ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ:36ನೇ ವಾರ್ಷಿಕ ಮಹಾಸಭೆ
Team Udayavani, Aug 3, 2017, 2:52 PM IST
ಮುಂಬಯಿ: ಕೆಲವೊಂದು ಬಾರಿ ಮಾತೃಭಾಷೆಯಲ್ಲಿ ವ್ಯವಹರಿಸುವುದರಿಂದ ನಮ್ಮಲ್ಲಿ ಅನ್ಯೋನ್ಯತೆ ಮತ್ತು ಸಂಬಂಧಗಳು ಗಟ್ಟಿಯಾಗುತ್ತವೆೆ. ಅಲ್ಲದೆ ಕೆಲಸ ಕಾರ್ಯಗಳು ಸುಲಭದಲ್ಲಿ ನೆರವೇರುತ್ತವೆ. ಉನ್ನತ ವ್ಯಾಸಂಗ ಮಾಡುವ ಮಕ್ಕಳ ಪಾಲಕರು ಸೊಸೈಟಿಯ ಶೈಕ್ಷಣಿಕ ಸಾಲದ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಕುಲಾಲ ಸಮಾಜ ಬಾಂಧವರು ಮುಂದಿನ ದಿನಗಳಲ್ಲಿ ಈ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುವಲ್ಲಿ ಪಾಲಕರು ಪ್ರೇರಣೆ ನೀಡಬೇಕು. ರಾಜ್ಯಸರಕಾರದ ಆದೇಶದಂತೆ ಸಿಬಂದಿಗಳಿಗೆ ಭವಿಷ್ಯ ನಿಧಿಯನ್ನು ಪ್ರಾರಂಭಿಸಿದ್ದೇವೆ. ಸಮಾಜ ಬಾಂಧವರು ನೂತನ ಸದಸ್ಯರನ್ನು ಸಂಸ್ಥೆಗೆ ಪರಿಚಯಿಸಿ ಬಂಡವಾಳ ಹೆಚ್ಚಿಸುವಲ್ಲಿ ಎಲ್ಲರೂ ಸಹಕರಿಸಬೇಕು. ಬರುವ ಮಹಾಸಭೆಯ ವೇಳೆಗೆ ಶೇರುದಾರರ ಸಂಖ್ಯೆಯು ಆರು ಸಾವಿರ ದಾಟಬೇಕು ಎಂದು ಕುಲಾಲ ಸಂಘ ಮುಂಬಯಿ ಸಂಚಾಲಿತ ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ಅವರು ನುಡಿದರು.
ಜು. 30ರಂದು ಸಯಾನ್‌ನ ಶ್ರೀ ನಿತ್ಯಾನಂದ ಸಭಾಗೃಹದಲ್ಲಿ ಜ್ಯೋತಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ 36ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶೇರುದಾರರು ತಮ್ಮ ಅನಿಸಿಕೆಗಳನ್ನು ತಿಳಿಸಿದರೆ, ಈ ಸೊಸೈಟಿಯ ಏಳ್ಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಸೊಸೈಟಿಯ ಲಾಭದೊಂದಿಗೆ ಷೇರುದಾರರ ಸಂತೋಷವೇ ನಮ್ಮ ಧ್ಯೇಯೋದ್ದೇಶವಾಗಿದೆ. ಕುಲಾಲ ಸಂಘ ಮತ್ತು ಸೊಸೈಟಿಯು ಅನ್ಯೋನ್ಯತೆಯಿಂದ ಸಮಾಜದ ಏಳ್ಗೆಗಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆಗಳ ಸೇವೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಸೊಸೈಟಿಯೊಂದಿಗೆ ಶೇರುದಾರರು ಉತ್ತಮ ರೀತಿಯಲ್ಲಿ ಸ್ಪಂದಿಸಿ
ದಾಗ ಸಾಧನೆಯ ಶಿಖರವೇಲು ಸಾಧ್ಯವಾಗು ತ್ತದೆ. ಸೊಸೈಟಿಯ ಅಭಿವೃದ್ದಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದರು.
ನಿರ್ದೇಶಕ ಎಚ್. ಎಂ. ಥೋರಾಟ್ ಅವರು ಮಾತನಾಡಿ, ಅತೀ ಕಡಿಮೆ ಬಂಡವಾಳ ಮತ್ತು ವ್ಯವಹಾರಗಳೊಂದಿಗೆ ಸ್ಥಾಪನೆಯಾದ ಈ ಸೊಸೈಟಿಯ ಬೆಳವಣಿಗೆ ನಿಜವಾಗಿಯೂ ಶ್ಲಾಘನೀಯ. ಇದಕ್ಕೆ ಪ್ರಮುಖ ಕಾರಣೀಭೂತರು ನಮ್ಮ ಷೇರುದಾರರು. ಎಲ್ಲಾ ಶಾಖೆಗಳು ಅತಿ ಹೆಚ್ಚು ಜನರಿಗೆ ನಮ್ಮ ಸೊಸೈಟಿಯ ಪ್ರಯೋಜನಗಳನ್ನು ತಲುಪಿಸುವಲ್ಲಿ ಸಿಬಂದಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್‌ಗಳಂತಹ ಇಂದಿನ ಯುಗದಲ್ಲಿ ಯುವ ಜನತೆಯನ್ನು ಸೊಸೈಟಿಯತ್ತ ಆಕರ್ಷಿಸುವಲ್ಲಿ ನಾವು ಮುಂದಾಗಬೇಕು. ಇಂದು ಒಂದು ಆರ್ಥಿಕ ಸಂಸ್ಥೆಯಾಗಿರುವುದರಿಂದ ಶೇರುದಾರರು ತಮ್ಮ ಅನಿಸಿಕೆಗಳನ್ನು ತಿಳಿಸುವಾಗ ಮಾತೃಭಾಷೆಯೊಂದಿಗೆ ಇತರ ಭಾಷೆಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿ ಶುಭ ಹಾರೈಸಿದರು.
