನೇಹಿಯಾಗಿ ಉನ್ನತ ಮಟ್ಟದ ತಾಂತ್ರಿಕತೆಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ ದುರದೃಷ್ಟವೆಂದರೆ ನಾಗಾರ್ಜುನ ಸಂಸ್ಥೆಯು ಅದಕ್ಕೆ ವಿರೋಧವಾಗಿ ಕಾರ್ಯ ನಿರ್ವಹಿಸಿತ್ತು. ಅನಂತರದ ದಿನಗಳಲ್ಲಿ ಅದಾನಿ ಸಂಸ್ಥೆಯು ಇದನ್ನು ಖರೀದಿಸಿತ್ತು.  ಅದಾನಿ ಅವರು ಸಂಸ್ಥೆಯನ್ನು ಉತ್ತಮ ಗುಣಮಟ್ಟದ ವ್ಯವಸ್ಥೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು ಅದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ನುಡಿದರು.

ಸೆ. 15ರಂದು ಕುರ್ಲಾ ಪೂರ್ವದ ಬಂಟರ ಭವನದ ಎನೆಕ್ಸ್‌ ಕಟ್ಟಡದ ಸಭಾ
ಗೃಹದಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಸರಕಾರೇತರ ಏಕೈಕ ಸಂಸ್ಥೆಯಾಗಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ ಇದರ 16ನೇ ವಾರ್ಷಿಕ ಮಹಾಸಭೆಯ ಅನಂತರ ನಡೆದ ಬಹಿರಂಗ ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಅದಾನಿ ಕಂಪೆನಿಯ ಉತ್ತಮ ಸೇವೆಯಿಂದಾಗಿ  ಸ್ಥಳೀಯರು ಹಾರುಬೂದಿ ಮತ್ತು ಇನ್ನಿತರ ಸಮಸ್ಯೆಗಳಿಂದ ಪರಿಹಾರವನ್ನು ಕಂಡುಕೊಂಡಿದ್ದಾರೆ. ಪ್ರಸ್ತುತ ದೃಷ್ಟಿಯಲ್ಲಿ ಅದಾನಿ ಕಂಪೆನಿಯು ಉತ್ತಮ ಸೇವೆಯೊಂದಿಗೆ ಅವಿಭಜಿತ ಜಿಲ್ಲೆಗಳಿಗೆ 24 ಗಂಟೆಗಳ ಕಾಲ ನಿರಂತರ ವಿದ್ಯುತ್‌ ಸರಬರಾಜು ಮಾಡುವಂತಾಗಬೇಕು. ಎಲ್ಲರ ಸಹಕಾರದೊಂದಿಗೆ ಸಮಿತಿಯು ಒಟ್ಟಾಗಿ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇದರೊಂದಿಗೆ ಬ್ರಹ್ಮಾವರದಲ್ಲಿ ದ್ವಿತೀಯ ವಿಮಾನ ನಿಲ್ದಾಣ ನಿರ್ಮಿಸುವ ಅಗತ್ಯವಿದ್ದು, ಅದಕ್ಕಾಗಿ ಸಂಬಂಧಪಟ್ಟವರೊಂದಿಗೆ ಚರ್ಚಿಸಬೇಕಾದ ಅನಿವಾರ್ಯತೆ ಇದೆ. ಮತ್ಸéಗಂಧಾ ರೈಲಿನಲ್ಲಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಸಮಿತಿಯು ಶೀಘ್ರದಲ್ಲೇ ರೈಲ್ವೇ ಸಚಿವರೊಂದಿಗೆ ಚರ್ಚಿಸುವುದು ಎಂದು ಹೇಳಿದರು.

