ಕಲಾ ಸೌರಭ ಮುಂಬಯಿ ಇದರ ಬೆಳ್ಳಿಹಬ್ಬ ಸಂಭ್ರಮಕ್ಕೆ ಅದ್ದೂರಿ ಚಾಲನೆ
Team Udayavani, Aug 15, 2018, 1:53 PM IST
ಮುಂಬಯಿ: ಕಲಾ ಸೌರಭ ಮುಂಬಯಿ ಇದರ ಬೆಳ್ಳಿಹಬ್ಬ ಸಂಭ್ರಮಕ್ಕೆ ಆ. 12ರಂದು ಅಪರಾಹ್ನ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಹಿರಿಯ ಉದ್ಯಮಿ ವಾಮನ್ ಡಿ. ಪೂಜಾರಿ ಅವರು ದೀಪಪ್ರಜ್ವಲಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಭಂಡಾರಿ ಸೇವಾ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಭಂಡಾರಿ ಪುತ್ತೂರು, ವಸಾಯಿಯ ಅಶೋಕ್ ಇಂಡಸ್ಟ್ರೀಸ್‌ನ ಮಾಲಕ ಅಶೋಕ್ ಶೆಟ್ಟಿ ಪೆರ್ಮುದೆ, ತಾಳಮದ್ದಳೆಯ ಅರ್ಥದಾರಿ ಕೆ. ಕೆ. ಶೆಟ್ಟಿ, ಯಕ್ಷ ಮಾನಸದ ಪ್ರವರ್ತಕ ಶೇಖರ್ ಆರ್. ಶೆಟ್ಟಿ ಇನ್ನ, ಉದ್ಯಮಿ ತೋನ್ಸೆ ನವೀನ್ ಶೆಟ್ಟಿ ಹಾಗೂ ಕಲಾ ಸೌರಭದ ರೂವಾರಿಗಳಾದ ಪದ್ಮನಾಭ ಸಸಿಹಿತ್ಲು, ಶೇಖರ್ ಸಸಿಹಿತ್ಲು ಉಪಸ್ಥಿತರಿದ್ದರು.
ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ವಾಮನ್ ಡಿ. ಪೂಜಾರಿ ಅವರು, ಸತತ 25 ವರ್ಷಗಳಿಂದ ಸಂಗೀತ ಹಾಗೂ ಕಲಾಕ್ಷೇತ್ರದಲ್ಲಿ ತನ್ನದೇ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಾ, ಅನೇಕ ಪ್ರತಿಭೆಗಳನ್ನು ಬೆಳಕಿಗೆ ತಂದ ಶ್ರೇಯಸ್ಸು ಕಲಾ ಸೌರಭಕ್ಕೆ ಲಭಿಸುತ್ತದೆ. ಪದ್ಮನಾಭ ಸಸಿಹಿತ್ಲು ಅವರಿಂದ ಇನ್ನಷ್ಟು ಕಲಾ ಸೇವೆಗೈದು, ಪ್ರತಿಭೆಗಳು ಬೆಳಕಿಗೆ ಬರುವಂತಾಗಲಿ. ಅವರ ಮುಂದಿನ ಯೋಜನೆ-ಯೋಚನೆಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದು ನುಡಿದರು.
ಪ್ರಾರಂಭದಲ್ಲಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಆಯೋಜಿತ ತಂಡಗಳಿಂದ ಮತ್ತು ಕಲಾ ಸೌರಭದ ಕಲಾವಿದರಿಂದ ಸ್ವಾಗತಾಭ್ಯಂ ಎಂಬ ಪಾರಂಪರಿಕ ನೃತ್ಯ ನರ್ತನ ಜರಗಿತು. ಅಂತಾರಾಷ್ಟ್ರೀಯ ಖ್ಯಾತಿಯ ಯುವ ಪ್ರತಿಭೆ ಭಕ್ತಿ ಸಂಗೀತ ಗಾಯಕಿ ಸೂರ್ಯ ಗಾಯತ್ರಿ ಬಳಗದವರಿಂದ ಭಕ್ತಿಪುಷ್ಪಾಂಜಲಿ ಸಂಗೀತ ರಸಮಂಜರಿಯನ್ನು ಆಯೋಜಿಸಲಾಗಿತ್ತು.
ಲಾಂಛನ ಬಿಡುಗಡೆ
ಸಮಾರಂಭದಲ್ಲಿ ವರ್ಷವಿಡೀ ಜರಗಲಿರುವ ಕಾರ್ಯಕ್ರಮಗಳ ಸಂಸ್ಕಾರ-2018 ಎಂಬ ಲಾಂಛನ ವನ್ನು ಬಾಲಕೃಷ್ಣ ಭಂಡಾರಿ ಅವರು ಬಿಡುಗಡೆಗೊಳಿಸಿದರು. ಸಾಂಸ್ಕೃತಿಕ ಸಮಾವೇಶ ಎಂಬ ಕಾರ್ಯಕ್ರಮದಲ್ಲಿ ಮುಂಬಯಿಯಲ್ಲಿ ಪ್ರಥಮ ಬಾರಿಗೆ ಯಕ್ಷಗಾಯನ, ಭಾವಗಾಯನ, ನಾಟ್ಯ ನರ್ತನದ ಅಪೂರ್ವ ಸಂಗಮ ಮಧುರ ಸಂಗೀತ ಮಿನದನ ಎಂಬ ಜುಗಲ್‌ಬಂಧಿ ಕಾರ್ಯಕ್ರಮ ನಡೆಯಿತು.
ತೆಂಕು-ಬಡಗು ತಿಟ್ಟಿನ ಯಕ್ಷಗಾನವು ಕರ್ನಾಟಕದ ಪ್ರತಿಭಾವಂತ ಕಲಾವಿದರಾದ ಪುಷ್ಕಲ್ ಕುಮಾರ್ ತೋನ್ಸೆ ಅವರಿಂದ ಪ್ರದರ್ಶನಗೊಂಡಿತು.
ಭಾವಸಂಗೀತದಲ್ಲಿ ಸತೀಶ್ ಸುರತ್ಕಲ್ ಹಾಗೂ ಶೇಖರ್ ಸಸಿಹಿತ್ಲು ಅವರು ಭಾಗವಹಿಸಿದ್ದರು. ಮಧುರ ಸಂಗೀತದಲ್ಲಿ ಕಲಾವತಿ ದಯಾನಂದ್, ಉಡುಪಿಯ ಮಾಲಿನಿ ಕೇಶವ್ ಪ್ರಸಾದ್, ಜಗದೀಶ್ ಆಚಾರ್ಯ ಪುತ್ತೂರು, ರಾಜ್‌ಕುಮಾರ್ ಸೇರಿದಂತೆ ಕಲಾ ಸೌರಭದ ಗಾಯಕಿಯರು ಭಾಗವಹಿಸಿದ್ದರು. ವಿಜಯ ಶೆಟ್ಟಿ ಮತ್ತು ಅಮೃತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಪದ್ಮನಾಭ ಸಸಿಹಿತ್ಲು ಪ್ರಾಸ್ತಾವಿಕ ವಾಗಿ ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿ, ಮುಂದಿನ ಯೋಜನೆಗಳಿಗೆ ಎಲ್ಲರ ಸಹಕಾರವನ್ನು ಬಯಸಿದರು.
ಚಿತ್ರ-ವರದಿ: ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.