ಸೊಸೈಟಿಯ ಉಪ ಕಾರ್ಯಾಧ್ಯಕ್ಷ ಶೇಖರ್ ಮೂಲ್ಯ ಪಿ. ಅವರು ಮಾತನಾಡಿ, ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವ ಸದಸ್ಯ ಬಾಂಧವರನ್ನು ಕಂಡಾಗ ಸಂತೋಷವಾಗುತ್ತಿದೆ. ಯುವಪೀಳಿಗೆಯನ್ನು ಸೊಸೈಟಿಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಸೊಸೈಟಿಯ ಬೆಳವಣಿಗೆ ಸಾಧ್ಯ. ತುರ್ತು ಸಾಲ ಮತ್ತು ಇನ್ನಿತರ ಸಾಲ ಯೋಜನೆಗಳ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ನಿರ್ದೇಶಕಿ ನ್ಯಾಯವಾದಿ ಸವಿನಾ ಎಸ್. ಕುಲಾಲ್ ಅವರು ಮಾತನಾಡಿ, ಶೇರುದಾರರ ಅಭಿನಂದನ ನುಡಿಗಳನ್ನು ಕೇಳಿ ಸಂತೋಷವಾಗುತ್ತಿದೆ. ಜ್ಯೋತಿ ಕ್ರೆಡಿಟ್ ಸೊಸೈಟಿಯ ಪ್ರಕಾಶ ಎಲ್ಲಾ ಕಡೆಗಳಲ್ಲಿ ಹಬ್ಬುತ್ತಿದೆ. ಇದು ಉತ್ತಮ ಬೆಳವಣಿಗೆ ಯಾಗಿದೆ. ಎನ್‌ಪಿಎಯನ್ನು ಶೂನ್ಯದತ್ತ ಕೊಂಡೊಯ್ಯಲು ಸಾಲದಲ್ಲಿ ಸಾಕ್ಷಿದಾರ ರಾಗಿರುವ ಶೇರುದಾರು ಸಹಕರಿಸಬೇಕು. ಸಾಲಗಾರರಿಗೆ ಸಮಯದಲ್ಲಿ ಸಾಲ ಭರಿಸುವಲ್ಲಿ ಅವರು ತಿಳಿಹೇಳಬೇಕು ಎಂದು ನುಡಿದರು.
ನಿರ್ದೇಶಕ ದೇವದಾಸ್ ಬಂಜನ್ ಅವರು ಮಾತನಾಡಿ, ಶೇರುದಾರರು ನೂತನ ಸದಸ್ಯರನ್ನು ಪರಿಚಯಿಸಿ, ಸಾಲ ಹೆಚ್ಚು ನೀಡುವಲ್ಲಿ ಸಹಕರಿಸಬೇಕು. ನಮ್ಮ ರಿಕವರಿ ವಿಭಾಗದ ಕಾರ್ಯ ಅಭಿನಂದನೀಯವಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಸೊಸೈಟಿಯ ನಿರ್ದೇಶಕರಾದ ಡಿ. ಐ.ಐ ಮೂಲ್ಯ, ಚಂದು ಕೆ. ಮೂಲ್ಯ, ಬಿ. ಜಿ. ಅಂಚನ್, ಭಾರತಿ ಪಿ. ಆಕ್ಯಾìನ್, ಸುರೇಖಾ ಆರ್. ಕುಲಾಲ್, ಗಿರೀಶ ಕರ್ಕೇರ, ರಾಜೇಶ್ ಬಂಜನ್ ಉಪಸ್ಥಿತರಿದ್ದರು. ಸಭಿಕರ ಪರವಾಗಿ ಜಯ ಅಂಚನ್, ಲಕ್ಷ್ಮಣ್ ಸಿ. ಮೂಲ್ಯ ಡೊಂಬಿವಲಿ, ಜಿ. ಎಸ್. ನಾಯಕ್, ಎಂ. ಪಿ. ಪೈ ಡೊಂಬಿವಲಿ, ಶಂಕರ್ ವೈ. ಮೂಲ್ಯ, ಅಶೋಕ್ ಸುವರ್ಣ, ಮಮತಾ ಗಿರೀಶ್ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಜ್ಯೋತಿಯ ಪ್ರಬಂಧಕ ಗಣೇಶ್ ಸುವರ್ಣ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ 12ನೇ ತರಗತಿ ಮತ್ತು ಉನ್ನತ ವ್ಯಾಸಂಗ ಪಡೆದ ಸೊಸೈಟಿಯ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ವರ್ಷದ ಅತೀ ಹೆಚ್ಚು ನಿತ್ಯ ಠೇವಣಿ ಸಂಗ್ರಹ ಮಾಡಿದ 23 ಏಜೆಂಟರಲ್ಲಿ ಪ್ರಥಮವಾಗಿ ಬೊರಿವಲಿ ಶಾಖೆಯ ಲಿಂಗಪ್ಪ ಬಂಗೇರ ಮತ್ತು ಕೇಂದ್ರ ಕಚೇರಿಯ ಚಂದ್ರಕಾಂತ್ ಎಲ್. ಬಂಗೇರ ಅವರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಪಿ. ದೇವದಾಸ್ ಎಲ್. ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು. ಗಿರೀಶ್ ಕರ್ಕೇರ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.