ಹಿರಿಯ ಕನ್ನಡಿಗ ಎಂ. ಡಿ. ಶೆಟ್ಟಿ ಅವರು ಮಾತನಾಡಿ, ಎಲ್ಲಾ ಜಾತಿಯವರನ್ನು ಒಳಗೊಂಡ ಈ ಸಮಿತಿಯು ಒಗ್ಗಟ್ಟಿನಿಂದ ಊರಿನ ಸಮಸ್ಯೆಗಳನ್ನು ಬಗೆಹರಿಸಬೇಕು. ಇದಕ್ಕೆ ಊರಿನವರ ಬೆಂಬಲ, ಪ್ರೋತ್ಸಾಹದ ಅಗತ್ಯವಿದೆ. ಮುಂಬಯಿಯಲ್ಲಿ 35 ಕ್ಕಿಂತಲೂ ಅಧಿಕ ಕನ್ನಡಪರ, ಜಾತೀಯ ಸಂಘಟನೆಗಳಿದ್ದು, ಸಮಿತಿಯ ಸದಸ್ಯತ್ವ ಹೆಚ್ಚಿಸುವಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಭಾರತ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರು ಮಾತನಾಡಿ, ಪರಿಸರ ಪ್ರೇಮಿಯ ಪ್ರಾಥಮಿಕ ಸಭೆಯಲ್ಲಿ ಪಾಲ್ಗೊಂಡು ಸಮಿತಿಯ ಉಪಾಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. ನಮ್ಮ ಉದ್ದೇಶ ನಿಸ್ವಾರ್ಥ ಸೇವೆಯಾಗಿದ್ದು, ಜಿಲ್ಲೆಯ ಅಭಿವೃದ್ದಿ
ಯಾಗಬೇಕು. ನಮ್ಮವರಿಗೆ ಉದ್ಯೋಗವೂ ಸಿಗಬೇಕು. ಅದರೊಂದಿಗೆ ನಮಗೆ ವಿದ್ಯುತ್‌ ಕೂಡಾ ಬೇಕು. ಈ ಬಗ್ಗೆ ಸಮಿತಿಯು ಹೋರಾಟ ನಡೆಸಿದೆ ಎಂದು ನುಡಿದು ಸಮಿತಿಗೆ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಸಮಿತಿಯ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಅವರು ಮಾತನಾಡಿ, ಸದಸ್ಯತ್ವ ನೋಂದಾವಣೆ ಹೆಚ್ಚಿಸುವತ್ತ ಸಂಸ್ಥೆಯು ಮುಂದಿನ ದಿನಗಳಲ್ಲಿ ಗಮನ ಹರಿಸಲಿದೆ. ಜಿಲ್ಲೆಯ ಮೆಡಿಕಲ್‌ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ತುಳುವರಿಗಾಗಿ ಪ್ರಾಧಾನ್ಯ ನೀಡುವುದರ ಬಗ್ಗೆ ಸಂಬಂಧಿತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು. ಮತ್ಸÂಗಂಧಾ ರೈಲಿನಲ್ಲಿ ಹೆಚ್ಚುತ್ತಿರುವ ಕಳ್ಳತನ, ಪ್ರಯಾಣಿಕರ ಸುರಕ್ಷತೆ
ಬಗ್ಗೆ ರೈಲ್ವೇ ಸಚಿವ ರೊಂದಿಗೆ ಚರ್ಚಿಸ ಲಿದ್ದೇವೆ. ಜಯಕೃಷ್ಣ ಶೆಟ್ಟಿ ಅವರ ಮುಂದಾಳತ್ವದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಈ ಸಂಸ್ಥೆಯಿಂದ ಪರಿಸರ ಹಾಗೂ ಜನರ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ಮುಂದಾ ಗಬೇಕು ಎಂದರು.
ಸಮಿತಿಯ ಉಪಾ ಧ್ಯಕ್ಷರಾದ ನ್ಯಾಯ ವಾದಿ ಸುಭಾಷ್‌ ಶೆಟ್ಟಿ, ವಿಶ್ವನಾಥ ಮ್ಹಾಡ, ರಂಗಕರ್ಮಿ ಸುರೇಂದ್ರ ಕುಮಾರ್‌ ಹೆಗ್ಡೆ, ಗಣೇಶ್‌ ಶೇರಿಗಾರ್‌ ಮೊದಲಾದವರುಸಲಹೆ ಸೂಚನೆಗಳನ್ನು ನೀಡಿ ದರು.  ಈ ಸಂದರ್ಭದಲ್ಲಿ ಪತ್ತನಾಜೆ ಚಲನಚಿತ್ರ ನಿರ್ದೇಶಕ ಹಾಗೂ ರಂಗಕರ್ಮಿ ತೋನ್ಸೆ ವಿಜಯಕುಮಾರ್‌ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ತೋನ್ಸೆ ಜಯಕೃಷ್ಣ ಶೆಟ್ಟಿ ಅವರನ್ನು ಸಂಸ್ಥೆಯ ಸದಸ್ಯರು ಅಭಿನಂದಿಸಿದರು.

