ಕಲಾಜಗತ್ತು ಕ್ರಿಯೇಶನ್ಸ್‌ನ ಪತ್ತನಾಜೆ ತುಳು ಚಲನಚಿತ್ರ ಪ್ರದರ್ಶನ
Team Udayavani, Jul 17, 2018, 12:03 PM IST
ಮುಂಬಯಿ: ನಮ್ಮ ತುಳುನಾಡ ಕಲೆಗಳಾದ ನಾಟಕ, ಯಕ್ಷಗಾನ ಹಾಗೂ ತುಳುನಾಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಲನಚಿತ್ರಗಳಿಗೆ ಮುಂಬಯಿ ಕನ್ನಡಿಗರು ತುಂಬು ಹೃದಯದಿಂದ ಸಹಕರಿಸಿದ್ದಲ್ಲಿ ನಮ್ಮ ತುಳುನಾಡ ಸಂಸ್ಕೃತಿಯು ಉಳಿಯುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ ಎಂದು ಸಮಾಜ ಸೇವಕ, ಛತ್ರಪತಿ ಶಿವಾಜಿ ಪ್ರಶಸ್ತಿ ವಿಜೇತ ವಿರಾರ್ ಶಂಕರ್ ಬಿ. ಶೆಟ್ಟಿ ಇವರು ಅಭಿಪ್ರಾಯಿಸಿದರು.
ನಲಸೋಪರ ಪಶ್ಚಿಮದಲ್ಲಿರುವ ಫನ್‌ಫೀಸ್ಟ್ ಮೀರಾಜ್ ಸಿನೇಮಾ ಮಂದಿರದಲ್ಲಿ ಕಲಾಜಗತ್ತು ವಿಜಯ ಕುಮಾರ್ ಶೆಟ್ಟಿ ನಿರ್ದೇಶನದ ಪತ್ತನಾಜೆ ತುಳು ಚಲನಚಿತ್ರದ 51 ನೇ ಪ್ರದರ್ಶನದ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಕಲಾಜಗತ್ತು ಮುಂಬಯಿ ಸಂಸ್ಥೆಯ ತೌಳವ ಸಿರಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಎಲ್ಲಾ ತುಳು-ಕನ್ನಡಿಗರು ನಮ್ಮ ಊರಿನ ಯಾವುದೇ ರೀತಿಯ ಇಂತಹ ಕಾರ್ಯಕ್ರಮಗಳಿಗೆ ತಾವಾಗಿಯೇ ಬಂದು ಸಹಕರಿಸಬೇಕು. ಆಗ ಮಾತ್ರ ಕಲಾವಿದರಿಗೆ ಪ್ರೋತ್ಸಾಹ ಲಭಿಸುತ್ತದೆ. ಇಂತಹ ಉತ್ತಮ ಕಾರ್ಯಕ್ರಮಗಳಲ್ಲಿ ವಸಾಯಿ-ವಿರಾರ್ ಪರಿಸರದ ಎಲ್ಲಾ ತುಳು-ಕನ್ನಡಿಗರು ಸಹಕರಿಸಬೇಕು. ತೋನ್ಸೆ ವಿಜಯ ಕುಮಾರ್ ಶೆಟ್ಟಿ ಅವರಿಂದ ಇನ್ನಷ್ಟು ತುಳುಚಿತ್ರಗಳು ಬರಲಿ ಎಂದು ನುಡಿದು ಅವರ ತಂಡವನ್ನು ಅಭಿನಂದಿಸಿದರು.
