ನೂತನ ಕಾರ್ಯಾಧ್ಯಕ್ಷರಾಗಿ ಜೋನ್ ಡಿ’ಸಿಲ್ವಾ ಕಾರ್ಕಳ ಆಯ್ಕೆ
ಅಧ್ಯಕ್ಷ ಜೋನ್ ಡಿ'ಸಿಲ್ವಾ ಅವರಿಗೆ ಪುಷ್ಪಗುಚ್ಛ ನೀಡಿ ಅಧಿಕಾರ ಹಸ್ತಾಂತರಿಸಿ ಅಭಿನಂದಿಸಿದರು.
Team Udayavani, Jul 29, 2021, 3:17 PM IST
ಮುಂಬಯಿ, ಜು. 28: ಕ್ರಿಶ್ಚಿಯನ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (ಸಿಸಿಸಿಐ) ಇದರ ನೂತನ ಕಾರ್ಯಾಧ್ಯಕ್ಷರಾಗಿ ಜೋನ್ ಡಿ’ಸಿಲ್ವಾ ಕಾರ್ಕಳ ಆಯ್ಕೆಯಾಗಿದ್ದಾರೆ. ಡಿ’ಸಿಲ್ವಾ ಅವರು ಈ ವರೆಗೆ ಉಪಕಾರ್ಯಾ ಧ್ಯಕ್ಷ, ಸಿಸಿಸಿಐ ಅಂತಾರಾಷ್ಟ್ರೀಯ ಪುರಸ್ಕಾರ ಸಮಿತಿಯ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸಿಸಿಸಿಐ ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ
ಜೋನ್ ಡಿ’ಸಿಲ್ವಾ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಸಭೆಯಲ್ಲಿ ಸಿಸಿಸಿಐ ಸ್ಥಾಪಕಾಧ್ಯಕ್ಷ ವಿನ್ಸೆಂಟ್ ಮಥಾಯಸ್, ಉಪ ಕಾರ್ಯಾಧ್ಯಕ್ಷರಾದ ಆಲ್ಬರ್ಟ್ ಡಬ್ಲ್ಯು. ಡಿ’ಸೋಜಾ, ಮಾಜಿ ಕಾರ್ಯಾಧ್ಯಕ್ಷ ಹೆನ್ರಿ ಲೋಬೋ ಅವರು ನೂತನ ಅಧ್ಯಕ್ಷ ಜೋನ್ ಡಿ’ಸಿಲ್ವಾ ಅವರಿಗೆ ಪುಷ್ಪಗುಚ್ಛ ನೀಡಿ ಅಧಿಕಾರ ಹಸ್ತಾಂತರಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಸಿಸಿಸಿಐ ನಿರ್ದೇಶಕ ಲಾರೆನ್ಸ್ ಕುವೆಲ್ಲೊ, ನ್ಯಾಯವಾದಿ ಪಿಯುಸ್ ವಾಸ್, ಜಾನ್ಸನ್ ಥೆರಟಿಲ್, ರಾಲ್ಫ್ ಪಿರೇರಾ, ಆಗ್ನೇಲ್ಲೋ ರಾಜೇಶ್ ಅಥೈಡೆ, ಗ್ರೆಗೋರಿ ಮಾರ್ಕ್ ಡಿ’ಸೋಜಾ, ಸದಸ್ಯರು ಉಪಸ್ಥಿತರಿದ್ದರು. ಸಿಸಿಸಿಐ ಕಾರ್ಯದರ್ಶಿ ರೋಹನ್ ಟೆಲ್ಲಿಸ್ ಸ್ವಾಗತಿಸಿ, ವಂದಿಸಿದರು.