ವೇದಿಕೆಯಲ್ಲಿ ದೇವಾಡಿಗ ಸಂಘದ ಅಧ್ಯಕ್ಷ ರವಿ ಎಸ್‌. ದೇವಾಡಿಗ, ಕುಲಾಲ ಸಂಘದ ಅಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌, ಅಖೀಲ ಕರ್ನಾಟಕ ಜೈನ ಸಂಘದ ಮುನಿರಾಜ್‌ ಜೈನ್‌, ಪದ್ಮಶಾಲಿ ಸಂಸ್ಥೆಯ ಉತ್ತಮ್‌ ಶೆಟ್ಟಿಗಾರ್‌, ಗಾಣಿಗ ಸಮಾಜದ ರಾಮಚಂದ್ರ ಗಾಣಿಗ, ಶ್ರೀ ರಜಕ ಸಂಘದ ಸತೀಶ್‌ ಸಾಲ್ಯಾನ್‌ ಮೊದಲಾದವರು ಉಪಸ್ಥಿತರಿದ್ದರು. ಸಮಿತಿಯ ಗೌರವ ಕಾರ್ಯದರ್ಶಿ ಚಂದ್ರಶೇಖರ ಆರ್‌. ಬೆಳ್ಚಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಮಿತಿಯ ಸಿದ್ಧಿ-ಸಾಧನೆಗಳನ್ನು ವಿವರಿಸಿ, ಅತಿಥಿಗಳನ್ನು ಪರಿಚಯಿಸಿದರು. ಉಪಾಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಶೇಖರ ಆರ್‌. ಬೆಳ್ಚಡ ವಂದಿಸಿದರು.

ಸಮಿತಿಯ ಪದಾಧಿಕಾರಿಗಳಾದ ಸಿಎ ಐ. ಆರ್‌. ಶೆಟ್ಟಿ, ಜಿ. ಟಿ. ಆಚಾರ್ಯ, ಮುಂಡ್ಕೂರು ಸುರೇಂದ್ರ ಸಾಲ್ಯಾನ್‌, ತೋನ್ಸೆ ಸಂಜೀವ ಪೂಜಾರಿ, ಹಿರಿಯಡ್ಕ ಮೋಹನ್‌ದಾಸ್‌, ಕೆ. ಎಂ. ಕೋಟ್ಯಾನ್‌, ರವಿ ಮೆಂಡನ್‌ ಕುರ್ಕಾಲ್‌, ರಂಜನಿ ಆರ್‌. ಮೊಲಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. 

ಪರಿಸರದ ಕಾಳಜಿಯೊಂದಿಗೆ ಅಭಿವೃದ್ಧಿ ಕೆಲಸವಾಗಬೇಕು. ಹುಟ್ಟೂರಿನ ಮೇಲೆ ಪ್ರೀತಿ, ಗೌರವ ನಮಗಿರಬೇಕು. ಸಮಿತಿಯ ಪರಿಸರದ ಕಾಳಜಿಯೊಂದಿಗೆ ಸಾಮಾನ್ಯ ಜನತೆಗೆ ಉದ್ಯೋಗ ಲಭಿಸುವಂತಾಗಲು ಸಮಿತಿಯು ಕಾರ್ಯಪ್ರವೃತ್ತವಾಗಬೇಕು 
   – ಪ್ರಭಾಕರ ಎಲ್‌. ಶೆಟ್ಟಿ (ಅಧ್ಯಕ್ಷರು: ಬಂಟರ ಸಂಘ ಮುಂಬಯಿ).

ಮಾಲಿನ್ಯ ರಹಿತ ಕೈಗಾರಿಕೆಗಳನ್ನು ನಾವು ಪ್ರೋತ್ಸಾಹಿಸಬೇಕು. ಹೊಸ ಉದ್ದಿಮೆಗಳಿಂದ  ಪರಿಸರದ ಅಭಿವೃದ್ಧಿಯೊಂದಿಗೆ ಯುವಕರಿಗೆ ಉದ್ಯೋಗವು ಲಭಿಸುತ್ತದೆ. ಆದರೆ ಉದಿÂಮೆಗಳು ಪರಿಸರ ಕಾಳಜಿಗೆ ಮಹತ್ವ ನೀಡಬೇಕು 
  – ನ್ಯಾಯವಾದಿ ಉಪ್ಪೂರು ಶೇಖರ್‌ ಶೆಟ್ಟಿ 
 (ಅಧ್ಯಕ್ಷರು: ಬೋಂಬೆ ಬಂಟ್ಸ್‌ ಅಸೋಸಿಯೇಶನ್‌).