ಕಲಾಜಗತ್ತು ಸಂಸ್ಥೆಯ ವತಿಯಿಂದ ವಿರಾರ್ ಉದ್ಯಮಿ ದಯಾನಂದ ಶೆಟ್ಟಿ ಅವರಿಗೆ ಪ್ರದಾನಿಸಿ ಗೌರವಿಸಲಾಯಿತು. ಅತಿಥಿಗಳಾಗಿ ಸಂದೀಪ್ ಶೆಟ್ಟಿ ವಿರಾರ್, ವಿರಾರ್-ನಲಸೋಪರ ಕರ್ನಾಟಕ ಸಂಘದ ಮಾಜಿ ಕಾರ್ಯಾಧ್ಯಕ್ಷ, ಟ್ರಸ್ಟಿ ಜಗನ್ನಾಥ ಎನ್. ರೈ, ಅಧ್ಯಕ್ಷ ಸದಾಶಿವ ಎ. ಕರ್ಕೇರ, ಮೀರಾ-ಡಹಾಣೂ ಬಂಟ್ಸ್ ವಸಾಯಿ ವಲಯದ ಕಾರ್ಯಾಧ್ಯಕ್ಷ ಅಶೋಕ್ ಶೆಟ್ಟಿ, ರಜಕ ಸಂಘ ವಸಾಯಿ-ವಿರಾರ್ ವಲಯದ ಅಧ್ಯಕ್ಷ ದೇವೇಂದ್ರ ಬುನ್ನನ್, ಮಹಾನಗರ ಪಾಲಿಕೆಯ ನಗರ ಸೇವಕ ಪ್ರವೀಣ್ ಶೆಟ್ಟಿ, ವಸಾಯಿ ತಾಲೂಕು ಮೊಗವೀರ ಸಂಘದ ಕಾರ್ಯಾಧ್ಯಕ್ಷ ಯಶೋಧರ ಕೋಟ್ಯಾನ್, ಉದ್ಯಮಿಗಳಾದ ಮೋಹನ್ ಬಿ. ಶೆಟ್ಟಿ, ಮೋಹನ್ ವಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಅತಿಥಿ- ಗಣ್ಯರುಗಳನ್ನು ಕಲಾಜಗತ್ತು ವಿಜಯಕುಮಾರ್ ಶೆಟ್ಟಿ ಇವರು ಶಾಲು ಹೊದೆಸಿ, ಪುಷ್ಪಗುಚ್ಚವನ್ನಿತ್ತು ಗೌರವಿಸಿದರು. ಬಿಲ್ಲವರ ಅಸೋಸಿಯೇಶನ್ ನಲಸೋಪರ-ವಿರಾರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಕೋಡಿ ಗೋಪಾಲ್, ವಿರಾರ್-ನಲಸೋಪರ ಕರ್ನಾಟಕ ಸಂಸ್ಥೆಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ಯಶೋದಾ ಕೋಟ್ಯಾನ್, ಲಯನ್ಸ್ ಕ್ಲಬ್ ವಸಾಯಿ ಇದರ ಕಾರ್ಯಾಧ್ಯಕ್ಷ ಶಶಿಕಾಂತ್ ಸುವರ್ಣ, ವೈ. ಟಿ. ಶೆಟ್ಟಿ, ಶ್ರೀನಿವಾಸ ಆಳ್ವ, ಚಂದು ಶೆಟ್ಟಿ ವಿರಾರ್, ಪ್ರವೀಣ್ ಶೆಟ್ಟಿ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಕಲಾಜಗತ್ತು ವಿಜಯ ಕುಮಾರ್ ಶೆಟ್ಟಿ ಇವರು ಸ್ವಾಗತಿಸಿ, ನನ್ನ ಯಶಸ್ಸಿನ ಹಿಂದೆ ವಿರಾರ್ ಶಂಕರ ಶೆಟ್ಟಿ ಕೊಡುಗೆ ಅಪಾರವಾಗಿದೆ. ಇಂದು ಅವರನ್ನು ಸಮ್ಮಾನಿಸುವ ಮೂಲಕ ಅವರ ಋಣ ತೀರಿಸುವ ಅವಕಾಶ ಸಿಕ್ಕಿದೆ. ಇಂದಿನ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದರು. ಇದೇ ಸಂದರ್ಭದಲ್ಲಿ ಪತ್ತನಾಜೆ ಚಲನಚಿತ್ರವು ಕಿಕ್ಕಿರಿದು ತುಂಬಿದ ಸಭಾಗೃಹದಲ್ಲಿ ಪ್ರದರ್ಶನಗೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.