![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 2, 2019, 10:07 AM IST
ನವಿಮುಂಬಯಿ; ಶ್ರೀಮದ್ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ, ಕಟಪಾಡಿ ಪೀಠಾಧೀಶರಾದ ಅನಂತ ವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಅವರು ಜು. 3ರಂದು ಸಂಜೆ 7ರಿಂದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಪನ್ವೇಲ್ ಇಲ್ಲಿಗೆ ಆಗಮಿಸಲಿದ್ದಾರೆ.
ಈ ಶತಮಾನದ ಪವಿತ್ರ ವಿಕಾರಿನಾಮ ಸಂವತ್ಸರ ಚಾತುರ್ಮಾಸ ವ್ರತ ಆರಂಭಿಸುವ ಪೂರ್ವಭಾವಿಯಾಗಿ ವಿಶ್ವಕರ್ಮ ಸಮಾಜ ಬಾಂಧವರ ಆರಾಧ್ಯ ಮಾತೆ ಶ್ರೀ ಕಾಳಿಕಾಂಬಾ ದೇವಿಯ ಅನುಗ್ರಹ ಪಡೆಯುವ ಸಲುವಾಗಿ ಸ್ವಾಮೀಜಿಯರು ಆಗಮಿಸಲಿದ್ದು, ಈ ಸಂದರ್ಭದಲ್ಲಿ ಸಂಜೆ 7ರಿಂದ ಸಾಮೂಹಿಕ ಗುರುಪಾದ ಪೂಜೆ ಹಮ್ಮಿಕೊಳ್ಳಲಾಗಿದೆ. ಆ ಬಳಿಕ ಶ್ರೀ ದೇವಿಗೆ ರಂಗ ಪೂಜೆ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.
ಸಾಮೂಹಿಕ ಗುರುಪಾದ ಪೂಜೆಯಲ್ಲಿ ಭಾಗವಹಿಸಲು ಇಚ್ಛಿಸುವ ಭಕ್ತರು 500 ರೂ. ಗಳನ್ನು ಮಂದಿರದ ಕಚೇರಿಯಲ್ಲಿ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಧಾರ್ಮಿಕ ಸಮಾರಂಭದಲ್ಲಿ ಸಮಾಜ ಬಾಂಧವರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿ ಶ್ರೀ ಕಾಳಿಕಾಂಬಾ ವಿಶ್ವಕರ್ಮ ಸೇವಾ ಸಂಘ ಪನ್ವೇಲ್ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದೆ.
You seem to have an Ad Blocker on.
To continue reading, please turn it off or whitelist Udayavani.