ಊರಿನ ಹೆಚ್ಚಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತುಳುವರಿಗಾಗಿ ಕೋಟಾವಿದ್ದು, ಇದು ಅವಳಿ ಜಿಲ್ಲೆಗಳ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಅಳವಡಿಕೆಯಾಗಬೇಕು. ಇದರ ಬಗ್ಗೆ ಸಮಿತಿಯು ಗಮನ ಹರಿಸಬೇಕು 
–  ಉಳೂ¤ರು ಮೋಹನ್‌ದಾಸ್‌ ಶೆಟ್ಟಿ 
    (ಗೌರವ ಕಾರ್ಯದರ್ಶಿ: ಬಂಟರ ಸಂಘ ಮುಂಬಯಿ).

ಮಾಲಿನ್ಯ ರಹಿತ ಉದ್ದಿಮೆಗಳು ಇಂದು ಅಗತ್ಯವಾಗಿದ್ದು, ಅದರೊಂದಿಗೆ ಸ್ವತ್ಛತೆಯೆಡೆಗೂ ನಾವು ಗಮನ ಹರಿಸಬೇಕು. ಪ್ಲಾಸ್ಟಿಕ್‌ ಸಮಸ್ಯೆಯ ನಿವಾರಣೆಯಲ್ಲೂ ನಾವು ಹೆಚ್ಚಿನ ಕಾಳಜಿ ವಹಿಸಬೇಕು 
 – ಬಿ. ವಿವೇಕ್‌ ಶೆಟ್ಟಿ (ಮಾಜಿ ಅಧ್ಯಕ್ಷರು: ಬಂಟರ ಸಂಘ).

ಪರಿಸರ ಪ್ರೇಮಿ ಸಮಿತಿಯು ಪರಿಸರಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದೆ. ಊರಿನಲ್ಲಿ ಸದಸ್ಯತ್ವವನ್ನು ಹೆಚ್ಚಿಸಿದಾಗ ಸಂಘಟನೆಯು ಬಲಗೊಳ್ಳುತ್ತದೆ. ಆದರ ಬಗ್ಗೆ ಸಮಿತಿಯು ಗಮನ ಹರಿಸಬೇಕು 
– ಫೆಲಿಕ್ಸ್‌  ಡಿಸೋಜಾ 
 (ಅಧ್ಯಕ್ಷರು: ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅವಿಭಜಿತ ದಕ್ಷಿಣ ಕನ್ನಡ).

ಸಮಿತಿಯಲ್ಲಿ ಮಹಿಳಾ ಸದಸ್ಯೆಯರ ಸಂಖ್ಯೆಯಲ್ಲಿ ಹೆಚ್ಚಿಸಬೇಕು. ಮಹಿಳೆಯರು ಪರಿಸರದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗುವಂತೆ ನಾವು ನೋಡಿಕೊಳ್ಳಬೇಕು 
 – ಚಿತ್ರಾ ಶೆಟ್ಟಿ (ಉಪಾಧ್ಯಕ್ಷೆ: ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ).

ಉನ್ನತ ಉದ್ದಿಮೆಗಳು ಊರಿನಲ್ಲಿ ಅವರಿಗೆ ಬೇಕಾಗುವಷ್ಟು ಜಾಗವನ್ನು ಖರೀದಿ ಮಾಡಬೇಕು. ಹೆಚ್ಚಿನವರು ತಮಗೆ ಅವಶ್ಯಕತೆಯಿರುವುದಕ್ಕಿಂತ ಹೆಚ್ಚಿನ ಕೃಷಿ ಸ್ಥಳಗಳನ್ನು ಪಡೆದು ಅನಂತರ ಇತರರಿಗೆ ಮಾರಾಟ ಮಾಡಿರುವುದು ಕಂಡು ಬರುತ್ತಿದ್ದು, ಇದು ವಿಷಾದನೀಯವಾಗಿದೆ 
– ಪಡುಬಿದ್ರೆ ಹರೀಶ್‌ ಶೆಟ್ಟಿ (ಅಧ್ಯಕ್ಷರು: ತುಳುಕೂಟ ಐರೋಲಿ).

ಟಾಪ್ ನ್ಯೂಸ್

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

6

Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

5(1

Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್‌!

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.