ಜೋನ್ ಡಿ’ಸಿಲ್ವಾ ಕಾರ್ಕಳ ಮೂಲತಃ ಕಾರ್ಕಳ ಸಾಣೂರು ಗ್ರಾಮದವರಾದ ಜೋನ್ ಡಿ’ಸಿಲ್ವಾ ಸೈಂಟ್ ಜೋಸೆಫ್ ಪ್ರೈಮರಿ ಶಾಲೆ, ಸಾಣೂರು ಕಿರಿಯ ಪ್ರಾಥಮಿಕ, ಎಸ್‌ವಿಟಿ ಹೈಯರ್ ಎಲಿಮೆಂಟರಿ ಶಾಲೆ ಕಾರ್ಕಳ ಇಲ್ಲಿ ಹಿರಿಯ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿ ಮುಂಬಯಿಗೆ ಆಗಮಿಸಿ ಕರ್ನಾಟಕ ಫ್ರೀ ನೈಟ್ ಹೈಸ್ಕೂಲ್ ಮುಂಬಯಿ ಇಲ್ಲಿ ಎಸ್‌ಎಸ್‌ಸಿ ಶಿಕ್ಷಣ, ಜೈ ಹಿಂದ್ ಕಾಲೇಜಿನಲ್ಲಿ ಬಿ.ಎ. ಪದವಿ ಮತ್ತು ಆರ್‌ಎ ಪೊದರ್ ಕಾಲೇಜ್‌ನಲ್ಲಿ ಬಿ.ಕಾಂ. ಪದವಿ ಪೂರೈಸಿ ಬ್ಯಾಂಕಿಗ್ ದಿಗ್ಗಜರಾಗಿ ಡಾ| ಟಿ. ಎಂ.ಎ. ಪೈ ಫೌಂಡೇಶನ್‌ನ 2008ನೇ ಸಾಲಿನ ಪುರಸ್ಕಾರ ಪಡೆದಿದ್ದಾರೆ.
ಬ್ಯಾಂಕಿಂಗ್ ಕ್ಷೇತ್ರದ ಹಿರಿಯ ಮೇಧಾವಿಯಾಗಿರುವ ಇವರು ಸಹಕಾರಿ ರಂಗದ ಪಿತಾಮಹ ಎಂದೇ ಪ್ರಸಿದ್ಧರು. ಅಭ್ಯುದಯ ಸಹಕಾರಿ ಬ್ಯಾಂಕ್‌ನ ಮುಖ್ಯ ಪ್ರವರ್ತಕ ಮತ್ತು ಕಾರ್ಯಾಧ್ಯಕ್ಷರಾಗಿ, ನ್ಯೂ ಇಂಡಿಯಾ ಕೋ. ಆ. ಬ್ಯಾಂಕ್ ಲಿಮಿಟೆಡ್, ಸಿಟಿಜನ್ ಕ್ರೆಡಿಟ್ ಕೋ. ಆ. ಬ್ಯಾಂಕ್ ಲಿಮಿಟೆಡ್ ಮತ್ತು ಮೋಡೆಲ್ ಕೋ. ಆ. ಬ್ಯಾಂಕ್ ಲಿಮಿಟೆಡ್ ಈ ನಾಲ್ಕು ಸಹಕಾರಿ ಬ್ಯಾಂಕ್‌ಗಳ ಮುಖ್ಯ ಪ್ರವರ್ತಕರಾಗಿ ಮತ್ತು ಮೊದಲ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಹಕಾರಿ ಬ್ಯಾಂಕರ್‌ಗಳ ಕೈಪಿಡಿ ಮತ್ತು ನಗರ ಬ್ಯಾಂಕ್‌ಗಳ ಅಖೀಲ ಭಾರತ ಡೈರೆಕ್ಟರಿಯ ಪ್ರಧಾನ ಸಂಪಾದಕರಾಗಿದ್ದಾರೆ. ಮಂಗಳೂರು ಕೆಥೋಲಿಕ್ ಎಜುಕೇಶನಲ್
ಕೋ. ಆ. ಕ್ರೆಡಿಟ್ ಸೊಸೈಟಿ ಲಿಮಿಟೆಡ್, ಫುಡಾರ್ ಪ್ರತಿಷ್ಠಾನ ಮತ್ತು ಕೊಂಕಣಿ ಭಾಷಾ ಮಂಡಳಿ ಮಹಾರಾಷ್ಟ್ರ ಇದರ ಅಧ್ಯಕ್ಷರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್’ ವ್ಯವಸ್ಥೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.